ಕೆಲಸದ ಹೊರೆಯಿಂದ ತಪ್ಪಿಸಿಕೊಳ್ಳಲು ಹೊಸ ಪ್ಲ್ಯಾನ್, ವರ್ಕೌಟ್ ಆಗುತ್ತಾ ಶ್ರೇಷ್ಠಾ ಉಪಾಯ? ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 5ರ ಎಪಿಸೋಡ್‌ನಲ್ಲಿ ಮನೆ ಕೆಲಸ ಮಾಡಿ ಹೈರಾಣಾದ ಶ್ರೇಷ್ಠಾ, ತಾನು ಕೆಲಸದಿಂದ ತಪ್ಪಿಸಿಕೊಳ್ಳಲು ಬ್ರೋಕರ್‌ಗೆ ಹೇಳಿ ಮನೆ ಕೆಲಸದವಳನ್ನು ಗೊತ್ತು ಮಾಡುತ್ತಾಳೆ. ಕೆಲಸದವಳು ಹೇಳುವ ಕಂಡಿಷನ್‌ಗೆ ಒಪ್ಪಿಕೊಂದು ನಾಳೆಯಿಂದ ಕೆಲಸಕ್ಕೆ ಬರುವಂತೆ ಶ್ರೇಷ್ಠಾ ಹೇಳುತ್ತಾಳೆ.
Bhagyalakshmi Serial: ಹೊಸ ನಾಟಕ ಶುರು ಮಾಡಿರುವ ಶ್ರೇಷ್ಠಾ ಮತ್ತೆ ಬಂದು ತಾಂಡವ್ ಮನೆ ಸೇರಿಕೊಂಡಿದ್ದಾಳೆ. ಅವಳಿಗೆ ಬುದ್ಧಿ ಕಲಿಸಬೇಕೆಂಬ ಉದ್ದೇಶದಿಂದ ಭಾಗ್ಯಾ ಹಾಗೂ ಕುಸುಮಾ ಇಬ್ಬರೂ ಪ್ಲ್ಯಾನ್ ಮಾಡಿ ಶ್ರೇಷ್ಠಾಗೆ ಟಾರ್ಚರ್ ಶುರು ಮಾಡಿದ್ದಾರೆ. ಆಫೀಸಿಗೆ ರಜೆ ಹಾಕಿ ಮನೆಯಲ್ಲಿ ಆರಾಮವಾಗಿ ಇರಬೇಕೆಂದುಕೊಂಡ ಶ್ರೇಷ್ಠಾಗೆ ತಾಂಡವ್ ಮನೆಯಲ್ಲಿ ಹೊಸ ಪ್ರಪಂಚದ ದರ್ಶನವಾಗುತ್ತಿದೆ.
ಶ್ರೇಷ್ಠಾಗೆ ಉಸಿರಾಡೋಕೂ ಬಿಡದೆ ಕೆಲಸ ಕೊಟ್ಟ ಕುಸುಮಾ
ಶ್ರೇಷ್ಠಾ ಈ ಮನೆಯಲ್ಲಿ ಇರುವರೆಗೂ ಅವಳು ಈ ಮನೆಯ ಸೊಸೆ, ಭಾಗ್ಯಾ ಈ ಮನೆಯ ಅತಿಥಿ ಎಂದು ಕುಸುಮಾ ಹೇಳುತ್ತಾಳೆ. ಅದೇ ಕಾರಣಕ್ಕೆ ಭಾಗ್ಯಾ ಏನೂ ಕೆಲಸ ಮಾಡದೆ ಮಕ್ಕಳಿಗೆ ಡ್ಯಾನ್ಸ್ ಕಲಿಸುತ್ತಾ ಆರಾಮವಾಗಿ ಇದ್ದಾಳೆ. ಶ್ರೇಷ್ಠಾಗೆ ಮನೆ ಕೆಲಸ ಮಾಡುವಂತೆ ಕುಸುಮಾ ಜವಾಬ್ದಾರಿ ವಹಿಸಿದ್ದಾಳೆ. ಮನೆ ಸೊಸೆ ಎಂಬ ಪಟ್ಟ ಸುಲಭವಾಗಿ ಬರುವಂಥದ್ದಲ್ಲ, ಯಾರಿಗೆ ಏನು ಬೇಕು ಏನು ಬೇಡ ಎಂಬುದನ್ನು ತಿಳಿದುಕೊಳ್ಳಬೇಕು, ಮನೆಯನ್ನು ನಿಭಾಯಿಸಬೇಕು ಆಗಲೇ ಸೊಸೆ ಅನ್ನಿಸಿಕೊಳ್ಳೋದು ಎಂದು ಕುಸುಮಾ ಹೇಳುತ್ತಾಳೆ. ಇಷ್ಟು ದಿನಗಳು ಆರಾಮವಾಗಿ ಓಡಾಡಿಕೊಂಡು ಇದ್ದ ಶ್ರೇಷ್ಠಾಗೆ ಕೆಲಸ ಮಾಡುವುದು ಕಷ್ಟವಾಗುತ್ತಿದೆ.
ಕಾಫಿ ಮಾಡಿ, ತಿಂಡಿ ಮುಗಿಸಿ, ಶ್ರೇಷ್ಠಾ ಮನೆ ಒರೆಸಲು ಶುರು ಮಾಡುತ್ತಾಳೆ. ಆದರೆ ಪೂಜಾ ಹಾಗೂ ಸುಂದ್ರಿ ಬೇಕಂತಲೇ ಓಡಾಡಿಕೊಂಡು ಮನೆಯನ್ನು ಮತ್ತೆ ರಾಡಿ ಮಾಡುತ್ತಾರೆ. ಈ ಕೆಲಸ ಮುಗಿಸಿ ಮೇಲೆ ಬಾ ಅಲ್ಲಿ ಇನ್ನೂ ಕೆಲಸ ಇದೆ ಎಂದು ಕುಸುಮಾ ಹೇಳುತ್ತಾಳೆ. ಮನೆ ಕ್ಲೀನ್ ಮಾಡಿ ರೆಸ್ಟ್ ಮಾಡೋಣ ಎಂದುಕೊಂಡಿದ್ದ ಶ್ರೇಷ್ಠಾಗೆ ಇನ್ನೂ ಕೆಲಸ ಇದೆ ಅನ್ನೋದನ್ನು ಕೇಳಿ ಸಾಕಾಗುತ್ತದೆ. ನಾನು ಕೆಲಸ ಮಾಡುವುದಿಲ್ಲ, ನೀವು ಬೇಕಂತಲೇ ಹೀಗೆಲ್ಲಾ ಮಾಡುತ್ತಿದ್ದೀರಿ ಎಂದು ಶ್ರೇಷ್ಠಾ ಕೋಪಗೊಳ್ಳುತ್ತಾಳೆ. ಅಷ್ಟರಲ್ಲಿ ಭಾಗ್ಯಾ ಕೂಡಾ ಬರುತ್ತಾಳೆ. ನಿನಗೆ ಸೂರ್ಯವಂಶಿ ಮನೆ ಸೊಸೆ ಪಟ್ಟ ಬೇಕು, ಕೆಲಸ ಮಾತ್ರ ಮಾಡೋಕೆ ಅಗುವುದಿಲ್ಲ ಎಂದಾದರೆ ನಾನು ಈ ಮನೆ ಸೊಸೆ ಅಲ್ಲ ಅಂತ ಹೇಳಿ ಇಲ್ಲಿಂದ ಹೋಗು ಎಂದು ಭಾಗ್ಯಾ ಹೇಳುತ್ತಾಳೆ.
ಮನೆ ಕೆಲಸದವಳನ್ನು ಫಿಕ್ಸ್ ಮಾಡಿದ ಶ್ರೇಷ್ಠಾ
ನಾನು ಭಾಗ್ಯಾಗಿಂತ ಯಾವ ಕೆಲಸದಲ್ಲೂ ಕಡಿಮೆ ಇಲ್ಲ ಅನ್ನುವಂತೆ ಆಗಬಾರದು ಹೇಗಾದರೂ ಮಾಡಿ ಕೆಲಸ ಮುಗಿಸೋಣ ಎಂದುಕೊಂಡು ಶ್ರೇಷ್ಠಾ, ಧೂಳು ಕೊಡವುತ್ತಾಳೆ. ಅದಾದ ನಂತರ ಒಂದು ರಾಶಿ ಬಟ್ಟೆಯನ್ನು ಶ್ರೇಷ್ಠಾ ಮುಂದೆ ಹಾಕಿ, ಒಗೆಯುವಂತೆ ಹೇಳುತ್ತಾಳೆ. ಇದು ಸುಲಭದ ಕೆಲಸ ಎಂದು ಶ್ರೇಷ್ಠಾ ಬಟ್ಟೆಯನ್ನು ವಾಷಿಂಗ್ ಮೆಷೀನ್‌ಗೆ ಹಾಕಲು ಹೋಗುತ್ತಾಳೆ. ನಾನು ಬಟ್ಟೆ ಒಗೆಯೋಕೆ ಹೇಳಿದ್ದು ವಾಷಿಂಗ್ ಮೆಷೀನ್‌ಗೆ ಹಾಕು ಅಂತ ಅಲ್ಲ, ನಮ್ಮ ಭಾಗ್ಯಾ ಕೈಯಲ್ಲೇ ಬಟ್ಟೆ ಒಗೆಯುತ್ತಿದ್ದಳು ಅಂತ ಕುಸುಮಾ ಹೇಳುತ್ತಾಳೆ. ವಾಷಿಂಗ್ ಮೆಷೀನ್ ಇದ್ದರೆ ತಾನೇ ನೀನು ಒಗೆಯೋದು ಅಂತ ಭಾಗ್ಯಾ, ವೈರ್ ಕಟ್ ಮಾಡುತ್ತಾಳೆ ವಿಧಿ ಇಲ್ಲದೆ ಶ್ರೇಷ್ಠಾ, ಕೈಯಲ್ಲೇ ಬಟ್ಟೆ ಒಗೆಯಲು ಶುರು ಮಾಡುತ್ತಾಳೆ.
ನಾನು ಹೀಗೆ ಕೆಲಸ ಮಾಡುತ್ತಾ ಇದ್ದರೆ ಆಗುವುದಿಲ್ಲ ಎಂದುಕೊಳ್ಳುವ ಶ್ರೇಷ್ಠಾ, ಕೆಲಸಕ್ಕಾಗಿ ಬ್ರೋಕರ್‌ಗೆ ಕರೆ ಮಾಡಿ ಕೆಲಸದವಳನ್ನು ಬರಲು ಹೇಳುತ್ತಾಳೆ. ಇನ್ನು ನಾನು ಆರಾಮವಾಗಿ ಇರಬಹುದು ಎಂದು ಖುಷಿಯಾಗುತ್ತಾಳೆ.
ಶ್ರೇಷ್ಠಾ ಪ್ಲ್ಯಾನ್ ವರ್ಕೌಟ್ ಆಗುತ್ತಾ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ