ಕೆಲಸ ಕಳೆದುಕೊಂಡ್ರೆ ಅವಳ ಶೋಕಿ ಕಡಿಮೆ ಆಗುತ್ತೆ, ತಾಂಡವ್‌-ಶ್ರೇಷ್ಠಾ ಕುತಂತ್ರದಿಂದ ಉದ್ಯೋಗ ಕಳೆದುಕೊಳ್ತಾಳ ಭಾಗ್ಯಾ? ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಕೆಲಸ ಕಳೆದುಕೊಂಡ್ರೆ ಅವಳ ಶೋಕಿ ಕಡಿಮೆ ಆಗುತ್ತೆ, ತಾಂಡವ್‌-ಶ್ರೇಷ್ಠಾ ಕುತಂತ್ರದಿಂದ ಉದ್ಯೋಗ ಕಳೆದುಕೊಳ್ತಾಳ ಭಾಗ್ಯಾ? ಭಾಗ್ಯಲಕ್ಷ್ಮೀ ಧಾರಾವಾಹಿ

ಕೆಲಸ ಕಳೆದುಕೊಂಡ್ರೆ ಅವಳ ಶೋಕಿ ಕಡಿಮೆ ಆಗುತ್ತೆ, ತಾಂಡವ್‌-ಶ್ರೇಷ್ಠಾ ಕುತಂತ್ರದಿಂದ ಉದ್ಯೋಗ ಕಳೆದುಕೊಳ್ತಾಳ ಭಾಗ್ಯಾ? ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 24ರ ಎಪಿಸೋಡ್‌ನಲ್ಲಿ ಕೆಲಸ ಇರುವುದರಿಂದಲೇ ಭಾಗ್ಯಾ ಶೋಕಿ ಮಾಡುತ್ತಿದ್ದಾಳೆ. ಕೆಲಸ ಕಳೆದುಕೊಂಡರೆ ಅದೆಲ್ಲವೂ ನಿಲ್ಲುತ್ತದೆ, ಅವಳಿಗೆ ಕೆಟ್ಟ ಹೆಸರು ಬರುವಂತೆ ಮಾಡಬೇಕು ಎಂದು ಭಾಗ್ಯಾ ಕೆಲಸಕ್ಕೆ ಕಲ್ಲು ಹಾಕಲು ತಾಂಡವ್‌ ಹಾಗೂ ಶ್ರೇಷ್ಠಾ ಪ್ಲ್ಯಾನ್‌ ಮಾಡುತ್ತಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 24ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 24ರ ಎಪಿಸೋಡ್‌ (PC: Jio Cinema)

Bhagyalakshmi Serial: ತಾಂಡವ್‌ ಮನೆಗೆ ವಾಪಸ್‌ ಬಂದಿರುವುದು ಕುಸುಮಾ ಹಾಗೂ ಸುನಂದಾಗೆ ಖುಷಿ ಆದರೂ ಆ ಖುಷಿ ಬಹಳ ಹೊತ್ತು ನಿಲ್ಲುವುದಿಲ್ಲ, ನಾನು ಯಾವುದೇ ಕಾರಣಕ್ಕೂ ಶ್ರೇಷ್ಠಾಳನ್ನು ಬಿಡುವುದಿಲ್ಲ, ಹಾಗೇ ಈ ಭಾಗ್ಯಾ ಮನೆಯಲ್ಲಿ ಇರುವವರೆಗೂ ನಾನು ಇಲ್ಲಿಗೆ ಬರುವುದಿಲ್ಲ ಎಂದು ಕಂಡಿಷನ್‌ ಮಾಡುತ್ತಾನೆ. ತನ್ನ ಸ್ವಾರ್ಥಕ್ಕೆ ಮಕ್ಕಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಮಕ್ಕಳು ಅಮ್ಮನ ಪರ ನಿಲ್ಲುತ್ತಾರೆ. ನಮಗೆ ನೀವು ಕೊಡಿಸುವ ಯಾವುದೇ ವಸ್ತುಗಳು ಬೇಡ, ನಮಗೆ ಅಮ್ಮ ಬೇಕು ಎಂದು ಮಕ್ಕಳು ಹೇಳುತ್ತಾರೆ.

ಭಾಗ್ಯಾಳನ್ನು ಮನೆ ಬಿಟ್ಟು ಓಡಿಸಲು ತಾಂಡವ್‌ ನಾನಾ ಪ್ರಯತ್ನ

ಭಾಗ್ಯಾ ಇಷ್ಟವಿಲ್ಲದಿದ್ದರೂ ಅವಳು ಮಾಡಿದ ಅಡುಗೆಯನ್ನು ಹೊಗಳಿ ಹೊಟ್ಟೆ ತುಂಬಾ ಊಟ ಮಾಡುತ್ತಾನೆ. ಭಾಗ್ಯಾ ಬಿಟ್ಟು ಉಳಿದ ಎಲ್ಲರಿಗೂ ಏನು ಸಹಾಯ ಬೇಕೋ ಕೇಳಿ ಎಂದು ಮನೆಯಿಂದ ಹೊರಡುತ್ತಾನೆ. ಹೇಗೋ ನಾನು ಅಂದುಕೊಂಡ ಕೆಲಸ ಆಯ್ತು, ಅತ್ತೆ ಹಾಗೂ ಅಮ್ಮ ನನ್ನ ಕಡೆ ಬರುತ್ತಿದ್ದಾರೆ. ಇನ್ನು ಮನೆಯವರು ಹಾಗೂ ಉಳಿದವರು ಬದಲಾಗಲು ಎಷ್ಟು ಸಮಯ ಬೇಕು? ನನಗೇ ಆಟ ಆಡಿಸುತ್ತೀರ? ನಿಮ್ಮನ್ನೆಲ್ಲಾ ಹೇಗೆ ಆಡಿಸುತ್ತೇನೆ ನೋಡುತ್ತಿರಿ ಎಂದು ತಾಂಡವ್‌ ಮನಸ್ಸಿನಲ್ಲೇ ಭಾಗ್ಯಾ ವಿರುದ್ಧ ಕತ್ತಿ ಮಸೆಯುತ್ತಾನೆ.

ಅತ್ತೆ ತಾಂಡವ್‌ಗಾಗಿ ಕಾದು ಕಾದು ಶ್ರೇಷ್ಠಾ ಟೇಬಲ್‌ ಮೇಲೆ ಮಲಗಿಬಿಡುತ್ತಾಳೆ. ನಿನಗಾಗಿ ನಾನು ಇದನ್ನೆಲ್ಲಾ ಅರೇಂಜ್‌ ಮಾಡಿಕೊಂಡು ಕಾಯುತ್ತಿದ್ದರೆ ನೀನು ಇಷ್ಟು ತಡವಾಗಿ ಬಂದಿದ್ದೀಯ ಎಂದು ಶ್ರೇಷ್ಠಾ ಕೋಪಗೊಳ್ಳುತ್ತಾಳೆ. ಏನು ಉತ್ತರ ಕೊಡಬೇಕೆಂದು ತಿಳಿಯದೆ ತಾಂಡವ್‌, ನಾನು ಮೀಟಿಂಗ್‌ ಮುಗಿಸಿಕೊಂಡು ಸುಸ್ತಾಗಿ ಮನೆಗೆ ಬಂದರೆ ನೀನು ಇಲ್ಲದ ಪ್ರಶ್ನೆಗಳನ್ನು ಕೇಳುತ್ತಿದ್ದೀಯ, ನನಗಂತೂ ಸಾಕಾಗಿಹೋಗಿದೆ ಎಂದು ನಾಟಕ ಮಾಡುತ್ತಾನೆ. ಸರಿ ನೀನು ಹೋಗಿ ಫ್ರೆಶ್‌ ಆಗಿ ಬಾ, ಒಟ್ಟಿಗೆ ಊಟ ಮಾಡೋಣ ಅಂತ ಶ್ರೇಷ್ಠಾ ಹೇಳುತ್ತಾಳೆ. ಊಟ ಎಂದೊಡನೆ ತಾಂಡವ್‌ ಗಾಬರಿ ಆಗುತ್ತಾನೆ. ಮನೆಯಲ್ಲಿ ಭಾಗ್ಯಾ ಮಾಡಿದ ಅಡುಗೆಯನ್ನು ಗಡತ್ತಾಗಿ ತಿಂದುಬಂದಿರುವ ತಾಂಡವ್‌, ಮತ್ತೆ ಹೇಗೆ ಊಟ ಮಾಡುವುದು ಅಂತ ಯೋಚನೆ ಮಾಡುತ್ತಾನೆ.

ಭಾಗ್ಯಾ ಕೆಲಸಕ್ಕೆ ಕುತ್ತು ತರಲು ಶ್ರೇಷ್ಠಾ-ತಾಂಡವ್‌ ಪ್ಲ್ಯಾನ್‌

ಫ್ರೆಶ್‌ ಆಗಿ ಬಂದು ಊಟಕ್ಕೆ ಕೂರುತ್ತಾನೆ. ಶ್ರೇಷ್ಠಾ, ತಾನು ಮಾಡಿದ ನ್ಯೂಡಲ್ಸ್‌ನ್ನು ತಾಂಡವ್‌ ತಟ್ಟೆಗೆ ಬಡಿಸುತ್ತಾಳೆ. ಅದನ್ನು ನೋಡಿ ತಾಂಡವ್‌ಗೆ ಹಿಂಸೆ ಆಗುತ್ತದೆ, ನೀನು ತೇಗುತ್ತಿದ್ದೀಯ ಏನೋ ತಿಂದು ಬಂದಿದ್ದೀಯ ಎಂದು ಶ್ರೇಷ್ಠಾ ಕೋಪದಿಂದ ಕೇಳುತ್ತಾಳೆ. ತಾಂಡವ್‌ ನಡೆದ ವಿಚಾರವನ್ನೆಲ್ಲಾ ಶ್ರೇಷ್ಠಾಗೆ ಹೇಳುತ್ತಾನೆ. ಅದನ್ನು ಕೇಳಿ ಶ್ರೇಷ್ಠಾ ಮೊದಲು ಕೋಪಗೊಂಡರೂ, ಭಾಗ್ಯಾ ವಿಚಾರ ಬರುತ್ತಿದ್ದಂತೆ ಸುಮ್ಮನಾಗುತ್ತಾಳೆ. ಅವಳಿಗೆ ಕೆಲಸ ಇರುವುದರಿಂದಲೇ ಇಷ್ಟೆಲ್ಲಾ ಮೆರೆಯುತ್ತಿದ್ದಾಳೆ. ಹೇಗಾದರೂ ಮಾಡಿ ಅವಳು ಕೆಲಸ ಮಾಡುವ ಕಡೆ ಅವಳಿಗೆ ಕೆಟ್ಟ ಹೆಸರು ಬರುವಂತೆ ಮಾಡಬೇಕು, ಅವಳು ಕೆಲಸ ಕಳೆದುಕೊಳ್ಳುವಂತೆ ಮಾಡಬೇಕು ಎನ್ನುತ್ತಾಳೆ.

ತಾಂಡವ್‌-ಶ್ರೇಷ್ಠಾ ಕುತಂತ್ರದಿಂದ ಭಾಗ್ಯಾ ಕೆಲಸ ಕಳೆದುಕೊಳ್ಳುತ್ತಾಳಾ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner