ಮನೆ ಕೆಲಸದವಳ ವಿಚಾರಕ್ಕೆ ಶ್ರೇಷ್ಠಾ ಕೆನ್ನೆಗೆ ಬಾರಿಸಿದ ತಾಂಡವ್, ಇಬ್ಬರೂ ದೂರಾಗ್ತಾರಾ? ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 13ರ ಎಪಿಸೋಡ್‌ನಲ್ಲಿ ಕೆಲಸದವಳಿಂದ ಅಮ್ಮನಿಗೆ ಅವಮಾನವಾಗಿದೆ, ಮನೆಯವರ ಬಗ್ಗೆ ಕೇವಲವಾಗಿ ಮಾತನಾಡುತ್ತಾಳೆ ಎಂಬ ಕಾರಣಕ್ಕೆ ಶ್ರೇಷ್ಠಾಗೆ ತಾಂಡವ್ ಕಪಾಳಮೋಕ್ಷ ಮಾಡುತ್ತಾನೆ. ಮಗ ನಮ್ಮ ಪರ ಬಂದ ಎಂದು ಕುಸುಮಾ ಖುಷಿಯಾಗುತ್ತಾಳೆ.

Bhagyalakshmi Serial: ಮನೆ ಕೆಲಸ ಸರಾಗವಾಗಿ ಆದರೆ ನಾನು ಕೆಲಸಕ್ಕೆ ಹೋಗಬಹುದು ಎಂಬ ಕಾರಣಕ್ಕೆ ಶ್ರೇಷ್ಠಾ, ಕೆಲಸ ಮಾಡಲು ಕೆಲಸದವಳನ್ನು ಕರೆ ತರುತ್ತಾಳೆ. ಆದರೆ ಆಕೆ ಕೆಲಸ ಮಾಡುವ ಬದಲು ಆರಾಮವಾಗಿ ಕುಳಿತು ಟಿವಿ ನೋಡುತ್ತಾಳೆ. ಮನೆ ನನ್ನದೇ ಎಂಬುವಂತೆ ವರ್ತಿಸುತ್ತಾಳೆ. ಅದನ್ನು ಕೇಳಲು ಬಂದ ಕುಸುಮಾಗೆ ಗೌರವ ಕೊಡದೆ ಬಾಯಿಗೆ ಬಂದಂತೆ ಮಾತನಾಡುತ್ತಾಳೆ. ತನಗೆ ಹೊಡೆದ ಕುಸುಮಾಳನ್ನು ತಳ್ಳುತ್ತಾಳೆ.
ಕುಸುಮಾ ಮಾತು ಕೇಳಿ ನಿರ್ಲಕ್ಷ್ಯವಾಗಿ ಮಾತನಾಡಿದ ತಾಂಡವ್
ಈ ವಿಚಾರವನ್ನು ತಾಂಡವ್‌ಗೆ ಹೇಳಲು ಕುಸುಮಾ ಪ್ರಯತ್ನಿಸುತ್ತಾಳೆ. ಆದರೆ ತಾಂಡವ್ ಮೊಬೈಲ್ ಶ್ರೇಷ್ಠಾ ಬಳಿ ಇರುತ್ತದೆ, ಕುಸುಮಾ ಎಷ್ಟು ಬಾರಿ ಕರೆ ಮಾಡಿದರೂ ಅವಳು ರಿಸೀವ್ ಮಾಡುವುದಿಲ್ಲ. ಕುಸುಮಾ, ಬಾಸ್‌ಗೆ ಕರೆ ಮಾಡಿ ವಿಷಯ ಮುಟ್ಟಿಸುತ್ತಾಳೆ. ಆಫೀಸ್ ಬಾಯ್ ಬಂದು ತಾಂಡವ್ ಬಳಿ ಹೇಳುತ್ತಾನೆ. ಅಮ್ಮ ಇಷ್ಟು ಬಾರಿ ಕರೆ ಮಾಡಿದ್ದಾರೆ ಮನೆಯಲ್ಲಿ ಏನೋ ಆಗಿದೆ ಎಂದು ತಾಂಡವ್ ಅಮ್ಮನಿಗೆ ಕಾಲ್ ಮಾಡುತ್ತಾನೆ. ಕುಸುಮಾ, ನಡೆದ ವಿಷಯವನ್ನು ತಾಂಡವ್‌ಗೆ ಹೇಳುತ್ತಾಳೆ. ಇದನ್ನು ಹೇಳೋಕೆ ಕಾಲ್ ಮಾಡಿದ್ಯಾ ಎಂದು ತಾಂಡವ್ ನಿರ್ಲಕ್ಷ್ಯವಾಗಿ ಮಾತನಾಡುತ್ತಾನೆ. ನಿಮ್ಮ ಅಪ್ಪನಿಗೆ ಆಕ್ಸಿಡೆಂಟ್ ಆದಾಗ ಭಾಗ್ಯಾಗೆ ಅಷ್ಟು ಬೈದೆ, ಈಗ ಆ ಶ್ರೇಷ್ಠಾಳಿಂದ ನನಗೆ ಅವಮಾನವಾಗಿದೆ , ಏನೂ ಹೇಳುವುದಿಲ್ಲವಾ ಎಂದು ಕೇಳುತ್ತಾಳೆ.
ನೀವೆಲ್ಲರೂ ನನಗೆ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಸಂಘಕ್ಕೆ ಹೇಳಿ ನಿಮ್ಮಲ್ಲರಿಗೂ ತಕ್ಕಶಾಸ್ತಿ ಮಾಡಿಸುತ್ತೇನೆ ಎಂದು ಕೆಲಸದವಳು ಮನೆಯವರಿಗೆ ಎಚ್ಚರಿಕೆ ಕೊಡುತ್ತಾಳೆ. ನಮ್ಮ ಮನೆಗೆ ಬಂದು ನಮಗೇ ಆವಾಜ್ ಹಾಕುತ್ತಿದ್ದೀಯ, ನಾವು ಕ್ಷಮೆ ಕೇಳುವುದಿಲ್ಲ ಏನಾದರೂ ಮಾಡಿಕೋ ಎಂದು ಕುಸುಮಾ ಹೇಳುತ್ತಾಳೆ. ಕೆಲಸದವಳು ಫೇಸ್‌ಬುಕ್ ಲೈವ್ ಬಂದು ನನಗೆ ಈ ಮನೆಯವರಿಂದ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಾಳೆ. ಅಷ್ಟರಲ್ಲಿ ಶ್ರೇಷ್ಠಾ ಬಂದು ಆ ಫೋನ್ ಕಸಿದುಕೊಳ್ಳುತ್ತಾಳೆ. ಲೈವ್ ಮಾಡಲು ನಿನಗೆ ಯಾರು ಹೇಳಿದ್ದು ಎಂದು ಕೇಳುತ್ತಾಳೆ.
ಶ್ರೇಷ್ಠಾಗೆ ತಾಂಡವ್‌ನಿಂದ ಕಪಾಳಮೋಕ್ಷ
ಇದೆಲ್ಲವೂ ನಿನ್ನಿಂದಲೇ ಆಗಿದ್ದು, ಮನೆ ಕೆಲಸ ಮಾಡೋಕೆ ಇವಳನ್ನು ಕರೆದುಕೊಂಡು ಬಾ ಎಂದು ಯಾರು ಹೇಳಿದ್ದು ಎಂದು ಸುನಂದಾ ಕೇಳುತ್ತಾಳೆ. ಈ ಮನೆಗೆ ಸಹಾಯವಾಗಲಿ ಎಂದು ನಾನು ಕರೆದುಕೊಂಡು ಬಂದೆ, ಅದನ್ನು ಉಳಿಸಿಕೊಳ್ಳುವ ಯೋಗ್ಯತೆ ನಿಮಗಿಲ್ಲ. ಮನೆ ಕೆಲಸದವಳನ್ನೆ ಕಾಣದ ನಿಮ್ಮಂಥ ಮಿಡ್ಲ್ ಕ್ಲಾಸ್ ಮನೆಗೆ ಹೈ ಫೈ ಜೀವನ ಕೊಡಲು ಪ್ರಯತ್ನಿಸುತ್ತಿದ್ದೇನೆ ಎಂದು ಶ್ರೇಷ್ಠಾ ಹೇಳುತ್ತಾಳೆ, ಅಷ್ಟರಲ್ಲಿ ತಾಂಡವ್ ಬಂದು ಶ್ರೇಷ್ಠಾ ಕೆನ್ನೆಗೆ ಬಾರಿಸುತ್ತಾನೆ. ನಮ್ಮ ಮನೆಯವರ ಬಗ್ಗೆ ಈ ರೀತಿ ಮಾತನಾಡಲು ನಿನಗೆ ಎಷ್ಟು ಧೈರ್ಯ ಎನ್ನುತ್ತಾನೆ. ತಾಂಡವ್ ಈ ರೀತಿ ಶ್ರೇಷ್ಠಾಗೆ ಹೊಡೆಯುವುದನ್ನು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ತಾಂಡವ್ ನಮ್ಮ ಕಡೆ ಬರುತ್ತಿದ್ದಾನೆ ಎಂದು ಕುಸುಮಾ ಖುಷಿಯಾಗುತ್ತಾಳೆ.
ತಾಂಡವ್ ನಿಜವಾಗಲೂ ಬದಲಾಗುತ್ತಾನಾ? ಶ್ರೇಷ್ಠಾಳಿಂದ ದೂರಾಗುತ್ತಾನಾ? ಮುಂದಿನ ಎಪಿಸೋಡ್‌ಗಳಲ್ಲಿ ಉತ್ತರ ದೊರೆಯಲಿದೆ.
ಇದನ್ನೂ ಓದಿ: ಬಾಲಿವುಡ್ ನಟಿ ರವೀನಾ ಟಂಡನ್ ಮಸ್ತ್ ಮಸ್ತ್ ಫೋಟೋಗಳು
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ