ಭಾಗ್ಯ ಬಣ್ಣ ಹಚ್ಚಿಕೊಂಡು ಕಂಡಕಂಡಲ್ಲಿ ಕುಣಿಯುತ್ತಿದ್ದಾಳೆ ಎಂದ ತಾಂಡವ್: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಮಾರ್ಚ್ 17ರ ಸಂಚಿಕೆಯಲ್ಲಿ ತಾಂಡವ್ ಮಗ ತನ್ಮಯ್ ಶೂ ಪಾಲೀಶ್ ಮಾಡುವುದನ್ನು ಪತ್ತೆಹಚ್ಚಿದ್ದಾನೆ, ಬಳಿಕ ಭಾಗ್ಯಳನ್ನು ಅಲ್ಲಿಗೆ ಕರೆಸಿಕೊಂಡಿದ್ದಾನೆ, ಭಾಗ್ಯ ಕೆಲಸ ಮಾಡುತ್ತಿರುವಲ್ಲಿಂದ ಎದ್ದು ತನ್ಮಯ್ ಇರುವಲ್ಲಿಗೆ ಬಂದಿದ್ದಾಳೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಮಾರ್ಚ್ 17ರ ಸಂಚಿಕೆಯಲ್ಲಿ ತನ್ಮಯ್ ಶೂ ಪಾಲೀಶ್ ಮಾಡುವುದನ್ನು ಕಂಡು ತಾಂಡವ್ ಕೋಪಗೊಂಡಿದ್ದಾನೆ. ಕೂಡಲೇ ಅವನು ಭಾಗ್ಯಗೆ ಫೋನ್ ಮಾಡಿದ್ದಾನೆ. ಕೆಲಸದ ಮೇಲಿದ್ದ ಭಾಗ್ಯ ಮೊದಲಿಗೆ ಫೋನ್ ರಿಸೀವ್ ಮಾಡಿಲ್ಲ, ಆದರೆ ತಾಂಡವ್ ಮೊದಲಿಗೆ ಪದೇ ಪದೇ ಫೋನ್ ಮಾಡಿದಾಗ ಕರೆ ಸ್ವೀಕರಿಸಿದ್ದಾಳೆ, ಆಗ ತಾಂಡವ್ ಮಗನ ಬಗ್ಗೆ ಹೇಳಿದ್ದು, ಕೂಡಲೇ ಸ್ಥಳಕ್ಕೆ ಬರುವಂತೆ ಹೇಳಿದ್ದಾನೆ. ಕೊನೆಗೆ ಭಾಗ್ಯ ವಿಧಿಯಿಲ್ಲದೇ ಕೆಲಸ ಮಾಡುವ ಸ್ಥಳ ಬಿಟ್ಟು, ತಾಂಡವ್ ಹೇಳಿದ ಜಾಗಕ್ಕೆ ಬಂದಿದ್ದಾಳೆ. ಅಲ್ಲಿ ಮಗ ಶೂ ಪಾಲೀಶ್ ಮಾಡುತ್ತಿರುವುದನ್ನು ಕಂಡು ದಂಗಾಗಿದ್ದಾಳೆ.
ಮಗನ ಅವಸ್ಥೆ ಕಂಡು ಭಾಗ್ಯ ಒಮ್ಮೆಲೆ ಶಾಕ್‌ಗೆ ಒಳಗಾಗಿದ್ದಾಳೆ. ವಿಚಾರಿಸಿದಾಗ, ಶಾಲೆಯ ಫೀಸ್ ಕಟ್ಟಲು ಬಹಳಷ್ಟು ಹಣ ಬೇಕಾಗುತ್ತದೆ. ಅದಕ್ಕಾಗಿ ಈ ಕೆಲಸ ಮಾಡುತ್ತಿದ್ದೇನೆ, ಸ್ವಲ್ಪ ಹಣವನ್ನೂ ಸಂಪಾದಿಸಿದ್ದಾನೆ. ಅದರಿಂದ ನಿಮಗೆ ಸಹಾಯವಾಗಬಹುದು. ನೀವು ಒಬ್ಬರೇ ಎಷ್ಟೊಂದು ಕಷ್ಟಪಡುತ್ತಿದ್ದೀರಿ. ನಿಮಗೆ ಹೆಲ್ಪ್ ಆಗಬಹುದು. ನೀವು ಬಿಸಿಲಿನಲ್ಲಿ ಅಷ್ಟೊಂದು ಕೆಲಸ ಮಾಡುವುದನ್ನು ನೋಡಿದ್ದೇನೆ, ನಿಮ್ಮ ಕಷ್ಟದಲ್ಲಿ ನನ್ನ ಪಾಲೂ ಇರಲಿ ಎಂದು ಹೇಳುತ್ತಾನೆ.
ಭಾಗ್ಯ ರೆಸಾರ್ಟ್‌ನಲ್ಲಿ ಕುಣಿಯುವ ಕೆಲಸ ಮಾಡುತ್ತಿರುವ ಬಗ್ಗೆ ತಿಳಿದುಕೊಂಡ ತಾಂಡವ್, ನೀನು ಹೇಳಿಯೇ ಅವನಲ್ಲಿ ಕೆಲಸ ಮಾಡಿಸುತ್ತಿದ್ದಿ, ಅಲ್ಲದೇ, ನೀನು ಹಾಗೂ ಹೀಗೂ ಕುಣಿದು ಕೆಲಸ ಮಾಡಿ ಮಗನನ್ನು ಸಾಕುತ್ತಿದ್ದೀ, ನಿನ್ನಲ್ಲಿ ಫೀಸ್ ಕಟ್ಟಲೂ ದುಡ್ಡಿಲ್ಲ, ಆದರೆ ಈ ಬೂಟಾಟಿಕೆ ಮಾತ್ರ ನಿಂತಿಲ್ಲ ಎಂದು ಹೀಯಾಳಿಸುತ್ತಾನೆ. ತಾಂಡವ್ ಮಾತಿಗೆ ಭಾಗ್ಯ, ನಾನು ಕಷ್ಟಪಟ್ಟು ಕೆಲಸ ಮಾಡಿ ಸಂಸಾರವನ್ನು, ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇನೆ, ಆದರೆ ನೀನು ಅಂದುಕೊಂಡಂತೆ ಮನೆ, ಜವಾಬ್ದಾರಿ ಬಿಟ್ಟು ಓಡಿ ಹೋಗಿಲ್ಲ. ಅದರ ಬದಲು ನಾನು ಧೈರ್ಯದಿಂದ ಎಲ್ಲವನ್ನೂ ನಿಭಾಯಿಸುತ್ತಿದ್ದೇನೆ, ನಿನ್ನ ಉಪದೇಶ ನನಗೆ ಬೇಕಾಗಿಲ್ಲ ಎಂದು ಹೇಳುತ್ತಾಳೆ.
ಅಮ್ಮನ ಜತೆಯೇ ಇರುತ್ತೇನೆ ಎಂದ ತನ್ಮಯ್
ತನ್ಮಯ್‌ನನ್ನು ನಾನು ಕರೆದೊಯ್ಯುತ್ತೇನೆ, ನನ್ನ ಮಕ್ಕಳನ್ನು ನಾನು ಸಾಕುತ್ತೇನೆ ಎಂದು ಹೇಳಿದ ತಾಂಡವ್, ಮಗನನ್ನು ಬಲವಂತದಿಂದ ಕರೆದೊಯ್ಯಲು ಮುಂದಾಗುತ್ತಾನೆ. ಆದರೆ ತನ್ಮಯ್ ಅವನ ಜೊತೆ ಹೋಗಲು ಒಪ್ಪುವುದಿಲ್ಲ. ಕೈ ಬಿಡಿಸಿಕೊಂಡು ಬಂದು ಅಮ್ಮನ ಜತೆ ನಿಲುತ್ತಾನೆ. ಆಗ ಭಾಗ್ಯ, ಅವನನ್ನು ಕರೆದುಕೊಂಡು ಮನೆಗೆ ಹೊರಡುತ್ತಾಳೆ. ದಾರಿಯಲ್ಲಿ ತನ್ಮಯ್, ಅಮ್ಮನ ಕಾಲು ಹಿಡಿದು ಕ್ಷಮೆ ಕೇಳುತ್ತಾನೆ. ಇತ್ತ ತಾಂಡವ್ ಭಾಗ್ಯ ಮನೆಗೆ ಬಂದು, ಮನೆಯ ಹೊರಗಡೆ ನಿಂತು ಜೋರಾಗಿ ಅರಚುತ್ತಾ, ಭಾಗ್ಯ ಕಂಡ ಕಂಡಲ್ಲಿ ಕುಣಿದು ಕೆಲಸ ಮಾಡಿ ಹಣ ಸಂಪಾದಿಸಿ, ನಮ್ಮ ಮರ್ಯಾದೆ ತೆಗೆಯುತ್ತಿದ್ದಾಳೆ ಎಂದು ಹೇಳುತ್ತಾನೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಮಾರ್ಚ್ 17ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 742ನೇ ಸಂಚಿಕೆ ಮುಗಿಸಿದೆ. ಭಾಗ್ಯ ಈಗ ಏನು ಮಾಡುತ್ತಾಳೆ ಎಂದು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ