ಶ್ರೇಷ್ಠಾ ಕೊಟ್ಟ ಕಾಫಿ ಕುಡಿದು, ಭಾಗ್ಯಾ ನಿನ್ನ ಕಾಲ ಧೂಳಿಗೂ ಸಮವಲ್ಲ ಎಂದು ಹೊಗಳಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರೇಷ್ಠಾ ಕೊಟ್ಟ ಕಾಫಿ ಕುಡಿದು, ಭಾಗ್ಯಾ ನಿನ್ನ ಕಾಲ ಧೂಳಿಗೂ ಸಮವಲ್ಲ ಎಂದು ಹೊಗಳಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಶ್ರೇಷ್ಠಾ ಕೊಟ್ಟ ಕಾಫಿ ಕುಡಿದು, ಭಾಗ್ಯಾ ನಿನ್ನ ಕಾಲ ಧೂಳಿಗೂ ಸಮವಲ್ಲ ಎಂದು ಹೊಗಳಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 18ರ ಎಪಿಸೋಡ್‌ನಲ್ಲಿ ಹೋಟೆಲ್‌ನಿಂದ ಕಾಫಿ ಆರ್ಡರ್‌ ಮಾಡಿ ಅದನ್ನು ನಾನೇ ಮಾಡಿದ್ದು ಎಂದು ಶ್ರೇಷ್ಠಾ ಮತ್ತೆ ಸುಳ್ಳು ಹೇಳುತ್ತಾಳೆ. ಆ ಭಾಗ್ಯಾ ಒಮ್ಮೆಯೂ ನನಗೆ ಇಷ್ಟು ರುಚಿಯಾದ ಕಾಫಿ ಮಾಡಿಕೊಟ್ಟಿಲ್ಲ ಎಂದು ತಾಂಡವ್‌, ಶ್ರೇಷ್ಠಾಳನ್ನು ಹೊಗಳುತ್ತಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 18ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 18ರ ಎಪಿಸೋಡ್‌ (PC: Jio Cinema)

Bhagyalakshmi Serial: ತಾಂಡವ್‌ ಮನೆ ಬಿಟ್ಟು ಬಂದಿದ್ದಾನೆ. ಶ್ರೇಷ್ಠಾ ಜೊತೆ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದಾನೆ. ತಾನೇ ಕಟ್ಟಿಸಿದ ಮನೆ ಬಿಟ್ಟು ಬಂದೆ, ಇದಕ್ಕೆಲ್ಲಾ ಕಾರಣ ಆ ಭಾಗ್ಯಾ, ಅವಳನ್ನು ನಾನು ಸುಮ್ಮನೆ ಬಿಡುವುದಿಲ್ಲ. ಅವಳನ್ನು ಅಪ್ಪ-ಅಮ್ಮನೇ ಮನೆಯಿಂದ ಹೊರ ಹಾಕುವಂತೆ ಮಾಡಬೇಕು, ಅವಳು ಮನೆ ಬಿಟ್ಟು ಬೀದಿ ಬೀದಿ ಅಲೆಯಬೇಕು ಹಾಗೆ ಮಾಡುತ್ತೇನೆ ಎಂದು ಅರಚಾಡುತ್ತಾನೆ.

ಕಾಫಿ ಆರ್ಡರ್‌ ಮಾಡಿ ನಾನೇ ಮಾಡಿದ್ದು ಎಂದ ಶ್ರೇಷ್ಠಾ

ಭಾಗ್ಯಾ ಮೇಲೆ ತಾಂಡವ್‌ ಸಿಟ್ಟು ಮಾಡಿಕೊಂಡಿರುವುದು ಶ್ರೇಷ್ಠಾಗೆ ಕೂಡಾ ಖುಷಿ. ಇಬ್ಬರೂ ಡಿವೋರ್ಸ್‌ ನೀಡಿದರೆ ನಾನು ಸುಲಭವಾಗಿ ಮದುವೆ ಆಗಬಹುದು ಎಂದು ಶ್ರೇಷ್ಠಾ ಯೋಚಿಸುತ್ತಾಳೆ. ನಿನ್ನ ಜೊತೆ ನಾನಿದ್ದೇನೆ, ನಾವಿಬ್ಬರೂ ಸೇರಿ ಆ ಭಾಗ್ಯಾಗೆ ಬುದ್ಧಿ ಕಲಿಸೋಣ. ಅವಳು ಖುಷಿಯಾಗಿರಬಾರದು ಎಂದು ತಾಂಡವ್‌ಗೆ ಶ್ರೇಷ್ಠಾ ಸಮಾಧಾನ ಮಾಡುತ್ತಾಳೆ. ನೀನು ನನ್ನ ಜೊತೆ ಬಂದಿದ್ದೀಯ, ನಾವಿಬ್ಬರೂ ಹೊಸ ಜೀವನ ಶುರು ಮಾಡೋಣ, ಇನ್ನು ನಿನ್ನ ಮನೆಯವರ ಬಗ್ಗೆ ಯೋಚಿಸಬೇಡ ಎಂದು ಹೇಳುತ್ತಾಳೆ. ಮರುದಿನ ತಾಂಡವ್‌ ಏಳುವ ಮುನ್ನವೇ ಎದ್ದು ಕಾಫಿ ತರುತ್ತಾಳೆ. ಶ್ರೇಷ್ಠಾ ಇಷ್ಟೊಂದು ಬದಲಾಗಿದ್ದಾಳೆ ಎಂದು ತಾಂಡವ್‌ ಖುಷಿಯಾಗುತ್ತಾನೆ.

ಈ ಕಾಫಿಯನ್ನು ನಿಜಕ್ಕೂ ನೀನೇ ಮಾಡಿದ್ದಾ ಎಂದು ಕೇಳುತ್ತಾನೆ. ಶ್ರೇಷ್ಠಾ , ಹೌದು ಎನ್ನುತ್ತಾಳೆ. ಅದನ್ನು ಕುಡಿಯುವ ತಾಂಡವ್‌ ತುಂಬಾ ಚೆನ್ನಾಗಿ ಮಾಡಿದ್ದೀಯ, ಆ ಭಾಗ್ಯಾ ಒಂದು ದಿನವೂ ನನಗೆ ಇಂಥ ಕಾಫಿ ಮಾಡಿಕೊಟ್ಟಿಲ್ಲ ಎಂದು ಶ್ರೇಷ್ಠಾಳನ್ನು ಹೊಗಳುತ್ತಾನೆ. ಇದಿಷ್ಟೇ ಅಲ್ಲ ನಿನಗೆ ಇನ್ನೂ ತುಂಬಾ ಸರ್ಪ್ರೈಸ್‌ ಬಾಕಿ ಇದೆ, ಇವತ್ತು ಸಂಕ್ರಾಂತಿ ಹಬ್ಬ, ಸ್ನಾನ ಮಾಡಿಬಾ ಎಂದು ಹೇಳುತ್ತಾಳೆ. ತಾಂಡವ್‌ ಸ್ನಾನ ಮಾಡಿ ಬರುವಷ್ಟರಲ್ಲಿ ಬೆಡ್‌ ಮೇಲೆ ಪಂಚೆ ಶರ್ಟ್‌ ಇಟ್ಟು ನೋಟ್‌ ಇಟ್ಟಿರುತ್ತಾಳೆ. ಶ್ರೇಷ್ಠಾ, ನಿಜಕ್ಕೂ ನೀನು ನನಗೆ ಪರ್ಫೆಕ್ಟ್‌ ಜೋಡಿ, ಒಂದು ದಿನವೂ ಆ ಭಾಗ್ಯಾ ನನಗೆ ಈ ರೀತಿ ಸರ್ಪ್ರೈಸ್‌ ಕೊಟ್ಟಿಲ್ಲ ಎಂದು ಖುಷಿಯಾಗುತ್ತಾನೆ.

ಮನೆಯಲ್ಲಿ ಸಂಕ್ರಾಂತಿ ಆಚರಿಸಿದ ಭಾಗ್ಯಾ

ಇತ್ತ ಭಾಗ್ಯಾ ಕೂಡಾ ಮನೆಯಲ್ಲಿ ಸಂಕ್ರಾಂತಿ ಆಚರಿಸುತ್ತಾಳೆ. ಮಗ ಮನೆ ಬಿಟ್ಟು ಹೋದ ಕೊರಗು ಅತ್ತೆ ಮಾವನಿಗೆ ಕಾಡಬಾರದು, ಎಲ್ಲರೂ ಖುಷಿಯಾಗಿರಲಿ ಎಂಬ ಕಾರಣಕ್ಕೆ ಸಂಕ್ರಾಂತಿ ಆಚರಿಸುತ್ತಾಳೆ. ಪೂಜೆ ಮಾಡಿ ಎಲ್ಲರಿಗೂ ಹೊಸ ಬಟ್ಟೆ ಕೊಡುತ್ತಾಳೆ. ಅಷ್ಟರಲ್ಲಿ ನೆರೆಹೊರೆಯವರು ಭಾಗ್ಯಾ ಮನೆಗೆ ಬಂದು ಎಳ್ಳು ಬೆಲ್ಲ ಕೊಡುತ್ತಾರೆ. ತಾಂಡವ್‌ ಎಲ್ಲಿ ಕಾಣಿಸುತ್ತಿಲ್ಲ ಎಂದು ಒಬ್ಬಾಕೆ ಕೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವ ಮತ್ತೊಬ್ಬ ಮಹಿಳೆ, ನಿಮಗೆ ವಿಷಯ ಗೊತ್ತಿಲ್ವಾ, ತಾಂಡವ್‌ , ಆ ಶ್ರೇಷ್ಠಾ ಜೊತೆ ಮನೆ ಬಿಟ್ಟು ಹೋಗಿದ್ದಾನೆ. ಆದರೂ ಭಾಗ್ಯಾ ಬಹಳ ಅದೃಷ್ಟಂತೆ, ನಿನ್ನ ಜೊತೆ ನಿನ್ನ ಅತ್ತೆ ಮಾವ ಇದ್ದಾರೆ, ಮಗನ ಜೊತೆ ಖುಷಿಯಾಗಿ ಇರಬಹುದಿತ್ತು, ಆದರೆ ನಿನ್ನ ಜೊತೆ ಇದ್ದಾರೆ, ಎಂಥ ದುರಂತ ಎನ್ನುತ್ತಾರೆ.

ನೆರೆಹೊರೆಯವರ ಮಾತಿಗೆ ಪ್ರತಿಕ್ರಿಯಿಸುವ ಸುಂದ್ರಿ, ಕುಸುಮಾ ಆಗಲೀ ಧರ್ಮರಾಜ್‌ ಆಗಲೀ ಸೊಸೆ ಜೊತೆಗೆ ಇರುವುದು ದುರಂತ ಎಂದು ಹೇಳಿದ್ರಾ? ಹಬ್ಬಕ್ಕೆ ಬಂದಿದ್ದೀರಿ ಇದೆಲ್ಲಾ ಮಾತನಾಡಬೇಡಿ ಎನ್ನುತ್ತಾಳೆ. ಧರ್ಮರಾಜ್‌ ಹಾಗೂ ಕುಸುಮಾ ಕೂಡಾ ದನಿಗೂಡಿಸಿ ಭಾಗ್ಯಾ ಜೊತೆ ಇರುವುದು ನಮಗೆ ಖುಷಿ, ನಮಗೆ ಮಗಳು ಇದ್ದಿದ್ದರೂ ಅವಳು ಇಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ ಎನ್ನುತ್ತಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner