ಭಾಗ್ಯಾ ಮಾಡಿದ ಅಡುಗೆಯನ್ನು ಹೊಗಳಿ, ಬರಗೆಟ್ಟವನಂತೆ ತಿಂದು ಅವಳಿಗೇ ಕೇಡು ಬಯಸುತ್ತಿರುವ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 23ರ ಎಪಿಸೋಡ್‌ನಲ್ಲಿ ತನ್ನ ಆಫೀಸ್ ಡಾಕ್ಯುಮೆಂಟ್ಸ್ ಹಾಗೂ ಬಟ್ಟೆಗಳನ್ನು ತೆಗೆದುಕೊಳ್ಳುವ ನೆಪದಲ್ಲಿ ಮನೆಗೆ ಬರುವ ತಾಂಡವ್ ಅವಳು ಮಾಡಿದ ಅಡುಗೆಯನ್ನು ಹೊಗಳಿ, ಬರಗೆಟ್ಟವನಂತೆ ತಿನ್ನುತ್ತಾನೆ. ಅಷ್ಟಾದರೂ ಮತ್ತೆ ಅವಳನ್ನು ಮನೆಯಿಂದ ಹೊರ ಹಾಕಲು ಪ್ರಯತ್ನಿಸುತ್ತಿದ್ದಾನೆ.

Bhagyalakshmi Serial: ತಾಂಡವ್ ಈ ಮನೆಗೆ ವಾಪಸ್ ಬಂದೇ ಬರುತ್ತಾನೆ, ಅವನಿಗೆ ಆ ಶ್ರೇಷ್ಠಾ ಬುದ್ಧಿ ಆದಷ್ಟು ಬೇಗ ಅರ್ಥ ಆಗುತ್ತದೆ ಎಂದು ಕುಸುಮಾ ಹೇಳುತ್ತಿದ್ದಂತೆ ತಾಂಡವ್, ಲಗ್ಗೇಜ್ ಹಿಡಿದು ಮನೆಗೆ ಬರುತ್ತಾನೆ, ಅವನನ್ನು ನೋಡಿ ಸುನಂದಾ, ಕುಸುಮಾ ಖುಷಿಯಾಗುತ್ತಾರೆ. ಆದರೆ ಉಳಿದವರಿಗೆ ತಾಂಡವ್ ಏನು ಅನ್ನೋದು ಗೊತ್ತಿರುವುದರಿಂದ ಸುಮ್ಮನಾಗುತ್ತಾರೆ. ತಾಂಡವ್, ಬಂದಿದ್ದು ತನ್ನ ಬಟ್ಟೆಗಳು, ಡಾಕ್ಯುಮೆಂಟ್ಸ್ ಕೊಂಡೊಯ್ಯಲು ಎಂದು ತಿಳಿದು ಕುಸುಮಾ, ಸುನಂದಾ ಬೇಸರ ವ್ಯಕ್ತಪಡಿಸುತ್ತಾಳೆ.
ತಾಂಡವ್ ಬರುತ್ತಿದ್ದಂತೆ ಭಾಗ್ಯಾಳನ್ನು ಕಡೆಗಣಿಸಿದ ಕುಸುಮಾ, ಸುನಂದಾ
ಈ ಮನೆಯಿಂದ ನಿನ್ನನ್ನು ಓಡಿಸದಿದ್ದರೆ ನನ್ನ ಹೆಸರು ಬದಲಿಸಿಕೊಳ್ಳುತ್ತೇನೆ ಎಂದು ತಾಂಡವ್, ಭಾಗ್ಯಾ ಬಳಿ ಚಾಲೆಂಜ್ ಮಾಡುತ್ತಾನೆ. ಸರಿ ಹಾಗಿದ್ರೆ ಹೆಸರು ಬದಲಿಸಿಕೊಳ್ಳಲು ಸಿದ್ಧರಾಗಿ ಎಂದು ಭಾಗ್ಯಾ ತಾನೂ ಸವಾಲು ಹಾಕುತ್ತಾಳೆ. ಮಕ್ಕಳ ಮೂಲಕ ಕೂಡಾ ತಾಂಡವ್ ತನ್ನ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ನೀವು ಕೇಳಿದ್ದನ್ನೆಲ್ಲಾ ಕೊಡಿಸುತ್ತೇನೆ. ಆದರೆ ನೀವು ಅಮ್ಮನನ್ನು ಈ ಮನೆಯಿಂದ ಹೊರ ಹಾಕಬೇಕು ಎಂದು ಹೇಳುತ್ತಾನೆ. ಆದರೆ ಮಕ್ಕಳು ಮಾತ್ರ ಭಾಗ್ಯಾಳನ್ನು ಬಿಟ್ಟು ಕೊಡಲು ತಯಾರಿಲ್ಲ. ನಾವು ಯಾವುದೇ ಕಾರಣಕ್ಕೂ ಅಮ್ಮನನ್ನು ಮನೆಯಿಂದ ಕಳಿಸುವುದಿಲ್ಲ. ನಮಗೆ ನಿಮ್ಮ ಜೊತೆ ಶಾಪಿಂಗ್ ಏನೂ ಬೇಡ ಎಂದು ಮಕ್ಕಳು ಅಮ್ಮನ ಪರ ನಿಲ್ಲುತ್ತಾರೆ.
ಮನೆಯಿಂದ ಹೊರಟುನಿಂತ ತಾಂಡವ್‌ನನ್ನು ಕುಸುಮಾ , ಸುನಂದಾ ತಡೆಯುತ್ತಾರೆ.ಭಾಗ್ಯಾ ಈ ಮನೆಯಲ್ಲಿ ಇರುವವರೆಗೂ ನಾನು ಇಲ್ಲಿ ಇರುವುದಿಲ್ಲ ಎಂದು ತಾಂಡವ್ ಕಂಡಿಷನ್ ಮಾಡುತ್ತಾನೆ. ಸೊಸೆಗೆ ಇಷ್ಟೆಲ್ಲಾ ಅನ್ಯಾಯ ಮಾಡಿದ್ದರೂ ಕುಸುಮಾಗೆ ಮಾತ್ರ ಮಗನ ಮೇಲೆ ಪ್ರೀತಿ ಮಾತ್ರ ಕಡಿಮೆ ಆಗಿಲ್ಲ. ಸುನಂದಾ ಕೂಡಾ ನೀನು ಬದಲಾಗಲೇಬೇಕು ಎಂದು ಭಾಗ್ಯಾಗೆ ತಿಳಿ ಹೇಳುತ್ತಾಳೆ. ತಾಂಡವ್ ಬರುತ್ತಿದ್ದಂತೆ ಅಮ್ಮ ಹಾಗೂ ಅತ್ತೆ ಇಷ್ಟು ಬದಲಾಗಿದ್ದನ್ನು ನೋಡಿ ಭಾಗ್ಯಾಗೆ ಬೇಸರವಾಗುತ್ತದೆ. ತಾಂಡವ್‌ಗೆ ಊಟ ಮಾಡಿ ಹೋಗುವಂತೆ ಕುಸುಮಾ ಹೇಳುತ್ತಾಳೆ. ಮನಸ್ಸಿನಲ್ಲಿ ಭಾಗ್ಯಾ ಮಾಡಿದ ಅಡುಗೆ ತಿನ್ನಲು ಆಸೆ ಇದ್ದರೂ, ನನಗೆ ಭಾಗ್ಯಾ ಮಾಡಿದ ಅಡುಗೆ ಇಷ್ಟವಿಲ್ಲ, ಬೇಡ ಎನ್ನುತ್ತಾನೆ. ಆದರೆ ಮನಸ್ಸು ತಡೆಯದೆ, ಸರಿ ನೀವು ಇಷ್ಟೊಂದು ಬಲವಂತ ಮಾಡುತ್ತಿರುವುದರಿಂದ ನಾನು ಊಟ ಮಾಡುತ್ತೇನೆ ಎಂದು ಊಟಕ್ಕೆ ಕೂರುತ್ತಾನೆ.
ಭಾಗ್ಯಾ ಮಾಡಿದ ಅಡುಗೆಯನ್ನು ಬರಗೆಟ್ಟವನಂತೆ ತಿಂದ ತಾಂಡವ್
ತಾಂಡವ್ ತಟ್ಟೆಗೆ ಭಾಗ್ಯಾ ಚಪಾತಿ ಹಾಗೂ ಪಲ್ಯ ಬಡಿಸುತ್ತಾಳೆ. ತಿನ್ನು ರಾಜಾ ಎಂದು ಕುಸುಮಾ ಹೇಳಿದ್ದೇ ತಡ ಬರಗೆಟ್ಟವನಂತೆ ಗಬ ಗಬ ತಿನ್ನುತ್ತಾನೆ. ಅವನು ತಿನ್ನುವುದನ್ನು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಅನ್ನ ಬಡಿಸು ಭಾಗ್ಯಾ, ನೀನು ಮಾಡುವ ಅಡುಗೆ ಬಹಳ ಸೂಪರ್, ಈ ವಿಚಾರದಲ್ಲಿ ನಿನ್ನನ್ನು ಮೀರಿಸುವವರು ಯಾರೂ ಇಲ್ಲ ಎಂದು ಹೊಗಳುತ್ತಾನೆ. ಊಟ ಮಾಡಿ ಮತ್ತೆ ಶ್ರೇಷ್ಠಾ ಮನೆಗೆ ಹೋಗಲು ಮುಂದಾಗುತ್ತಾನೆ. ನಾನೊಂದು ಮಾತು ಹೇಳಬೇಕು, ಭಾಗ್ಯಾ ಹೊರತು ಪಡಿಸಿ ಯಾರಿಗಾದರೂ ಏನಾದರೂ ಸಹಾಯ ಬೇಕಿದ್ದರೆ ನನ್ನನ್ನು ಕೇಳಿ ಖಂಡಿತ ನಿಮಗೆ ಸಹಾಯ ಮಾಡುತ್ತೇನೆ ಎನ್ನುತ್ತಾನೆ.
ಭಾಗ್ಯಾ ಮಾಡಿದ ಅಡುಗೆಯನ್ನು ತಿಂದು ಅವಳಿಗೇ ಕೇಡು ಬಯಸುತ್ತಿರುವ ತಾಂಡವ್ ಪ್ಲ್ಯಾನ್ ಸಕ್ಸಸ್ ಆಗುತ್ತಾ? ಅಥವಾ ಅವನು ಮಾಡಿದ ಕರ್ಮ ಅವನಿಗೆ ಸಮಸ್ಯೆ ಉಂಟು ಮಾಡುವುದಾ? ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ