ಸ್ಥಾನ ಅದಲು ಬದಲು, ಶ್ರೇಷ್ಠಾ ಇನ್ಮುಂದೆ ಸೂರ್ಯವಂಶಿ ಮನೆ ಸೊಸೆ, ಭಾಗ್ಯಾ ಆ ಮನೆಯ ಅತಿಥಿ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 30ರ ಎಪಿಸೋಡ್‌ನಲ್ಲಿ ಶ್ರೇಷ್ಠಾ ಹಾಗೂ ತಾಂಡವ್‌ಗೆ ಯಾರೂ ಊಹಿಸಲಾಗದಂಥ ಸ್ವಾಗತ ದೊರೆಯುತ್ತದೆ. ಶ್ರೇಷ್ಠಾಳನ್ನು ಮತ್ತೆ ಮನೆಯಲ್ಲಿ ನೋಡಿ ಮಕ್ಕಳು ಕೂಡಾ ಕೋಪಗೊಳ್ಳುತ್ತಾರೆ. ಶ್ರೇಷ್ಠಾ ಇಲ್ಲಿ ಇರುವವರೆಗೂ ಅವಳು ಈ ಮನೆ ಸೊಸೆ, ಭಾಗ್ಯಾ ಈ ಮನೆಯ ಅತಿಥಿ ಎಂದು ಕುಸುಮಾ ಹೇಳುತ್ತಾಳೆ.
Bhagyalakshmi Serial: ತಾಂಡವ್ ಮತ್ತೆ ಶ್ರೇಷ್ಠಾಳನ್ನು ಮನೆಗೆ ಕರೆ ತರುತ್ತಾನೆ. ಎಷ್ಟು ಹೇಳಿದರೂ ತಾಂಡವ್ ಮಾತ್ರ ಬದಲಾಗುತ್ತಿಲ್ಲ ಎಂದು ಕುಸುಮಾ ಬೇಸರಗೊಳ್ಳುತ್ತಾಳೆ. ಭಾಗ್ಯಾ ಕೂಡಾ ಗಂಡನ ವರ್ತನೆಗೆ ಬೇಸತ್ತಿದ್ದಾಳೆ. ಮನೆಗೆ ಹೋದರೆ ಕುಸುಮಾ, ಭಾಗ್ಯಾ ಏನು ಮಾಡುತ್ತಾರೋ, ನನ್ನನ್ನು ಮತ್ತೆ ಮನೆಯಿಂದ ಹೊರ ಹಾಕಬಹುದು ಎಂಬ ಭಯದಿಂದಲೇ ಶ್ರೇಷ್ಠಾ, ಮನೆಗೆ ಬರುತ್ತಾಳೆ. ಆದರೆ ಅಲ್ಲಿ ನೋಡಿದರೆ ಯಾರೂ ಊಹಿಸಲಾಗದಂತೆ ಶ್ರೇಷ್ಠಾ ಹಾಗೂ ತಾಂಡವ್ ಇಬ್ಬರನ್ನೂ ಆರತಿ ಮಾಡಿ ಮನೆ ಒಳಗೆ ಬರಮಾಡಿಕೊಳ್ಳಲಾಗುತ್ತದೆ.
ನನ್ನನ್ನು ಅತ್ತೆ ಎಂದು ಕರೆಯುವಂತೆ ಶ್ರೇಷ್ಠಾಗೆ ಹೇಳಿದ ಕುಸುಮಾ
ಕುಸುಮಾ ಹಾಗೂ ಭಾಗ್ಯಾಳಲ್ಲಿ ಆಗಿರುವ ಬದಲಾವಣೆ ಕಂಡು ತಾಂಡವ್ ಹಾಗೂ ಶ್ರೇಷ್ಠಾಗೆ ಆಶ್ಚರ್ಯವಾಗುತ್ತದೆ, ಆದರೆ ಉಳಿದವರು ಬೇಸರಗೊಳ್ಳುತ್ತಾರೆ. ನೀವಿಬ್ಬರೂ ಏನು ಮಾಡಲು ಹೊರಟಿದ್ದೀರಿ ಎಂದು ಪ್ರಶ್ನಿಸುತ್ತಾರೆ. ನಾನು ಇಷ್ಟು ದಿನ ಸೊಸೆ ಅಂತ ಅವಳ ಪರವಾಗಿದ್ದೆ, ಈಗ ನನಗೆ ಎಲ್ಲವೂ ಅರ್ಥವಾಗುತ್ತಿದೆ. ನನಗೆ ಮೊದಲು ನನ್ನ ಮಗ, ನಂತರ ಸೊಸೆ, ಶ್ರೇಷ್ಠಾ ಹಾಗೂ ತಾಂಡವ್ ಇಬ್ಬರೂ ಪ್ರೀತಿ ಮಾಡುತ್ತಿದ್ದಾರೆ. ಅವನ ಆಯ್ಕೆಯೇ ನನ್ನ ಆಯ್ಕೆ, ಅವನ ಸಂತೋಷವೇ ನನ್ನ ಸಂತೋಷ ಎನ್ನುತ್ತಾಳೆ. ಥ್ಯಾಂಕ್ಸ್ ಆಂಟಿ, ನೀವು ಈ ರೀತಿ ನಮ್ಮನ್ನು ವೆಲ್‌ಕಮ್ ಮಾಡುತೀರಿ ಎಂದು ನಾನು ಊಹಿಸಿರಲಿಲ್ಲ ನನಗೆ ಬಹಳ ಖುಷಿಯಾಗುತ್ತಿದೆ ಎಂದು ಶ್ರೇಷ್ಠಾ ಖುಷಿಯಾಗುತ್ತಾಳೆ. ಏನು ನನ್ನನ್ನು ಆಂಟಿ ಎಂದು ಕರೆಯುತ್ತಿದ್ದೀಯ, ಇನ್ಮುಂದೆ ಅತ್ತೆ ಅಂತ ಕರೆಯಬೇಕು ಎಂದು ಕುಸುಮಾ ಹೇಳುತ್ತಾಳೆ.
ಶ್ರೇಷ್ಠಾ ಲಗ್ಗೇಜ್ ತರಲು ಕುಸುಮಾ , ಪೂಜಾ ಹಾಗೂ ಸುಂದ್ರಿಯನ್ನು ಕಳಿಸುತ್ತಾಳೆ. ಅವರಿಗೆ ಇಷ್ಟವಿಲ್ಲದಿದ್ದರೂ ಹೋಗಿ ತರುತ್ತಾರೆ. ಮಕ್ಕಳ ರೂಮ್‌ನಲ್ಲಿ ಶ್ರೇಷ್ಠಾಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡುತ್ತಾಳೆ. ಮನೆಗೆ ಬಂದಿರುವ ಅತಿಥಿಗಳಿಗೆ ಜ್ಯೂಸ್ ತಂದುಕೊಡು ಎಂದು ಕುಸುಮಾ, ಭಾಗ್ಯಾಗೆ ಹೇಳುತ್ತಾಳೆ. ಭಾಗ್ಯಾ ಅತ್ತೆ ಮಾತಿಗೆ ತಲೆ ಆಡಿಸಿ ಶ್ರೇಷ್ಠಾ, ತಾಂಡವ್ ಇಬ್ಬರಿಗೂ ಜ್ಯೂಸ್ ತಂದುಕೊಡುತ್ತಾಳೆ. ಭಾಗ್ಯಾ ಕೇವಲ ಜ್ಯೂಸ್ ಅಲ್ಲ, ನಿನ್ನ ಕೈ ರುಚಿ ನೋಡಲು ನಾನು ಕಾಯುತ್ತಿದ್ದೇನೆ. ನೀನು ತಾಂಡವ್ ಬಾಕ್ಸ್‌ಗೆ ಊಟ ಕೊಡುತ್ತಿದ್ದನ್ನು ನಾನು ಟೇಸ್ಟ್ ಮಾಡಿದ್ದೇನೆ ಎನ್ನುತ್ತಾಳೆ. ನೀನು ಊಟವನ್ನೂ ಬಿಟ್ಟಿಲ್ಲ, ಅದನ್ನೂ ಕಿತ್ತುಕೊಂಡು ತಿಂದಿದ್ದೀಯ ಎಂದು ಸುನಂದಾ ರೇಗುತ್ತಾಳೆ. ಆದರೆ ಕುಸುಮಾ ಮಧ್ಯೆ ಮಾತನಾಡಿ, ಅವಳು ನನ್ನ ಸೊಸೆ ಹಾಗೆಲ್ಲಾ ಮಾತನಾಡಬೇಡಿ ಎನ್ನುತ್ತಾಳೆ.
ಭಾಗ್ಯಾ, ಶ್ರೇಷ್ಠಾ ಸ್ಥಾನ ಅದಲು ಬದಲು
ಮಕ್ಕಳು ಸ್ಕೂಲ್‌ನಿಂದ ಬಂದು ತಮ್ಮ ರೂಮ್‌ನಲ್ಲಿ ಶ್ರೇಷ್ಠಾ ಇರುವುದನ್ನು ಕಂಡು ಕೋಪಗೊಳ್ಳುತ್ತಾರೆ. ನೀವು ಇಲ್ಲಿ ಏನು ಮಾಡುತ್ತಿದ್ದೀರಿ? ಇಲ್ಲಿಂದ ಹೋಗಿ ಎನ್ನುತ್ತಾರೆ. ಅಷ್ಟರಲ್ಲಿ ಭಾಗ್ಯಾ ಬಂದು ಮಕ್ಕಳನ್ನು ಸಮಾಧಾನ ಮಾಡುತ್ತಾಳೆ. ರಾತ್ರಿ ಎಲ್ಲರೂ ಒಟ್ಟಿಗೆ ಊಟಕ್ಕೆ ಕೂರುತ್ತಾರೆ. ಭಾಗ್ಯಾ ಅಡುಗೆ ಮಾಡಿ ಎಲ್ಲರಿಗೂ ಬಡಿಸುತ್ತಾಳೆ. ಶ್ರೇಷ್ಠಾಗೆ ಕೊಂಕು ಮಾತನಾಡುವ ಪೂಜಾಳಿಗೆ ಭಾಗ್ಯಾ ಸುಮ್ಮನಿರುವಂತೆ ಹೇಳುತ್ತಾಳೆ. ಶ್ರೇಷ್ಠಾಳನ್ನು ಯಾರೂ ಏನೂ ಅನ್ನಬಾರದು, ಇನ್ಮುಂದೆ ಶ್ರೇಷ್ಠಾ ಈ ಮನೆ ಸೊಸೆ, ಭಾಗ್ಯಾ ಈ ಮನೆಯ ಅತಿಥಿ ಎಂದು ಕುಸುಮಾ ಹೇಳುತ್ತಾಳೆ.
ಶ್ರೇಷ್ಠಾ ತನ್ನ ಸೊಸೆ ಅಂತ ಕುಸುಮಾ ನಿಜಕ್ಕೂ ಒಪ್ಪಿದ್ದಾಳಾ ಅಥವಾ ಭಾಗ್ಯಾ ಜೊತೆ ಸೇರಿ ನಾಟಕ ಮಾಡುತ್ತಿದ್ದಾಳಾ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ