ಮಾವನಿಗೆ ಕಾರು ಕೊಡಿಸಿದ ಭಾಗ್ಯಾ, ಕನ್ನಿಕಾ ಜೊತೆ ಸೇರಿಕೊಂಡ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ 700ನೇ ಸಂಚಿಕೆ
ಕನ್ನಡ ಸುದ್ದಿ  /  ಮನರಂಜನೆ  /  ಮಾವನಿಗೆ ಕಾರು ಕೊಡಿಸಿದ ಭಾಗ್ಯಾ, ಕನ್ನಿಕಾ ಜೊತೆ ಸೇರಿಕೊಂಡ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ 700ನೇ ಸಂಚಿಕೆ

ಮಾವನಿಗೆ ಕಾರು ಕೊಡಿಸಿದ ಭಾಗ್ಯಾ, ಕನ್ನಿಕಾ ಜೊತೆ ಸೇರಿಕೊಂಡ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ 700ನೇ ಸಂಚಿಕೆ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ 700ನೇ ಸಂಚಿಕೆಯತ್ತ ದಾಪುಗಾಲಿಟ್ಟಿದೆ. ಜನವರಿ 28ರ ಸಂಚಿಕೆಯಲ್ಲಿ ಭಾಗ್ಯಾ, ಮನೆಯವರನ್ನೆಲ್ಲಾ ಕರೆದುಕೊಂಡು ಹೋಗಿ, ಮಾವನಿಗೆ ಕಾರು ಕೊಡಿಸಿ ಖುಷಿಪಟ್ಟಿದ್ದಾಳೆ. ಇತ್ತ ಶ್ರೇಷ್ಠಾ ಜತೆ ಕನ್ನಿಕಾ ಕೈಜೋಡಿಸಿದ್ದು, ಭಾಗ್ಯಾಳನ್ನು ಕೆಲಸದಿಂದ ತೆಗೆಯಲು ಸಂಚು ರೂಪಿಸುತ್ತಿದ್ದಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (ಕಲರ್ಸ್ ಕನ್ನಡ)

Bhagyalakshmi Serial: ಆಫೀಸ್‌ಗೆ ಹೊರಡುವ ಗಡಿಬಿಡಿಯಲ್ಲಿದ್ದ ತಾಂಡವ್, ಶ್ರೇಷ್ಠಾಳ ಬಳಿ ತನ್ನ ಬ್ಯಾಗ್ ಕೊಡುವಂತೆ ಕೇಳುತ್ತಾನೆ. ಒಮ್ಮೆ ಕರೆದಾಗ ಉತ್ತರ ಬರುವುದಿಲ್ಲ, ಹೀಗಾಗಿ ಮತ್ತೊಮ್ಮೆ ಕರೆಯುತ್ತಾನೆ. ಜೋರಾಗಿ ಕರೆದರೂ ಶ್ರೇಷ್ಠಾಳ ಪತ್ತೆಯಿರುವುದಿಲ್ಲ. ಹೀಗಾಗಿ ಅವಳನ್ನು ಹುಡುಕಿಕೊಂಡು ಮನೆಯೆಲ್ಲಾ ಸುತ್ತುತ್ತಾನೆ. ಆಗ ಶ್ರೇಷ್ಠಾ ಅವನಲ್ಲಿ ಹೇಳದೇ ಹೊರಗೆ ಹೋಗಿರುವುದು ಗೊತ್ತಾಗುತ್ತದೆ. ಅದು ತಾಂಡವ್‌ಗೆ ತೀವ್ರ ಕೋಪ ತರಿಸುತ್ತದೆ. ಹಾಗೆಯೇ ಕಿಚನ್‌ಗೆ ಹೋಗುವಾಗ ಅಲ್ಲಿ ನೀರು ಚೆಲ್ಲಿದ್ದು, ಅದರ ಮೇಲೆ ಕಾಲಿಟ್ಟ ತಾಂಡವ್ ಜಾರಿ ಸ್ಟೇರ್‌ಕೇಸ್ ಮೇಲೆ ಬೀಳುತ್ತಾನೆ. ಆತನ ಕೈಗೆ ಗಾಯವಾಗುತ್ತದೆ. ಶ್ರೇಷ್ಠಾಳನ್ನು ಶಪಿಸುತ್ತಾ, ಕೈ ನೋವಿನಿಂದಲೇ ಆಕೆಗೆ ಕರೆ ಮಾಡುತ್ತಾನೆ. ಫೋನ್ ರಿಂಗ್ ಆದರೂ ಶ್ರೇಷ್ಠಾ ಕರೆ ಸ್ವೀಕರಿಸುವುದಿಲ್ಲ. ಹೀಗಾಗಿ ಮತ್ತೊಮ್ಮೆ ಕರೆ ಮಾಡುತ್ತಾನೆ. ಆಗಲೂ ಶ್ರೇಷ್ಠಾ ಕರೆಗೆ ಉತ್ತರಿಸುವುದಿಲ್ಲ. ಇದರಿಂದ ತಾಂಡವ್‌ಗೆ ಮತ್ತಷ್ಟು ಕೋಪ ಬರುತ್ತದೆ.

ಕನ್ನಿಕಾ ಜತೆ ಸೇರಿಕೊಂಡ ಶ್ರೇಷ್ಠಾ

ಇತ್ತ ಕಡೆ ಶ್ರೇಷ್ಠಾ, ಭಾಗ್ಯಾ ಕೆಲಸ ಮಾಡುತ್ತಿರುವ ಸಿಟಿ ಆಫ್ ಲೈಟ್ಸ್ ಹೋಟೆಲ್‌ನ ಮಾಲೀಕರ ತಂಗಿ ಕನ್ನಿಕಾ ಜತೆ ಸೇರಿಕೊಂಡು, ಭಾಗ್ಯಾಳನ್ನು ಕೆಲಸದಿಂದ ತೆಗೆಸುವ ಪ್ಲ್ಯಾನ್ ಮಾಡುತ್ತಿರುತ್ತಾಳೆ. ಭಾಗ್ಯಾ ಒಳ್ಳೆಯ ಕೆಲಸ ಮಾಡುತ್ತಿದ್ದಾಳೆ. ಅವಳ ಕೆಲಸದ ಬಗ್ಗೆ ಎಲ್ಲರಲ್ಲಿ ಉತ್ತಮ ಅಭಿಪ್ರಾಯವಿದೆ. ಹೀಗಾಗಿ ಈಗಲೇ ಕೆಲಸದಿಂದ ತೆಗೆಸಲು ಕಷ್ಟ ಎಂದು ಕನ್ನಿಕಾ ಹೇಳುತ್ತಾಳೆ. ಆಗ ಶ್ರೇಷ್ಠಾ, ನಿನ್ನನ್ನು ನಂಬಿಕೊಂಡು ಇಲ್ಲಿಗೆ ಬಂದರೆ, ಏನು ಪ್ರಯೋಜನವಾಗುವುದಿಲ್ಲ ಎಂದು ಹುಸಿಕೋಪ ತೋರಿಸುತ್ತಾಳೆ. ಅಷ್ಟಕ್ಕೇ ಕನ್ನಿಕಾಗೆ ರೋಸಿ ಹೋಗಿ, ನಾನು ಭಾಗ್ಯಾಳನ್ನು ಈಗ ಕೆಲಸದಿಂದ ತೆಗೆಸಲು ಸಾಧ್ಯವಿಲ್ಲ ಎಂದಷ್ಟೇ ಹೇಳಿದ್ದೇನೆ ಹೊರತು, ಕೆಲಸದಿಂದ ತೆಗೆಯುವುದೇ ಇಲ್ಲ ಎಂದು ಹೇಳಿಲ್ಲ. ಅದಕ್ಕೆ ಸೂಕ್ತ ಸಮಯ ಬರಲಿ, ಅವಳ ಕೆಲಸದ ಬಗ್ಗೆ ಜನರಲ್ಲಿ, ಅಲ್ಲಿನ ಸಿಬ್ಬಂದಿಯಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಿ, ನಂತರ ಕೆಲಸದಿಂದ ತೆಗೆಸುತ್ತೇನೆ. ಆಗ ನಮ್ಮ ಕೆಲಸ ಸುಲಭವಾಗುತ್ತದೆ ಎಂದು ಕನ್ನಿಕಾ ಹೇಳುತ್ತಾಳೆ. ಅವಳ ಪ್ಲ್ಯಾನ್ ಶ್ರೇಷ್ಠಾಗೂ ಮೆಚ್ಚುಗೆಯಾಗುತ್ತದೆ.

ಇದನ್ನೂ ಓದಿ: ದುಷ್ಟಶಕ್ತಿಯ ಕಾಟಕ್ಕೆ ಸುಟ್ಟು ಕರಕಲಾದ ಅಂಬಿಕಾ ತಿಥಿ ಕಾರ್ಯ ನೆರವೇರುತ್ತಾ?

ಮಾವನಿಗೆ ಕಾರು ಕೊಡಿಸಿದ ಭಾಗ್ಯಾ

ಮಾವನಿಗೆ ಹೊಸ ಕಾರು ಕೊಡಿಸಿದ ಬಳಿಕ ಭಾಗ್ಯಾ, ಎಲ್ಲರೂ ಸೇರಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರೋಣ ಎಂದು ಹೊರಡುತ್ತಾರೆ. ಇತ್ತ ಕನ್ನಿಕಾ ಮತ್ತು ಶ್ರೇಷ್ಠಾ ಜತೆಯಾಗಿ ಭಾಗ್ಯಾಳನ್ನು ಕೆಲಸದಿಂದ ತೆಗೆಯಲು ಸಂಚು ರೂಪಿಸುತ್ತಿರುತ್ತಾರೆ. ಇದ್ಯಾವುದರ ಪರಿವೆಯೇ ಇಲ್ಲದಂತೆ ಭಾಗ್ಯಾ, ತನ್ನ ಕುಟುಂಬದ ಜತೆ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದಾಳೆ. ಜತೆಗೆ ಎರಡು ತಿಂಗಳ ವೇತನವನ್ನು ಮುಂಚಿತವಾಗಿಯೇ ಪಡೆದುಕೊಂಡಿದ್ದು, ಕಾರು ಖರೀದಿಯ ಡೌನ್‌ಪೇಮೆಂಟ್‌ಗೆ ಬಳಸಿಕೊಂಡಿದ್ದಾಳೆ. ಮತ್ತೊಂದೆಡೆ ಭಾಗ್ಯಲಕ್ಷ್ಮಿ ದಾಖಲೆಯ 700ನೇ ಸಂಚಿಕೆಯತ್ತ ಸಾಗಿದೆ. ಶ್ರೇಷ್ಠಾ ಮತ್ತು ಕನ್ನಿಕಾಳ ಸಂಚು ಏನು? ಭಾಗ್ಯಾಗೆ ಮುಂದೇನು ಸಂಕಟ ಕಾದಿದೆ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌