ತಾಂಡವ್ ಮನೆಯಲ್ಲಿದ್ದ ಹಳೆಯ ವಸ್ತುಗಳನ್ನೆಲ್ಲಾ ಗಂಟು ಕಟ್ಟಿ ಸುನಂದಾ ಮನೆಗೆ ತಂದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 7ರ ಎಪಿಸೋಡ್‌ನಲ್ಲಿ ಶ್ರೇಷ್ಠಾ, ತಾಂಡವ್ ಮನೆಯಲ್ಲಿದ್ದ ಹಳೆಯ ವಸ್ತುಗಳನ್ನೆಲ್ಲಾ ಗಂಟುಕಟ್ಟಿ ಸುನಂದಾ ಮನೆಗೆ ತರುತ್ತಾಳೆ. ಇನ್ಮುಂದೆ ಅದು ನನ್ನ ಮನೆ. ಅಲ್ಲಿ ತಾಂಡವ್-ನನಗೆ ಸಂಬಂಧಿಸಿದ ವಸ್ತುಗಳು ಮಾತ್ರ ಇರಬೇಕು ಎನ್ನುತ್ತಾಳೆ. ಶ್ರೇಷ್ಠಾ ಮಾತುಗಳನ್ನು ಕೇಳಿ ಕುಸುಮಾ ಕೋಪಗೊಳ್ಳುತ್ತಾಳೆ.
Bhagyalakshmi Serial: ಭಾಗ್ಯಾ ಅಮ್ಮನ ಮನೆಯಿಂದ ಕೆಲಸಕ್ಕೆ ಹೊರಟಿದ್ದಾಳೆ. ಮಕ್ಕಳು ಕೂಡಾ ಅಜ್ಜಿ ಮನೆಯಿಂದ ಸ್ಕೂಲ್, ಕಾಲೇಜಿಗೆ ಹೋಗಿದ್ದಾರೆ. ಹೋಟೆಲ್‌ನಲ್ಲಿ ಭಾಗ್ಯಾ, ಎಲ್ಲವನ್ನೂ ನೆನಪಿಸಿಕೊಂಡು ಅಳುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಹಿತಾ ಬರುತ್ತಾಳೆ. ಭಾಗ್ಯಾ ಅಳುವುದನ್ನು ನೋಡಿ ಸಮಾಧಾನ ಮಾಡುತ್ತಾಳೆ. ಎಲ್ಲಾ ನನ್ನ ಕಣ್ಣ ಮುಂದೆ ನಡೆದಿದೆ, ಏನಾಯ್ತು, ನೀವು ಅಳುತ್ತಿರುವುದು ಏಕೆ ಅಂತ ನಾನು ಕೇಳುವುದಿಲ್ಲ. ಆದರೆ ಎಲ್ಲವೂ ಸರಿ ಆಗುತ್ತದೆ ಎಂದು ಮಾತ್ರ ಹೇಳಬಲ್ಲೆ ಎಂದು ಹಿತಾ ಭಾಗ್ಯಾಗೆ ಧೈರ್ಯ ಹೇಳುತ್ತಾಳೆ.
ಭಾಗ್ಯಾಗೆ ಧೈರ್ಯ ಹೇಳಿದ ಹೋಟೆಲ್ ಸಹೋದ್ಯೋಗಿಗಳು
ಇಷ್ಟು ದಿನ ನಾನು ಅನುಭವಿಸಿದ ಕಷ್ಟಗಳೇ ಬೇರೆ, ಆದರೆ ಈ ರೀತಿಯ ಪರಿಸ್ಥಿತಿ ಬರುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಭಾಗ್ಯಾ ಕಣ್ಣೀರಿಡುತ್ತಾಳೆ. ಭಾಗ್ಯಾ ಸಹೋದ್ಯೋಗಿಗಳು ಕೂಡಾ ಅವಳ ಪರ ನಿಲ್ಲುತ್ತಾರೆ. ನೀವು ನಮಗಿಂತ ಸೀನಿಯರ್ ಎಂಬುದನ್ನೂ ಲೆಕ್ಕ ಇಡದೆ ನಮ್ಮನ್ನು ನಿಮ್ಮ ತಮ್ಮ ತಂಗಿಯರಂತೆ ನೋಡಿಕೊಳ್ಳುತ್ತಿದ್ದೀರ, ಪ್ರೀತಿಯಿಂದ ಕೆಲಸ ಹೇಳಿಕೊಟ್ಟಿದ್ದೀರ, ಅಂತದರಲ್ಲಿ ನೀವು ಕಷ್ಟದಲ್ಲಿರುವಾಗ ನಿಮ್ಮ ಜೊತೆ ನಾವು ಇರಬೇಕು ಎನ್ನುತ್ತಾರೆ. ಅದೇ ಸಮಯಕ್ಕೆ ಅಲ್ಲಿಗೆ ಹೋಟೆಲ್ ಮ್ಯಾನೇಜರ್ ಬರುತ್ತಾರೆ. ಅವರನ್ನು ನೋಡಿ ಅಲ್ಲಿ ಗುಂಪು ಗೂಡಿ ಮಾತನಾಡುತ್ತಿದ್ದವರು ಗಾಬರಿಯಾಗುತ್ತಾರೆ. ನಾನು ಬಂದೆ ಎಂದು ನೀವೆಲ್ಲರೂ ಮಾತನಾಡುವುದನ್ನು ನಿಲ್ಲಿಸಿ ಕೆಲಸ ಮಾಡುವ ಅಗತ್ಯವಿಲ್ಲ. ನೀವು ಭಾಗ್ಯಾಗೆ ಸಪೋರ್ಟ್ ಮಾಡುತ್ತಿರುವುದು ನನಗೆ ಖುಷಿಯಿದೆ. ಭಾಗ್ಯಾ ನನಗೆ ಎಲ್ಲಾ ವಿಚಾರ ತಿಳಿಯಿತು, ನನ್ನ ಬೆಂಬಲ ಕೂಡಾ ನಿಮಗಿದೆ ಎನ್ನುತ್ತಾರೆ.
ಭಾಗ್ಯಾ ಪೂಜಾಗೆ ಕರೆ ಮಾಡಿ ಅತ್ತೆ, ಮಾವ ಹೇಗಿದ್ಧಾರೆ ಎಂದು ವಿಚಾರಿಸಿಕೊಳ್ಳುತ್ತಾಳೆ. ಅಲ್ಲಿ ಸುಖವಾಗಿದ್ದವರನ್ನು ಕರೆತಂದು ಇಲ್ಲಿ ಕಷ್ಟಕೊಡುತ್ತಿದ್ದೇವೆ ಎನ್ನಿಸುತ್ತಿದೆ ಎಂದು ಪೂಜಾ ಬೇಸರ ಮಾಡಿಕೊಳ್ಳುತ್ತಾಳೆ. ಅತ್ತೆ ಮಾವನಿಗೆ ಈ ಪರಿಸ್ಥಿತಿ ಬರಲು ನಾನೇ ಕಾರಣನಾಗಿಬಿಟ್ಟೆ ಎಂದು ಭಾಗ್ಯಾ ಕೂಡಾ ಬೇಸರಗೊಳ್ಳುತ್ತಾಳೆ. ಪೂಜಾ ಜೊತೆ ಮಾತು ಮುಗಿಸುತ್ತಿದ್ದಂತೆ ಭಾಗ್ಯಾಗೆ ತನ್ವಿ ಕಾಲೇಜಿನಿಂದ ಕರೆ ಬರುತ್ತದೆ, ನಿಮ್ಮ ಮಗಳು ತನ್ವಿ ಓದುತ್ತಿರುವ ಕಾಲೇಜ್ ಪ್ರಿನ್ಸಿಪಾಲ್ ನಾನು, ನಿಮ್ಮ ಮಗಳು ತನ್ನ ಕ್ಲಾಸ್‌ಮೆಟ್ಸ್‌ಗೆ ಹೊಡೆದಿದ್ದಾಳೆ. ನೀವು ಇಲ್ಲಿಗೆ ಬನ್ನಿ ಎಂದು ಕರೆಯುತ್ತಾರೆ. ಭಾಗ್ಯಾ ಗಾಬರಿಯಿಂದ ಕಾಲೇಜಿಗೆ ಓಡೋಡಿ ಬರುತ್ತಾಳೆ.
ತನ್ವಿ ಸುದ್ದಿ ಕೇಳಿ ಕಾಲೇಜಿಗೆ ಓಡೋಡಿ ಬಂದ ಭಾಗ್ಯಾ
ತನ್ವಿ ತನ್ನ ಸಹಪಾಠಿಗಳಿಗೆ ಹೊಡೆಯುವಾಗ ಪ್ರಿನ್ಸಿಪಾಲ್ ಬಂದು ಬಿಡಿಸುತ್ತಾರೆ. ಎಲ್ಲರನ್ನೂ ತಮ್ಮ ಆಫೀಸಿಗೆ ಬರಲು ಹೇಳುತ್ತಾರೆ. ನೀವು ಬರದಿದ್ದರೆ ತನ್ವಿ ನಮ್ಮನ್ನು ಸಾಯಿಸಿಬಿಡುತ್ತಿದ್ದಳು, ತುಂಬಾ ನೋವಾಗುತ್ತಿದೆ ಎಂದು ತನ್ವಿ ಕ್ಲಾಸ್‌ಮೆಟ್ಸ್ ಹೇಳುತ್ತಾರೆ, ನಾನು ಸುಮ್ಮನೆ ಹೊಡೆಯಲಿಲ್ಲ. ನನ್ನ ಅಮ್ಮನ ಬಗ್ಗೆ ಇವರೆಲ್ಲಾ ಕೆಟ್ಟದಾಗಿ ಮಾತನಾಡಿದರು ಅದಕ್ಕೆ ಹೊಡೆದೆ ಎಂದು ತನ್ವಿ ಹೇಳುತ್ತಾಳೆ. ನನ್ನ ಅಮ್ಮ ಎಂದಿಗೂ ನಮಗೆ ಉಪವಾಸ ಮಲಗಿಸಲಿಲ್ಲ, ಎಂದಿಗೂ ಕೇರ್‌ಲೆಸ್ ಮಾಡಿದವಳಲ್ಲ. ಬೆಳಗ್ಗೆ ಎದ್ದಾಗಿನಿಂದ, ರಾತ್ರಿ ಮಲಗುವವರೆಗೂ ಅಮ್ಮ ನಮ್ಮನ್ನು ಬಹಳ ಜೋಪಾನ ಮಾಡುತ್ತಾಳೆ, ಜೊತೆಗೆ ಒಂದು ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಶೆಫ್ ಆಗಿ ಕೆಲಸ ಮಾಡುತ್ತಿದ್ದಾಳೆ ಎನ್ನುತ್ತಾಳೆ. ಮಗಳ ಮಾತುಗಳನ್ನು ಭಾಗ್ಯಾ ಹೊರಗಿನಿಂದ ಕೇಳಿಸಿಕೊಳ್ಳುತ್ತಾಳೆ.
ಕುಸುಮಾ, ಧರ್ಮರಾಜ್ ಮನೆ ಹೊರಗೆ ಕುಳಿತು ಮಾತನಾಡುವಾಗ ಲಗ್ಗೇಜ್ ತುಂಬಿದ ವ್ಯಾನ್‌ವೊಂದು ಅಲ್ಲಿಗೆ ಬರುತ್ತದೆ. ಹಿಂದೆಯೇ ಶ್ರೇಷ್ಠಾ ಕೂಡಾ ಕಾರಿನಲ್ಲಿ ಬರುತ್ತಾಳೆ. ಇದು ಲಕ್ಷ್ಮೀ ಕೊಟ್ಟದ್ದು ಇಲ್ಲಿಗೆ ಏಕೆ ತಂದೆ ಎಂದು ಕುಸುಮಾ ಕೇಳುತ್ತಾಳೆ. ಈಗ ಅದು ತಾಂಡವ್ ಮನೆ, ಅಂದರೆ ನನ್ನ ಮನೆ ಈಗ ಅಲ್ಲಿ ತಾಂಡವ್ ಹಾಗೂ ನನಗೆ ಸೇರಿದ ವಸ್ತುಗಳು ಮಾತ್ರ ಇರಬೇಕು ಅಷ್ಟೇ. ಈ ಬೇಡದ ಸಾಮಗ್ರಿಗಳು ಅಲ್ಲಿ ಇರಬಾರದು ಅದಕ್ಕೆ ತಂದೆ ಎನ್ನುತ್ತಾಳೆ. ಅಷ್ಟರಲ್ಲಿ ವ್ಯಾನ್‌ನವನು ಇದನ್ನು ಎಲ್ಲಿ ಇಡಬೇಕು ಮೇಡಂ ಎಂದು ಶ್ರೇಷ್ಠಾಗೆ ಕೇಳುತ್ತಾನೆ. ಇಲ್ಲಿ ಇಳಿಸು ಬೇಕಾದರೆ ಒಳಗೆ ತೆಗೆದುಕೊಳ್ಳಲಿ ಇಲ್ಲವಾದರೆ ಇಲ್ಲಿ ಕಸಕ್ಕೆ ಎಸೆಯಲಿ ಎನ್ನುತ್ತಾಳೆ. ಶ್ರೇಷ್ಠಾ ಮಾತುಗಳನ್ನು ಕೇಳಿ ಕೋಪಗೊಂಡ ಕುಸುಮಾ ಅವಳಿಗೆ ಹೊಡೆಯಲು ಬಂದಾಗ, ಶ್ರೇಷ್ಠಾ ಕುಸುಮಾ ಕೈ ಹಿಡಿದುಕೊಳ್ಳುತ್ತಾಳೆ.
ಇದನ್ನೂ ಓದಿ: ಸಿಂಪಲ್ ಸೀರೆಯುಟ್ಟು ಪೋಸ್ ಕೊಟ್ಟ ಚಾರು
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ