ಕೆಲಸಕ್ಕೆ ರಿಸೈನ್ ಮಾಡಿ ಹೊರನಡೆದ ಭಾಗ್ಯ, ಶ್ರೇಷ್ಠಾಗೆ ಶಹಬ್ಬಾಸ್ ಎಂದ ತಾಂಡವ್: ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಕೆಲಸಕ್ಕೆ ರಿಸೈನ್ ಮಾಡಿ ಹೊರನಡೆದ ಭಾಗ್ಯ, ಶ್ರೇಷ್ಠಾಗೆ ಶಹಬ್ಬಾಸ್ ಎಂದ ತಾಂಡವ್: ಭಾಗ್ಯಲಕ್ಷ್ಮೀ ಧಾರಾವಾಹಿ

ಕೆಲಸಕ್ಕೆ ರಿಸೈನ್ ಮಾಡಿ ಹೊರನಡೆದ ಭಾಗ್ಯ, ಶ್ರೇಷ್ಠಾಗೆ ಶಹಬ್ಬಾಸ್ ಎಂದ ತಾಂಡವ್: ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶನಿವಾರ, ಫೆಬ್ರುವರಿ 2ರ ಸಂಚಿಕೆಯಲ್ಲಿ ಭಾಗ್ಯಾ ತನ್ನ ಮೇಲಿನ ಆರೋಪವನ್ನು ಒಪ್ಪಿಕೊಂಡು ಕೆಲಸಕ್ಕೆ ರಿಸೈನ್ ಮಾಡುತ್ತಿದ್ದಾಳೆ. ಅದನ್ನು ಕಂಡು ಅವಳ ಸಹೋದ್ಯೋಗಿಗಳು ಬೇಸರಪಟ್ಟುಕೊಂಡರೆ, ಕನ್ನಿಕಾ ಖುಷಿಪಡುತ್ತಿದ್ದಾಳೆ. ಭಾಗ್ಯಾ ನಿರ್ಧಾರ ಮಾಧ್ಯಮದವರಿಗೂ ಶಾಕ್ ನೀಡಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿಯ ಶನಿವಾರ ಫೆಬ್ರುವರಿ 2ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿಯ ಶನಿವಾರ ಫೆಬ್ರುವರಿ 2ರ ಸಂಚಿಕೆ (Colours Kannada)

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶನಿವಾರ ಫೆಬ್ರುವರಿ 2ರ ಸಂಚಿಕೆಯಲ್ಲಿ ಭಾಗ್ಯಾ ತನ್ನದಲ್ಲದ ತಪ್ಪನ್ನು ಒಪ್ಪಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸತ್ಯ ಏನೆಂದು ಗೊತ್ತಾಗದೇ ರಿಸೈನ್ ಮಾಡುವುದಿಲ್ಲ, ಹೋಟೆಲ್ ಕೆಲಸ ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂದು ಹೇಳಿಕೊಂಡಿದ್ದ ಭಾಗ್ಯಾಗೆ, ಕನ್ನಿಕಾ ಬೆದರಿಸಿದ್ದಾಳೆ. ನೀನು ಕೆಲಸ ಬಿಟ್ಟು ಹೊರಹೋಗದಿದ್ದರೆ, ನಿನ್ನ ಜೊತೆಗಿರುವವರು ಎಲ್ಲರನ್ನೂ ಕೆಲಸದಿಂದ ತೆಗೆಯುತ್ತೇನೆ ಎಂದು ಹೆದರಿಸಿದ್ದಾಳೆ. ಅಲ್ಲಿಯವರೆಗೆ ಕೆಲಸ ಬಿಡುವುದಿಲ್ಲ ಎಂದಿದ್ದ ಭಾಗ್ಯ, ತಾನು ಮಾಡದೇ ಇರುವ ತಪ್ಪನ್ನು ಒಪ್ಪಿಕೊಂಡು ಹೊರಹೋಗಲು ಸಿದ್ಧಳಾಗುತ್ತಾಳೆ. ಕನ್ನಿಕಾ ಕೂಡ, ಯಾವುದೇ ಕಿರಿಕಿರಿ ಮಾಡದೇ, ಸುಮ್ಮನೇ ಕೆಲಸ ಬಿಟ್ಟು ಹೋಗು, ಇಲ್ಲವಾದರೆ ನಿನ್ನ ಸಹೋದ್ಯೋಗಿಗಳಿಗೂ ತೊಂದರೆ ಮಾಡುವುದಾಗಿ ಹೇಳುತ್ತಾಳೆ.

ಭಾಗ್ಯಾಳದ್ದೇ ತಪ್ಪು ಎಂದ ಕನ್ನಿಕಾ

ಹೋಟೆಲ್‌ನ ಹೊರಗಡೆ ಬಂದ ಕನ್ನಿಕಾ, ಮಾಧ್ಯಮದವರನ್ನು ಉದ್ದೇಶಿಸಿ, ನಾನು ಆಗಿರುವ ತಪ್ಪಿಗೆ ಕ್ಷಮೆ ಕೋರುತ್ತೇನೆ, ನಮ್ಮಿಂದ ತಪ್ಪಾಗಿದೆ, ಹೀಗಾಗಿ ಆಗಿರುವ ತಪ್ಪನ್ನು ಸರಿಪಡಿಸಲು ಅದಕ್ಕೆ ಕಾರಣರಾದವರನ್ನು ಕೆಲಸದಿಂದ ತೆಗೆಯುತ್ತಿದ್ದೇನೆ ಎಂದು ಹೇಳುತ್ತಾಳೆ. ಮತ್ತೆ ಇದಕ್ಕೆಲ್ಲಾ ಕಾರಣ ಭಾಗ್ಯಾ, ಅವಳನ್ನೇ ಕೇಳಿ ಎಂದು ಮಾಧ್ಯಮದವರಿಗೆ ಹೇಳುತ್ತಾಳೆ. ಅದರಂತೆ, ಮಾಧ್ಯಮದವರು ಭಾಗ್ಯಾಳ ಬಳಿ ಕಾರಣ ಕೇಳುತ್ತಾರೆ. ಭಾಗ್ಯಾಳ ತಪ್ಪಿಲ್ಲ ಎಂದಿದ್ದರೂ, ಆಕೆ ಕೆಲಸ ಬಿಡುತ್ತಿರುವುದು ಅವರಿಗೂ ಸರಿ ಕಾಣಿಸುವುದಿಲ್ಲ. ಆದರೂ, ಭಾಗ್ಯಾಳೇ ಒಪ್ಪಿಕೊಂಡು ಕೆಲಸ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಭಾಗ್ಯಾ ಮಾಧ್ಯಮದವರಲ್ಲಿ, ಇದು ನನ್ನದೇ ತಪ್ಪು, ಆಗಿರುವ ತಪ್ಪಿಗೆ ಕ್ಷಮೆ ಕೋರಿ, ಕೆಲಸಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳುತ್ತಾಳೆ. ಅವರ ಮುಂದೆಯೇ ರಾಜೀನಾಮೆ ಪತ್ರ ಬರೆದು, ಅದಕ್ಕೆ ಸಹಿ ಮಾಡಿ, ಕನ್ನಿಕಾಗೆ ನೀಡುತ್ತಾಳೆ. ಗೆಲುವು ಸಾಧಿಸಿದ ಖುಷಿಯಲ್ಲಿ ಕನ್ನಿಕಾ ಹೋಟೆಲ್ ಒಳಗೆ ಹೋಗುತ್ತಾಳೆ.

ಇದನ್ನೂ ಓದಿ: ಮನೆಗೆ ಮರಳಿದ ಲಕ್ಷ್ಮೀ; ಗೊಂಬೆಯಲ್ಲೂ ಕ್ಯಾಮೆರಾ ಕಂಡು ಹೆದರಿದ ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ

ಶ್ರೇಷ್ಠಾಗೆ ತಾಂಡವ್ ಪ್ರಶಂಸೆ

ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಶ್ರೇಷ್ಠಾ ತಾಂಡವ್‌ಗೆ ಮೊಬೈಲ್‌ನಲ್ಲಿ ತೋರಿಸುತ್ತಾಳೆ. ಭಾಗ್ಯಾ ಕೆಲಸ ಕಳೆದುಕೊಂಡ ವಿಚಾರ ಅವನಿಗೆ ನಂಬಲು ಸಾಧ್ಯವಾಗುವುದಿಲ್ಲ, ಆದರೂ ಶ್ರೇಷ್ಠಾ ತೋರಿಸಿದಾಗ, ತಾಂಡವ್‌ ಖುಷಿ ಪಡುತ್ತಾನೆ, ಜತೆಗೆ ಇದನ್ನೆಲ್ಲಾ ನಾನೇ ಮಾಡಿಸಿದೆ ಎಂದು ಶ್ರೇಷ್ಠಾ ಈ ಸಂಚಿನ ಹಿಂದೆ ತಾನು ಇರುವುದಾಗಿ ತಾಂಡವ್‌ಗೆ ಹೇಳುತ್ತಾಳೆ. ತಾಂಡವ್‌ ಮತ್ತೊಮ್ಮೆ ಶ್ರೇಷ್ಠಾಗೆ ಶಹಬಾಸ್ ಹೇಳಿ, ಇಬ್ಬರೂ ಈ ಸಂಗತಿಯನ್ನು ಸಂಭ್ರಮಿಸುತ್ತಾರೆ.

ಸೂರ್ಯವಂಶಿ ಕುಟುಂಬದಲ್ಲಿ ಕೋಲಾಹಲ

ಭಾಗ್ಯ ಕೆಲಸಕ್ಕೆ ರಿಸೈನ್ ಮಾಡಿದ ವಿಚಾರ ಮನೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ. ಅವರೆಲ್ಲಾ ಟಿವಿಯಲ್ಲಿ ಸುದ್ದಿ ನೋಡಿ ಅಘಾತಕ್ಕೆ ಒಳಗಾಗಿದ್ದಾರೆ. ಭಾಗ್ಯಾ ತಪ್ಪು ಮಾಡಿರಲು ಸಾಧ್ಯವೇ ಇಲ್ಲ ಎಂದು ಕುಸುಮಾ ಮತ್ತು ಧರ್ಮರಾಜ್ ವಾದಿಸುತ್ತಾರೆ. ಅಲ್ಲಿಗೆ ಫೆಬ್ರುವರಿ 2ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 704ನೇ ಸಂಚಿಕೆ ಮುಗಿಸಿದೆ. ಕೆಲಸ ಕಳೆದುಕೊಂಡ ಭಾಗ್ಯಾ ಮುಂದೇನು ಮಾಡುತ್ತಾಳೆ? ಭಾಗ್ಯಾಗೆ ಮುಂದೇನು ಸಂಕಟ ಕಾದಿದೆ? ಭಾಗ್ಯಾ ಕುಟುಂಬ ಈ ವಿಚಾರಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner