ಅಪ್ಪ ಅಮ್ಮನ ಡಿವೋರ್ಸ್ ವಿಚಾರದ ಬಗ್ಗೆ ವ್ಯಂಗ್ಯವಾಡಿದ ಸಹಪಾಠಿಗಳಿಗೆ ಹಾಕಿ ಸ್ಟಿಕ್‌ನಲ್ಲಿ ಹೊಡೆದ ತನ್ವಿ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 6ರ ಎಪಿಸೋಡ್‌ನಲ್ಲಿ ತಂದೆ ತಾಯಿ ಡಿವೋರ್ಸ್ ಬಗ್ಗೆ ವ್ಯಂಗ್ಯವಾಡಿದ ಸಹಪಾಠಿಗಳಿಗೆ ತನ್ವಿ ಹಾಕಿ ಸ್ಟಿಕ್‌ನಲ್ಲಿ ಹೊಡೆಯುತ್ತಾಳೆ. ಬಹಳ ದಿನಗಳ ನಂತರ ಶ್ರೇಷ್ಠಾಳನ್ನು ನೋಡಲು ಬರುವ ಗೆಳತಿ ಕಾವ್ಯಾ, ಮತ್ತೆ ಅವಳಿಗೆ ಬುದ್ಧಿವಾದ ಹೇಳಲು ಪ್ರಯತ್ನಿಸುತ್ತಾಳೆ.
Bhagyalakshmi Serial: ಗಂಡ ಮನೆಯಿಂದ ಹೊರ ಹಾಕಿದ ನಂತರ ಅವನಿಗೆ ಸವಾಲು ಹಾಕಿದ ಭಾಗ್ಯಾ, ತವರು ಮನೆಗೆ ಬಂದಿದ್ದಾಳೆ. ಇನ್ಮುಂದೆ ನಾನೇ ಎಲ್ಲರನ್ನೂ ನೋಡಿಕೊಳ್ಳುತ್ತೇನೆ ಎಂದು ಅತ್ತೆ-ಮಾವ, ಮಕ್ಕಳನ್ನು ಕರೆದುಕೊಂಡು ತಾಯಿ ಮನೆಗೆ ಬರುತ್ತಾಳೆ. ಇಷ್ಟು ದಿನಗಳ ಕಾಲ ಸಂಸ್ಕಾರವಂತ ಎಂದುಕೊಂಡಿದ್ದ ಮಗ ನಮಗೆ ಈ ಸ್ಥಿತಿ ತಂದುಬಿಟ್ಟನಲ್ಲಾ ಅನ್ನೋದನ್ನು ನೆನೆದು ಕುಸುಮಾ, ಧರ್ಮರಾಜ್ ಅದೇ ವಿಚಾರವನ್ನು ನೆನೆದು ಬೇಸರ ವ್ಯಕ್ತಪಡಿಸುತ್ತಾರೆ.
ಅಪ್ಪ ಅಮ್ಮ , ಅತ್ತೆ ಮಾವನಿಗೆ ಧೈರ್ಯ ತುಂಬಿದ ಭಾಗ್ಯಾ
ನೆರೆಹೊರೆಯವರು ಮಗಳ ಬಗ್ಗೆ ಕೊಂಕು ಆಡುವುದನ್ನು ನೋಡಿದ ಸುನಂದಾ ಕಣ್ಣೀರಿಡುತ್ತಾಳೆ. ಆದರೆ ಭಾಗ್ಯಾ, ಅಮ್ಮನನ್ನು ಸಮಾಧಾನ ಮಾಡುತ್ತಾಳೆ. ವ್ಯಂಗ್ಯವಾಡಿದವರ ಮುಂದೆ ನಾನು ಚೆನ್ನಾಗಿ ಬದುಕಿ ಬಾಳುತ್ತೇನೆ ನೋಡುತ್ತಿರು ಎಂದು ಅಮ್ಮನಿಗೆ ಧೈರ್ಯ ತುಂಬುತ್ತಾಳೆ. ಮರುದಿನ ಎದ್ದು ಎಲ್ಲರಿಗೂ ಕಾಫಿ ಮಾಡಿಕೊಡುತ್ತಾಳೆ. ಮಾವನಿಗೆ ನ್ಯೂಸ್ ಪೇಪರ್ ಓದುವ ಅಭ್ಯಾಸ ಇರುವುದು ಭಾಗ್ಯಾಗೆ ಗೊತ್ತಿರುವುದರಿಂದ ಪೇಪರ್‌ನವರಿಗೆ ಹೇಳಿರುತ್ತಾಳೆ. ಮಾವ ಇದೊಂದು ದಿನ ಅಡ್ಜೆಸ್ಟ್ ಮಾಡಿಕೊಳ್ಳಿ, ಪೇಪರ್ ಇಲ್ಲದೆ ನಿಮಗೆ ಟೈಮ್ ಪಾಸ್ ಆಗುವುದಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತು,ನಾಳೆಯಿಂದ ಮನೆಗೆ ಪೇಪರ್ ಬರುತ್ತದೆ ಎನ್ನುತ್ತಾಳೆ. ನನಗೆ ಪೇಪರ್ ಅವಶ್ಯಕತೆ ಇಲ್ಲ, ನಿಮ್ಮ ತಂದೆ ಜೊತೆ ಮಾತನಾಡುತ್ತಾ ಸಮಯ ಕಳೆಯುತ್ತೇನೆ ಎಂದು ಧರ್ಮರಾಜ್ ಹೇಳುತ್ತಾನೆ. ಮಾವ ನನ್ನ ಸೊಸೆಗೆ ನಮ್ಮನ್ನೆಲ್ಲಾ ಸಾಕಲು ಆಗುವುದಿಲ್ಲ ಎಂದುಕೊಳ್ಳಬೇಡಿ ನಾನು ಕೈಲಾಗದವಳಲ್ಲ ಎನ್ನುತ್ತಾಳೆ. ಸೊಸೆ ಪ್ರೀತಿ ಕಂಡು ಧರ್ಮರಾಜ್ ಖುಷಿಯಾಗುತ್ತಾರೆ.
ಭಾಗ್ಯಾ ಮಕ್ಕಳಿಗೆ ಲಂಚ್ ಬಾಕ್ಸ್ ರೆಡಿ ಮಾಡುತ್ತಾಳೆ. ಅಮ್ಮನ ಮನೆಯಿಂದಲೇ ಮಕ್ಕಳನ್ನು ಸ್ಕೂಲ್‌ಗೆ ಕಳಿಸಲು ಸಿದ್ಧತೆ ಮಾಡುತ್ತಾಳೆ. ತನ್ವಿ ಕಾಲೇಜಿಗೆ, ಗುಂಡಣ್ಣ ಸ್ಕೂಲ್‌ಗೆ ಹೊರಡುತ್ತಾರೆ. ಅವರನ್ನೆಲ್ಲಾ ಕಳಿಸಿ ಭಾಗ್ಯಾ ಹೋಟೆಲ್ ಕೆಲಸಕ್ಕೆ ಹೊರಡಲು ಸಿದ್ಧಳಾಗುತ್ತಾಳೆ. ಇವತ್ತಿನಿಂದ ನಾನು ಹೊಸ ಜೀವನ ಆರಂಭಿಸುತ್ತಿದ್ದೇನೆ ಎಲ್ಲರೂ ಆಶೀರ್ವಾದ ಮಾಡಿ ಎಂದು ಅತ್ತೆ ಮಾವ ಹಾಗೂ ಅಪ್ಪ ಅಮ್ಮನ ಕಾಲು ಮುಟ್ಟಿ ನಮಸ್ಕರಿಸುತ್ತಾಳೆ. ದೇವರಿಗೂ ನಮಸ್ಕರಿಸುವ ಭಾಗ್ಯಾ ಇದುವರೆಗೂ ಸಾಕಷ್ಟು ಪರೀಕ್ಷೆ ಕೊಟ್ಟಿರುವೆ, ಇನ್ಮುಂದೆ ಕೊಡಬೇಡ ಎಂದು ಕೇಳುವುದಿಲ್ಲ, ಅದರೆ ಅದೆಲ್ಲವನ್ನೂ ಧೈರ್ಯವಾಗಿ ಎದುರಿಸುವ ಶಕ್ತಿ ಕೊಡು ಎಂದು ಪ್ರಾರ್ಥನೆ ಮಾಡಿಕೊಂಡು, ಕೆಲಸಕ್ಕೆ ಹೊರಡುತ್ತಾಳೆ.
ತನ್ವಿ ಕುಟುಂಬದ ಬಗ್ಗೆ ಕೊಂಕು ಮಾತನಾಡಿದ ಸಹಪಾಠಿಗಳು
ಇತ್ತ ತನ್ವಿ ಕಾಲೇಜಿನಲ್ಲಿ ಅವಳ ಸಹಪಾಠಿಗಳು ತಾಂಡವ್ ಭಾಗ್ಯಾ ಡಿವೋರ್ಸ್ ವಿಚಾರದ ಬಗ್ಗೆ ತನ್ವಿ ಎದುರಿಗೆ ಮಾತನಾಡುತ್ತಾರೆ. ತನ್ವಿ ತಂದೆ ತಾಯಿ ಬೇರೆಯಾಗಿದ್ದಾರಂತೆ. ಅವರ ತಂದೆ ಮೊದಲಿನಿಂದಲೂ ಡಿವೋರ್ಸ್ ಕೇಳುತ್ತಿದ್ದರಂತೆ, ಆದ್ರೆ ನಿನ್ನೆ ಎಲ್ಲರನ್ನೂ ಮನೆಯಿಂದ ಹೊರ ಹಾಕಿದ್ದಾರಂತೆ. ತನ್ವಿ ನೀನು ಅಪ್ಪನ ಜೊತೆ ಇದ್ದೀಯ, ಅಮ್ಮನ ಜೊತೆ ಇದ್ದೀಯ? ನಮ್ಮ ಮನೆಯಲ್ಲಿ ನನ್ನ ಅಮ್ಮನೇ ನನಗೆ ಇಂಗ್ಲೀಷ್ ಹೇಳಿಕೊಡೋದು, ಆದರೆ ನಿಮ್ಮ ಮನೆಯಲ್ಲಿ ನೀನೇ ನಿನ್ನ ಅಮ್ಮನಿಗೆ ಇಂಗ್ಲೀಷ್ ಹೇಳಿಕೊಡುತ್ತಿದ್ದೀಯ ಎಂದು ವ್ಯಂಗ್ಯವಾಡುತ್ತಾರೆ. ಇದರಿಂದ ಕೋಪಗೊಂಡ ತನ್ವಿ ಅವರನ್ನು ತಳ್ಳುತ್ತಾಳೆ. ತಮ್ಮನ್ನು ತಳ್ಳಿದ ಕೋಪಕ್ಕೆ ಮೂವರೂ ತನ್ವಿಗೆ ಹೊಡೆಯುತ್ತಾರೆ. ಇದನ್ನು ಸಹಿಸದ ತನ್ವಿ, ಅವರಿಗೆ ಹಾಕಿ ಸ್ಟಿಕ್‌ನಲ್ಲಿ ಹೊಡೆಯುತ್ತಾಳೆ.
ಮತ್ತೊಂದೆಡೆ ತಾಂಡವ್, ಶ್ರೇಷ್ಠಾಗೆ ಕರೆ ಮಾಡುತ್ತಾನೆ. ಈಗ ನೆನಪಾಯಿತಾ ಎಂದು ಶ್ರೇಷ್ಠಾ ಕೊಂಕು ಮಾತನಾಡುತ್ತಾಳೆ. ಪರಿಸ್ಥಿತಿ ಗೊತ್ತಿದ್ದರೂ ಈ ರೀತಿ ಕೇಳುತ್ತಿದ್ದೀಯ, ನಿನ್ನನ್ನು ಹೆಂಡತಿ ಎಂದು ಹೇಳಿದಿದ್ದರೆ, ಆ ಹೆಂಗಸರು ಎಲ್ಲರನ್ನೂ ಕರೆದು ನನ್ನ ಮರ್ಯಾದೆ ಹರಾಜು ಹಾಕುತ್ತಿದ್ದರು, ನನಗೆ ಸ್ವಲ್ಪ ದಿನ ಸಮಯ ಕೊಡು ಎಲ್ಲವನ್ನೂ ಸರಿ ಮಾಡಿ, ನಿನ್ನನ್ನು ಎಲ್ಲರೆದುರು ಮದುವೆ ಆಗಿ ಈ ಮನೆಗೆ ಕರೆದುಕೊಂಡು ಬರುತ್ತೇನೆ ಎಂದು ಹೇಳುತ್ತಾನೆ. ಅಷ್ಟರಲ್ಲಿ ಶ್ರೇಷ್ಠಾ ಮನೆಗೆ ಕಾವ್ಯಾ ಬರುತ್ತಾಳೆ. ಮತ್ತೊಬ್ಬರ ಮನೆಯನ್ನು ಹಾಳು ಮಾಡಿ ನೀನು ಎಂದಿಗೂ ಚೆನ್ನಾಗಿರುವುದಿಲ್ಲ ಎಂದು ಕಾವ್ಯಾ, ಶ್ರೇಷ್ಠಾಗೆ ಶಾಪ ಹಾಕುತ್ತಾಳೆ. ಇದಕ್ಕೆ ಕೋಪಗೊಂಡ ಶ್ರೇಷ್ಠಾ, ನೀನು ಒಂದು ಕ್ಷಣವೂ ಇಲ್ಲಿರಬೇಡ ಎಂದು ಗೆಳತಿಯನ್ನು ಮನೆಯಿಂದ ಹೊರ ಕಳಿಸುತ್ತಾಳೆ.
ಇದನ್ನೂ ಓದಿ: ಮಾಸ್ಟರ್ ಕಿಶನ್ ಈಗ ಹೇಗಿದ್ದಾರೆ ನೋಡಿ
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ