ಹೋಟೆಲ್‌ನಿಂದ ಬಿಸಿಬೇಳೆ ಬಾತ್‌,ಕೇಸರಿ ಬಾತ್‌ ತರಿಸಿ ನಾನೇ ಮಾಡಿದ್ದು ಎಂದು ಸುಳ್ಳು ಹೇಳಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಹೋಟೆಲ್‌ನಿಂದ ಬಿಸಿಬೇಳೆ ಬಾತ್‌,ಕೇಸರಿ ಬಾತ್‌ ತರಿಸಿ ನಾನೇ ಮಾಡಿದ್ದು ಎಂದು ಸುಳ್ಳು ಹೇಳಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಹೋಟೆಲ್‌ನಿಂದ ಬಿಸಿಬೇಳೆ ಬಾತ್‌,ಕೇಸರಿ ಬಾತ್‌ ತರಿಸಿ ನಾನೇ ಮಾಡಿದ್ದು ಎಂದು ಸುಳ್ಳು ಹೇಳಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 3ರ ಎಪಿಸೋಡ್‌ನಲ್ಲಿ ತಿಂಡಿ ಮಾಡಿ ಎಲ್ಲರಿಗೂ ಬಡಿಸುವಂತೆ ಶ್ರೇಷ್ಠಾಗೆ ಕುಸುಮಾ ಹೇಳುತ್ತಾಳೆ. ಆದರೆ ಕಾಫಿಯನ್ನೂ ಮಾಡಲು ಬರದ ಶ್ರೇಷ್ಠಾ, ಹೋಟೆಲ್‌ನಲ್ಲಿ ಬಿಸಿಬೇಳೆಬಾತ್‌, ಕೇಸರಿಬಾತ್‌ ಆರ್ಡರ್‌ ಮಾಡಿ ಅದನ್ನು ನಾನೇ ತಯಾರಿಸಿದ್ದು ಎಂದು ಸುಳ್ಳು ಹೇಳುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 3ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 3ರ ಎಪಿಸೋಡ್‌ (PC: Jio cinema)

Bhagyalakshmi Serial: ಶ್ರೇಷ್ಠಾ, ತಾಂಡವ್‌ ಮನೆಗೆ ಬಂದು ಸೇರಿದ್ದಾಳೆ. ಅವಳಿಗೆ ಬುದ್ಧಿ ಕಲಿಸಬೇಕೆಂಬ ಕಾರಣಕ್ಕೆ ಕುಸುಮಾ ಹಾಗೂ ಭಾಗ್ಯಾ ಹೊಸ ಪ್ಲ್ಯಾನ್ ಮಾಡಿದ್ದಾರೆ. ಇಷ್ಟು ದಿನಗಳು ಮನೆ ಕೆಲಸ ಮುಗಿಸಿ ಮನೆಯವರ ಬೇಕು, ಬೇಡಗಳನ್ನು ನೋಡಿಕೋಡು ಕೆಲಸಕ್ಕೂ ಹೋಗಿ ಮನೆ ನಿಭಾಯಿಸುವ ಭಾಗ್ಯಾ ಈಗ ತನ್ನ ಕೆಲಸವನ್ನು ಶ್ರೇಷ್ಠಾಗೆ ವಹಿಸಿದ್ದಾಳೆ. ಮನೆ ಕೆಲಸ ಮಾಡುವಂತೆ ಕುಸುಮಾ ಕೂಡಾ ಶ್ರೇಷ್ಠಾಗೆ ತಾಕೀತು ಮಾಡಿದ್ದಾಳೆ.

ಶ್ರೇಷ್ಠಾಗೆ ಮನೆ ಕೆಲಸ ಮಾಡುವಂತೆ ಹೇಳಿದ ಕುಸುಮಾ

ಮನೆಗೆ ಬಂದು ಆರಾಮವಾಗಿ ಮಲಗಿರುವ ಶ್ರೇಷ್ಠಾಳಿಗೆ ನೀರು ಹಾಕಿ ಕುಸುಮಾ ಎಬ್ಬಿಸುತ್ತಾಳೆ. ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ನಿಮ್ಮ ಮಾವನಿಗೆ ಕಾಫಿ ಮಾಡಿಕೊಡುವಂತೆ ಕುಸುಮಾ ಶ್ರೇಷ್ಠಾಗೆ ಹೇಳುತ್ತಾಳೆ. ಕೆಲಸ ಮಾಡಲು ಇಷ್ಟವಿಲ್ಲದಿದ್ದರೂ ಶ್ರೇಷ್ಠಾ ಕಷ್ಟಪಟ್ಟು ಎದ್ದು ಸ್ನಾನ ಮುಗಿಸಿ ಅಡುಗೆಮನೆಗೆ ಬರುತ್ತಾಳೆ. ಎಲ್ಲರಿಗೂ ಕಾಫಿ ಮಾಡುವಂತೆ ಶ್ರೇಷ್ಠಾ, ಭಾಗ್ಯಾಗೆ ಹೇಳುತ್ತಾಳೆ. ಕಾಫಿ ಮಾಡೋಕೆ ನಿನಗೆ ಹೇಳಿದ್ದು ನನಗಲ್ಲ, ಅಡುಗೆ ಮನೆಯೂ ನಿಂದೇ, ಬಚ್ಚಲು ಮನೆಯೂ ನಿಂದೇ ನೀನೇ ಕಾಫಿ ಮಾಡಿ ಎಲ್ಲರಿಗೂ ಕೊಡು ಎಂದು ಭಾಗ್ಯಾ ಅಲ್ಲಿಂದ ಹೋಗುತ್ತಾಳೆ. ಇಷ್ಟು ದಿನ ಏನೂ ಕೆಲಸ ಮಾಡದ ಶ್ರೇಷ್ಠಾಗೆ ಈಗ ಸಂಕಷ್ಟ ಶುರುವಾಗಿದೆ.

ಕುಸುಮಾ ಹೇಳಿದಂತೆ ಕಾಫಿ ಮಾಡದೆ, ತನಗೆ ತೋಚಿದಂತೆ ಕಾಫಿ ಮಾಡಿ ಎಲ್ಲರಿಗೂ ಕೊಡುತ್ತಾಳೆ. ಅದನ್ನು ಕುಡಿದು ಧರ್ಮರಾಜ್‌ ಬೇಸರ ವ್ಯಕ್ತಪಡಿಸುತ್ತಾರೆ, ಇದನ್ನು ಯಾರಾದರೂ ಕಾಫಿ ಎಂದು ಕರೆಯುತ್ತಾರಾ? ಎನ್ನುತ್ತಾನೆ. ಕುಸುಮಾ ಕೂಡಾ ಅದನ್ನು ಟೇಸ್ಟ್‌ ಮಾಡಿ ಮುಖ ಸಿಂಡರಿಸುತ್ತಾಳೆ. ಹೋಗು ಮತ್ತೊಮ್ಮೆ ಕಾಫಿ ಮಾಡಿಕೊಂಡು ಬಾ ಎನ್ನುತ್ತಾಳೆ. ಇದೇ ರೀತಿ ಶ್ರೇಷ್ಠಾಗೆ ಪದೆ ಪದೆ ಕಾಫಿ ಮಾಡುವಂತೆ ಕುಸುಮಾ ಹೇಳುತ್ತಾಳೆ. ಪದೇ ಪದೆ ಕಾಫಿ ಮಾಡಿಕೊಟ್ಟು ಶ್ರೇಷ್ಠಾಗೆ ಕೂಡಾ ಸಾಕಾಗುತ್ತದೆ. ಕೊನೆಯ ಬಾರಿ ಮಾಡಿದ ಕಾಫಿ ಸ್ವಲ್ಪ ಕುಡಿಯವಂತೆ ಇದೆ, ಇದನ್ನು ಮಾಡಲು ನೀನು ಇಷ್ಟು ಹೊತ್ತು ಸಮಯ ತೆಗೆದುಕೊಂಡರೆ ತಿಂಡಿ ಯಾವಾಗ ಮಾಡುವುದು ಎಂದು ಕುಸುಮಾ ಕೇಳುತ್ತಾಳೆ.

ಹೋಟೆಲ್‌ನಲ್ಲಿ ತಿಂಡಿ ಆರ್ಡರ್‌ ಮಾಡಿ ನಾನೇ ಮಾಡಿದ್ದು ಎಂದು ಸುಳ್ಳು ಹೇಳಿದ ಶ್ರೇಷ್ಠಾ

ಇನ್ನು ತಿಂಡಿ ಬೇರೆ ಮಾಡಬೇಕಾ ಎಂದು ಶ್ರೇಷ್ಠಾ ಗೋಳಾಡುತ್ತಾಳೆ. ಎಲ್ಲರಿಗೂ ಬಿಸಿಬೇಳೆಬಾತ್ ಮಾಡುವಂತೆ ಕುಸುಮಾ ಹೇಳುತ್ತಾಳೆ. ಶ್ರೇಷ್ಠಾ ನನಗೆ ಇದೆಲ್ಲಾ ಮಾಡಲು ಕಷ್ಟವಾಗುತ್ತಿದೆ ಎಂದು ತಾಂಡವ್‌ಗೆ ಕರೆ ಮಾಡಿ ಹೇಳಿಕೊಳ್ಳುತ್ತಾಳೆ. ನೀನು ಮನೆ ಸೊಸೆ ಆಗಿ ಇರಬೇಕು ಎಂದರೆ ಅಮ್ಮ ಹೇಳಿದ ಕೆಲಸವನೆಲ್ಲಾ ಮಾಡಬೇಕು ಎಂದು ತಾಂಡವ್‌ ಹೇಳುತ್ತಾನೆ. ಶ್ರೇಷ್ಠಾ, ಹೋಟೆಲ್‌ನಲ್ಲಿ ಬಿಸಿಬೇಳೆಬಾತ್‌ ಹಾಗೂ ಕೇಸರಿಬಾತ್‌ ಆರ್ಡರ್‌ ಮಾಡಿ ಅದೆಲ್ಲವನ್ನೂ ಪಾತ್ರೆಗೆ ಶಿಫ್ಟ್‌ ಮಾಡುತ್ತಾಳೆ. ನಾನು ತಿಂಡಿ ಮಾಡಿದ್ದೇನೆ ಎಲ್ಲರೂ ಬನ್ನಿ ಎಂದು ಕರೆಯುತ್ತಾಳೆ.

ಇಷ್ಟು ಬೇಗ ಶ್ರೇಷ್ಠಾ ಅಡುಗೆ ಮಾಡಿದ್ದಾಳೆ ಎಂದರೆ ಯಾರಿಗೂ ನಂಬಲು ಆಗುವುದಿಲ್ಲ, ಅನುಮಾನದಿಂದಲೇ ಎಲ್ಲರೂ ತಿಂಡಿ ತಿನ್ನಲು ಕೂರುತ್ತಾರೆ. ಶ್ರೇಷ್ಠಾ ಬಡಿಸಿದ ಬಿಸಿಬೇಳೆಬಾತ್‌, ಕೇಸರಿಬಾತ್‌ ತಿಂದು ಇದು ಹೋಟೆಲ್‌ನಲ್ಲಿ ತರಿಸಿದ್ದು, ನೀನು ಮಾಡಿದ್ದಲ್ಲ ಎನ್ನುತ್ತಾರೆ. ಆದರೆ ಶ್ರೇಷ್ಠಾ ಮಾತ್ರ ಅದು ನಾನೇ ಮಾಡಿದ್ದು ಎಂದೇ ವಾದ ಮಾಡುತ್ತಾಳೆ. ಅಕ್ಕಿ, ಬೇಳೆ, ತರಕಾರಿ ಯಾವುದೂ ಖಾಲಿ ಆಗಿಲ್ಲ, ನಾನು ಸಾಮಗ್ರಿಗಳನ್ನು ಹೇಗೆ ಇಟ್ಟಿದ್ದೆನೋ ಹಾಗೇ ಇದೆ ಎಂದು ಭಾಗ್ಯಾ ಕುಸುಮಾಗೆ ಹೇಳುತ್ತಾಳೆ. ಶ್ರೇಷ್ಠಾ ಮಾತ್ರ ಯಾವುದೇ ಕಾರಣಕ್ಕೂ ನಿಜ ಒಪ್ಪಿಕೊಳ್ಳುವುದಿಲ್ಲ.

ಶ್ರೇಷ್ಠಾ ಬಂಡವಾಳ ಬಯಲಿಗೆ ಬರುತ್ತಾ? ಅವಳು ಮಾಡಿದ ಕೆಲಸಕ್ಕೆ ಇನ್ನಾವ ಶಿಕ್ಷೆ ಕಾದಿದೆಯೋ, ಮುಂದಿನ ಎಪಿಸೋಡ್‌ಗಳಲ್ಲಿ ನೋಡಬೇಕು.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner