ಮದುವೆ ಮಂಟಪ ತಯಾರಿಸಲು ಹೇಳಿ ಮುಂದೆ ನಿಂತು ಶ್ರೇಷ್ಠಾ-ತಾಂಡವ್ ಮದುವೆ ಮಾಡಿಬಿಡ್ತಾಳಾ ಭಾಗ್ಯಾ? ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 28ರ ಎಪಿಸೋಡ್‌ನಲ್ಲಿ ಮದುವೆ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಬರುವಂತೆ ಭಾಗ್ಯಾ, ಶ್ರೇಷ್ಠಾಗೆ ಕರೆ ಮಾಡಿ ಕರೆಯುತ್ತಾಳೆ. ಮದುವೆ ಮಂಟಪ ತಯಾರಿಸುವಂತೆ ಡೆಕೊರೇಷನ್ ಮಾಡುವವರಿಗೆ ಹೇಳುತ್ತಾಳೆ. ಭಾಗ್ಯಾ ವಿಚಿತ್ರವಾಗಿ ವರ್ತಿಸುವುದನ್ನು ನೋಡಿ ಮನೆಯವರು ಗಾಬರಿಯಾಗಿದ್ದಾರೆ.
Bhagyalakshmi Kannada Serial: ಮದುವೆ ವಾರ್ಷಿಕೋತ್ಸವ ಆಚರಿಸಲು ಭಾಗ್ಯಾ ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತಿದ್ದಾಳೆ. ಆದರೆ ಭಾಗ್ಯಾ ವರ್ತನೆ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ. ಗಂಡನನ್ನು ಕರೆದೊಯ್ದು ಶಾಪಿಂಗ್ ಕೂಡಾ ಮಾಡಿ ಬಂದಿದ್ದಾಳೆ. ಭಾಗ್ಯಾ ಮೊದಲಿನಂತೆ ಇಲ್ಲ ಅನ್ನೋದು ಎಲ್ಲರಿಗೂ ಅರ್ಥವಾಗುತ್ತಿದೆ. ಅವಳಿಗೆ ಎಲ್ಲಾ ಗೊತ್ತಾಗಿಬಿಡ್ತಾ ಎಂಬ ಭಯ ಕುಸುಮಾಗೆ ಕಾಡುತ್ತಿದೆ.
ಭಾಗ್ಯಾ ಗಡಿಬಿಡಿ ಕಂಡು ಆಶ್ಚರ್ಯಗೊಂಡ ಕುಸುಮಾ
ಭಾಗ್ಯಾ ತಾಯಿ ಸುನಂದಾಗೆ ಕೂಡಾ ಎಲ್ಲಾ ವಿಷಯ ಗೊತ್ತಾಗಿದೆ. ನಾನು ತಾಂಡವ್ ಬಗ್ಗೆ ಹೇಳಿದಾಗ ಯಾರೂ ನನ್ನ ಮಾತು ನಂಬಲಿಲ್ಲ, ಆದರೆ ಈಗ ನೋಡಿ ಪರಿಸ್ಥಿತಿ ಹೇಗಾಗಿದೆ ಎಂದು ಸುನಂದಾ ಕುಸುಮಾ ಬಳಿ ಗೋಳಾಡುತ್ತಾಳೆ. ಭಾಗ್ಯಾ ನಮಗೆ ಬಹಳ ಮುಖ್ಯ, ತಾಂಡವ್ ಮಾತ್ರವಲ್ಲ, ಸ್ವಲ್ಪ ಸಮಯ ಕೊಡಿ ನಿಮ್ಮ ಮಗಳ ಜೀವನವನ್ನು ಸರಿ ಮಾಡುತ್ತೇವೆ ಎಂದು ಕುಸುಮಾ, ಸುನಂದಾ ಬಳಿ ಕೈ ಮುಗಿದು ಕೇಳಿಕೊಳ್ಳುತ್ತಾಳೆ. ಮರುದಿನ ಬೆಳಗ್ಗೆ ಬೇಗ ಎದ್ದು ಭಾಗ್ಯಾ ಗಡಿಬಿಡಿಯಿಂದ ಎಲ್ಲಾ ಕೆಲಸ ಮಾಡುತ್ತಿದ್ದಾಳೆ. ಎಲ್ಲರಿಗೂ ತಾನೇ ಕೈಯಾರೆ ಕಾಫಿ ಮಾಡಿಕೊಡುತ್ತಾಳೆ. ನಾನೇ ತಿಂಡಿ ಮಾಡುತ್ತೇನೆ ಎನ್ನುತ್ತಾಳೆ. ಭಾಗ್ಯಾ ಅವಸರವಾಗಿ ಎಲ್ಲಾ ಕೆಲಸ ಮಾಡುತ್ತಿರುವುದನ್ನು ನೋಡಿ ಕುಸುಮಾ, ಏನಾಯ್ತು ಭಾಗ್ಯಾ ಏಕೆ ಈ ರೀತಿ ವಿಚಿತ್ರವಾಗಿ ವರ್ತಿಸುತ್ತಿದ್ದೀಯ ಎಂದು ಕೇಳುತ್ತಾಳೆ. ಏನಿಲ್ಲ ಅತ್ತೆ ಭಾಗ್ಯಾ ಮೊದಲಿನಂತೆ ಇದ್ದಾಳೆ ಎಂದು ಭಾಗ್ಯಾ ಉತ್ತರಿಸುತ್ತಾಳೆ.
ಮದುವೆ ಮಂಟಪ ರೆಡಿ ಮಾಡುವಂತೆ ಡೆಕೊರೇಷನ್ ಮಾಡುವವರಿಗೆ ಹೇಳುವ ಭಾಗ್ಯಾ
ಅಷ್ಟರಲ್ಲಿ ಮನೆ ಡೆಕೊರೇಷನ್ ಮಾಡುವವರು ಬರುತ್ತಾರೆ. ಮೇಲೆ ಹೋಗಿ ಮದುವೆ ಮಂಟಪ ರೆಡಿ ಮಾಡಿ ಎಂದು ಭಾಗ್ಯಾ ಹೇಳುತ್ತಾಳೆ. ಮದುವೆ ಮಂಟಪ ಏಕೆ? ಭಾಗ್ಯಾ ಏನು ಮಾಡಲು ಹೊರಟಿದ್ದಾಳೆ ಅಂತ ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಅಷ್ಟರಲ್ಲಿ ತಾಂಡವ್ ಅಲ್ಲಿಗೆ ಬಂದು ನಿನಗೆ ಹುಚ್ಚು ಹಿಡಿದಿದ್ಯಾ? ಕೇವಲ ಮದುವೆ ಆನಿವರ್ಸರಿಗೆ ಇಷ್ಟೆಲ್ಲಾ ತಯಾರಿ ಬೇಕಾ ಎಂದು ಕೇಳುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ಭಾಗ್ಯಾ, ನಿಮಗೆ ಅದು ಕೇವಲ ಮದುವೆ ಆದ ದಿನ ಇರಬಹುದು, ಆದರೆ ನನಗೆ ಅದು ಬಹಳ ವಿಶೇಷವಾದ ದಿನ, ಬಹಳ ಮುಖ್ಯವಾದ ದಿನ ಎನ್ನುತ್ತಾಳೆ. ಯಾರಿಗೂ ಗೊತ್ತಿಲ್ಲದಂತೆ ಶ್ರೇಷ್ಠಾಗೆ ಅಕ್ಷತೆ, ಅರಿಶಿನ, ಕುಂಕುಮ ಕಳಿಸಿ ಅವಳನ್ನೂ ಕಾರ್ಯಕ್ರಮಕ್ಕೆ ಬರಲು ಹೇಳುತ್ತಾಳೆ.
ಶ್ರೇಷ್ಠಾ ಮನೆಗೆ ಬಂದಿದ್ದನ್ನು ಕಂಡು ಕೋಪಗೊಂಡ ಕುಸುಮಾ, ಸುನಂದಾ
ಮಕ್ಕಳನ್ನು ರೆಡಿ ಮಾಡಿ ಭಾಗ್ಯಾ ತಾನೂ ಸೀರೆ, ಒಡವೆ ಧರಿಸಿ ಸಿದ್ಧವಾಗುತ್ತಾಳೆ. ಸುಂದ್ರಿ , ಪೂಜಾಳನ್ನು ಉದ್ದೇಶಿಸಿ ನಾನು ಹೇಗೆ ಕಾಣುತ್ತಿದ್ದೇನೆ ಎಂದು ಕೇಳುತ್ತಾಳೆ. ಅಲ್ಲಿಗೆ ಬಂದ ಕುಸುಮಾಗೂ , ಅತ್ತೆ ನಾನು ಹೇಗೆ ಕಾಣಿಸುತ್ತಿದ್ದೀನಿ ಎಂದು ಕೇಳುತ್ತಾಳೆ. ಭಾಗ್ಯಾ ಮಾತಿಗೆ ಕುಸುಮಾ ಏನೂ ಪ್ರತಿಕ್ರಿಯಿಸದ ಆಶ್ಚರ್ಯದಿಂದ ನೋಡುತ್ತಾಳೆ. ಹೇಳಿ ಅತ್ತೆ ನಿಮ್ಮ ಮಗ ಇಷ್ಟಪಡುವಂತೆ ನಾನು ಚೆನ್ನಾಗಿ ಕಾಣಿಸುತ್ತಿದ್ದೇನಾ ಇಲ್ಲವಾ? ಏಕೆಂದರೆ ನಿಮ್ಮ ಮಗನಿಗೆ ಏನು ಇಷ್ಟ ಅನ್ನೋದು ನಿಮಗೆ ಚೆನ್ನಾಗಿ ಗೊತ್ತು ಎಂದು ಹೇಳುತ್ತಾಳೆ. ಭಾಗ್ಯಾ ಹೀಗೆ ಪದೇ ಪದೆ ಕೇಳಿದ್ದನ್ನೇ ಕೇಳುವುದಕ್ಕೆ ಎಲ್ಲರೂ ಗಾಬರಿ ಆಗುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಶ್ರೇಷ್ಠಾ ಬರುತ್ತಾಳೆ. ನೀನು ಇಲ್ಲಿಗೆ ಏಕೆ ಬಂದೆ ಎಂದು ಎಲ್ಲರೂ ಅವಳಿಗೆ ಬೈಯ್ಯುತ್ತಾರೆ. ಎಲ್ಲರನ್ನೂ ಸುಮ್ಮನಾಗಿಸುವ ಭಾಗ್ಯಾ, ಅವಳನ್ನು ಕರೆದದ್ದು ನಾನೇ ಎನ್ನುತ್ತಾಳೆ.
ಮದುವೆ ಮಂಟಪ ತಯಾರಿಸಲು ಹೇಳಿದ ಭಾಗ್ಯಾ ಉದ್ದೇಶವೇನು? ತಾಂಡವ್-ಶ್ರೇಷ್ಠಾ ಇಬ್ಬರಿಗೂ ಮದುವೆ ಮಾಡಿಸಿ ತಾನು ಮನೆ ಬಿಟ್ಟು ಹೋಗುತ್ತಾಳಾ? ಮುಂದಿನ ಎಪಿಸೋಡ್‌ಗಳಲ್ಲಿ ಉತ್ತರ ಸಿಗಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್