ಮಗಳಿಗಾಗಿ ಜೋಕರ್ ವೇಷ ಧರಿಸಿ ರೆಸಾರ್ಟ್‌ನಲ್ಲಿ ಕುಣಿಯುವ ಕೆಲಸಕ್ಕೆ ಸೇರಿದ ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಫೆಬ್ರುವರಿ 14ರ ಸಂಚಿಕೆಯಲ್ಲಿ ಕಾಲೇಜಿನಲ್ಲಿ ತಾಂಡವ್, ತನ್ವಿ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡಿದ್ದಾನೆ. ಅದಕ್ಕೆ ಶ್ರೇಷ್ಠಾ ಸಾಥ್ ನೀಡಿದ್ದಾಳೆ. ಮತ್ತೊಂದೆಡೆ ಭಾಗ್ಯ ಕೆಲಸ ಕೇಳಿಕೊಂಡು ರೆಸಾರ್ಟ್ ಒಂದಕ್ಕೆ ಹೋಗಿದ್ದಾಳೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಫೆಬ್ರುವರಿ 14ರ ಸಂಚಿಕೆಯಲ್ಲಿ ಕಾಲೇಜಿನಲ್ಲಿ ತನ್ವಿ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಲಾಗಿದೆ. ತನ್ವಿಯ ಕ್ಲಾಸ್‌ಮೇಟ್ಸ್ ಎಲ್ಲರೂ ಖುಷಿಯಾಗಿದ್ದಾರೆ. ಜತೆಗೆ, ಎಲ್ಲರೂ ಅವಳನ್ನು ಹೊಗಳುತ್ತಿದ್ದಾರೆ. ಈವರೆಗೆ ಯಾರೂ ಕೂಡ ಇಷ್ಟೊಂದು ಅದ್ಧೂರಿಯಾಗಿ ಕಾಲೇಜಿನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಲ್ಲ, ಅಲ್ಲದೆ, ಇದು ಬೆಸ್ಟ್ ಬರ್ತ್‌ಡೇ ಸೆಲೆಬ್ರೇಷನ್ ಎಂದು ಹೇಳಿದ್ದಾರೆ. ಅದನ್ನು ಕೇಳಿ ತನ್ವಿಗೆ ಖುಷಿಯಾಗಿದೆ. ತನ್ವಿಗೆ ತಮಾಷೆ ಮಾಡಿದವರು ಕೂಡ ಅವಳ ಭರ್ಜರಿ ಬರ್ತ್‌ಡೇ ಸಂಭ್ರಮ, ಆಚರಣೆ ಕಂಡು ಬೆರಗಾಗಿದ್ದಾರೆ. ಅದೇ ಸಂದರ್ಭದಲ್ಲಿ ತಾಂಡವ್ ತನ್ವಿಗೆ ಮತ್ತೊಂದು ಉಡುಗೊರೆ ಕೊಡುತ್ತಾನೆ. ಅದರಲ್ಲಿ ತನ್ವಿಯ ಇಷ್ಟದ ಡ್ರೆಸ್ ಇರುತ್ತದೆ. ಅದನ್ನು ಕಂಡು ತನ್ವಿ ಸಂಭ್ರಮಿಸುತ್ತಾಳೆ. ಶ್ರೇಷ್ಠಾ ತಾಂಡವ್‌ನ ಗುಣಗಾನ ಮಾಡುತ್ತಾಳೆ.
ಮನೆಯಲ್ಲಿ ವಿಷಯ ತಿಳಿಸಿದ ಪೂಜಾ
ಭಾಗ್ಯ ಯಾಕೆ ಇನ್ನೂ ಮನೆಗೆ ಬಂದಿಲ್ಲ ಎಂದು ಮನೆಯವರೆಲ್ಲಾ ಚಿಂತೆ ಮಾಡಿಕೊಂಡಿದ್ದಾರೆ, ಅದೇ ಸಮಯದಲ್ಲಿ ಪೂಜಾ ಮತ್ತು ಸುಂದರಿ ಮನೆಗೆ ವಾಪಸ್ ಬಂದಿದ್ದಾರೆ. ಸುಂದರಿ, ಮನೆಯಲ್ಲಿ ನಡೆದ ವಿಚಾರವನ್ನು ತಿಳಿಸಿದ್ದಾಳೆ. ಭಾಗ್ಯಾಗೆ ಯಾರೂ ಕೆಲಸ ಕೊಡುತ್ತಿಲ್ಲ, ಎಲ್ಲ ಕಡೆಯೂ ಅವಮಾನ ಮಾಡುತ್ತಿದ್ದಾರೆ. ಆದರೂ ಆಕೆ ಹಠ ಬಿಡುತ್ತಿಲ್ಲ, ನಮ್ಮ ಮಾತು ಕೇಳದೇ ಕೆಲಸ ಹುಡುಕುತ್ತಾ ಹೋದಳು ಎಂದು ಪೂಜಾ ಮತ್ತು ಸುಂದರಿ ಎಲ್ಲರಿಗೂ ವಿವರಿಸಿ ಹೇಳುತ್ತಾರೆ. ಅದನ್ನು ಕೇಳಿ ಕುಸುಮಾ ಮತ್ತು ಧರ್ಮರಾಜ್‌ಗೆ ಸಂಕಟವಾಗುತ್ತದೆ.
ರೆಸಾರ್ಟ್‌ನಲ್ಲಿ ಕೆಲಸಕ್ಕೆ ಸೇರಿದ ಭಾಗ್ಯ
ಮತ್ತೊಂದೆಡೆ ಕೆಲಸ ಕೇಳುತ್ತಾ ಅಲೆದಾಡಿದ ಭಾಗ್ಯ, ರೆಸಾರ್ಟ್ ಒಂದರಲ್ಲಿ ಕೆಲಸಕ್ಕೆ ಹೋಗುವ ನಿರ್ಧಾರ ಮಾಡುತ್ತಾಳೆ, ಅಲ್ಲಿ ಹೋಗಿ ಮ್ಯಾನೇಜರ್ ಬಳಿ, ಯಾವುದೇ ಕೆಲಸವಾದರೂ ಸರಿ, ನಾನು ಮಾಡುತ್ತೇನೆ, ಆದರೆ ಕೆಲಸದ ತುರ್ತು ಇದೆ ಎಂದು ಬೇಡಿಕೊಳ್ಳುತ್ತಾಳೆ. ಮ್ಯಾನೇಜರ್ ಇಲ್ಲ ಎಂದರೂ ಹೋಗದೆ ಇರುವ ಪೂಜಾ, ನಂತರ ಮತ್ತೊಮ್ಮೆ ಕೇಳಿದಾಗ ಸರಿ ಎಂದು ಮ್ಯಾನೇಜರ್ ಹೇಳುತ್ತಾರೆ. ಅದರಂತೆ ಪೂಜಾ ಜೋಕರ್ ವೇಷ ಧರಿಸಿ ಕುಣಿಯುವ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಬರ್ತ್‌ಡೇ ಪಾರ್ಟಿ ಒಂದರಲ್ಲಿ ಕುಣಿದು, ಅಲ್ಲಿದ್ದವರನ್ನು ರಂಜಿಸುತ್ತಾಳೆ. ಆದರೆ ಅತ್ತ ತಾಂಡವ್, ಶ್ರೇಷ್ಠಾ ಮತ್ತು ತನ್ವಿ ಜತೆ ಅದೇ ರೆಸಾರ್ಟ್‌ಗೆ ತನ್ವಿ ಹುಟ್ಟುಹಬ್ಬ ಆಚರಿಸಲು ಬಂದಿದ್ದಾನೆ. ಈ ವಿಷಯ ಭಾಗ್ಯಾಗೆ ಗೊತ್ತಿಲ್ಲ. ಅಲ್ಲಿಗೆ ಫೆಬ್ರುವರಿ 14ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 716ನೇ ಸಂಚಿಕೆ ಮುಗಿಸಿದೆ. ಒಂದೆಡೆ ಭಾಗ್ಯನಿಗೆ ತನ್ವಿ ಬರ್ತ್‌ಡೇ ಆಚರಿಸಲು ಜೋಕರ್ ವೇಷ ತೊಟ್ಟಿದ್ದಾಳೆ. ಮತ್ತೊಂದೆಡೆ ತಾಂಡವ್ ತನ್ವಿಯನ್ನು ಕರೆದುಕೊಂಡು ಅದೇ ರೆಸಾರ್ಟ್‌ಗೆ ಬಂದಿದ್ದಾನೆ. ಹೀಗಾಗಿ ಭಾಗ್ಯ ಮುಂದೇನು ಮಾಡುತ್ತಾಳೆ ಎಂದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ