ಮಗಳ ಹುಟ್ಟುಹಬ್ಬದಲ್ಲಿಯೇ ಡ್ಯಾನ್ಸ್ ಮಾಡಿ ಸಂಪಾದನೆಯ ದಾರಿ ಕಂಡುಕೊಂಡ ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾನುವಾರ ಫೆಬ್ರುವರಿ 16ರ ಸಂಚಿಕೆಯಲ್ಲಿ ಭಾಗ್ಯ ರೆಸಾರ್ಟ್‌ನಲ್ಲಿ ಮಗಳ ಹುಟ್ಟುಹಬ್ಬದಲ್ಲಿಯೇ ಡ್ಯಾನ್ಸ್ ಮಾಡಿ ಹಣ ಸಂಪಾದನೆ ಮಾಡುವ ಅನಿವಾರ್ಯ ಪ್ರಸಂಗ ಸೃಷ್ಟಿಯಾಗಿದೆ. ತಾಂಡವ್ ಮತ್ತು ಶ್ರೇಷ್ಠಾ ತನ್ವಿಯನ್ನು ತಮ್ಮ ಮಗಳು ಎಂದೇ ಪಾರ್ಟಿಯಲ್ಲಿ ಎಲ್ಲರಿಗೂ ಪರಿಚಯಿಸಿದ್ದಾರೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾನುವಾರ ಫೆಬ್ರುವರಿ 16ರ ಸಂಚಿಕೆಯಲ್ಲಿ ರೆಸಾರ್ಟ್‌ನಲ್ಲಿ ತನ್ವಿ ಹುಟ್ಟುಹಬ್ಬದ ಸಂಭ್ರಮ ಮುಂದುವರಿದಿದೆ. ಬಂದಿರುವ ಎಲ್ಲ ಅತಿಥಿಗಳು ಕೂಡ ತನ್ವಿ ಹುಟ್ಟುಹಬ್ಬದ ಆಚರಣೆ ಮತ್ತು ಭರ್ಜರಿ ಸಿದ್ಧತೆಯನ್ನು ಕಂಡು ಕೊಂಡಾಡುತ್ತಿದ್ದಾರೆ. ತಾಂಡವ್ ಮತ್ತು ಶ್ರೇಷ್ಠಾಗೆ ಎಲ್ಲರ ಕಡೆಯಿಂದಲೂ ಶಹಬ್ಬಾಸ್ ದೊರೆಯುತ್ತಿದೆ. ಭಾಗ್ಯ ಮಾತ್ರ ಅವಳ ಸಹೋದ್ಯೋಗಿಗಳ ಜತೆ ಡ್ಯಾನ್ಸ್ ಮಾಡುತ್ತಾ ರೆಸಾರ್ಟ್‌ಗೆ ಬರುವ ಅತಿಥಿಗಳನ್ನು ರಂಜಿಸುತ್ತಿದ್ದಾಳೆ. ಅಂದು ಅಲ್ಲಿ ಆಯೋಜನೆಯಾಗಿರುವುದು ತನ್ನದೇ ಮಗಳ ಬರ್ತ್‌ಡೇ ಎನ್ನುವುದು ಅವಳ ಗಮನದಲ್ಲಿಲ್ಲ. ಅದರ ಸುಳಿವು ಕೂಡ ಆಕೆಗೆ ಸಿಕ್ಕಿಲ್ಲ, ಈ ದಿನ ಪೂರ್ತಿ ವೇಷ ಧರಿಸಿ ಕುಣಿದು, ದುಡ್ಡು ತೆಗೆದುಕೊಂಡು ಹೋಗಬೇಕು, ಮಗಳ ಹುಟ್ಟುಹಬ್ಬವನ್ನು ಆಚರಿಸಬೇಕು ಎನ್ನುವುದು ಒಂದೇ ಅವಳ ಮನಸ್ಸಿನಲ್ಲಿದೆ.
ವೇದಿಕೆಗೆ ಕೇಕ್ ತಂದ ಭಾಗ್ಯ
ತನ್ವಿ ಹುಟ್ಟುಹಬ್ಬದ ಆಚರಣೆಗೆ ಬಾರ್ಬಿ ಕೇಕ್ ತಯಾರಿಸಲಾಗಿದೆ. ಅದನ್ನು ವೇದಿಕೆಗೆ ತೆಗೆದುಕೊಂಡು ಹೋಗುವಂತೆ ಭಾಗ್ಯ ಮ್ಯಾನೇಜರ್ ಅವಳಿಗೆ ತಿಳಿಸಿದ್ದಾರೆ. ಅದಕ್ಕೆ ಅವಳು ಸರಿ ಎಂದು ಕೇಕ್ ಹಿಡಿದುಕೊಂಡು ವೇದಿಕೆಗೆ ಹೋಗಿದ್ದಾಳೆ. ಆದರೆ ಹೋಗುವಾಗ ಎಲ್ಲರೂ ಹ್ಯಾಪಿ ಬರ್ತ್‌ಡೇ ಎಂದು ಹೇಳುತ್ತಾ, ಹಾಡುತ್ತಾ ಸಂಭ್ರಮಿಸಿ ಹೋಗುತ್ತಿದ್ದಾರೆ. ಅಷ್ಟರಲ್ಲಿ ಭಾಗ್ಯ, ಕೇಕ್ ಮೇಲೆ ಯಾರ ಹೆಸರು ಇದೆ ಎಂದು ನೋಡಿದ್ದಾಳೆ. ಅದರಲ್ಲಿ ಹ್ಯಾಪಿ ಬರ್ತ್‌ಡೇ ತನ್ವಿ ಎಂದು ಇರುವುದನ್ನು ಕಂಡು ಶಾಕ್‌ಗೆ ಒಳಗಾಗಿದ್ದಾಳೆ. ಅರೆಕ್ಷಣ ಅಲ್ಲಿಯೇ ನಿಂತು, ನಂತರ ಮುಂದಕ್ಕೆ ಸಾಗಿದ್ದಾಳೆ. ವೇದಿಕೆಗೆ ಸಾಗುವ ಸಂದರ್ಭದಲ್ಲಿ ಅವಳ ಕಣ್ಣು ತುಂಬಿ ಬಂದಿದೆ.
ಭಾಗ್ಯಳನ್ನು ತಳ್ಳಿದ ಶ್ರೇಷ್ಠಾ
ಭಾಗ್ಯ ಕೇಕ್ ಹಿಡಿದುಕೊಂಡು ವೇದಿಕೆಗೆ ತೆರಳಿ, ಅಲ್ಲಿ ಕೇಕ್ ಇರಿಸಿದ್ದಾಳೆ. ಮಗಳು ಮತ್ತು ಗಂಡನನ್ನು ನೋಡಿ ಅವಳಿಗೆ ಅಳು ತುಂಬಿ ಬಂದಿದೆ, ಆದರೂ ತೋರಿಸದೆ, ಅರೆಕ್ಷಣ ಅಲ್ಲಿಯೇ ಇರುವುದನ್ನು ಕಂಡು, ಶ್ರೇಷ್ಠಾ, ನೀವೇಕೆ ಇಲ್ಲಿ ನಿಂತಿದ್ದೀರಿ, ಬದಿಗೆ ಹೋಗಿ ಎಂದು ತಳ್ಳಿದ್ದಾಳೆ. ಆಗ ಭಾಗ್ಯ ವೇದಿಕೆಯಲ್ಲಿಯೇ ಬಿದ್ದಿದ್ದಾಳೆ. ಅದನ್ನು ಕಂಡು ತನ್ವಿ ಹೋಗಿ, ಅವಳನ್ನು ಎಬ್ಬಿಸಿದ್ದಾಳೆ. ನಂತರ ಭಾಗ್ಯ ಎದ್ದು, ಬದಿಗೆ ಹೋಗಿ ನಿಂತಿದ್ದಾಳೆ, ಇತ್ತ ಹುಟ್ಟುಹಬ್ಬದ ಆಚರಣೆ ಮುಂದುವರಿದಿದೆ. ಅಲ್ಲಿಗೆ ಫೆಬ್ರುವರಿ 16ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 718ನೇ ಸಂಚಿಕೆ ಮುಗಿಸಿದೆ. ಒಂದೆಡೆ ಭಾಗ್ಯ ತನ್ವಿ ಬರ್ತ್‌ಡೇಗೆ ಆಚರಿಸಲು, ರೆಸಾರ್ಟ್‌ನಲ್ಲಿಯೇ ಕುಣಿಯುವ ಕೆಲಸ ಮಾಡುತ್ತಿದ್ದರೆ, ಮತ್ತೊಂದೆಡೆ ತನ್ವಿ ಅಪ್ಪನ ಜತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದ್ದಾಳೆ. ಹೀಗಾಗಿ ಭಾಗ್ಯ ಮುಂದೇನು ಮಾಡುತ್ತಾಳೆ ಎಂದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
