ಯಾವುದೇ ಕಾರಣಕ್ಕೂ ಕೆಲಸ ಬಿಟ್ಟು ಹೋಗಲ್ಲ ಎಂದ ಭಾಗ್ಯ; ಕನ್ನಿಕಾ ಕಾಮತ್‌ಗೆ ಮುಖಭಂಗ: ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಯಾವುದೇ ಕಾರಣಕ್ಕೂ ಕೆಲಸ ಬಿಟ್ಟು ಹೋಗಲ್ಲ ಎಂದ ಭಾಗ್ಯ; ಕನ್ನಿಕಾ ಕಾಮತ್‌ಗೆ ಮುಖಭಂಗ: ಭಾಗ್ಯಲಕ್ಷ್ಮೀ ಧಾರಾವಾಹಿ

ಯಾವುದೇ ಕಾರಣಕ್ಕೂ ಕೆಲಸ ಬಿಟ್ಟು ಹೋಗಲ್ಲ ಎಂದ ಭಾಗ್ಯ; ಕನ್ನಿಕಾ ಕಾಮತ್‌ಗೆ ಮುಖಭಂಗ: ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಾಳನ್ನು ಹೋಟೆಲ್‌ನ ಮುಖ್ಯ ಶೆಫ್ ಕೆಲಸದಿಂದ ತೆಗೆದುಹಾಕಬೇಕು ಎಂದು ಪ್ರಯತ್ನಿಸುವ ಕನ್ನಿಕಾ, ತನ್ನ ಪ್ಲ್ಯಾನ್ ಪ್ರಕಾರ ಯೋಜನೆ ರೂಪಿಸಿದ್ದಾಳೆ. ಆದರೆ ಭಾಗ್ಯಾ ಮಾತ್ರ ತಾನು ಮಾಡಿರದ ತಪ್ಪನ್ನು ಒಪ್ಪಿಕೊಳ್ಳಲ್ಲ ಎಂದು ದೃಢವಾಗಿ ಉತ್ತರಿಸುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಜನವರಿ 31ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಜನವರಿ 31ರ ಸಂಚಿಕೆ (pixabay)

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರದ (ಜನವರಿ 31ರ) ಸಂಚಿಕೆಯಲ್ಲಿ ಭಾಗ್ಯಾಳನ್ನು ಕೆಲಸದಿಂದ ತೆಗೆದುಹಾಕಲು ಶತಾಯಗತಾಯ ಯತ್ನಿಸುತ್ತಿರುವ ಕನ್ನಿಕಾಳ ಕುತಂತ್ರದ ಪ್ರಸಂಗ ನಡೆಯಿತು. ಹೋಟೆಲ್‌ಗೆ ಬಂದಿರುವ ವಿಐಪಿ ಅತಿಥಿಗೆ ಆರೋಗ್ಯ ಸಮಸ್ಯೆಯಾಗಿದೆ ಎಂದು ಹೋಟೆಲ್ ಎದುರು ಹಲವರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಧ್ಯಮದವರು ಕೂಡ ಬಂದು ಹೋಟೆಲ್‌ನವರನ್ನು ಪ್ರಶ್ನಿಸುತ್ತಿದ್ದಾರೆ. ಹೋಟೆಲ್ ಮ್ಯಾನೇಜರ್ ಭಾಗ್ಯಾಳನ್ನು ಕರೆದು, ನೀವೇ ಉತ್ತರಿಸಿ ಎಂದು ಹೇಳುತ್ತಾರೆ. ಆಗ ಭಾಗ್ಯ ಉತ್ತರಿಸಲು ತಡಕಾಡುತ್ತಾಳೆ. ಅದೇ ಸಂದರ್ಭದಲ್ಲಿ ಹೋಟೆಲ್ ಮಾಲೀಕರ ತಂಗಿ ಕನ್ನಿಕಾ ಕಾಮತ್ ಕಾರಿನಲ್ಲಿ ಅಲ್ಲಿಗೆ ಬರುತ್ತಾಳೆ. ಅದನ್ನು ಕಂಡು ಭಾಗ್ಯಾ, ಅಯ್ಯೋ ಇವಳು ಮತ್ತೆ ಇಲ್ಲಿಗೆ ಬಂದಳಾ ಎಂದು ಯೋಚಿಸುತ್ತಾಳೆ.

ನಮಗೇ ಯಾಕೆ ತೊಂದರೆ ಕೊಡುತ್ತಿಯಾ ಎಂದ ಕನ್ನಿಕಾ

ಪ್ರತಿ ಬಾರಿಯೂ ನಮ್ಮ ಕಡೆಗೇ ಬಂದು ತೊಂದರೆ ಮಾಡುತ್ತಿದ್ದೀಯಾ ಅಲ್ಲವೇ? ಯಾಕೆ, ನಮ್ಮ ಮೇಲೆ ಅಷ್ಟೊಂದು ದ್ವೇಷವೇ ಎಂದು ಕನ್ನಿಕಾ ಭಾಗ್ಯಾಳನ್ನು ಕೇಳುತ್ತಾಳೆ. ಮತ್ತೊಂದೆಡೆ ಭಾಗ್ಯಾ, ಸಮಜಾಯಿಷಿ ನೀಡಲು ಯತ್ನಿಸಿದರೂ, ಅದಕ್ಕೆ ಕನ್ನಿಕಾ ಅವಕಾಶ ಕೊಡುವುದಿಲ್ಲ. ಜತೆಗೆ ನೀನು ಮಾಡಿರುವ ತಪ್ಪಿಗೆ ತಕ್ಕ ಶಿಕ್ಷೆಯಾಗಬೇಕು, ಆಗಿರುವ ತೊಂದರೆಯನ್ನು ನಾನೇ ಸರಿಪಡಿಸುತ್ತೇನೆ ಎಂದು ಹೇಳಿ, ಎಲ್ಲರನ್ನೂ ಮೀಟಿಂಗ್‌ ರೂಮ್‌ಗೆ ಕರೆದೊಯ್ಯುತ್ತಾಳೆ.

ಕೆಲಸ ಬಿಟ್ಟು ಹೋಗು ಎಂದು ಭಾಗ್ಯಾಗೆ ಹೇಳಿದ ಕನ್ನಿಕಾ

ನೀನು ಈಗಾಗಲೇ ಸಾಕಷ್ಟು ತೊಂದರೆ ಮಾಡಿದ್ದಿ, ನಿನ್ನಿಂದಾಗಿ ನಮ್ಮ ಕುಟುಂಬದ ಹೋಟೆಲ್ ಬ್ಯುಸಿನೆಸ್‌ಗೆ ನಷ್ಟವಾಗಿದೆ. ಹೆಸರು ಕೂಡ ಹಾಳಾಗಿದೆ, ಹೀಗಾಗಿ ಇದಕ್ಕೆಲ್ಲಾ ನೀನೇ ಕಾರಣ. ಕೂಡಲೇ ಕೆಲಸ ಬಿಟ್ಟು ಹೋಗು ಎಂದು ಗದರಿಸುತ್ತಾಳೆ. ಆಗ ಭಾಗ್ಯಾ ತಾನೇನು ತಪ್ಪು ಮಾಡಿಲ್ಲ ಎಂದ ಮೇಲೆ ನಾನೇಕೆ ಕೆಲಸ ಬಿಟ್ಟು ಹೋಗಲಿ ಎಂದು ಕೇಳುತ್ತಾಳೆ.

ತನಿಖೆಯಾಗದೇ ಕೆಲಸ ಬಿಟ್ಟು ಹೋಗಲ್ಲ ಎಂದ ಭಾಗ್ಯ

ನಾವು ಮಾಡಿರುವ ಅಡುಗೆ ಸರಿಯಾಗಿಯೇ ಇತ್ತು, ಅದನ್ನು ನಾವೆಲ್ಲರೂ ತಿಂದಿದ್ದೇವೆ, ನಮಗೇನೂ ಸಮಸ್ಯೆಯಾಗಿಲ್ಲ. ಅಲ್ಲದೆ, ವಿಐಪಿ ಅತಿಥಿ ಮತ್ತೆ ಮತ್ತೆ ಕೇಳಿಕೊಂಡು ನಮ್ಮ ಅಡುಗೆಯ ರುಚಿ ಸವಿದಿದ್ದಾರೆ ಎಂದು ಭಾಗ್ಯ ಹೇಳುತ್ತಾಳೆ. ಇಲ್ಲಿ ನಮ್ಮ ಕಡೆಯಿಂದ ತಪ್ಪಾಗಿಲ್ಲ, ಬೇರೇನೋ ತೊಂದರೆಯಾಗಿದೆ. ಅದಕ್ಕಾಗಿ ಸೂಕ್ತ ತನಿಖೆಯಾಗಲಿ, ಅದರ ಹೊರತು ಯಾವುದೇ ಕಾರಣಕ್ಕೂ ಕೆಲಸ ಬಿಟ್ಟು ಹೋಗಲ್ಲ ಎಂದು ಭಾಗ್ಯಾ ಖಡಕ್ ಆಗಿ ಕನ್ನಿಕಾಗೆ ಉತ್ತರಿಸುತ್ತಾಳೆ. ಆಗ ಕನ್ನಿಕಾಗೆ ತನ್ನ ಪ್ಲ್ಯಾನ್ ಈಗ ತನಗೇ ಉಲ್ಟಾ ಹೊಡೆಯಬಹುದು ಎಂದು ಅನ್ನಿಸಿ, ಬೇರೇನಾದರೂ ಮಾಡಿ ಅವಳನ್ನು ಕಳುಹಿಸಬೇಕು ಎಂದುಕೊಳ್ಳುತ್ತಾಳೆ.

ಇದನ್ನೂ ಓದಿ: ಸಂತೋಷ್ ತಂದೆಯೇ ಶ್ರೀನಿವಾಸ್ ಎಂದು ಅರಿತ ಮೇಸ್ತ್ರಿ; ಸಿದ್ದೇಗೌಡ್ರನ್ನ ಮಾತಲ್ಲೇ ಮಣಿಸಿದ ಜವರೇಗೌಡ್ರು: ಲಕ್ಷ್ಮೀ ನಿವಾಸ ಧಾರಾವಾಹಿ

ಬೆಸ್ಟ್‌ಫ್ರೆಂಡ್ ಜತೆ ಸುತ್ತಾಡಿದ ಶ್ರೇಷ್ಠಾ

ಮತ್ತೊಂದೆಡೆ ಮನೆಯಲ್ಲಿ ತಾಂಡವ್‌ನನ್ನು ಬಿಟ್ಟು ಬಂದಿರುವ ಶ್ರೇಷ್ಠಾ, ಪಾರ್ಕ್‌ನಲ್ಲಿ ತನ್ನ ಬೆಸ್ಟ್‌ಫ್ರೆಂಡ್‌ ಕೈಕೈ ಹಿಡಿದುಕೊಂಡು ಸುತ್ತಾಡುತ್ತಿರುತ್ತಾಳೆ. ಅದೇ ಸಮಯಕ್ಕೆ ತಾಂಡವ್ ಅಲ್ಲಿಗೆ ಬರುತ್ತಾನೆ. ಇಬ್ಬರೂ ಜತೆಯಾಗಿ ಇರುವುದನ್ನು ಕಂಡು ಆತನಿಗೆ ಕೋಪ ಬರುತ್ತದೆ. ಅಲ್ಲದೆ, ಶ್ರೇಷ್ಠಾಳ ಫ್ರೆಂಡ್ ತಾಂಡವ್‌ಗೆ ಕೀಟಲೆ ಮಾಡುತ್ತಾನೆ. ಇದರಿಂದ ತಾಂಡವ್ ಮತ್ತಷ್ಟು ಕೋಪಗೊಳ್ಳುತ್ತಾನೆ.

ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 702ನೇ ಸಂಚಿಕೆ ಮುಗಿಸಿದೆ. ಕನ್ನಿಕಾ ಮತ್ತೆ ಯಾವ ರೀತಿಯಲ್ಲಿ ಭಾಗ್ಯಾಳನ್ನು ಕೆಲಸದಿಂದ ತೆಗೆಯಲು ಸಂಚು ಮಾಡುತ್ತಾಳೆ? ಭಾಗ್ಯಾಗೆ ಮುಂದೇನು ಸಂಕಟ ಕಾದಿದೆ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಇದನ್ನೂ ಓದಿ: ಮೊಬೈಲ್ ನೋಡುತ್ತಾ ಕುಳಿತ ಜಯಂತ್‌ನ ಪ್ರಶ್ನಿಸಿದ ಜಾಹ್ನವಿ; ಮನೆಯಲ್ಲಿರುವ ಸಿಸಿಟಿವಿ ವಿಚಾರ ಬಯಲಾಗುತ್ತಾ?

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner