ಭಾಗ್ಯಾ ಹೊಸ ಕಾರಿಗೆ ಭರ್ಜರಿ ಪೂಜೆ; ಶ್ರೇಷ್ಠಾಗೆ ಗಿಫ್ಟ್ ಕಳುಹಿಸಿದ ಬೆಸ್ಟ್‌ಫ್ರೆಂಡ್: ಭಾಗ್ಯಲಕ್ಷ್ಮೀ ಧಾರಾವಾಹಿ ಅಪ್‌ಡೇಟ್ಸ್
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಾ ಹೊಸ ಕಾರಿಗೆ ಭರ್ಜರಿ ಪೂಜೆ; ಶ್ರೇಷ್ಠಾಗೆ ಗಿಫ್ಟ್ ಕಳುಹಿಸಿದ ಬೆಸ್ಟ್‌ಫ್ರೆಂಡ್: ಭಾಗ್ಯಲಕ್ಷ್ಮೀ ಧಾರಾವಾಹಿ ಅಪ್‌ಡೇಟ್ಸ್

ಭಾಗ್ಯಾ ಹೊಸ ಕಾರಿಗೆ ಭರ್ಜರಿ ಪೂಜೆ; ಶ್ರೇಷ್ಠಾಗೆ ಗಿಫ್ಟ್ ಕಳುಹಿಸಿದ ಬೆಸ್ಟ್‌ಫ್ರೆಂಡ್: ಭಾಗ್ಯಲಕ್ಷ್ಮೀ ಧಾರಾವಾಹಿ ಅಪ್‌ಡೇಟ್ಸ್

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ 700ನೇ ಸಂಚಿಕೆ ದಾಟಿದೆ. ಜನವರಿ 29ರ ಸಂಚಿಕೆಯಲ್ಲಿ ಭಾಗ್ಯಾ ಹೊಸ ಕಾರಿಗೆ ಪೂಜೆ ನಡೆದಿದೆ. ತಾನು ಕೆಲಸ ಮಾಡುವ ಹೋಟೆಲ್‌ನಲ್ಲಿ ಭಾಗ್ಯಾ ಸಹೋದ್ಯೊಗಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾಳೆ. ಇತ್ತ ಶ್ರೇಷ್ಠಾಗೆ ಅವಳ ಬೆಸ್ಟ್‌ಫ್ರೆಂಡ್ ಹೂವಿನ ಬೊಕೆ ಕಳುಹಿಸಿದ್ದಾನೆ. ಅದನ್ನು ಕಂಡು ತಾಂಡವ್‌ ಕೋಪಗೊಂಡಿದ್ದಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಅಪ್‌ಡೇಟ್ಸ್
ಭಾಗ್ಯಲಕ್ಷ್ಮೀ ಧಾರಾವಾಹಿ ಅಪ್‌ಡೇಟ್ಸ್ (Colours Kannada Facebook)

Bhagyalakshmi Serial: ಅಂತೂ ಇಂತೂ ಭಾಗ್ಯಾಗೆ ಹೊಸ ಕಾರು ಬಂದಿದೆ. ಹೊಸ ಕಾರಿನಲ್ಲೇ ಎಲ್ಲರೂ ದೇವಸ್ಥಾನಕ್ಕೆ ಹೋಗಿದ್ದಾರೆ. ದೇವಸ್ಥಾನದಲ್ಲಿ ಕಾರಿಗೆ ಪುರೋಹಿತರು ಭರ್ಜರಿ ಪೂಜೆ ಮಾಡಿದ್ದಾರೆ. ನಿಂಬೆ ಹಣ್ಣು ಇಟ್ಟು, ಕಾಯಿ ಒಡೆದು, ಒಳಿತಾಗಲಿ ಎಂದು ಹರಸಿದ್ದಾರೆ. ಅದಾದ ನಂತರ ಕಾರು ತೆಗೆದುಕೊಂಡು ಧರ್ಮರಾಜ್ ಮತ್ತು ಕುಟುಂಬದವರು ಮನೆಗೆ ತೆರಳಿದ್ದಾರೆ. ಭಾಗ್ಯಾ ಮಾತ್ರ ತಾನು ಕೆಲಸ ಮಾಡುವ ಹೋಟೆಲ್‌ಗೆ ತೆರಳಿದ್ದಾರೆ.

ಸಿಹಿ ಹಂಚಿ ಸಂಭ್ರಮಿಸಿದ ಭಾಗ್ಯಾ

ಹೋಟೆಲ್‌ಗೆ ತೆರಳಿದ ಬಳಿಕ ಭಾಗ್ಯಾ, ತನ್ನ ಸಹೋದ್ಯೊಗಿಗಳಿಗೆ ಸಿಹಿ ಹಂಚಿದ್ದಾರೆ. ಸಿಹಿ ಹಂಚಲು ಕಾರಣವೇನು ಎಂದು ಕೇಳಿದಾಗ, ಮಾವನಿಗೆ ಹೊಸ ಕಾರು ಕೊಡಿಸಿದೆ. ಆ ಖುಷಿಯಲ್ಲಿ ಸಿಹಿ ಹಂಚುತ್ತಿದ್ದೇನೆ ಎಂದಿದ್ದಾಳೆ. ಮಾವನ ಬಳಿ ಹಳೆಯ ಸ್ಕೂಟರ್ ಇದೆ, ಅದರ ಬ್ರೇಕ್ ಕೂಡ ಸರಿಯಿಲ್ಲ. ಇನ್ನು ಬಿದ್ದು ಏಟು ಮಾಡಿಕೊಳ್ಳುವುದು ಬೇಡ ಎಂದು ಹೊಸ ಕಾರು ಕೊಡಿಸಿದೆ ಎಂದ ಭಾಗ್ಯಾಳ ಕಾಳಜಿಗೆ ಅವಳ ಸಹೋದ್ಯೋಗಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಭಾಗ್ಯಾಗೆ ಹೊಸ ಜವಾಬ್ದಾರಿ

ಮತ್ತೊಂದೆಡೆ ಭಾಗ್ಯಾಳ ಮ್ಯಾನೇಜರ್ ಬಂದು, ಹೋಟೆಲ್‌ಗೆ ವಿಐಪಿಗಳು ಬರುತ್ತಿದ್ದಾರೆ, ಅವರ ಅತಿಥ್ಯದ ಜವಾಬ್ದಾರಿ ನೋಡಿಕೊಳ್ಳುವಂತೆ ಭಾಗ್ಯಾಗೆ ಸೂಚಿಸುತ್ತಾರೆ. ಅದಕ್ಕೆ ಭಾಗ್ಯಾ ಖುಷಿಯಿಂದ ಒಪ್ಪುತ್ತಾಳೆ. ಜತೆಗೆ ಅವಳ ಸಹೋದ್ಯೋಗಿಗಳು ಕೂಡ ಸಹಕಾರ ನೀಡುವುದಾಗಿ ಹೇಳುತ್ತಾರೆ. ಹೀಗೆ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಭಾಗ್ಯಾ ಮುಂದಾಗಿದ್ದಾಳೆ.

ಇದನ್ನೂ ಓದಿ: ಅಪ್ಪನನ್ನು ಸೆಕ್ಯುರಿಟಿ ಗಾರ್ಡ್ ಕೆಲಸದಿಂದ ತೆಗೆದ ಸಂತೋಷ್; ಲಕ್ಷ್ಮೀ ನಿವಾಸ ಧಾರಾವಾಹಿ

ಶ್ರೇಷ್ಠಾಗೆ ಗಿಫ್ಟ್ ಕಳುಹಿಸಿದ ಬೆಸ್ಟ್‌ಫ್ರೆಂಡ್

ಮತ್ತೊಂದೆಡೆ ಕೈಗೆ ಗಾಯ ಮಾಡಿಕೊಂಡಿರುವ ತಾಂಡವ್, ಶ್ರೇಷ್ಠಾಳ ಬರುವಿಕೆಗೆ ಕಾಯುತ್ತಿದ್ದಾನೆ. ಫೋನ್ ಮಾಡಿದಾಗ ಆಕೆ ಕೋಪದಲ್ಲಿ ಉತ್ತರಿಸಿದ್ದಾಳೆ. ಸಣ್ಣಪುಟ್ಟ ಗಾಯವಾದರೆ ನಾನೇನು ಮಾಡಲಿ, ಅದಕ್ಕೆಲ್ಲಾ ನಾನೇ ಬರಬೇಕಾ ಎಂದು ಕೂಗಿದ್ದಾಳೆ. ಆದೇ ಸಮಯದಲ್ಲಿ ಮನೆಯಲ್ಲಿದ್ದ ತಾಂಡವ್‌ಗೆ ಕೊರಿಯರ್ ಒಂದು ಬರುತ್ತದೆ. ಶ್ರೇಷ್ಠಾಗೆ ಅವಳ ಬೆಸ್ಟ್‌ಫ್ರೆಂಡ್ ಹೂವಿನ ಬೊಕೆ ಕಳುಹಿಸಿರುತ್ತಾನೆ, ಅದನ್ನು ಕಂಡು ತಾಂಡವ್‌ಗೆ ಕೋಪ ಬರುತ್ತದೆ. ಅಲ್ಲದೆ, ತಾನೊಂದು ಅತ್ಯಂತ ಮುಖ್ಯ ಮೀಟಿಂಗ್‌ಗೆ ಹೋಗಿದ್ದೆ, ಅದರಿಂದ ನಮಗೆ ತುಂಬಾ ಪ್ರಯೋಜನವಾಗಲಿದೆ, ಕಾದು ನೋಡು ಎಂದು ತಾಂಡವ್‌ಗೆ ಶ್ರೇಷ್ಠಾ ಹೇಳುತ್ತಾಳೆ. ಇತ್ತ ಇದ್ಯಾವುದರ ಪರಿವೆಯೇ ಇಲ್ಲದಂತೆ ಭಾಗ್ಯಾ, ತಾನಾಯಿತು ತನ್ನ ಕೆಲಸ, ಕುಟುಂಬ ಎಂದು ಅದರಲ್ಲೇ ತೊಡಗಿಸಿಕೊಂಡಿರುತ್ತಾಳೆ.

ಮತ್ತೊಂದೆಡೆ ಭಾಗ್ಯಲಕ್ಷ್ಮಿ ಧಾರಾವಾಹಿ ದಾಖಲೆಯ 700ನೇ ಸಂಚಿಕೆ ಮುಗಿಸಿದೆ. ಈ ಮಧ್ಯೆ ಶ್ರೇಷ್ಠಾ ಸೂಚನೆಯಂತೆ, ಕನ್ನಿಕಾ ಭಾಗ್ಯಾಳ ಕೆಲಸ ಕಸಿಯಲು ಸಂಚು ರೂಪಿಸಿದ್ದಾಳೆ. ಅದರಂತೆ ಹೋಟೆಲ್ ಮ್ಯಾನೇಜರ್‌ನ್ನು ಮನೆಗೆ ಕರೆದು ಸೂಚನೆ ನೀಡಿದ್ದಾಳೆ. ಹೀಗಾಗಿ ಭಾಗ್ಯಾಗೆ ಕೆಲಸಕ್ಕೆ ಬೇಗನೆ ಹೊರಟು ಬರುವಂತೆ ಮ್ಯಾನೇಜರ್ ಫೋನ್ ಮಾಡಿ ತಿಳಿಸಿದ್ದಾರೆ. ಭಾಗ್ಯಾಗೆ ಮುಂದೇನು ಸಂಕಟ ಕಾದಿದೆ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಇದನ್ನೂ ಓದಿ: ಯಜಮಾನ ಧಾರಾವಾಹಿಯಲ್ಲಿ ಖಡಕ್ ಆಗಿ ಕಾಣಿಸಿಕೊಂಡ ಝಾನ್ಸಿ

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner