ಹೋಟೆಲ್‌ನಲ್ಲಿ ವಿಐಪಿ ಅತಿಥಿಗೆ ಆರೋಗ್ಯ ಸಮಸ್ಯೆ; ಭಾಗ್ಯಾಳನ್ನು ಕೆಲಸದಿಂದ ತೆಗೆಯುವ ಕನ್ನಿಕಾ ಪ್ಲ್ಯಾನ್ ಸಕ್ಸಸ್: ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಹೋಟೆಲ್‌ನಲ್ಲಿ ವಿಐಪಿ ಅತಿಥಿಗೆ ಆರೋಗ್ಯ ಸಮಸ್ಯೆ; ಭಾಗ್ಯಾಳನ್ನು ಕೆಲಸದಿಂದ ತೆಗೆಯುವ ಕನ್ನಿಕಾ ಪ್ಲ್ಯಾನ್ ಸಕ್ಸಸ್: ಭಾಗ್ಯಲಕ್ಷ್ಮೀ ಧಾರಾವಾಹಿ

ಹೋಟೆಲ್‌ನಲ್ಲಿ ವಿಐಪಿ ಅತಿಥಿಗೆ ಆರೋಗ್ಯ ಸಮಸ್ಯೆ; ಭಾಗ್ಯಾಳನ್ನು ಕೆಲಸದಿಂದ ತೆಗೆಯುವ ಕನ್ನಿಕಾ ಪ್ಲ್ಯಾನ್ ಸಕ್ಸಸ್: ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಾಳನ್ನು ಹೇಗಾದರೂ ಮಾಡಿ ಕೆಲಸದಿಂದ ತೆಗೆಯಬೇಕು ಎಂದುಕೊಂಡಿದ್ದ ಶ್ರೇಷ್ಠಾ ಮತ್ತು ಕನ್ನಿಕಾ ತಮ್ಮ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅದಕ್ಕಾಗಿ ಹೋಟೆಲ್‌ಗೆ ಬಂದಿದ್ದ ವಿಐಪಿ ಅತಿಥಿಗೆ ಭಾಗ್ಯಾ ಕೊಟ್ಟ ಆಹಾರದಲ್ಲಿ ಸಮಸ್ಯೆಯಾಗಿದೆ ಎಂದು ಗಲಾಟೆ ಎಬ್ಬಿಸಿದ್ದಾರೆ. ಇದರಿಂದ ಭಾಗ್ಯಾ ಕೆಲಸಕ್ಕೆ ಕುತ್ತು ಬಂದಿದೆ.

ಭಾಗ್ಯಾಳನ್ನು ಕೆಲಸದಿಂದ ತೆಗೆಯುವ ಸಂಚು
ಭಾಗ್ಯಾಳನ್ನು ಕೆಲಸದಿಂದ ತೆಗೆಯುವ ಸಂಚು (Colours Kannada Facebook)

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ (ಜನವರಿ 30)ದ ಸಂಚಿಕೆಯಲ್ಲಿ ಹಲವು ಸಂಗತಿಗಳು ಜರುಗಿದ್ದು, ಭಾಗ್ಯಾ ಕೆಲಸಕ್ಕೇ ಕುತ್ತು ಬಂದಿದೆ. ಒಂದೆಡೆ ಭಾಗ್ಯಾ ಮನೆಯಲ್ಲಿ ಹೊಸ ಕಾರು ಬಂದ ಸಂಭ್ರಮ ನಡೆಯುತ್ತಿದೆ. ಮತ್ತೊಂದೆಡೆ ಅವಳನ್ನು ಕೆಲಸದಿಂದ ಕಿತ್ತು ಹಾಕಲು ಪ್ಲ್ಯಾನ್ ರೂಪಿಸಲಾಗಿದೆ. ಇತ್ತ ತಾಂಡವ್ ಮೇಲೆ ಶ್ರೇಷ್ಠಾಳ ನಿರ್ಲಕ್ಷ್ಯ ಮುಂದುವರಿದಿದೆ. ಭಾಗ್ಯಾ ಹಿಂದಿನ ದಿನವಷ್ಟೇ ಹೊಸ ಕಾರು ಖರೀದಿಸಿ, ಅದನ್ನು ತನ್ನ ಸಹೋದ್ಯೋಗಿಗಳ ಜತೆ ಸಂಭ್ರಮಿಸಿದ್ದಳು. ಆದರೆ ಆ ಸಂಭ್ರಮ ಹೆಚ್ಚು ಸಮಯ ಉಳಿಯುವ ಹಾಗೆ ಕಾಣಿಸುತ್ತಿಲ್ಲ. ಯಾಕೆಂದರೆ ಕನ್ನಿಕಾ ಕುತಂತ್ರ ಕೆಲಸ ಮಾಡುತ್ತಿದೆ.

ಶ್ರೇಷ್ಠಾ ಮನೆಯಲ್ಲಿ ಆಕೆಯ ಗೆಳೆಯ ಕೊಟ್ಟಿರುವ ಹೂವಿನ ಬೊಕೆಯ ಬಗ್ಗೆಯೇ ಮಾತನಾಡುತ್ತಿರುತ್ತಾಳೆ. ಜತೆಗೆ ಫೋನ್‌ನಲ್ಲೂ ಅವನ ಜತೆಯೇ ಮಾತನಾಡುತ್ತಿರುವುದು ತಾಂಡವ್‌ಗೆ ಕೋಪ ತರಿಸುತ್ತದೆ. ಬೆಳಗೆದ್ದು ಒಂದು ಲೋಟ ಕಾಫಿ ಕೇಳಿದರೂ ಅದನ್ನು ಕೊಡದೆ ಶ್ರೇಷ್ಠಾ ಜಾಗಿಂಗ್‌ಗೆ ಹೋಗುತ್ತಾಳೆ. ಹಿಂದಿನ ದಿನವೂ ಊಟ ಆರ್ಡರ್ ಮಾಡಿದ್ದಾಳೆ. ಇದನ್ನು ಕಂಡು ತಾಂಡವ್‌ಗೆ ರೋಸಿ ಹೋಗಿದೆ, ದಿನವೂ ಹೊರಗಿನ ಊಟವೇ ತಿನ್ನಬೇಕಾ? ಮನೆಯಲ್ಲಿ ಅಡುಗೆ ಮಾಡಲು ಆಗುವುದಿಲ್ಲವೇ ಎಂದು ಕೇಳುತ್ತಾನೆ.

ಮತ್ತೊಂದೆಡೆ ಭಾಗ್ಯಾ ಮನೆಗೆ ಬಂದ ನೆರೆಮನೆಯ ಗೆಳತಿಯ ಜತೆ ಕುಸುಮಾ, ಸೊಸೆಯನ್ನು ಹೊಗಳುತ್ತಾ ಇರುತ್ತಾರೆ. ಆಗ ಭಾಗ್ಯಾ, ಹಾಗೇನೂ ಇಲ್ಲ, ಇಂತಹ ಅತ್ತೆ ಮಾವನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ ಎಂದು ಹೇಳುತ್ತಾಳೆ. ಅಲ್ಲದೆ, ಕಾರು ಕೊಂಡಿರುವ ಬಗ್ಗೆ ಗೆಳತಿಯಲ್ಲಿ ಹೇಳುತ್ತಿದ್ದ ಮಗಳಿಗೆ ಗದರುತ್ತಾಳೆ. ಅದೇ ಸಂದರ್ಭದಲ್ಲಿ ಹೋಟೆಲ್ ಮ್ಯಾನೇಜರ್ ಭಾಗ್ಯಾಗೆ ಫೋನ್ ಮಾಡುತ್ತಾರೆ. ನಾಳೆ ಬೆಳಗ್ಗೆ ಸ್ವಲ್ಪ ಬೇಗನೆ ಕೆಲಸಕ್ಕೆ ಬನ್ನಿ ಎನ್ನುವಾಗ, ಸರಿ ಆಯ್ತು ಎಂದು ಭಾಗ್ಯಾ ಒಪ್ಪಿಕೊಳ್ಳುತ್ತಾಳೆ.

ಕನ್ನಿಕಾ ಕುತಂತ್ರ

ಮ್ಯಾನೇಜರ್‌ನನ್ನು ಕರೆಸಿಕೊಂಡ ಕನ್ನಿಕಾ, ಆತನನ್ನು ಬೆದರಿಸಿ, ಎಲ್ಲವೂ ನಾನು ಅಂದುಕೊಂಡಂತೆ ನಡೆಯಬೇಕು. ಎಲ್ಲಿಯೂ ತಪ್ಪಾಗಬಾರದು. ಭಾಗ್ಯಾಳೇ ಅಡುಗೆಯ ಉಸ್ತುವಾರಿ ವಹಿಸಿಕೊಳ್ಳಬೇಕು, ಅತಿಥಿಗಳಿಗೆ ವಿಶೇಷ ಅಡುಗೆ ಮಾಡಿಕೊಡಬೇಕು ಎಂದು ಸೂಚಿಸುತ್ತಾಳೆ. ತಪ್ಪಿದಲ್ಲಿ ನಿನ್ನ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸುತ್ತಾಳೆ.

ಹೋಟೆಲ್‌ನಲ್ಲಿ ಗಲಾಟೆ

ಮರುದಿನ ಬೆಳಗ್ಗೆ ಮ್ಯಾನೇಜರ್ ಸೂಚನೆಯಂತೆ ಭಾಗ್ಯಾ ಬೇಗನೆ ಕೆಲಸಕ್ಕೆ ಹೋಟೆಲ್‌ಗೆ ಬಂದಾಗ, ಮುಂಭಾಗದಲ್ಲಿ ಗಲಾಟೆ ನಡೆಯುತ್ತಿರುತ್ತದೆ. ವಿಚಾರಿಸಿದಾಗ, ವಿಐಪಿ ಅತಿಥಿಗೆ ಕೊಟ್ಟ ಆಹಾರದಲ್ಲಿ ವ್ಯತ್ಯಾಸವಾಗಿ, ಹುಷಾರು ತಪ್ಪಿರುವುದು ಗೊತ್ತಾಗುತ್ತದೆ. ಅದಕ್ಕಾಗಿ ಅವರ ಕಡೆಯವರು ಗಲಾಟೆ ಮಾಡುತ್ತಿರುತ್ತಾರೆ. ಜತೆಗೆ ಮಾಧ್ಯಮದವರು ಕೂಡ ಬಂದು ಮ್ಯಾನೇಜರ್‌ನನ್ನು ಪ್ರಶ್ನಿಸುತ್ತಾರೆ. ಆಗ ಮ್ಯಾನೇಜರ್ ಇದಕ್ಕೆ ಭಾಗ್ಯ ಕಾರಣ ಎಂದು ಅವಳತ್ತ ಕೈತೋರಿಸುತ್ತಾರೆ. ಆಗ ಭಾಗ್ಯ ಅವರ ಪ್ರಶ್ನೆಗೆ ಉತ್ತರಿಸಲು ಪರದಾಡುತ್ತಾಳೆ. ಅಷ್ಟರಲ್ಲಿ ಹೋಟೆಲ್ ಓನರ್ ಬರುತ್ತಿದ್ದಾರೆ ಎಂದು ಮ್ಯಾನೇಜರ್ ಹೇಳುತ್ತಾನೆ. ಸ್ವಲ್ಪ ಸಮಯದಲ್ಲೇ ಕನ್ನಿಕಾ ಕಾರಿನಲ್ಲಿ ಹೋಟೆಲ್‌ಗೆ ಬರುತ್ತಾಳೆ. ಕನ್ನಿಕಾಳನ್ನು ಕಂಡು ಭಾಗ್ಯಾಗೆ ಭಯ ಉಂಟಾಗುತ್ತದೆ.

ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 701ನೇ ಸಂಚಿಕೆ ಮುಗಿಸಿದೆ. ಕನ್ನಿಕಾ ಕುತಂತ್ರಿದಿಂದಾಗಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ಭಾಗ್ಯಾಗೆ ಮುಂದೇನು ಸಂಕಟ ಕಾದಿದೆ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner