ಇನ್ನು ಮುಂದೆ ಕೆಲಸಕ್ಕೆ ಬರಬೇಡ ಎಂದ ಮ್ಯಾನೇಜರ್; ರೆಸಾರ್ಟ್‌ನ ಕೆಲಸವನ್ನೂ ಕಳೆದುಕೊಂಡಳು ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಬುಧವಾರ ಮಾರ್ಚ್ 19ರ ಸಂಚಿಕೆಯಲ್ಲಿ ಭಾಗ್ಯ ಬೇಗನೇ ಮನೆಯಲ್ಲಿ ಕೆಲಸ ಮುಗಿಸಿಕೊಂಡು ರೆಸಾರ್ಟ್ ಕೆಲಸಕ್ಕೆ ಹೋಗುತ್ತಿದ್ದಾಳೆ. ಹೋಗುವಾಗಲೇ ರೆಸಾರ್ಟ್ ಮ್ಯಾನೇಜರ್ ಅವಳಿಗಾಗಿ ಕಾಯುತ್ತಾ ಕುಳಿತಿದ್ದಾರೆ. ಅವಳು ಬಂದ ಕೂಡಲೇ ಅವಳಿಗೆ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಬುಧವಾರ ಮಾರ್ಚ್ 19ರ ಸಂಚಿಕೆಯಲ್ಲಿ ಭಾಗ್ಯ ಮತ್ತು ತನ್ಮಯ್‌ನನ್ನು ಹುಡುಕಿಕೊಂಡು ಅವನ ಗೆಳೆಯ ಮನೆಗೆ ಬಂದಿದ್ದಾನೆ. ಬಂದವನೇ ಅವಳ ಕೈರುಚಿ ಮತ್ತು ಅಡುಗೆಯನ್ನು ಹೊಗಳಿದ್ದಾನೆ. ಭಾಗ್ಯಕ್ಕ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾರೆ, ಅವರ ಕೈರುಚಿ ತಿಂದರೆ ಮನೆಯಲ್ಲಿ ಅಮ್ಮ ಮಾಡುವ ಅಡುಗೆ ನೆನಪಾಗುತ್ತದೆ. ಎಲ್ಲರಿಗೂ ಭಾಗ್ಯ ಮಾಡುವ ಅಡುಗೆ ಎಂದರೆ ಇಷ್ಟ. ಹೀಗಾಗಿ ಎಲ್ಲರೂ ಅದನ್ನು ಇಷ್ಟಪಡುತ್ತಾರೆ ಎಂದು ಕುಸುಮಾ ಹೇಳುತ್ತಾಳೆ. ಅಷ್ಟರಲ್ಲಿ ಭಾಗ್ಯ, ಮನೆಯಲ್ಲಿ ಪುಳಿಯೋಗರೆ ಮಾಡಿದ್ದು, ಅದನ್ನೇ ಬಾಕ್ಸ್‌ಗೆ ಹಾಕಿ ಕೊಡುತ್ತಾಳೆ, ನಿಮ್ಮ ಅಡುಗೆ ನಮ್ಮ ಹಾಸ್ಟೆಲ್‌ನ ಎಲ್ಲ ಹುಡುಗರಿಗೆ ಇಷ್ಟವಾಗಬಹುದು ಎಂದು ಹೇಳುತ್ತಾನೆ.
ಅವನು ಬಾಕ್ಸ್ ತೆಗೆದುಕೊಂಡು ವಾಪಸ್ ಹೋಗುತ್ತಾನೆ. ಅವನು ಅತ್ತ ಹೋಗುತ್ತಲೇ ಭಾಗ್ಯ, ತನ್ಮಯ್‌ನನ್ನು ಕರೆದುಕೊಂಡು ಹೊರಟಿದ್ದಾಳೆ. ಎಂದಿನಂತೆ ಅವನನ್ನು ಸ್ಕೂಲ್‌ಗೆ ಬಿಟ್ಟ ಭಾಗ್ಯ, ನಂತರ ಅಲ್ಲಿಂದ ರೆಸಾರ್ಟ್‌ಗೆ ಹೋಗುತ್ತಾಳೆ. ಅವಳು ಬರುವುದನ್ನೇ ರೆಸಾರ್ಟ್‌ನ ಮ್ಯಾನೇಜರ್ ಕಾಯುತ್ತಾ ಕುಳಿತಿದ್ದಾನೆ. ಭಾಗ್ಯ ಬಂದ ಕೂಡಲೇ ಅವಳನ್ನು ಅವನು ತರಾಟೆಗೆ ತೆಗೆದುಕೊಂಡಿದ್ದಾನೆ, ನಾನು ಬೇಗನೇ ವಾಪಸ್ ಬಂದಿದ್ದಾನೆ ಎಂದು ಭಾಗ್ಯ ಹೇಳಿದರೂ, ಅವನು ಕೇಳಲು ತಯಾರಿಲ್ಲ.
ಮತ್ತೊಂದೆಡೆ ಪೂಜಾ ದೇವಿ ಯಾವುದೋ ಕೆಲಸದ ಇಂಟರ್‌ವ್ಯೂಗೆ ಹೋಗಿದ್ದಾಳೆ. ಅಲ್ಲಿ ಕೆಲಸದ ಬಗ್ಗೆ ಕೇಳಿ ತಿಳಿದುಕೊಂಡ ಅವಳು, ಅಂತಹ ಕೆಲಸಕ್ಕೆ ಹೋಗದಿರುವುದೇ ವಾಸಿ ಎಂದುಕೊಂಡು ವಾಪಸ್ ಬಂದಿದ್ದಾಳೆ. ಬಂದವಳೇ, ಸುಂದರಿ ಬಳಿ, ಅಲ್ಲಿ ಕೆಲಸ ಹಾಗಿರುತ್ತದೆ, ಹೀಗಿರುತ್ತದೆ, ಅಂತಹ ಕಡೆ ಕೆಲಸ ಮಾಡದಿರುವುದೇ ವಾಸಿ ಎಂದು ಹೇಳುತ್ತಾಳೆ. ಜತೆಗೆ ನನಗೆ ಸಂಬಳ ಕೂಡ ಕಡಿಮೆ ಕೊಡುತ್ತಾರೆ ಎಂದಿದ್ದಾರೆ, ಅಂತಹ ಸ್ಥಳದಲ್ಲಿ ನಾನು ಯಾಕೆ ಕೆಲಸ ಮಾಡಲಿ ಎಂದು ಪ್ರಶ್ನಿಸುತ್ತಾಳೆ. ಆದರೂ ಅಕ್ಕನಿಗೆ ನಾನು ಸಹಾಯ ಮಾಡಬೇಕು, ಅದಕ್ಕಾಗಿ ನನಗೆ ಒಂದು ಕೆಲಸ ಬೇಕು ಎಂದು ಹೇಳುತ್ತಾಳೆ.
ಭಾಗ್ಯಳನ್ನು ವಿಚಾರಿಸಿಕೊಳ್ಳುತ್ತಿರುವ ಮ್ಯಾನೇಜರ್, ನೀನು ಇನ್ನು ಕೆಲಸಕ್ಕೆ ಬರುವುದು ಬೇಡ, ನಾನು ಈಗಾಗಲೇ ಬೇರೊಬ್ಬನನ್ನು ಕೆಲಸಕ್ಕೆ ಸೇರಿಸಿಕೊಂಡು ಆಗಿದೆ. ಅವನು ಕೆಲಸ ಶುರು ಮಾಡಿಯೂ ಆಗಿದೆ, ಇನ್ನು ನಿನ್ನ ಅಗತ್ಯವಿಲ್ಲ, ನೀನು ಹೋಗಬಹುದು ಎಂದು ಹೇಳುತ್ತಾನೆ. ಭಾಗ್ಯ ಪರಿಪರಿಯಾಗಿ ಬೇಡಿಕೊಂಡರೂ, ಕೆಲಸದಿಂದ ತೆಗೆದುಹಾಕಬೇಡಿ ಎಂದು ಕೇಳಿಕೊಂಡರೂ, ಅವನು ಕರುಣೆ ತೋರಿಸಿಲ್ಲ. ಬದಲಾಗಿ ಅವಳನ್ನು ಮನೆಗೆ ಹೋಗುವಂತೆ ಹೇಳಿದ್ದಾನೆ. ಜತೆಗೆ ಲೆಕ್ಕ ಚುಕ್ತಾ ಮಾಡುವಂತೆ ಹೇಳಿ, ಬಾಕಿ ಉಳಿದ ಹಣ ಎಂದು ಇಂತಿಷ್ಟು ಮೊತ್ತವನ್ನು ನೀಡಿದ್ದಾನೆ. ಅಷ್ಟರಲ್ಲಿ ತಾಂಡವ್ ಮತ್ತು ಶ್ರೇಷ್ಠಾ ಅಲ್ಲಿಗೆ ಬಂದಿದ್ದಾರೆ. ಭಾಗ್ಯ ಮತ್ತೊಮ್ಮೆ ಕೆಲಸ ಕಳೆದುಕೊಂಡಿರುವುದು ಅವರಿಗೆ ಖುಷಿ ಕೊಟ್ಟಿದೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಬುಧವಾರದ ಮಾರ್ಚ್ 19ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 744ನೇ ಸಂಚಿಕೆ ಮುಗಿಸಿದೆ. ಭಾಗ್ಯ ಈಗ ಏನು ಮಾಡುತ್ತಾಳೆ ಎಂದು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ