ಭಾಗ್ಯಾಗೆ ತಾಳಿ ಕಟ್ಟಲು ನಿರಾಕರಿಸಿದ ತಾಂಡವ್, ಮಕ್ಕಳಿಗೂ ಗೊತ್ತಾಯ್ತು ತಂದೆಯ ಮತ್ತೊಂದು ಮುಖ; ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 30ರ ಎಪಿಸೋಡ್‌ನಲ್ಲಿ ಮದುವೆ ವಾರ್ಷಿಕೋತ್ಸವದಲ್ಲಿ ತಾಂಡವ್, ಭಾಗ್ಯಾಗೆ ಮತ್ತೊಮ್ಮೆ ತಾಳಿ ಕಟ್ಟಲು ನಿರಾಕರಿಸುತ್ತಾನೆ. ಭಾಗ್ಯಾ ಎಲ್ಲರ ಮುಂದೆ ತಾಂಡವ್-ಶ್ರೇಷ್ಠಾ ಹೋಟೆಲ್‌ನಲ್ಲಿ ಇದ್ದಿದ್ದನ್ನು ತಿಳಿಸುತ್ತಾಳೆ. ಮಕ್ಕಳಿಗೂ ಈಗ ಅಪ್ಪನ ಅಸಲಿ ಮುಖ ಗೊತ್ತಾಗಿದೆ.
Bhagyalakshmi Kannada Serial: ಎಲ್ಲರೆದುರು ಶ್ರೇಷ್ಠಾ-ತಾಂಡವ್ ಸಂಬಂಧ ಬಯಲು ಮಾಡಲು ಭಾಗ್ಯಾ ವಿವಾಹ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಮಾಡಲು ಪ್ಲ್ಯಾನ್ ಮಾಡುತ್ತಾಳೆ. ಭಾಗ್ಯಾ ವಿಚಿತ್ರ ವರ್ತನೆ ಕಂಡು ಎಲ್ಲರೂ ಗಾಬರಿ ಆಗುತ್ತಾರೆ. ಅವಳಿಗೆ ಎಲ್ಲಾ ವಿಚಾರ ಗೊತ್ತಾಗಿರಬಹುದಾ ಎಂಬ ಆತಂಕ ಕುಸುಮಾಗೆ ಕಾಡುತ್ತಿದೆ.
ನೀನು ನನಗೆ ಇಷ್ಟವಿಲ್ಲ, ತಾಳಿ ಕಟ್ಟುವುದಿಲ್ಲ ಎಂದ ತಾಂಡವ್
ವಿವಾಹ ವಾರ್ಷಿಕೋತ್ಸವದಲ್ಲಿ ಭಾಗ್ಯಾ ಮದುವೆ ಮಂಟಪ ರೆಡಿ ಮಾಡಿಸುತ್ತಾಳೆ. ಭಾಗ್ಯಾಗೆ ಹಾರ ಹಾಕುವುದು, ಮತ್ತೊಮ್ಮೆ ತಾಳಿ ಕಟ್ಟುವುದು ಮಾಡಿದರೆ ನಾನಂತೂ ಸುಮ್ಮನಿರುವುದಿಲ್ಲ ಎಂದು ಶ್ರೇಷ್ಠಾ ವಾರ್ನಿಂಗ್ ಮಾಡುತ್ತಾಳೆ. ಅರ್ಚಕರು ಮದುವೆ ಶಾಸ್ತ್ರಗಳನ್ನು ಶುರು ಮಾಡುತ್ತಾರೆ. ಭಾಗ್ಯಾಗೆ ಹೂವಿನ ಹಾರ ಹಾಕಿ ಅರಿಶಿನ ಕುಂಕುಮ ಇಡುವಂತೆ ಸೂಚಿಸುತ್ತಾರೆ. ತಾಂಡವ್, ಶ್ರೇಷ್ಠಾಗೆ ಹೆದರಿ ನಡುಗುತ್ತಲೇ ಭಾಗ್ಯಾಗೆ ಹಾರ ಹಾಕಿ, ಅರಿಶಿನ, ಕುಂಕುಮ ಇಡುತ್ತಾನೆ. ಪುರೋಹಿತರು ತಾಳಿಯನ್ನು ಎಲ್ಲರಿಗೂ ಮುಟ್ಟಿಸುವಂತೆ ತನ್ವಿಗೆ ಹೇಳುತ್ತಾರೆ. ಶ್ರೇಷ್ಠಾ ಇಷ್ಟವಿಲ್ಲದಿದ್ದರೂ ತಾಳಿಯನ್ನು ಮುಟ್ಟಿ ನಮಸ್ಕಾರ ಮಾಡಿಕೊಳ್ಳುತ್ತಾಳೆ. ಭಾಗ್ಯಾಗೆ ತಾಳಿ ಕಟ್ಟುವಂತೆ ಪುರೋಹಿತರು ತಾಂಡವ್‌ಗೆ ಸೂಚಿಸುತ್ತಾರೆ.
ಕೊರಳಿನವರೆಗೂ ತಾಳಿಯನ್ನು ಹಿಡಿಯುವ ತಾಂಡವ್ ನಂತರ ಅದನ್ನು ಕೆಳಗೆ ಎಸೆದು ಸಾಕು ಸುಮ್ಮನಿರು ಏನು ಸ್ಪೆಷಲ್ ದಿನ ಎನ್ನುತ್ತಲೇ ಇದ್ದೀಯ? ನನಗೆ ನೀನು ಎಂದರೆ ಇಷ್ಟವಿಲ್ಲ, ಆದ್ದರಿಂದ ನಿನಗೆ ನಾನು ತಾಳಿ ಕಟ್ಟುವುದಿಲ್ಲ ಎನ್ನುತ್ತಾನೆ. ತಾಂಡವ್ ವರ್ತನೆ ನೋಡಿ ಕುಸುಮಾ ಗಾಬರಿಯಾಗುತ್ತಾಳೆ. ಭಾಗ್ಯಾಗೆ ನೋವು ಮಾಡದಂತೆ ಎಚ್ಚರಿಸುತ್ತಾಳೆ. ಏನೋ ಹೇಳಲು ಪ್ರಯತ್ನಿಸಿಸುತ್ತಿದ್ದೀರಿ ಹೇಳಿ, ಏಕೆ ಅರ್ಧಕ್ಕೆ ನಿಲ್ಲಿಸುತ್ತಿದ್ದೀರಿ ಎನ್ನುತ್ತಾಳೆ. ಆದರೆ ತಾಂಡವ್ ಏನೂ ಮಾತನಾಡದೆ ಸುಮ್ಮನಾಗುತ್ತಾನೆ. ಹೋಟೆಲ್‌ನಲ್ಲಿ ಶ್ರೇಷ್ಠಾಗೆ ತಾಳಿ ಕಟ್ಟಲು ನಿಮಗೆ ಧೈರ್ಯ ಇದೆ. ಅದರೆ ಎಲ್ಲರ ಮುಂದೆ ನಿಮ್ಮ ಹೆಂಡತಿಗೆ ತಾಳಿ ಕಟ್ಟಲು ನಿಮಗೆ ಧೈರ್ಯ ಸಾಕಾಗುತ್ತಿಲ್ಲವೇ ಎಂದು ಪ್ರಶ್ನಿಸುತ್ತಾಳೆ. ಭಾಗ್ಯಾ ಮಾತು ಕೇಳಿ ತಾಂಡವ್ ಶಾಕ್ ಆಗುತ್ತಾನೆ.
ಅಳಿಯನಿಗೆ ಕಪಾಳಮೋಕ್ಷ ಮಾಡಿದ ಸುನಂದಾ
ಏನು ಹೇಳುತ್ತೀಯ ಭಾಗ್ಯಾ ಎಂದು ಕುಸುಮಾ ಭಾಗ್ಯಾಳನ್ನು ಕೇಳುತ್ತಾಳೆ. ಇವರಿಬ್ಬರಿಗೂ ನನ್ನ ಪಾಲಿಗೆ ಬಂದಿದ್ದನ್ನೆಲ್ಲಾ ಕಸಿದುಕೊಳ್ಳುವ ಅಭ್ಯಾಸ ನನಗೆ ಲಕ್ಕಿ ಡಿಪ್‌ನಲ್ಲಿ ಬಂದಿದ್ದ ಕೂಪನ್ ತೆಗೆದುಕೊಂಡು ಇವರಿಬ್ಬರೂ ಹೋಟೆಲ್‌ಗೆ ಹೋಗಿದ್ದಾರೆ, ತಾವಿಬ್ಬರೂ ಗಂಡ ಹೆಂಡತಿ ಎಂದು ಸುಳ್ಳು ಹೇಳಿದ್ದಾರೆ ಎಂದು ಭಾಗ್ಯಾ ನಡೆದ ವಿಚಾರವನ್ನು ಕುಸುಮಾಗೆ ಹೇಳುತ್ತಾಳೆ. ಇದರಿಂದ ಸಿಟ್ಟಾದ ಸುನಂದಾ, ಅಳಿಯನಿಗೆ ಕಪಾಳಮೋಕ್ಷ ಮಾಡುತ್ತಾಳೆ.
ಈ ರೀತಿ ಏಕೆ ಮಾಡಿದೆ ತಾಂಡವ್ ಎಂದು ಕುಸುಮಾ ಮಗನನ್ನು ಪ್ರಶ್ನಿಸುತ್ತಾಳೆ. ಇವಳು ಸುಳ್ಳು ಹೇಳುತ್ತಿದ್ದಾಳೆ. ಹೋಟೆಲ್‌ನಲ್ಲಿ ನನ್ನ ಬಗ್ಗೆ ತಪ್ಪು ತಿಳಿದಿದ್ದಾರೆ ಎಂದು ತಾಂಡವ್ ಹೇಳುತ್ತಾನೆ. ಯಾರು ತಪ್ಪು ತಿಳಿದದ್ದು? ನೀವು ಶ್ರೇಷ್ಠಾಗೆ ಐ ಲವ್ ಯೂ ಹೇಳಿದ್ದು, ನಾನು ಅದನ್ನೆಲ್ಲಾ ನೋಡಿದ್ದೇ ಸುಳ್ಳಾ ಎಂದು ಕೇಳುತ್ತಾಳೆ. ಈ ವಿಷಯ ಗೊತ್ತಿದ್ದರೂ ತನ್ನಿಂದ ಎಲ್ಲವನ್ನೂ ಮುಚ್ಚಿಟ್ಟಿದ್ದಕ್ಕೆ ಪೂಜಾ, ಕುಸುಮಾ ಬಗ್ಗೆ ಭಾಗ್ಯಾ ಬೇಸರ ವ್ಯಕ್ತಪಡಿಸುತ್ತಾಳೆ. ಆದರೆ ಮಕ್ಕಳಿಗೆ ಅಪ್ಪನ ನಿಜ ಮುಖ ತಿಳಿದು ದುಃಖವಾಗುತ್ತದೆ. ನಾವೇ ಎಲ್ಲವನ್ನೂ ಹೇಳಬೇಕು ಎಂದುಕೊಂಡೆವು, ಹೇಗೋ ಭಾಗ್ಯಾಗೆ ವಿಚಾರ ತಿಳಿಯಿತಲ್ಲಾ ಎಂದು ಶ್ರೇಷ್ಠಾ, ತಾಂಡವ್ ಖುಷಿಯಾಗುತ್ತಾರೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ