ಹೋಟೆಲ್ ಊಟವನ್ನು ಶ್ರೇಷ್ಠಾ ಮಾಡಿದ ಸಂಕ್ರಾಂತಿ ಹಬ್ಬದ ಅಡುಗೆ ಎಂದು ಚಪ್ಪರಿಸಿಕೊಂಡು ತಿಂದ ತಾಂಡವ್: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 19ರ ಎಪಿಸೋಡ್‌ನಲ್ಲಿ ಶ್ರೇಷ್ಠಾ ಜೊತೆ ತಾಂಡವ್ ಸಂಕ್ರಾತಿ ಆಚರಿಸುತ್ತಾನೆ. ಮತ್ತೆ ಹೋಟೆಲ್‌ನಿಂದ ಊಟ ಆರ್ಡರ್ ಮಾಡುವ ಶ್ರೇಷ್ಠಾ, ಇದನ್ನು ನಾನೇ ಮಾಡಿದ್ದು ಎಂದು ತಾಂಡವ್‌ನನ್ನು ನಂಬಿಸುತ್ತಾಳೆ. ತಾಂಡವ್ ಅದನ್ನು ನಂಬಿ ಚಪ್ಪರಿಸಿಕೊಂಡು ತಿನ್ನುತ್ತಾನೆ.

Bhagyalakshmi Serial: ತಾಂಡವ್ ಹಾಗೂ ಶ್ರೇಷ್ಠಾ ಹೊಸ ಮನೆಯಲ್ಲಿ ಖುಷಿಯಾಗಿದ್ದಾರೆ. ಇನ್ಮುಂದೆ ಎಲ್ಲಾ ಇದೇ ರೀತಿ ಇರಲಿದೆ ಎಂಬ ಖುಷಿಯಿಂದ ಇಬ್ಬರೂ ಹೊಸ ಜೀವನ ಆರಂಭಿಸಿದ್ದಾರೆ. ನೀನು ನನಗೆ ಪರ್ಫೆಕ್ಟ್ ಜೋಡಿ, ಆ ಭಾಗ್ಯಾ ಒಂದು ದಿನವೂ ನನಗೆ ಈ ರೀತಿ ಸರ್ಪ್ರೈಸ್ ಕೊಟ್ಟಿಲ್ಲ, ಇಷ್ಟು ರುಚಿಯಾಗಿ ಕಾಫಿ ಮಾಡಿಕೊಟ್ಟಿಲ್ಲ ಎಂದು ಪದೇ ಪದೆ ಭಾಗ್ಯಾಳನ್ನು ಅವಮಾನಿಸುತ್ತಾ ತಾಂಡವ್ ಖುಷಿಯಾಗಿದ್ದಾನೆ.
ಶ್ರೇಷ್ಠಾ ಜೊತೆ ಸಂಕ್ರಾಂತಿ ಆಚರಿಸಿದ ತಾಂಡವ್
ಶ್ರೇಷ್ಠಾ ಕೊಟ್ಟ ಝರಿ ಶರ್ಟ್, ಪಂಚೆ ಧರಿಸಿ ತಾಂಡವ್ ರೆಡಿಯಾಗುತ್ತಾನೆ. ಶ್ರೇಷ್ಠಾ ಕೂಡಾ ಸೀರೆ ಉಟ್ಟು ರೆಡಿಯಾಗಿರುತ್ತಾಳೆ. ಅವಳನ್ನು ನೋಡಿ ತಾಂಡವ್ ಖುಷಿಯಾಗಿ ತುಂಬಾ ಚೆನ್ನಾಗಿ ಕಾಣುತ್ತಿದ್ದೀಯ ಎಂದು ಹೊಗಳುತ್ತಾನೆ. ಹಬ್ಬದ ದಿನ ಪೂಜೆಗೆ ಅವಳು ಎಲ್ಲಾ ತಯಾರಿ ಮಾಡಿರುವುದನ್ನು ನೋಡಿ ಖುಷಿಯಾಗುತ್ತಾನೆ. ಇದೆಲ್ಲಾ ನೀನಾ ರೆಡಿ ಮಾಡಿದ್ದು ನನಗಂತೂ ನಂಬೋಕೆ ಆಗ್ತಿಲ್ಲ ಎನ್ನುತ್ತಾನೆ. ಇದಿಷ್ಟೇ ಅಲ್ಲ ಇನ್ನೂ ನೀನು ಖುಷಿ ಪಡುವ ವಿಚಾರ ಇದೆ. ಈಗ ಪೂಜೆ ಮಾಡೋಣ. ನಂತರ ನಾನೇ ಹಬ್ಬದ ಅಡುಗೆ ಮಾಡುವೆ ಇಬ್ಬರೂ ಕುಳಿತು ಒಟ್ಟಿಗೆ ಊಟ ಮಾಡೋಣ ಎಂದು ಶ್ರೇಷ್ಠಾ ಹೇಳಿದ ಕೂಡಲೇ ತಾಂಡವ್‌ಗೆ ಆಶ್ಚರ್ಯವಾಗುತ್ತದೆ.
ಪೂಜೆ ಮುಗಿಸಿ ತಾಂಡವ್ ಮತ್ತೆ ರೂಮ್‌ಗೆ ಹೋಗುತ್ತಾನೆ. ನಾನೇ ಅಡುಗೆ ಮಾಡುವೆ ಎಂದು ಸುಳ್ಳು ಹೇಳುವ ಶ್ರೇಷ್ಠಾ, ಹೋಟೆಲ್‌ನಿಂದ ಮತ್ತೆ ಊಟ ಆರ್ಡರ್ ಮಾಡುತ್ತಾಳೆ. ಎಲ್ಲವನ್ನೂ ಮತ್ತೆ ಮನೆ ಪಾತ್ರೆಗೆ ವರ್ಗಾಯಿಸಿ ಡೈನಿಂಗ್ ಟೇಬಲ್ ಮೇಲೆ ಇಟ್ಟು ತಾಂಡವ್‌ನನ್ನು ಊಟಕ್ಕೆ ಕರೆಯುತ್ತಾಳೆ. ಶ್ರೇಷ್ಠಾ, ಎಲ್ಲಾ ಅಡುಗೆ ಮಾಡಿದ್ದಾಳೆ ಎಂದು ನಂಬಿ ಖುಷಿಯಾಗುತ್ತಾನೆ. ಒಬ್ಬಟ್ಟು ತಿಂದು ಇದೆಲ್ಲಾ ನಿಜಕ್ಕೂ ನೀನೇ ಮಾಡಿದ್ದಾ ಎಂದು ಕೇಳುತ್ತಾನೆ. ಶ್ರೇಷ್ಠಾ, ಹೌದು ಎನ್ನುತ್ತಾಳೆ. ಹಾಗಾದರೆ ನಮ್ಮ ಮನೆಯಲ್ಲಿ ನೀನು ಅಡುಗೆ ಏಕೆ ಮಾಡಲಿಲ್ಲ, ಅಲ್ಲಿ ಈ ರೀತಿ ಅಡುಗೆ ಮಾಡಿದ್ದರೆ ನೀನು ಯಾರಿಂದಲೂ ಏನು ಅನ್ನಿಸಿಕೊಳ್ಳುತ್ತಿರಲಿಲ್ಲ ಎನ್ನುತ್ತಾನೆ, ಮನೆಯಲ್ಲಿ ನಿನ್ನ ಅಮ್ಮ, ಆ ಪೂಜಾ, ಭಾಗ್ಯಾ ಎಲ್ಲರೂ ನನಗೆ ಟಾರ್ಚರ್ ಕೊಟ್ರು, ಆ ಬೇಜಾರಲ್ಲಿ ನನಗೆ ಅಡುಗೆ ಮಾಡುವ ಮೂಡ್ ಇರಲಿಲ್ಲ ಎನ್ನುತ್ತಾಳೆ. ತಾಂಡವ್, ಶ್ರೇಷ್ಠಾ ಮಾತುಗಳನ್ನು ನಂಬಿ, ಖುಷಿಯಿಂದ ಊಟ ಮಾಡುತ್ತಾನೆ.
ಅಮ್ಮನ ಬಳಿ ಹೊಸ ಮೊಬೈಲ್‌ಗೆ ಬೇಡಿಕೆ ಇಟ್ಟ ತನ್ವಿ
ಇತ್ತ ಭಾಗ್ಯಾ ಕೂಡಾ ಮನೆಯಲ್ಲಿ ಸಂಕ್ರಾಂತಿ ಆಚರಿಸುತ್ತಾಳೆ. ತನ್ವಿ ಕ್ಲಾಸ್‌ಮೇಟ್, ಬಂದು ಎಳ್ಳು ಬೆಲ್ಲ ಕೊಡುತ್ತಾಳೆ. ಅವಳ ಹೊಸ ಫೋನ್ ನೋಡಿ ತನ್ವಿಗೆ ಆಸೆಯಾಗುತ್ತದೆ, ಇದು ನನಗೆ ಅಪ್ಪ ಗಿಫ್ಟ್ ಮಾಡಿದ್ದು. ನೀನೂ ಹೊಸ ಫೋನ್ ತೆಗೆಸಿಕೋ, ಕಾಲೇಜ್ ಅಸೈನ್‌ಮೆಂಟ್‌ಗೆಲ್ಲಾ ಹೆಲ್ಪ್ ಆಗುತ್ತೆ ಎಂದು ತನ್ವಿ ಸ್ನೇಹಿತೆ ಹೇಳುತ್ತಾಳೆ. ತಾತನಿಗೆ ಅಮ್ಮ ಕಾರ್ ಕೊಡಿಸುತ್ತಿದ್ದಾಳೆ. ಅಮ್ಮನ ಬಳಿ ದುಡ್ಡು ಇದೆ, ಅವಳನ್ನು ಮೊಬೈಲ್ ಕೇಳುತ್ತಾನೆ ಎಂದು ತನ್ವಿ, ತನಗೂ ಮೊಬೈಲ್ ಕೊಡಿಸುವಂತೆ ಭಾಗ್ಯಾ ಬಳಿ ಕೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಕುಸುಮಾ ಸಿಟ್ಟಾಗುತ್ತಾಳೆ. ಈ ವಯಸ್ಸಿಗೆ ನಿನಗೆ ಮೊಬೈಲ್ ಏಕೆ ಬೇಕು? ಭಾಗ್ಯಾ ನೀನು ಮಗಳು ಕೇಳಿದ್ದನ್ನೆಲ್ಲಾ ತೆಗೆದುಕೊಟ್ಟು ಅವಳನ್ನು ಹಾಳುಮಾಡಬೇಡ ಎನ್ನುತ್ತಾಳೆ. ಅಜ್ಜಿ ಮಾತು ಕೇಳಿ ತನ್ವಿ ಬೇಸರಗೊಳ್ಳುತ್ತಾಳೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ