ಅಂದುಕೊಂಡದ್ದೆಲ್ಲಾ ಉಲ್ಟಾ ಆಗ್ತಿದೆ, ಭಾಗ್ಯಾಗೆ ಹೆದರಿ ಅವಳ ಜೊತೆ ಶಾಪಿಂಗ್ ಹೊರಟ ತಾಂಡವ್ ಸೂರ್ಯವಂಶಿ; ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 27ರ ಎಪಿಸೋಡ್‌ನಲ್ಲಿ ಭಾಗ್ಯಾಗೆ ಹೆದರಿ ತಾಂಡವ್ ಸುಮ್ಮನೆ ಶಾಪಿಂಗ್‌ಗೆ ಹೋಗುತ್ತಾನೆ. ಅಲ್ಲಿ ಶ್ರೇಷ್ಠಾ ಜೊತೆ ಮಾತನಾಡುವಾಗ ಭಾಗ್ಯಾ ಫೋನ್ ಕಸಿದುಕೊಂಡು ಆರೋಗ್ಯ ಹೇಗಿದೆ ಎಂದು ವಿಚಾರಿಸುತ್ತಾಳೆ. ಮನೆಗೆ ಹೋಗಿ ನಾಳಿನ ಕಾರ್ಯಕ್ರಮಕ್ಕೆ ಮನೆ ಕ್ಲೀನ್ ಮಾಡಲು ಸಹಾಯ ಮಾಡುವಂತೆ ಸುಂದ್ರಿ, ಪೂಜಾ ಬಳಿ ಮನವಿ ಮಾಡುತ್ತಾಳೆ.
Bhagyalakshmi Kannada Serial: ಭಾಗ್ಯಾ ರೆಸಾರ್ಟ್‌ಗೆ ಬಂದು ಗಂಡನನ್ನು ವಾಪಸ್ ಕರೆದುಕೊಂಡು ಹೋಗುತ್ತಾಳೆ. ಬೇಕಂತಲೇ ಶ್ರೇಷ್ಠಾ ಕೈಗೆ ಏಟು ಮಾಡಿ ಅವಳನ್ನು ಆಸ್ಪತ್ರೆಗೆ ಕಳಿಸುತ್ತಾಳೆ. ನಾನೇ ಕಾರ್ ಡ್ರೈವಿಂಗ್ ಮಾಡುತ್ತೇನೆ ಎಂದು ತಾಂಡವ್‌ನನ್ನು ಪಕ್ಕದಲ್ಲಿ ಕೂರಿಸಿಕೊಂಡು ಕಾರು ಚಲಾಯಿಸುತ್ತಾಳೆ. ಭಾಗ್ಯಾ ಕಾರು ಓಡಿಸುವ ರಭಸಕ್ಕೆ ಅವಳು ಕೆಕ್ಕರಿಸಿ ನೋಡುವುದಕ್ಕೆ ತಾಂಡವ್ ಹೆದರುತ್ತಾನೆ.
ಭಾಗ್ಯಾಳನ್ನು ಹೆದರಿಸಲು ಹೋಗಿ ತಾನೇ ಹೆದರಿ ನಡುಗುತ್ತಿರುವ ತಾಂಡವ್
ಭಾಗ್ಯಾ ಈ ರೀತಿ ಏಕೆ ವಿಚಿತ್ರವಾಗಿ ವರ್ತಿಸುತ್ತಿದ್ಧಾಳೆ ಎಂದು ತಾಂಡವ್ ಗಾಬರಿಯಾಗುತ್ತಾನೆ. ಕಾರು ಇನ್ನು ಕೂದಲೆಳೆ ಅಂತದಲ್ಲಿ ಲಾರಿಗೆ ಡಿಕ್ಕಿ ಹೊಡೆಯಬೇಕು ಎನ್ನುವಷ್ಟರಲ್ಲಿ ಭಾಗ್ಯಾ ಬ್ರೇಕ್ ಹಾಕುತ್ತಾಳೆ. ನಿನಗೇನಾದರೂ ಹುಚ್ಚು ಹಿಡಿದಿದ್ಯಾ? ಏಕೆ ಈ ರೀತಿ ವರ್ತಿಸುತ್ತಿದ್ದೀಯ ಎಂದು ತಾಂಡವ್ ಕೇಳುತ್ತಾನೆ. ಆದರೆ ತಾಂಡವ್ ಮಾತುಗಳಿಗೆ ಭಾಗ್ಯಾ ಕೋಪಗೊಳ್ಳದೆ ತಾಳ್ಮೆಯಿಂದಲೇ ಉತ್ತರಿಸುತ್ತಾಳೆ. ನಾಳೆ ನಮ್ಮ ವೆಡ್ಡಿಂಗ್ ಆನಿವರ್ಸರಿ, ನಾವು ಶಾಪಿಂಗ್ ಹೋಗಬೇಕು ಬನ್ನಿ ಎನ್ನುತ್ತಾಳೆ. ನಾನು ಬರುವುದಿಲ್ಲ ಎಂದು ತಾಂಡವ್ ಹೇಳಿದಾಗ ಭಾಗ್ಯಾ ಮತ್ತೆ ತಾಂಡವ್ ಕಡೆ ಕೋಪಗಿಂದ ತಿರುಗುತ್ತಾಳೆ. ಏನು ನನ್ನನ್ನು ಹೆದರಿಸಿ ಸಾಯಿಸಬೇಕು ಎಂದುಕೊಂಡಿದ್ಯಾ? ಸರಿ ಆಯ್ತು ಬರ್ತೀನಿ ಎನ್ನುತ್ತಾನೆ. ಇಬ್ಬರೂ ಬಟ್ಟೆ ಅಂಗಡಿಗೆ ಹೋಗುತ್ತಾರೆ.
ಅಷ್ಟರಲ್ಲಿ ಕುಸುಮಾ ತಾಂಡವ್‌ಗೆ ಕರೆ ಮಾಡುತ್ತಾಳೆ. ಎಲ್ಲಾ ಸರಿ ಇದೆ ತಾನೇ, ಭಾಗ್ಯಾ ಹೇಗಿದ್ದಾಳೆ ಎಂದು ಕೇಳುತ್ತಾಳೆ. ಅವಳಿಗೆ ಏನು ಆಗಿದೆ, ಅವಳು ಚೆನ್ನಾಗಿ ಇದ್ದಾಳೆ ಆಗಿರೋದೆಲ್ಲಾ ನನಗೆ, ನಾಳೆ ಮದುವೆ ದಿನ ಅಂತ ಶಾಪಿಂಗ್ ಮಾಡೋಕೆ ಕರೆದುಕೊಂಡು ಬಂದಿದ್ದಾಳೆ. ಒಂದು ತಿಂಗಳು ಎಷ್ಟೊತ್ತಿಗೆ ಬರುತ್ತೋ ಎಂದು ಕಾಯುತ್ತಿದ್ದೇನೆ ಎನ್ನುತ್ತಾನೆ. ಅಷ್ಟರೊಳಗೆ ನೀನು ಏನೂ ಮಾತನಾಡುವಂತಿಲ್ಲ. ಭಾಗ್ಯಾ ಏನು ಕೇಳಿದರೂ ನೀನು ಕೊಡಿಸಬೇಕು, ಇಲ್ಲದಿದ್ದರೆ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಕುಸುಮಾ ಮತ್ತೆ ತಾಂಡವ್‌ನನ್ನು ಎಚ್ಚರಿಸುತ್ತಾಳೆ. ಇದಕ್ಕೆ ಹೆದರಿದ ತಾಂಡವ್ ಆಯ್ತು ಕೊಡಿಸುತ್ತೇನೆ ಎನ್ನುತ್ತಾನೆ. ಭಾಗ್ಯಾ ತನಗೆ ಸೀರೆ ಸೆಲೆಕ್ಟ್ ಮಾಡಲು ಬಿಟ್ಟು ಅವನಿಗೆ ಡ್ರೆಸ್ ತರಲು ಹೋಗುತ್ತಾಳೆ.
ತಾಂಡವ್‌ಗೆ ಶ್ರೇಷ್ಠಾ ಜೊತೆ ಮಾತನಾಡಲು ಬಿಡದ ಭಾಗ್ಯಾ
ಭಾಗ್ಯಾ ಅತ್ತ ಹೋಗುತ್ತಿದ್ದಂತೆ ತಾಂಡವ್ ಶ್ರೇಷ್ಠಾಗೆ ಕರೆ ಮಾಡುತ್ತಾನೆ. ಆದರೆ ಅಷ್ಟರಲ್ಲಿ ಭಾಗ್ಯಾ ಬಂದು ಫೋನ್ ಕಸಿದುಕೊಳ್ಳುತ್ತಾಳೆ. ನಾನು ಅವಳ ಜೊತೆ ಮಾತನಾಡಿದರೆ ಏನಾಗುತ್ತಿತ್ತು ಎಂದು ತಾಂಡವ್ ಪ್ರಶ್ನಿಸುತ್ತಾನೆ. ನಾನು ಮಾತನಾಡಿದರೆ ಏನು ಕಷ್ಟ ಎಂದು ಭಾಗ್ಯಾ ಕೇಳುತ್ತಾಳೆ. ನಾನು ಅವಳ ಆರೋಗ್ಯ ವಿಚಾರಿಸುತ್ತಿದ್ದೆ ಎಂದು ತಾಂಡವ್ ಹೇಳುತ್ತಾನೆ. ನಾನೂ ಅದನ್ನೇ ತಾನೇ ಕೇಳಿದ್ದು ಎನ್ನುತ್ತಾಳೆ. ಅದಕ್ಕೆ ಏನೂ ಉತ್ತರಿಸಲಾಗದೆ ತಾಂಡವ್ ಸುಮ್ಮನಾಗುತ್ತಾನೆ. ಇಬ್ಬರೂ ಮನೆಗೆ ಹೋಗುತ್ತಾರೆ. ನಾಳೆ ನನಗೆ ಬಹಳ ವಿಶೇಷವಾದ ದಿನ ಮನೆಯೆಲ್ಲಾ ಡೆಕೊರೇಷನ್ ಮಾಡಬೇಕು. ಸುಂದ್ರಿ, ಪೂಜಾ ನನಗೆ ಸಹಾಯ ಮಾಡಿ ಎನ್ನುತ್ತಾಳೆ, ಭಾಗ್ಯಾ ವರ್ತನೆ ಕಂಡು ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.
ಭಾಗ್ಯಾ ಉದ್ದೇಶ ಏನು? ಮದುವೆ ಆನಿವರ್ಸರಿ ದಿನ ತಾಂಡವ್-ಶ್ರೇಷ್ಠಾಗೆ ಪಾಠ ಕಲಿಸುತ್ತಾಳಾ? ಅಥವಾ ಗಂಡನನ್ನು ಬಿಟ್ಟುಕೊಡುತ್ತಾಳಾ? ಕಾದು ನೋಡಬೇಕು.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ