ಶ್ರೇಷ್ಠಾಗೆ ಹೊಸ ಟಾರ್ಚರ್‌, ಮನೆ ಸೊಸೆ ಪಟ್ಟ ಉಳಿಸಿಕೊಳ್ಳಲು ಹಲ್ಲುಕಚ್ಚಿ ಕೆಲಸ ಮಾಡ್ತಿರುವ ತಾಂಡವ್‌ ಪ್ರೇಯಸಿ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರೇಷ್ಠಾಗೆ ಹೊಸ ಟಾರ್ಚರ್‌, ಮನೆ ಸೊಸೆ ಪಟ್ಟ ಉಳಿಸಿಕೊಳ್ಳಲು ಹಲ್ಲುಕಚ್ಚಿ ಕೆಲಸ ಮಾಡ್ತಿರುವ ತಾಂಡವ್‌ ಪ್ರೇಯಸಿ; ಭಾಗ್ಯಲಕ್ಷ್ಮೀ ಧಾರಾವಾಹಿ

ಶ್ರೇಷ್ಠಾಗೆ ಹೊಸ ಟಾರ್ಚರ್‌, ಮನೆ ಸೊಸೆ ಪಟ್ಟ ಉಳಿಸಿಕೊಳ್ಳಲು ಹಲ್ಲುಕಚ್ಚಿ ಕೆಲಸ ಮಾಡ್ತಿರುವ ತಾಂಡವ್‌ ಪ್ರೇಯಸಿ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 4ರ ಎಪಿಸೋಡ್‌ನಲ್ಲಿ ಶ್ರೇಷ್ಠಾ, ಹೋಟೆಲ್‌ನಲ್ಲಿ ತಿಂಡಿ ಆರ್ಡರ್‌ ಮಾಡಿದ ವಿಚಾರ ಕುಸುಮಾಗೆ ತಿಳಿಯುತ್ತದೆ. ಇವಳಿಗೆ ಈಗ ಕೊಟ್ಟ ಕೆಲಸ ಸಾಕಾಗುವುದಿಲ್ಲ ಎಂದುಕೊಳ್ಳುವ ಕುಸುಮಾ, ಪಾತ್ರೆ ತೊಳೆದು, ಮನೆ ಒರೆಸುವಂತೆ ಹೇಳುತ್ತಾಳೆ. ಕಷ್ಟ ಎನಿಸಿದರೂ ಮನೆಯಿಂದ ಹೊರ ಹೋಗುವ ಭಯಕ್ಕೆ ಶ್ರೇಷ್ಠಾ ಕೆಲಸ ಮಾಡುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 4ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 4ರ ಎಪಿಸೋಡ್‌ (PC: Jio Cinema)

Bhagyalakshmi Serial: ಪೊಲೀಸರನ್ನು ಕರೆಸಿ ಮದುವೆ ನಿಲ್ಲಿಸಿದರೂ ಶ್ರೇಷ್ಠಾ ಮಾತ್ರ ಬುದ್ಧಿ ಕಲಿತಿಲ್ಲ, ಹೇಗಾದರೂ ಮಾಡಿ ತಾಂಡವ್‌ನನ್ನು ಮದುವೆ ಆಗಬೇಕು. ಆ ಮನೆಗೆ ಸೊಸೆ ಆಗಿ ಹೋಗಬೇಕು ಎಂಬ ಕುತಂತ್ರದಿಂದ ನಾಟಕ ಮಾಡಿ ಈಗ ಮತ್ತೆ ತಾಂಡವ್‌ ಮನೆಗೆ ಬಂದು ಸೇರಿದ್ದಾಳೆ. ಹೊಡೆಯುವುದು, ಬೈಯ್ಯುವುದು ವರ್ಕೌಟ್‌ ಆಗುವುದಿಲ್ಲ ಎಂದು ಅರಿತ ಕುಸುಮಾ ಹಾಗೂ ಭಾಗ್ಯಾ, ಶ್ರೇಷ್ಠಾಗೆ ಬುದ್ಧಿ ಕಲಿಸಲು ಹೊಸ ಪ್ಲಾನ್‌ ಮಾಡಿದ್ದಾರೆ.

ಮಗಳನ್ನು ಹೀಯಾಳಿಸಿದ ಶ್ರೇಷ್ಠಾಗೆ ಕಪಾಳಮೋಕ್ಷ ಮಾಡುವ ಸುನಂದಾ

ಶ್ರೇಷ್ಠಾಳನ್ನು ಕುಸುಮಾ ಮನೆ ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಆರಂಭದಲ್ಲಿ ಕುಸುಮಾ, ಭಾಗ್ಯಾ ಪ್ಲ್ಯಾನ್‌ ಯಾರಿಗೂ ಅರ್ಥವಾಗುವುದಿಲ್ಲ ಆದರೆ ಈಗ ಧರ್ಮರಾಜ್‌ ಕೂಡಾ ಶ್ರೇಷ್ಠಾಳನ್ನು ಸೊಸೆ ಎಂದೇ ಕರೆಯುತ್ತಿದ್ದಾನೆ. ಹೊತ್ತು ಆದರೂ ಇನ್ನೂ ಮಲಗಿದ್ದ ಶ್ರೇಷ್ಠಾ ಮೇಲೆ ತಣ್ಣೀರು ಸುರಿದ ಕುಸುಮಾ ಅವಳನ್ನು ಎಬ್ಬಿಸಿ ಕಾಫಿ ಮಾಡುವಂತೆ ಹೇಳುತ್ತಾಳೆ. ಇದುವರೆಗೂ ಇಷ್ಟ ಬಂದಂತೆ ಇದ್ದ ಶ್ರೇಷ್ಠಾಗೆ ಈಗ ಸೂರ್ಯವಂಶಿ ಮನೆಯಲ್ಲಿ ಹೊಸ ಪ್ರಪಂಚದ ದರ್ಶನ ಆಗುತ್ತಿದೆ. ಕೆಲಸ ಮಾಡಲು ಬರದಿದ್ದರೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾಳೆ. ತನ್ನ ಕಷ್ಟವನ್ನು ತಾಂಡವ್‌ಗೆ ಹೇಳಿಕೊಂಡರೂ ಅವನೂ ಏನು ಮಾಡದ ಪರಿಸ್ಥಿತಿಯಲ್ಲಿ ಇಲ್ಲ. 5-6 ಬಾರಿ ಕಾಫಿ ಮಾಡಿದ ನಂತರ ತಿಂಡಿ ಮಾಡಲು ಕುಸುಮಾ ಹೇಳುತ್ತಾಳೆ.

ತಿಂಡಿ ಮಾಡಲು ಬರದೆ ಶ್ರೇಷ್ಠಾ, ಹೋಟೆಲ್‌ನಿಂದ ಆರ್ಡರ್‌ ಮಾಡಿ ಅದನ್ನು ನಾನೇ ತಯಾರಿಸಿದ್ದು ಎಂದು ಹೇಳುತ್ತಾಳೆ. ಆದರೆ ಡೆಲಿವರಿ ಬಾಯ್‌, ಮರೆತಿದ್ದ ಬಾಕ್ಸ್‌ವೊಂದನ್ನು ಮತ್ತೆ ಕೊಡಲು ಬಂದಾಗ ಕುಸುಮಾ ಹಾಗೂ ಮನೆಯವರಿಗೆ ನಿಜ ತಿಳಿಯುತ್ತದೆ. ಹೋಟೆಲ್‌ನಲ್ಲಿ ಆರ್ಡರ್‌ ಮಾಡಿ ನಾನೇ ಮಾಡಿದ್ದು ಅಂತ ಸುಳ್ಳು ಬೇರೆ ಹೇಳ್ತೀಯ ಎಂದು ಕುಸುಮಾ ಶ್ರೇಷ್ಠಾಗೆ ರೇಗುತ್ತಾಳೆ. ನನ್ನ ಸೊಸೆ ಭಾಗ್ಯಾ ಹೋಟೆಲ್‌ಗೆ ಕೆಲಸಕ್ಕೆ ಹೋಗುವುದಲ್ಲದೆ ಹೋಗುವುದಕ್ಕಿಂತ ಮುಂಚೆ ಮನೆ ಕೆಲಸ ಎಲ್ಲಾ ಮುಗಿಸಿ ಹೋಗುತ್ತಿದ್ದಳು, ಅವಳು ಒಂದು ದಿನವೂ ಹೋಟೆಲ್‌ನಲ್ಲಿ ಆರ್ಡರ್‌ ಮಾಡಿರಲಿಲ್ಲ ಎನ್ನುತ್ತಾಳೆ. ಭಾಗ್ಯಾ ದಡ್ಡಿ ಅವಳಿಗೆ ಆರ್ಡರ್‌ ಮಾಡುವುದು ಗೊತ್ತಿಲ್ಲ ಎಂದು ಶ್ರೇಷ್ಠಾ, ದುರಹಂಕಾರದ ಮಾತುಗಳನ್ನಾಡುತ್ತಾಳೆ.

ಅಡುಗೆ ಮುಗೀತು, ಶ್ರೇಷ್ಠಾಗೆ ಇನ್ನು ಮನೆ ಕ್ಲೀನ್‌ ಮಾಡುವ ಕೆಲಸ

ಶ್ರೇಷ್ಠಾ ಮಾತು ಕೇಳಿ ಸಿಟ್ಟಾದ ಸುನಂದಾ ಅವಳ ಕೆನ್ನೆಗೆ ಬಾರಿಸುತ್ತಾಳೆ. ಮಧ್ಯೆ ಬರುವ ಕುಸುಮಾ ಆಗಿದ್ದು ಆಯ್ತು ಇನ್ಮುಂದೆ ಹೀಗೆ ಮಾಡಬೇಡ ಎಂದು ಬುದ್ಧಿ ಹೇಳಿ, ಅಡುಗೆ ಮನೆಯಲ್ಲಿರುವ ಪಾತ್ರೆಗಳನ್ನು ತೊಳೆಯುವಂತೆ ಶ್ರೇಷ್ಠಾಗೆ ಹೇಳುತ್ತಾಳೆ. ಇಷ್ಟವಿಲ್ಲದಿದ್ದರೂ ಮನೆ ಸೊಸೆ ಪಟ್ಟ ಉಳಿಸಿಕೊಳ್ಳಲು ಶ್ರೇಷ್ಠಾ ಹಲ್ಲು ಕಚ್ಚಿಕೊಂಡು ಪಾತ್ರೆ ತೊಳೆಯುತ್ತಾಳೆ. ಇವತ್ತು ನಾನು ಆಫೀಸಿಗೆ ರಜೆ ಹಾಕಿದ್ದೆ, ಅಂದುಕೊಂಡಿದ್ದೇ ಒಂದು ಆಗಿದ್ದೇ ಮತ್ತೊಂದು. ನಾಳೆ ನಾನು ಆಫೀಸಿನಿಂದ ಲೇಟ್ ಆಗಿ ಬರಬೇಕು ಎಂದುಕೊಳ್ಳುತ್ತಾಳೆ. ಅಷ್ಟರಲ್ಲಿ ಕುಸುಮಾ ಬಂದು ನಾಳೆ ನಾನು ಮನೆಯಲ್ಲಿ ಪೂಜೆ ಇಟ್ಟುಕೊಂಡಿದ್ದೇನೆ, ನೀನು ತಾಂಡವ್‌ ಇಬ್ಬರೂ ರಜೆ ಹಾಕಬೇಕು ಎನ್ನುತ್ತಾಳೆ.

ಇಷ್ಟವಿಲ್ಲದಿದ್ದರೂ ಬಲವಂತಕ್ಕೆ ಶ್ರೇಷ್ಠಾ ಒಪ್ಪಿಕೊಳ್ಳುತ್ತಾಳೆ. ಎಲ್ಲಾ ಕೆಲಸ ಮುಗಿಯಿತು. ಇನ್ನು ನಾನು ರೆಸ್ಟ್‌ ಮಾಡುವೆ ಎಂದು ಶ್ರೇಷ್ಠಾ ಹೇಳುತ್ತಾಳೆ. ಎಲ್ಲಿ ಮುಗಿಯಿತು, ಮನೆ ಕ್ಲೀನ್‌ ಮಾಡುವುದು ಬಾಕಿ ಇದೆ, ಮನೆ ಒರೆಸು, ನಾನು ಹೇಳಿದಂತೆ ಕೇಳುವುದಾರೆ ಈ ಮನೆಯಲ್ಲಿ ಇರು, ಇಲ್ಲವಾದರೆ ಇಲ್ಲಿಂದ ಹೊರಡು ಎಂದು ಕುಸುಮಾ ಹೇಳುತ್ತಾಳೆ.

ಕುಸುಮಾ ಕೊಡುವ ಟಾರ್ಚರ್‌ ಸಹಿಸಿಕೊಂಡು ಶ್ರೇಷ್ಠಾ ಮನೆಯಲ್ಲೇ ಉಳಿಯುತ್ತಾಳಾ ಅಥವಾ ಮನೆ ಬಿಟ್ಟು ಹೋಗುತ್ತಾಳಾ ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner