ತಾಂಡವ್ ಮನೆಯಲ್ಲೇ ಸೆಟಲ್ ಆಗಲು ಪ್ಲ್ಯಾನ್ ಮಾಡಿದ್ದ ಶ್ರೇಷ್ಠಾಳನ್ನು ಹೊರ ಕಳಿಸಿದ ಕಾಲೊನಿ ಜನರು; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 5ರ ಎಪಿಸೋಡ್‌ನಲ್ಲಿ ಇನ್ನು ಎಲ್ಲಾ ಮುಗಿಯಿತು, ಇನ್ಮುಂದೆ ತಾಂಡವ್ ಜೊತೆ ಇದೇ ಮನೆಯಲ್ಲಿ ಸೆಟಲ್ ಆಗಿಬಿಡೋಣ ಎಂದುಕೊಂಡಿದ್ದ ಶ್ರೇಷ್ಠಾಗೆ ಕಾಲೊನಿ ಜನರು ಮನೆಯಿಂದ ಹೊರ ಹಾಕಿದ್ದಾರೆ. ತಾಂಡವ್ ಕೂಡಾ ಭಯಕ್ಕೆ ಏನೂ ಮಾತನಾಡದೆ ಸುಮ್ಮನಾಗಿದ್ದಾನೆ.
Bhagyalakshmi Serial: ಭಾಗ್ಯಾ, ಅತ್ತೆ, ಮಾವ, ಮಕ್ಕಳೊಂದಿಗೆ ತವರು ಮನೆಗೆ ಬಂದಿದ್ದಾಳೆ. ಇಷ್ಟು ದಿನ ನನ್ನನ್ನು ನೋಡಿಕೊಳ್ಳುತ್ತಿದ್ದ ಭಾಗ್ಯಾಗೆ ಇನ್ನು ಕಷ್ಟವಾಗಬಾರದು ಎಂಬ ಕಾರಣಕ್ಕೆ ಸುಂದರಿ ಮನೆ ಬಿಟ್ಟು ಹೋಗುತ್ತಾಳೆ. ಆದರೆ ಭಾಗ್ಯಾ, ಕುಸುಮಾ, ಪೂಜಾ ಸುಂದ್ರಿಯನ್ನು ಹೊರಗೆ ಹೋಗಲು ಬಿಡುವುದಿಲ್ಲ. ಇಷ್ಟು ದಿನಗಳು ನಿಮ್ಮನ್ನು ನಾನು ಅಕ್ಕ ಅಂತ ಕರೆಯುತ್ತಿದ್ದೆ, ಇನ್ಮುಂದೆ ನೀವು ಈ ತಂಗಿಯ ಜೊತೆಗೆ ಇರಬೇಕು ಎಂದು ಹೇಳಿ ಭಾಗ್ಯಾ, ಸುಂದ್ರಿಯನ್ನು ಮನೆಗೆ ಕರೆದುಕೊಂಡು ಹೋಗುತ್ತಾಳೆ.
ತಾಯಿ ಸುನಂದಾಗೆ ಧೈರ್ಯ ಹೇಳಿದ ಭಾಗ್ಯಾ
ಸಕ್ಕರೆ ಕೇಳುವ ನೆಪದಲ್ಲಿ ಮಗಳ ಜೀವನದ ಬಗ್ಗೆ ಕೊಂಕು ಮಾತನಾಡಿದವರಿಗೆ ಸುನಂದಾ ತರಾಟೆಗೆ ತೆಗೆದುಕೊಳ್ಳುತ್ತಾಳೆ. ಜನರ ಮಾತಿಗೆ ತಲೆ ಕೆಡಿಸಿಕೊಳ್ಳಬೇಡ ಅಮ್ಮ. ಎಲ್ಲರೂ ಆಶ್ಚರ್ಯ ಪಡುವಂತೆ ನಾನು ಬದುಕಿ ತೋರಿಸುತ್ತೇನೆ. ನೀವು ನನ್ನ ಜೊತೆಗೆ ನಿಂತರೆ ಸಾಕು ಎಂದು ಭಾಗ್ಯಾ, ಅಳುತ್ತಿದ್ದ ಸುನಂದಾಗೆ ಧೈರ್ಯ ಹೇಳುತ್ತಾಳೆ. ಕುಸುಮಾ ಹಾಗೂ ಧರ್ಮರಾಜ್, ತಮ್ಮ ಕುಟುಂಬದಲ್ಲಿ ಆಗುತ್ತಿರುವ ಘಟನೆಗಳನ್ನು ನೆನೆದು ಬೇಸರ ವ್ಯಕ್ತಪಡಿಸುತ್ತಾರೆ. ಸುನಂದಾಗೆ ಕಷ್ಟ ಆಗಬಾರದು ಎಂಬ ಕಾರಣಕ್ಕೆ ಊಟ ಮಾಡಲು ನಿರಾಕರಿಸುತ್ತಾರೆ. ಆದರೆ ಭಾಗ್ಯಾ ಬಂದು ಅತ್ತೆ ಮಾವನನ್ನು ಊಟಕ್ಕೆ ಕರೆಯುತ್ತಾಳೆ. ನೀವು ಊಟ ಮಾಡದಿದ್ದರೆ ನಾವೂ ಮಾಡುವುದಿಲ್ಲ ಎನ್ನುತ್ತಾಳೆ. ಸೊಸೆ ನಾವು ಊಟ ಮಾಡುವವರೆಗೂ ಬಿಡುವುದಿಲ್ಲ ಎಂದು ತಿಳಿದ ಕುಸುಮಾ, ಧರ್ಮರಾಜ್, ಊಟಕ್ಕೆ ಹೋಗುತ್ತಾರೆ.
ಅಲ್ಲಿ ಎಲ್ಲರೂ ಕುಳಿತು ಒಟ್ಟಿಗೆ ಊಟ ಮಾಡುತ್ತಾರೆ. ಭಾಗ್ಯಾ, ಎಲ್ಲರಿಗೂ ಕೈ ತುತ್ತು ನೀಡುತ್ತಾಳೆ. ಮಕ್ಕಳು ಖುಷಿಯಾಗಿರುವುದನ್ನು ನೋಡಿದ ಕುಸುಮಾ, ಸಂತೋಷದಿಂದ ಕಣ್ಣೀರಿಡುತ್ತಾ, ಎಲ್ಲವೂ ಮೊದಲಿನಂತೆ ಆಗಿ ನಾವೆಲ್ಲರೂ ಸಂತೋಷದಿಂದ ಇದ್ದರೆ ಸಾಕು ಎಂದುಕೊಳ್ಳುತ್ತಾಳೆ. ನಂತರ ಭಾಗ್ಯಾ ಅತ್ತೆ ಮಾವನಿಗೆ ಮಲಗುವ ಕೋಣೆಯನ್ನು ರೆಡಿ ಮಾಡಿ ನೆಮ್ಮದಿಯಾಗಿ ನಿದ್ರೆ ಮಾಡಿ ಎನ್ನುತ್ತಾಳೆ.
ಶ್ರೇಷ್ಠಾ ಅಂದುಕೊಂಡಿದ್ದೇ ಬೇರೆ, ಆಗಿದ್ದೇ ಬೇರೆ
ಇತ್ತ ತಾಂಡವ್, ಹೇಗಾದರೂ ಮಾಡಿ ಮತ್ತೆ ಅಪ್ಪ, ಅಮ್ಮ, ಮಕ್ಕಳನ್ನು ವಾಪಸ್ ಕರೆ ತರಬೇಕು. ಅವರು ಭಾಗ್ಯಾಳನ್ನು ಬಿಟ್ಟು ಬರಬೇಕು ಇದಕ್ಕೆ ಏನಾದರೂ ಪ್ಲ್ಯಾನ್ ಮಾಡಬೇಕು ಎಂದುಕೊಳ್ಳುತ್ತಾನೆ. ಮನೆಯಲ್ಲಿ ಶ್ರೇಷ್ಠಾ, ಡೈನಿಂಗ್ ಟೇಬಲ್ ಮೇಲೆ ಕ್ಯಾಂಡಲ್ ಅರೇಂಜ್ ಮಾಡಿ ಇನ್ಮುಂದೆ ನಾನು ತಾಂಡವ್ ಇಬ್ಬರೇ ಖುಷಿಯಾಗಿರಬಹುದು, ಇದನ್ನು ನೋಡುತ್ತಿದ್ದಂತೆ ತಾಂಡವ್ ಖುಷಿಯಾಗುತ್ತಾನೆ ಎಂದು ಕನಸು ಕಾಣುತ್ತಾಳೆ. ಅಷ್ಟರಲ್ಲಿ ಕಾಲಿಂಗ್ ಬೆಲ್ ರಿಂಗ್ ಆಗುತ್ತದೆ. ತಾಂಡವ್ ಬಂದ ಎಂದು ಖುಷಿಯಿಂದ ಬಾಗಿಲು ತೆಗೆದ ಶ್ರೇಷ್ಠಾಗೆ ಶಾಕ್ ಆಗುತ್ತದೆ. ಕುಸುಮಾ ನೆರೆಹೊರೆಯವರು ಮನೆಗೆ ಬಂದು, ಇಷ್ಟೆಲ್ಲಾ ಆಗಿದ್ದು ನಿನ್ನಿಂದ, ನೀನು ಇಲ್ಲಿ ಏನು ಮಾಡುತ್ತಿದ್ದೀಯ? ಎಂದು ಕೇಳುತ್ತಾರೆ.
ಅದನ್ನೆಲ್ಲಾ ಕೇಳಲು ನೀವು ಯಾರು ಎಂದು ಶ್ರೇಷ್ಠಾ ಕೇಳುತ್ತಾಳೆ. ಅಷ್ಟರಲ್ಲಿ ತಾಂಡವ್ ಮನೆಗೆ ಬರುತ್ತಾನೆ. ನನಗೆ ಭಾಗ್ಯಾ ಜೊತೆ ಬದುಕಲು ಇಷ್ಟವಿಲ್ಲ, ಇದು ನನ್ನ ನಿರ್ಧಾರ ಅದಕ್ಕೆ ಅವಳನ್ನು ಮನೆಯಿಂದ ಹೊರ ಕಳಿಸಿದೆ ಎನ್ನುತ್ತಾನೆ. ಅದೆಲ್ಲಾ ಸರಿ, ಆದರೆ ಈ ಹುಡುಗಿಯನ್ನು ಇಲ್ಲಿಗೆ ಏಕೆ ಕರೆದುಕೊಂಡು ಬಂದಿದ್ದೀಯ? ಇದು ಸಂಸಾರಸ್ಥರು, ಮಕ್ಕಳು ಇರುವ ಏರಿಯಾ. ಇಲ್ಲಿ ನಾವು ಇಂಥದಕ್ಕೆಲ್ಲಾ ಅವಕಾಶ ಮಾಡಿಕೊಡುವುದಿಲ್ಲ. ಈ ಹುಡುಗಿಯನ್ನು ಮನೆಯಿಂದ ಹೊರಗೆ ಕಳಿಸದಿದ್ದರೆ ನಿನ್ನನ್ನು ನಾವು ನೆಮ್ಮದಿಯಿಂದ ಇರಲು ಬಿಡುವುದಿಲ್ಲ ಎಂದು ತಾಂಡವ್‌ಗೆ ಎಚ್ಚರಿಕೆ ಕೊಡುತ್ತಾರೆ. ಕಾಲೊನಿ ಹೆಂಗಸರ ಮಾತಿಗೆ ಹೆದರಿದ ತಾಂಡವ್, ಶ್ರೇಷ್ಠಾ ಇಲ್ಲಿ ಇರುವುದಿಲ್ಲ ಅವಳು ಹೋಗುತ್ತಾಳೆ, ಹೋಗು ಶ್ರೇಷ್ಠಾ, ಮನೆ ಖಾಲಿ ಇದ್ದರೆ ಚೆನ್ನಾಗಿರುವುದಿಲ್ಲ ಎಂದು ಶ್ರೇಷ್ಠಾಗೆ ಇಲ್ಲಿ ಇರಲು ಹೇಳಿದ್ದೆ, ಈಗ ನಾನು ಬಂದಿದ್ದೀನಲ್ಲ ಇವಳು ಮನೆಗೆ ಹೋಗುತ್ತಾಳೆ ಎಂದು ಶ್ರೇಷ್ಠಾಳನ್ನು ತಾಂಡವ್ , ಮನೆಯಿಂದ ಹೋಗುವಂತೆ ಹೇಳುತ್ತಾನೆ. ಶ್ರೇಷ್ಠಾ ಇಷ್ಟವಿಲ್ಲದಿದ್ದರೂ ಅಲ್ಲಿಂದ ಹೋಗುತ್ತಾಳೆ.
ಸಂತೋಷದಿಂದ ಇರುತ್ತಾನಾ? ಕಾದು ನೋಡಬೇಕು.
ಶ್ರೇಷ್ಠಾ ಮತ್ತೆ ತಾಂಡವ್ ಮನೆಗೆ ಬರುತ್ತಾಳಾ? ಭಾಗ್ಯಾ ಇಲ್ಲದೆ ತಾಂಡವ್ ನಿಜವಾಗಲೂ
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ