ಸಕ್ಕರೆ ಕೇಳುವ ನೆಪದಲ್ಲಿ ಮನೆಗೆ ಬಂದು ಭಾಗ್ಯಾ ಬಗ್ಗೆ ಕಹಿ ಮಾತುಗಳನ್ನಾಡಿದ ನೆರೆಹೊರೆಯವರು; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 4ರ ಎಪಿಸೋಡ್‌ನಲ್ಲಿ ಸುನಂದಾ ನೆರೆಯ ಮಹಿಳೆಯರು ಸಕ್ಕರೆ ಕೇಳುವ ನೆಪದಲ್ಲಿ ಮನೆಗೆ ಬರುತ್ತಾರೆ. ಭಾಗ್ಯಾಗೆ ದೊಡ್ಡ ಕೆಲಸ ಸಿಕ್ಕ ನಂತರ ದುರಹಂಕಾರ ಬಂದಿದೆ, ಹಣದ ಮದದಿಂದ ಗಂಡನನ್ನು ಬಿಟ್ಟು ಬಂದಿದ್ದೀಯ ಎಂದು ಕೇಳಿ ಕೊಂಕು ಮಾತುಗಳನ್ನಾಡುತ್ತಾರೆ.
Bhagyalakshmi Kannada Serial: ನನಗೆ ಭಾಗ್ಯಾ ಇಷ್ಟವಿಲ್ಲ, ನಾನು ಪ್ರೀತಿಸಿದ್ದು ಶ್ರೇಷ್ಠಾಳನ್ನ, ಅವಳ ಜೊತೆಯೇ ನಾನು ಇನ್ಮುಂದೆ ಬದುಕೋದು ಎಂದು ತಾಂಡವ್ ಎಲ್ಲರ ಮುಂದೆ ರಾಜಾರೋಷವಾಗಿ ಹೇಳಿದ್ದಾನೆ. ಭಾಗ್ಯಾಳನ್ನು ಮನೆಯಿಂದ ಹೊರಗೆ ತಳ್ಳಿ ಇನ್ಮುಂದೆ ನಮ್ಮಿಬ್ಬರಿಗೆ ಸಂಬಂಧವಿಲ್ಲ ಎಂದು ಹೇಳುತ್ತಾನೆ. ನನ್ನ ಮೇಲೆ ಒಂದಲ್ಲಾ ಒಂದು ದಿನ ಗಂಡನಿಗೆ ಪ್ರೀತಿ ಉಂಟಾಗಬಹುದು ಎಂದು ಕಾಯುತ್ತಿದ್ದ ಭಾಗ್ಯಾಗೆ ಅವನ ವರ್ತನೆಯಿಂದ ನೋವಾಗುತ್ತದೆ.
ಭಾಗ್ಯಾ ಬಗ್ಗೆ ಕೊಂಕು ಮಾತುಗಳನ್ನಾಡಿದ ನೆರೆಯವರು
ಭಾಗ್ಯಾ ಇಲ್ಲದ ಮನೆಯಲ್ಲಿ ನಾನೂ ಇರುವುದಿಲ್ಲ ನಾವೂ ಅವಳ ಜೊತೆ ಹೋಗುತ್ತೇವೆ ಎಂದು ಕುಸುಮಾ, ಧರ್ಮರಾಜ್ ಹೊರಡುತ್ತಾನೆ. ಹೋಗಿ ಹೋಗಿ ಎಷ್ಟು ದಿನಗಳು ನಿಮ್ಮ ಸೊಸೆ ನಿಮ್ಮನ್ನು ನೋಡಿಕೊಳ್ಳುತ್ತಾಳೆ ಅಂತ ನಾನೂ ನೋಡುತ್ತೇನೆ. ಆದಷ್ಟು ಬೇಗ ನೀವು ವಾಪಸ್ ಬರುತ್ತೀರ ಅಂತ ನನಗೆ ಗೊತ್ತು, ಮಕ್ಕಳನ್ನು ಮಾತ್ರ ನಾನು ಕಳಿಸುವುದಿಲ್ಲ ಎಂದು ತಾಂಡವ್ ತನ್ವಿ, ತನ್ಮಯ್ ಇಬ್ಬರನ್ನೂ ಮನೆ ಒಳಗೆ ಕರೆದೊಯ್ಯವಂತೆ ಶ್ರೇಷ್ಠಾಗೆ ಹೇಳುತ್ತಾನೆ. ಅವಳನ್ನು ತಡೆಯಲು ಬಂದ ಭಾಗ್ಯಾಳನ್ನು ದೂರ ತಳ್ಳುತ್ತಾನೆ. ತನ್ಮಯ್ ಶ್ರೇಷ್ಠಾ ಕೈಗೆ ಕಚ್ಚಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ. ಆಗ ತಾಂಡವ್ ಮಗನಿಗೆ ಹೊಡೆಯಲು ಪ್ರಯತ್ನಿಸಿದಾಗ ಭಾಗ್ಯಾ ಅವನನ್ನು ತಡೆಯುತ್ತಾಳೆ. ನನ್ನ ಮಕ್ಕಳನ್ನು ಎಂದಿಗೂ ನಿಮ್ಮಂಥವರ ಬಳಿ ಬಿಡುವುದಿಲ್ಲ ಎಂದು ಎಲ್ಲರನ್ನೂ ಕರೆದುಕೊಂಡು ತವರು ಮನೆಗೆ ಬರುತ್ತಾಳೆ.
ತವರು ಮನೆಗೆ ಬರುತ್ತಿದ್ದಂತೆ ಭಾಗ್ಯಾಗೆ ನೆರೆಹೊರೆಯವರ ಪ್ರಶ್ನೆ ಎದುರಾಗುತ್ತದೆ. ಸಕ್ಕರೆ ಕೇಳುವ ನೆಪದಲ್ಲಿ ಮೂವರು ಮಹಿಳೆಯರು ಭಾಗ್ಯಾ ಮನೆಗೆ ಬರುತ್ತಾರೆ. ಭಾಗ್ಯಾ ಅತ್ತೆ, ಮಾವ ಎಲ್ಲರೂ ಬಂದಿದ್ದೀರ, ಸದ್ದಿಲ್ಲದೆ ಪೂಜಾ ಮದುವೆ ಮಾಡಲು ಪ್ರಯತ್ನಿಸುತ್ತಿದ್ದೀರಾ? ಭಾಗ್ಯಾ ನಿನ್ನ ಗಂಡ ಎಲ್ಲಿ ಎಂದು ಕೇಳುತ್ತಾರೆ. ಅವನಿಗೆ ಸ್ವಲ್ಪ ಕೆಲಸ ಇತ್ತು ಆದ್ದರಿಂದ ಅವನು ಬರಲಿಲ್ಲ ಅಂತ ಕುಸುಮಾ ಹೇಳುತ್ತಾಳೆ. ಬರಲು ಸಾಧ್ಯವಾಗದಿದ್ದರೆ ಪರವಾಗಿಲ್ಲ, ಆದರೆ ಕಾರಿನಲ್ಲಿ ಡ್ರಾಪ್ ಮಾಡಿ ಹೋಗಬಹುದಿತ್ತಲ್ವಾ, ನೀವೆಲ್ಲಾ ದೊಡ್ಡ ಮನೆತನದವರು ಆಟೋದಲ್ಲಿ ಬಂದರೆ ಹೇಗಿರುತ್ತೆ ಹೇಳಿ. ಭಾಗ್ಯಾಗೆ ದೊಡ್ಡ ಕೆಲಸ ಸಿಗುತ್ತಿದ್ದಂತೆ ದುರಹಂಕಾರ ಬಂದಿದೆ. ಅದಕ್ಕೆ ಗಂಡನನ್ನು ಬಿಟ್ಟು ಇಲ್ಲಿಗೆ ಬಂದರೂ ಬಂದಿರಬಹುದು.
ಮಗಳ ಬಗ್ಗೆ ಮಾತನಾಡಿದವರ ಬಾಯಿ ಮುಚ್ಚಿಸಿದ ಸುನಂದಾ
ಕುಸುಮಾ ಅವರೇ ನೀವಾದ್ರೂ ಸೊಸೆಗೆ ಬುದ್ಧಿ ಹೇಳಬಾರದಾ? ಯಾವ ವಯಸ್ಸಿನಲ್ಲಿ ಏನಾಗಬೇಕೋ, ಅದೇ ಆಗಬೇಕು, ಈ ವಯಸ್ಸಿನಲ್ಲಿ ಸ್ಕೂಲ್‌ಗೆ ಕಳಿಸೋದು, ಕೆಲಸಕ್ಕೆ ಕಳಿಸೋದು ಮಾಡಿದ್ರೆ ಇದೇ ರೀತಿ ಆಗೋದು ಎಂದು ಮಹಿಳೆಯರು ಕೊಂಕು ಮಾತನಾಡುತ್ತಾರೆ. ಅವರ ಮಾತುಗಳನ್ನು ಕೇಳಿ ಕುಸುಮಾ, ಭಾಗ್ಯಾ ಕಣ್ಣೀರಿಡುತ್ತಾರೆ. ಸುನಂದಾ , ಈಳಿಗೆ ಮಣಿ ತಂದು ನೀವು ಸಕ್ಕರೆ ಕೇಳುವ ನೆಪದಲ್ಲಿ ನಮ್ಮ ಮನೆ ವಿಚಾರ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೀರ? ಅವನ ಗಂಡ ಯಾರೋ ಬೇರೆ ಹೆಣ್ಣಿನ ಹಿಂದೆ ಹೋದರೆ ನನ್ನ ಮಗಳು, ಅವರ ಅತ್ತೆ ತಾನೇ ಏನು ಮಾಡಲು ಸಾಧ್ಯ? ನಮ್ಮ ಮನೆ ವಿಚಾರ ನಿಮಗೇಕೆ? ಈಗಲೇ ಇಲ್ಲಿಂದ ಹೋಗದಿದ್ದರೆ ಎಲ್ಲರನ್ನೂ ಸಾಯಿಸುತ್ತೇನೆ ಎಂದು ಹೆದರಿಸುತ್ತಾಳೆ. ಸುನಂದಾಗೆ ಹೆದರಿ ನೆರೆಮನೆಯ ಮಹಿಳೆಯರು ಅಲ್ಲಿಂದ ಹೋಗುತ್ತಾರೆ.
ಇತ್ತ ಎಲ್ಲರೂ ಮನೆಯಿಂದ ಹೊರ ಹೋಗಿದ್ದಕ್ಕೆ ಶ್ರೇಷ್ಠಾ ಖುಷಿಯಾಗುತ್ತಾಳೆ. ಈ ಮನೆ ಕಟ್ಟಿಸುವಾಗ ಇಂಟೀರಿಯರ್ ಡಿಸೈನ್ ಮಾಡಿಸಿದ್ದಕ್ಕೂ ಸಾರ್ಥಕವಾಯ್ತು. ಈಗ ಯಾರ ಭಯವೂ ಇಲ್ಲದೆ ನಾನು ಈ ಮನೆಯಲ್ಲಿ ಇರಬಹುದು. ಮೊದಲು ಮನೆಯಿಂದ ಬೇಡದ ಸಾಮಗ್ರಿಗಳನ್ನು ಎಸೆದು ನನಗೆ ಇಷ್ಟ ಬಂದಂತೆ ಬದಲಿಸಿಕೊಳ್ಳಬೇಕು ಎಂದುಕೊಳ್ಳುತ್ತಾಳೆ.
ಭಾಗ್ಯಾ, ತಾಂಡವ್‌ಗೆ ಚಾಲೆಂಜ್ ಮಾಡಿದಂತೆ ಸಂಸಾರದ ಎಲ್ಲಾ ಜವಾಬ್ದಾರಿ ಹೊರಲಿದ್ದಾಳಾ? ಶ್ರೇಷ್ಠಾ ಜೊತೆ ತಾಂಡವ್ ಸಂತೋಷದಿಂದ ಇರುತ್ತಾನಾ? ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ