ಅವಳು ಮನೆ ಬಿಟ್ಟು ಬೀದಿ ಬೀದಿ ಅಲೆಯುವಂತೆ ಮಾಡೋಣ, ಭಾಗ್ಯಾ ವಿರುದ್ಧ ಶ್ರೇಷ್ಠಾ-ತಾಂಡವ್‌ ಮಸಲತ್ತು; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಅವಳು ಮನೆ ಬಿಟ್ಟು ಬೀದಿ ಬೀದಿ ಅಲೆಯುವಂತೆ ಮಾಡೋಣ, ಭಾಗ್ಯಾ ವಿರುದ್ಧ ಶ್ರೇಷ್ಠಾ-ತಾಂಡವ್‌ ಮಸಲತ್ತು; ಭಾಗ್ಯಲಕ್ಷ್ಮೀ ಧಾರಾವಾಹಿ

ಅವಳು ಮನೆ ಬಿಟ್ಟು ಬೀದಿ ಬೀದಿ ಅಲೆಯುವಂತೆ ಮಾಡೋಣ, ಭಾಗ್ಯಾ ವಿರುದ್ಧ ಶ್ರೇಷ್ಠಾ-ತಾಂಡವ್‌ ಮಸಲತ್ತು; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 17ರ ಎಪಿಸೋಡ್‌ನಲ್ಲಿ ಮನೆ ಬಿಟ್ಟು ಬಂದ ತಾಂಡವ್‌, ಭಾಗ್ಯಾಳನ್ನು ನೆನಪಿಸಿಕೊಂಡು ಸಿಟ್ಟಾಗುತ್ತಾನೆ. ನಾನು ಮನೆ ಬಿಟ್ಟು ಬರುವಂತೆ ಮಾಡಿದ ಭಾಗ್ಯಾಳನ್ನು ನಾನು ಸುಮ್ಮನೆ ಬಿಡುವುದಿಲ್ಲ ಎನ್ನುತ್ತಾನೆ. ಅವಳು ಮನೆ ಬಿಟ್ಟು ಬೀದಿ ಬೀದಿ ಅಲೆಯುವಂತೆ ಮಾಡೋಣ ಎಂದು ಶ್ರೇಷ್ಠಾ-ತಾಂಡವ್‌ ಮಾತನಾಡಿಕೊಳ್ಳುತ್ತಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 17ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 17ರ ಎಪಿಸೋಡ್‌ (PC: Jio Cinema)

Bhagyalakshmi Serial: ಅಪ್ಪ ಅಮ್ಮ ಯಾರೂ ನನಗೆ ಬೇಡ, ಇನ್ಮುಂದೆ ಈ ಮನೆ, ಈ ಮನೆಯಲ್ಲಿರುವ ಎಲ್ಲರೂ ನಿನ್ನವರು, ನನಗೂ ಈ ಮನೆಗೂ ಸಂಬಂಧ ಇಲ್ಲ, ಇನ್ನು ನಾನು ಈ ಕಡೆ ತಲೆ ಹಾಕುವುದಿಲ್ಲ. ಅಪ್ಪ ಅಮ್ಮನನ್ನು ನನ್ನಿಂದ ದೂರ ಮಾಡಿದ ಪಾಪ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಭಾಗ್ಯಾಗೆ ಶಾಪ ಹಾಕಿ ತಾಂಡವ್‌ ಮನೆ ಬಿಟ್ಟು ಹೋಗುತ್ತಾನೆ.

ಮನೆಯಿಂದ ಹೊರ ಬಂದರೂ ಭಾಗ್ಯಾ ವಿರುದ್ಧ ಕತ್ತಿ ಮಸೆಯುತ್ತಿರುವ ತಾಂಡವ್‌

ತನ್ನ ತಪ್ಪು ಏನೂ ಇಲ್ಲದಿದ್ದರೂ, ತಾಂಡವ್ ಆ ರೀತಿ ಮಾತನಾಡಿ ಹೋಗಿದ್ದಕ್ಕೆ ಭಾಗ್ಯಾ ಕಣ್ಣೀರಿಡುತ್ತಾಳೆ. ಮತ್ತೆ ಮನೆಗೆ ಬರುವ ಶ್ರೇಷ್ಠಾ, ನಾನು ಅಂದುಕೊಂಡಂತೇ ಆಯ್ತು, ತಾಂಡವ್‌ ಬೆಲೆ ಏನು ಅಂತ ನಿಮಗೆಲ್ಲಾ ಗೊತ್ತಿಲ್ಲ, ಒಂದು ದಿನ ಗೊತ್ತಾಗುತ್ತೆ, ಅವನನ್ನು ನಾನು ನನ್ನವನ್ನಾಗಿ ಮಾಡಿಕೊಂಡೇ ತೀರುತ್ತೇನೆ ಎಂದು ಚಾಲೆಂಜ್‌ ಮಾಡುತ್ತಾಳೆ. ಒಂದಲ್ಲಾ ಒಂದು ದಿನ ನನ್ನ‌ ಮಗನಿಗೆ ತಪ್ಪು ಅರ್ಥವಾಗುತ್ತದೆ, ಅವನು ವಾಪಸ್‌ ಬಂದೇ ಬರುತ್ತಾನೆ ಎಂದು ಕುಸುಮಾ ಹೇಳುತ್ತಾಳೆ. ತಾಂಡವ್‌ ತನ್ನ ಸ್ನೇಹಿತನ ಮನೆಗೆ ಬರುತ್ತಾನೆ. ಮನೆ ನೋಡಿ ಶ್ರೇಷ್ಠಾಗೆ ಖುಷಿಯಾಗುತ್ತದೆ. ಹಸಿ ಸಿಮೆಂಟ್ ಸ್ಲ್ಯಾಬ್‌ ಮೇಲೆ ಕಾಲು ಇಡಲು ಹೋಗಿ ಶ್ರೇಷ್ಠಾ ಜಾರಿ ಬೀಳುತ್ತಾಳೆ.

ನಡೆದ ಘಟನೆ ಬಗ್ಗೆ ತಾಂಡವ್‌ ಯೋಚನೆ ಮಾಡುತ್ತಿದ್ದರೆ ಶ್ರೇಷ್ಠಾ, ಮನೆ ಎಷ್ಟು ಚೆನ್ನಾಗಿದೆ,ಇನ್ಮುಂದೆ ನಾವಿಬ್ಬರೂ ಇಲ್ಲಿ ಆರಾಮವಾಗಿ ಇರಬಹುದು ಎಂದು ಖುಷಿಯಾಗಿರುತ್ತಾಳೆ. ಆ ಭಾಗ್ಯಾಳನ್ನು ನೆನಪಿಸಿಕೊಂಡು ನನಗೆ ಸಿಟ್ಟು ಬರುತ್ತಿದೆ, ನಾನು ಆ ಮನೆಗಾಗಿ ಎಷ್ಟು ಕಟ್ಟಪಟ್ಟಿದ್ದೆ, ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅಷ್ಟು ದೊಡ್ಡ ಮನೆ ಕಟ್ಟಿದ್ದೆ, ಆದರೆ ನನ್ನನ್ನೇ ಆ ಮನೆ ಬಿಟ್ಟುಬರುವಂತೆ ಮಾಡಿದಳು. ಅವಳನ್ನು ಮಾತ್ರ ಸುಮ್ಮನೆ ಬಿಡುವುದಿಲ್ಲ. ಅಪ್ಪ ಅಮ್ಮ ಇಬ್ಬರೂ ಅವಳನ್ನು ಮನೆ ಬಿಟ್ಟು ಓಡಿಸುವಂತೆ ಮಾಡಬೇಕು, ಅವಳು ಬೀದಿ ಬೀದಿ ಅಲೆಯುವಂತಾಗಬೇಕು ಎಂದು ತಾಂಡವ್‌ ಸಿಟ್ಟು ಹೊರ ಹಾಕುತ್ತಾನೆ. ನನಗೆ ಬೇಕಿರುವುದೂ ಅದೇ, ನಾವಿಬ್ಬರೂ ಸೇರಿ ಭಾಗ್ಯಾಗೆ ಬುದ್ಧಿ ಕಲಿಸೋಣ, ನಾನು ನಿನ್ನ ಜೊತೆ ಇರುತ್ತೇನೆ ಎಂದು ಶ್ರೇಷ್ಠಾ ಸಮಾಧಾನ ಮಾಡುತ್ತಾಳೆ.

ಭಾಗ್ಯಾಗೆ ಧೈರ್ಯ ಹೇಳಿದ ಕುಸುಮಾ

ತಾವಿಬ್ಬರೂ ಜೊತೆಯಾಗಿ ಇದ್ದ ಫೋಟೋವನ್ನು ತಾಂಡವ್‌ ಒಡೆದಿರುವುದನ್ನು ನೋಡಿ ಭಾಗ್ಯಾಗೆ ನೋವಾಗುತ್ತದೆ. ಅಷ್ಟರಲ್ಲಿ ಕುಸುಮಾ ಅಲ್ಲಿಗೆ ಬರುತ್ತಾಳೆ. ಒಂದಲ್ಲಾ ಒಂದು ದಿನ ತಾಂಡವ್‌ಗೆ ಶ್ರೇಷ್ಠಾ ಬುದ್ಧಿ ಅರ್ಥವಾಗುತ್ತದೆ. ಅವನು ಖಂಡಿತ ಇಲ್ಲಿಗೆ ವಾಪಸ್‌ ಬಂದೇ ಬರುತ್ತಾನೆ. ಅವನು ಬಂದಾಗ ನೀನು ಇದೇ ಭಾಗ್ಯಾ ಆಗಿರಬೇಕು, ಮತ್ತೆ ಅವನನ್ನು ಸ್ವೀಕರಿಸಬೇಕು ಎನ್ನುತ್ತಾಳೆ. ಅತ್ತೆ ಮಾತಿಗೆ ಭಾಗ್ಯಾ ನಗುತ್ತಾಳೆ. ಒಮ್ಮೆ ಒಡೆದ ಮನಸ್ಸು ಮತ್ತೆ ಸೇರುವುದು ಕಷ್ಟ ಎನ್ನುತ್ತಾಳೆ. ಮರುದಿನ ಸಂಕ್ರಾಂತಿ ಹಬ್ಬ ಆಚರಿಸಲು ಭಾಗ್ಯಾ ಬೆಳಗ್ಗೆ ಬೇಗ ಎದ್ದು ರಂಗೋಲಿ ಬಿಡುತ್ತಾಳೆ. ಅವಳನ್ನು ನೋಡಿ ಕುಸುಮಾ, ಧರ್ಮರಾಜ್‌ ಆಶ್ಚರ್ಯವಾಗುತ್ತಾರೆ.

ನೀನು ಎಷ್ಟೇ ನೋವಿನಲ್ಲಿದ್ದರೂ ನಮಗಾಗಿ ಇದೆಲ್ಲಾ ಮಾಡುತ್ತಿದ್ದೀಯ ಎಂದು ಖುಷಿಯಾಗುತ್ತಾರೆ. ಅಷ್ಟರಲ್ಲಿ ಸುನಂದಾ ಅಲ್ಲಿಗೆ ಬರುತ್ತಾಳೆ. ಗಂಡ ಮನೆ ಬಿಟ್ಟು ಹೋಗಿದ್ದಾನೆ. ಈ ಸಮಯದಲ್ಲಿ ನೀನು ಹಬ್ಬ ಮಾಡಬೇಕಾ ಎಂದು ಕೇಳುತ್ತಾಳೆ.

ಶ್ರೇಷ್ಠಾ ಜೊತೆ ಬೇರೆ ಮನೆ ಮಾಡಿ ಉಳಿದುಕೊಂಡಿರುವ ತಾಂಡವ್‌ ನಿಜವಾಗಿಯೂ ಖುಷಿಯಾಗಿರುತ್ತಾನಾ? ಇತ್ತ ಅತ್ತೆ ಹೇಳಿದಂತೆ ಭಾಗ್ಯಾ ಗಂಡ ವಾಪಸ್‌ ಬರಲು ಕಾಯುತ್ತಾಳಾ? ಮುಂದಿನ ಎಪಿಸೋಡ್‌ಗಳಲ್ಲಿ ಉತ್ತರ ದೊರೆಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner