ಮಾವನಿಗೆ ಕಾರು ಕೊಡಿಸುವ ಖುಷಿಯಲ್ಲಿ ಭಾಗ್ಯಾ, ಅವಳ ಕೆಲಸಕ್ಕೆ ಕುತ್ತು ತರಲು ಕನ್ನಿಕಾ ಜೊತೆ ಕೈ ಜೋಡಿಸಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮಾವನಿಗೆ ಕಾರು ಕೊಡಿಸುವ ಖುಷಿಯಲ್ಲಿ ಭಾಗ್ಯಾ, ಅವಳ ಕೆಲಸಕ್ಕೆ ಕುತ್ತು ತರಲು ಕನ್ನಿಕಾ ಜೊತೆ ಕೈ ಜೋಡಿಸಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಮಾವನಿಗೆ ಕಾರು ಕೊಡಿಸುವ ಖುಷಿಯಲ್ಲಿ ಭಾಗ್ಯಾ, ಅವಳ ಕೆಲಸಕ್ಕೆ ಕುತ್ತು ತರಲು ಕನ್ನಿಕಾ ಜೊತೆ ಕೈ ಜೋಡಿಸಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 27ರ ಎಪಿಸೋಡ್‌ನಲ್ಲಿ ಭಾಗ್ಯಾ, ಮನೆಯವರನ್ನೆಲ್ಲಾ ಕರೆದುಕೊಂಡು ಮಾವನಿಗೆ ಕಾರು ಕೊಡಿಸಲು ಹೋಗುತ್ತಾಳೆ. ಇತ್ತ ಶ್ರೇಷ್ಠಾ, ಭಾಗ್ಯಾಳನ್ನು ಕೆಲಸದಿಂದ ತೆಗೆಸಲು ಕನ್ನಿಕಾ ಸಹಾಯ ಪಡೆಯುತ್ತಾಳೆ.

 ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 27ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 27ರ ಎಪಿಸೋಡ್‌ (PC: Jio Cinema)

Bhagyalakshmi Serial: ತಾಂಡವ್‌ ಮನೆಗೆ ವಾಪಸ್‌ ಬಂದಿದ್ದಾನೆ ಎಂದು ಕುಸುಮಾ, ಸುನಂದಾ ಖುಷಿ ಆದರೂ, ಅದು ಹೆಚ್ಚು ಸಮಯ ನಿಲ್ಲುವುದಿಲ್ಲ. ತನ್ನ ವಸ್ತುಗಳನ್ನು ತೆಗೆದುಕೊಂಡು ಹೋಗುವ ನೆಪದಲ್ಲಿ ಮನೆಗೆ ಬಂದ ತಾಂಡವ್‌ ಕುಸುಮಾ, ಸುನಂದಾ ಇಬ್ಬರ ಬ್ರೈನ್‌ ವಾಶ್‌ ಮಾಡಲು ಪ್ರಯತ್ನಿಸುತ್ತಾನೆ. ಬೆಳಗ್ಗಿನಿಂದ ಏನೂ ಸರಿಯಾಗಿ ತಿನ್ನದೆ ಭಾಗ್ಯಾ ಮಾಡಿದ ಅಡುಗೆಯನ್ನೇ ಹೊಟ್ಟೆ ತುಂಬಾ ತಿಂದು ಮತ್ತೆ ಶ್ರೇಷ್ಠಾ ಇರುವ ಕಡೆ ಹೊರಡುತ್ತಾನೆ.

ಭಾಗ್ಯಾಳನ್ನು ಕೆಲಸದಿಂದ ತೆಗೆಸಲು ಶ್ರೇಷ್ಠಾ-ತಾಂಡವ್‌ ಪ್ಲ್ಯಾನ್

ತಾನು ಮಾಡಿದ ಊಟ ತಿನ್ನುವಂತೆ ಶ್ರೇಷ್ಠಾ ಬಲವಂತ ಮಾಡಿದಾಗ ತಾನು ಮನೆಗೆ ಹೋಗಿದ್ದು, ಅಲ್ಲಿ ಊಟ ಮಾಡಿದ ವಿಚಾರ ಎಲ್ಲವನ್ನೂ ಹೇಳುತ್ತಾನೆ. ಮೊದಲು ಶ್ರೇಷ್ಠಾ ಕೋಪಗೊಂಡರೂ, ಕುಸುಮಾ ಹಾಗೂ ಸುನಂದಾ ತಾಂಡವ್‌ ಪರ ಮಾತನಾಡಿದ ವಿಚಾರ ಕೇಳಿ ಸುಮ್ಮನಾಗುತ್ತಾಳೆ. ಭಾಗ್ಯಾ ಬಹಳ ಮೆರೆಯುತ್ತಿದ್ದಾಳೆ. ನನ್ನ ಅಪ್ಪನಿಗೆ ಕಾರು ಕೊಡಿಸುತ್ತಿದ್ದಾಳೆ. ಎಲ್ಲರ ಎದುರು ಹೀರೋಯಿನ್‌ ಆಗಲು ಹೊರಟಿದ್ದಾಳೆ, ಅವಳ ಅಹಂಕಾರ ಇಳಿಸಬೇಕು, ಅಪ್ಪ ಅಮ್ಮ ಅವಳನ್ನು ಮನೆಯಿಂದ ಹೊರಹಾಕುವಂತೆ ಮಾಡಬೇಕು ಎಂದು ಭಾಗ್ಯಾ ಮೇಲೆ ತಾಂಡವ್‌ ಸಿಟ್ಟಾಗುತ್ತಾನೆ.

ಭಾಗ್ಯಾಗೆ ಕೆಲಸ ಇರುವುದರಿಂದಲೇ ತಾನೇ ಅವಳು ಇಷ್ಟೆಲ್ಲಾ ಮೆರೆಯುತ್ತಿರುವುದು, ಕೆಲಸದ ಸ್ಥಳದಲ್ಲಿ ಅವಳಿಗೆ ಕೆಟ್ಟ ಹೆಸರು ಬಂದು, ಅವಳು ಕೆಲಸ ಬಿಡುವ ಹಾಗೇ ಮಾಡಲೇಬೇಕು, ಹಾಗೆ ಮಾಡಿದರೆ ಬುದ್ಧಿ ಕಲಿಯುತ್ತಾಳೆ. ಎಂದು ಶ್ರೇಷ್ಠಾ ಹೇಳುತ್ತಾಳೆ. ತಾಂಡವ್‌ಗೆ ಕೂಡಾ ಇದು ಸರಿ ಎನಿಸುತ್ತದೆ. ಭಾಗ್ಯಾಳನ್ನು ಹೇಗೆ ಕೆಲಸದಿಂದ ತೆಗೆಸಬೇಕು ಎಂದು ಶ್ರೇಷ್ಠಾ ಪ್ಲ್ಯಾನ್‌ ಮಾಡುತ್ತಾಳೆ. ತನ್ನ ಗೆಳತಿ ಕಡೆಯಿಂದ ಮಾಹಿತಿ ಕಲೆ ಹಾಕುತ್ತಾಳೆ.

ಕನ್ನಿಕಾ ಜೊತೆ ಕೈ ಜೋಡಿಸಿದ ಶ್ರೇಷ್ಠಾ

ತನ್ವಿ ಓದುತ್ತಿದ್ದ ಸ್ಕೂಲ್‌ ಓನರ್‌ ಕಾಮತ್‌ ಪುತ್ರಿ ಕನ್ನಿಕಾಗೂ, ಭಾಗ್ಯಾ ಕೆಲಸ ಮಾಡುತ್ತಿರುವ ಸಿಟಿ ಆಫ್‌ ಲೈಟ್ಸ್‌ ಹೋಟೆಲ್‌ಗೂ ಲಿಂಕ್‌ ಇರುವುದು ಗೊತ್ತಾಗುತ್ತದೆ. ಭಾಗ್ಯಾ ವಿಚಾರ ಬಂದರೆ ಕನ್ನಿಕಾ ಕೂಡಾ ಆಸಕ್ತಿ ತೋರುತ್ತಾಳೆ ಎಂದು ತಿಳಿದ ಶ್ರೇಷ್ಠಾ, ಕನ್ನಿಕಾಗೆ ಕರೆ ಮಾಡಿ ಭೇಟಿ ಮಾಡಲು ಹೇಳುತ್ತಾಳೆ. ಕನ್ನಿಕಾ ಕೂಡಾ ಭಾಗ್ಯಾ ಎಂಬ ಹೆಸರು ಕೇಳುತ್ತಿದ್ದಂತೆ ಶ್ರೇಷ್ಠಾಳನ್ನು ಭೇಟಿ ಮಾಡಲು ಬರುತ್ತಾಳೆ.‌

ಇತ್ತ ಭಾಗ್ಯಾ ಮನೆಯವರನ್ನೆಲ್ಲಾ ಕಾರ್‌ ಶೋರೂಮ್‌ಗೆ ಕರೆದೊಯ್ಯುತ್ತಾಳೆ. ಅಲ್ಲಿವರೆಗೂ ತಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಭಾಗ್ಯಾ ಯಾರಿಗೂ ಹೇಳುವುದಿಲ್ಲ. ಆದರೆ ಹೊಸ ಕಾರು ನೋಡುತ್ತಿದ್ದಂತೆ ಎಲ್ಲರೂ ಖುಷಿಯಾಗುತ್ತಾರೆ. ಈ ಕಷ್ಟದ ಸಂದರ್ಭದಲ್ಲಿ ಇದೆಲ್ಲಾ ಬೇಕಾ ಮಗಳೇ ಎಂದು ಧರ್ಮರಾಜ್‌ ಹೇಳುತ್ತಾನೆ. ನಾನು ಆಗಲೇ ದುಡ್ಡು ಕಟ್ಟಿದ್ದೇನೆ, ನೀವು ಇನ್ಮುಂದೆ ಕಾರಿನಲ್ಲೇ ಓಡಾಡಬೇಕು ಎಂದು ಹೇಳುತ್ತಾಳೆ. ಭಾಗ್ಯಾ ತ್ಯಾಗ ಕಂಡು ಎಲ್ಲರೂ ಖುಷಿಯಾಗುತ್ತಾರೆ.

ಶ್ರೇಷ್ಠಾ ಅಂದುಕೊಂಡಂತೆ ಕನ್ನಿಕಾ ಜೊತೆ ಸೇರಿ ಭಾಗ್ಯಾಳನ್ನು ಕೆಲಸದಿಂದ ತೆಗೆಸುತ್ತಾಳಾ? ಕೆಲಸ ಕಳೆದುಕೊಂಡರೆ ಸಂಸಾರ ತೂಗಿಸಲು ಭಾಗ್ಯಾ ಏನು ಮಾಡುತ್ತಾಳೆ? ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner