ಕನ್ನಿಕಾಗೆ ಚಾಲೆಂಜ್ ಮಾಡಿ ಹೊರಟ ಭಾಗ್ಯ; ಸೂರ್ಯವಂಶಿ ಕುಟುಂಬದಲ್ಲಿ ಕೋಲಾಹಲ: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಫೆಬ್ರುವರಿ 3ರ ಸಂಚಿಕೆಯಲ್ಲಿ ಭಾಗ್ಯಾ, ಹೋಟೆಲ್‌ನಿಂದ ಹೊರಹೋಗುವಾಗ ಕನ್ನಿಕಾಗೆ ಚಾಲೆಂಜ್ ಮಾಡಿದ್ದಾಳೆ. “ನನ್ನನ್ನು ದ್ವೇಷದಿಂದ ಕೆಲಸದಿಂದ ತೆಗೆದಿರಬಹುದು, ಆದರೆ ಇದಕ್ಕೆಲ್ಲಾ ಸೂಕ್ತ ಉತ್ತರ ಕೊಡುತ್ತೇನೆ” ಎಂದು ಹೇಳಿದ್ದಾಳೆ. ಭಾಗ್ಯಾಳ ಚಾಲೆಂಜ್ ಕೇಳಿ ಕನ್ನಿಕಾಗೆ ಒಂದು ಕ್ಷಣ ದಿಗಿಲು ಉಂಟಾಗಿದೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಫೆಬ್ರುವರಿ 3ರ ಸಂಚಿಕೆಯಲ್ಲಿ ಭಾಗ್ಯಾ ಹೋಟೆಲ್‌ನಿಂದ ಹೊರನಡೆಯುವ ಪ್ರಸಂಗ ನಡೆಯಿತು. ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಭಾಗ್ಯಾ, ಹೋಟೆಲ್‌ನ ಅಡುಗೆ ಕೋಣೆಗೆ ಹೋಗುತ್ತಾಳೆ. ಅಲ್ಲಿ, ತನ್ನ ಸಹೋದ್ಯೊಗಿಗಳನ್ನು ಕೊನೆಯ ಬಾರಿಗೆ ಒಮ್ಮೆ ಮಾತನಾಡಿಸುತ್ತಾಳೆ. ಎಲ್ಲರೂ ಆ ಸಂದರ್ಭದಲ್ಲಿ ತೀರಾ ಭಾವುಕರಾಗಿ ಭಾಗ್ಯಾಗೆ ಬಿಟ್ಟು ಹೋಗಬೇಡ ಎನ್ನುತ್ತಾರೆ. ಆದರೆ, ಭಾಗ್ಯಾಳಿಗೆ ಅಲ್ಲಿಂದ ಹೊರಡದೇ ಬೇರೆ ದಾರಿ ಇರುವುದಿಲ್ಲ. ಅಲ್ಲದೆ, ಕನ್ನಿಕಾ ನೋಡುವುದಕ್ಕೂ ಮೊದಲೇ ಹೊರಟು ಬಿಡುತ್ತೇನೆ, ಇಲ್ಲವಾದರೆ, ಅದಕ್ಕೂ ಮತ್ತೆ ಕಿರಿಕಿರಿ ಮಾಡಬಹುದು ಎನ್ನುತ್ತಾಳೆ. ಎಲ್ಲರಿಗೂ ಶುಭಹಾರೈಸಿ, ಚೆನ್ನಾಗಿ ಕೆಲಸ ಮಾಡಿ, ಮುಂದೆ ಅವಕಾಶ ಇದ್ದರೆ ಮತ್ತೆ ಸಿಗೋಣ, ಯಾರೂ ಬೇಸರಿಸಿಕೊಳ್ಳಬೇಡಿ ಎಂದು ಹೇಳಿ ಹೋಗುತ್ತಾಳೆ.
ಕನ್ನಿಕಾಗೆ ಭಾಗ್ಯಾ ಚಾಲೆಂಜ್
ಹೋಟೆಲ್‌ನಿಂದ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಕನ್ನಿಕಾ ಮತ್ತೆ ಭಾಗ್ಯಾಳನ್ನು ಕರೆಯುತ್ತಾಳೆ. ಇನ್ನೂ ಯಾಕೆ ಹೊರಟಿಲ್ಲ, ಯಾಕೆ ಇನ್ನೂ ಇಲ್ಲೇ ಇದ್ದೀಯಾ ಎಂದು ಪ್ರಶ್ನಿಸುತ್ತಾಳೆ. ಆಗ ಭಾಗ್ಯಾ, ನೀನು ಕುತಂತ್ರದಿಂದ, ನನ್ನ ಮೇಲಿನ ದ್ವೇಷದಿಂದ ನನ್ನನ್ನು ಕೆಲಸದಿಂದ ತೆಗೆದಿರಬಹುದು. ಆದರೆ ನಾನು ನಿನ್ನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಿದ್ದೇನೆ, ಹೀಗಾಗಿ ಮತ್ತೊಮ್ಮೆ ಅಂತಹ ಕೆಲಸ ಕಷ್ಟವೇನಲ್ಲ, ನೀನು ನಿನ್ನಷ್ಟಕ್ಕೇ ಇದ್ದರೆ ಒಳಿತು ಎಂದು ಎಚ್ಚರಿಸುತ್ತಾಳೆ. ಭಾಗ್ಯಾಳ ಚಾಲೆಂಜ್ ಕೇಳಿ ಕನ್ನಿಕಾಗೆ ದಿಗಿಲು ಉಂಟಾಗುತ್ತದೆ. ಆದರೂ ತೋರಿಸಿಕೊಳ್ಳುವುದಿಲ್ಲ. ಸೀದಾ ಒಳಗೆ ಹೋಗಿ, ಸ್ವೀಟ್ಸ್ ತರಿಸಿ ತಿನ್ನುತ್ತಾಳೆ.
ಇದನ್ನೂ ಓದಿ: ಸಂತೋಷ್ ತಂದೆಯೇ ಶ್ರೀನಿವಾಸ್ ಎಂದು ಅರಿತ ಮೇಸ್ತ್ರಿ; ಸಿದ್ದೇಗೌಡ್ರನ್ನ ಮಾತಲ್ಲೇ ಮಣಿಸಿದ ಜವರೇಗೌಡ್ರು: ಲಕ್ಷ್ಮೀ ನಿವಾಸ ಧಾರಾವಾಹಿ
ಶ್ರೇಷ್ಠಾಳಿಂದ ಕನ್ನಿಕಾಗೆ ಫೋನ್ ಕಾಲ್
ಕನ್ನಿಕಾ ಹೇಳಿದಂತೆಯೇ ಪ್ಲ್ಯಾನ್ ರೂಪಿಸಿ, ಭಾಗ್ಯಾಳನ್ನು ಕೆಲಸದಿಂದ ತೆಗೆದಿದ್ದಾಳೆ, ಇದು ಶ್ರೇಷ್ಠಾ ಮತ್ತು ತಾಂಡವ್‌ಗೆ ಖುಷಿ ಕೊಟ್ಟಿದೆ. ಅದಕ್ಕಾಗಿ ಶ್ರೇಷ್ಠಾ ಕರೆ ಮಾಡಿ ಕನ್ನಿಕಾಗೆ ಅಭಿನಂದನೆ ಸಲ್ಲಿಸುತ್ತಾಳೆ, ತಾಂಡವ್ ಕೂಡ ಭಾಗ್ಯಾಳ ಹಾರಾಟ ನಿಲ್ಲಿಸಿದ್ದಕ್ಕಾಗಿ ಖುಷಿಗೊಂಡು, ಕನ್ನಿಕಾಗೆ ಥ್ಯಾಂಕ್ಸ್ ಹೇಳುತ್ತಾನೆ. ಬಳಿಕ ಇದೇ ಖುಷಿಯಲ್ಲಿ ನಾವಿಬ್ಬರೂ ಹೊರಗಡೆ ಹೋಗೋಣ ಎಂದು ತಾಂಡವ್ ಶ್ರೇಷ್ಠಾಗೆ ಹೇಳುತ್ತಾನೆ, ಅದಕ್ಕೆ ಅವಳು ಖುಷಿಯಿಂದ ಒಪ್ಪಿಗೆ ಸೂಚಿಸುತ್ತಾಳೆ.
ಇದನ್ನೂ ಓದಿ: ಮನೆಗೆ ಮರಳಿದ ಲಕ್ಷ್ಮೀ; ಗೊಂಬೆಯಲ್ಲೂ ಕ್ಯಾಮೆರಾ ಕಂಡು ಹೆದರಿದ ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ
ಕಾಲೇಜ್ ಫೀಸ್‌ಗೆ ಹಣ ಬೇಕೆಂದ ತನ್ವಿ
ಭಾಗ್ಯಾ ಕೆಲಸ ಕಳೆದುಕೊಂಡಿರುವುದು ಸೂರ್ಯವಂಶಿ ಕುಟುಂಬದಲ್ಲಿ ದೊಡ್ಡ ಕೋಲಾಹಲ ಎಬ್ಬಿಸಿದೆ. ಮನೆಯವರು ಭಾಗ್ಯಾಗೆ ಫೋನ್ ಕಾಲ್ ಮಾಡಲು ಯತ್ನಿಸಿದರೂ, ಆಕೆ ಕರೆ ಸ್ವೀಕರಿಸಲಿಲ್ಲ. ಎಲ್ಲರೂ ಆತಂಕದಲ್ಲಿ ಇರುವಾಗಲೇ, ತನ್ವಿ ಕಾಲೇಜಿನಿಂದ ಬಂದು, ಕೋರ್ಸ್‌ಗೆ ಸೇರಲು 80,000 ರೂಪಾಯಿ ಬೇಕಾಗಿದೆ, ನಾಳೆಯೇ ಕೊನೆಯ ದಿನ ಎಂದು ಹೇಳುತ್ತಾಳೆ. ಆದರೆ ಆಕೆಗೆ ಭಾಗ್ಯಾ ಕೆಲಸ ಕಳೆದುಕೊಂಡ ಬಗ್ಗೆ ಅರಿವಿರುವುದಿಲ್ಲ. ಏನಾದರಾಗಲಿ, ನನಗೆ ನಾಳೆ ಕೋರ್ಸ್ ಸೇರಲು ಹಣ ಬೇಕೇ ಬೇಕು ಎಂದು ತನ್ವಿ ಹೇಳುತ್ತಾಳೆ. ಅದಕ್ಕೆ ಕುಸುಮಾ ಕೋಪಗೊಂಡು ತನ್ವಿಗೆ ಹೊಡೆಯಲು ಹೋಗುತ್ತಾರೆ. ಆಗ ಧರ್ಮರಾಜ್ ಬಂದು ತಡೆಯುತ್ತಾರೆ. ಇತ್ತ ಭಾಗ್ಯ, ದೇವಸ್ಥಾನಕ್ಕೆ ಹೋಗಿ, ದೇವರಲ್ಲಿ ಪ್ರಾರ್ಥಿಸಿಕೊಂಡು, ತನ್ನ ಮನದ ಅಳಲನ್ನು ತೋಡಿಕೊಂಡಿದ್ದಾಳೆ. ಅಲ್ಲಿಗೆ ಫೆಬ್ರುವರಿ 3ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 705ನೇ ಸಂಚಿಕೆ ಮುಗಿಸಿದೆ. ಭಾಗ್ಯಾ ಕುಟುಂಬದ ನಿರ್ವಹಣೆಗೆ, ಲೋನ್ ಕಟ್ಟಲು ಮುಂದೇನು ಮಾಡುತ್ತಾಳೆ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ