ಈ ಮನೆ ಸೊಸೆ ಆಗಬೇಕಾದ್ರೆ ಅಮ್ಮ ಹೇಳಿದ ಎಲ್ಲಾ ಕೆಲಸ ಮಾಡಲೇಬೇಕು ಎಂದ ತಾಂಡವ್‌, ಕೋಪಗೊಂಡ ಶ್ರೇಷ್ಠಾ ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಈ ಮನೆ ಸೊಸೆ ಆಗಬೇಕಾದ್ರೆ ಅಮ್ಮ ಹೇಳಿದ ಎಲ್ಲಾ ಕೆಲಸ ಮಾಡಲೇಬೇಕು ಎಂದ ತಾಂಡವ್‌, ಕೋಪಗೊಂಡ ಶ್ರೇಷ್ಠಾ ಭಾಗ್ಯಲಕ್ಷ್ಮೀ ಧಾರಾವಾಹಿ

ಈ ಮನೆ ಸೊಸೆ ಆಗಬೇಕಾದ್ರೆ ಅಮ್ಮ ಹೇಳಿದ ಎಲ್ಲಾ ಕೆಲಸ ಮಾಡಲೇಬೇಕು ಎಂದ ತಾಂಡವ್‌, ಕೋಪಗೊಂಡ ಶ್ರೇಷ್ಠಾ ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 7ರ ಎಪಿಸೋಡ್‌ನಲ್ಲಿ ಕುಸುಮಾ ಬಗ್ಗೆ ಶ್ರೇಷ್ಠಾ ಹೇಳಿದ ದೂರು ಕೇಳಿ ತಾಂಡವ್‌ ಕೋಪಗೊಳ್ಳುತ್ತಾನೆ. ಮೊದಲೇ ಭಾಗ್ಯಾ ವಿಚಾರಕ್ಕೆ ಸಿಟ್ಟಾಗಿರುವ ತಾಂಡವ್‌, ನೀನು ಈ ಮನೆ ಸೊಸೆಯಾಗಬೇಕೆಂದರೆ ಅಮ್ಮ ಹೇಳಿದ ಎಲ್ಲಾ ಕೆಲಸ ಮಾಡಲೇಬೇಕು ಎಂದು ಕಂಡಿಷನ್‌ ಮಾಡುತ್ತಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 7ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 7ರ ಎಪಿಸೋಡ್‌ (PC; Jio Cinema)

Bhagyalakshmi Serial: ಸ್ಕೂಟರ್‌ನಲ್ಲಿ ಹೋಗಿ ಆಕ್ಸಿಡೆಂಟ್‌ ಮಾಡಿಕೊಂಡು ಬಂದ ಮಾವನಿಗೆ ಭಾಗ್ಯಾ ಕಾರು ಗಿಫ್ಟ್‌ ಆಗಿ ಕೊಡಲು ನಿರ್ಧರಿಸುತ್ತಾಳೆ. ಇದೆಲ್ಲಾ ಬೇಡ ಎಂದರೂ ಭಾಗ್ಯಾ ಕೇಳುವುದಿಲ್ಲ, ಕೊನೆಗೆ ಸೊಸೆಯ ಬಲವಂತಕ್ಕೆ ಧರ್ಮರಾಜ್‌ ತನಗೆ ಇಷ್ಟವಾದ ಕಾರನ್ನು ಸೆಲೆಕ್ಟ್‌ ಮಾಡುತ್ತಾನೆ. ಭಾಗ್ಯಾ ಎಲ್ಲರೆದುರು ಒಳ್ಳೆಯವಳಾಗುವುದನ್ನು ಕಂಡು ತಾಂಡವ್‌ಗೆ ಸಿಟ್ಟು ಬರುತ್ತದೆ.

ಕುಸುಮಾ ಬಗ್ಗೆ ತಾಂಡವ್‌ ಬಳಿ ದೂರು ಹೇಳಿದ ಶ್ರೇಷ್ಠಾ

ಭಾಗ್ಯಾ ಏನು ಮಾಡಿದರೂ ತಾಂಡವ್‌ ಎಲ್ಲದಕ್ಕೂ ಕೊಂಕು ಮಾತನಾಡುತ್ತಾನೆ, ಅಪ್ಪನಿಗೆ ಆಕ್ಸಿಡೆಂಟ್‌ ಆಗಲು ನೀನೇ ಕಾರಣ ಎಂದು ದೂರುವ ತಾಂಡವ್‌, ತನ್ನ ತಂದೆಗೆ ಕಾರು ತೆಗೆದುಕೊಡುವಾಗಲೂ ಭಾಗ್ಯಾಳ ಬಗ್ಗೆ ವ್ಯಂಗ್ಯವಾಡುತ್ತಾನೆ. ನಿಮ್ಮ ಅಪ್ಪನಿಗೆ ಒಂದು ಸ್ಕೂಟರ್‌ ಕೊಡಿಸಲು ನಿನ್ನಿಂದ ಆಗಲಿಲ್ಲ, ಭಾಗ್ಯಾ ಕಾರು ಕೊಡಿಸಿದರೆ ನಿನಗೆ ಸಹಿಸಲು ಆಗುತ್ತಿಲ್ಲವಾ ಎಂದು ಕುಸುಮಾ, ಮಗನನ್ನು ಪ್ರಶ್ನಿಸುತ್ತಾಳೆ. ಕಾರು ಖರೀದಿಸುವುದು ಎಂದರೆ ಸುಲಭದ ಮಾತಲ್ಲ, ಅದಕ್ಕೆ ಪ್ರತಿ ತಿಂಗಳು ಇಎಂಐ ಕಟ್ಟಬೇಕು. ಇದೆಲ್ಲಾ ಎಷ್ಟು ದಿನ ನಡೆಯುತ್ತದೆ ನಾನೂ ನೋಡುವೆ ಎಂದು ಕೋಪದಿಂದ ರೂಮ್‌ಗೆ ಬರುತ್ತಾನೆ.

ಭಾಗ್ಯಾ ಎಲ್ಲರೆದುರು ಹೀರೋ ರೀತಿ ಮೆರೆಯುತ್ತಿದ್ದಾಳೆ. ನಾನು ಈ ಮನೆಯ ಮಗ, ನನಗೆ ಯಾರೂ ಸ್ವಲ್ಪವೂ ಗೌರವ ಕೊಡುತ್ತಿಲ್ಲ ಎಂದು ತಾಂಡವ ಕೋಪಗೊಳ್ಳುತ್ತಾನೆ, ಅಷ್ಟರಲ್ಲಿ ಶ್ರೇಷ್ಠಾ ಗೊಣಗೊತ್ತಾ ರೂಮ್‌ಗೆ ಬರುತ್ತಾಳೆ. ‘ತಾಂಡವ್‌ ನನಗೆ ನಿಜವಾಗಲೂ ಕಷ್ಟವಾಗುತ್ತಿದೆ. ನಿನ್ನ ಅಮ್ಮ ನನಗೆ ಬಹಳ ಹಿಂಸೆ ಕೊಡುತ್ತಿದ್ದಾರೆ, ಇಷ್ಟೆಲ್ಲಾ ಕೆಲಸವನ್ನು ನಾನು ಮೊದಲು ಮಾಡಿರಲಿಲ್ಲ, ಇವತ್ತು ಮೊದಲ ಬಾರಿಗೆ ನನ್ನ ಕೈಯಾರೆ ಬಟ್ಟೆ ಒಗೆದಿದ್ದೇನೆ, ಇನ್ನು ಆಗುವುದಿಲ್ಲ. ನಾನು ನಿನ್ನ ಜೊತೆ ಆರಾಮಾವಾಗಿ ಇರಬೇಕು ಎಂದುಕೊಂಡು ಈ ಮನೆಗೆ ಬಂದೆ’ ಎನ್ನುತ್ತಾಳೆ. ಮೊದಲೇ ಭಾಗ್ಯಾ ಬಗ್ಗೆ ಕೋಪಗೊಂಡಿದ್ದ ತಾಂಡವ್‌, ಶ್ರೇಷ್ಠಾ ಮಾತುಗಳನ್ನು ಕೇಳಿ ಸಿಟ್ಟಾಗುತ್ತಾನೆ.

ಭಾಗ್ಯಾ ಮೇಲಿನ ಸಿಟ್ಟನ್ನು ಶ್ರೇಷ್ಠಾಗೆ ತೋರಿದ ತಾಂಡವ್‌

ನೀನು ಹಾಲು ಕುಡಿಯುವ ಮಗು ಅಲ್ಲ, ಮೊದಲೇ ನನಗೆ ತಲೆ ಕೆಟ್ಟಿದೆ ಅದರ ಜೊತೆಗೆ ನೀನೂ ನನ್ನ ತಲೆ ಕೆಡಿಸುತ್ತಿದ್ದೀಯ, ಬೆಳಗಿನಿಂದ ಸಂಜೆವರೆಗೂ ನಾನು ನಿನ್ನ ಜೊತೆ ಇರಲು ಸಾಧ್ಯವಿಲ್ಲ. ನನ್ನದೇ ದೊಡ್ಡ ಸಮಸ್ಯೆ ಇರುತ್ತದೆ, ಅಂಥದರಲ್ಲಿ ನೀನು ನನಗೆ ಹಿಂಸೆ ಕೊಡಬೇಡ. ನೀನು ಈ ಮನೆ ಸೊಸೆ ಆಗಬೇಕು ಎಂದರೆ ಇದನ್ನೆಲ್ಲಾ ಮ್ಯಾನೇಜ್‌ ಮಾಡುವುದನ್ನು ಕಲಿಯಲೇಬೇಕು ಎಂದು ಅವಳನ್ನು ತನ್ನ ರೂಮ್‌ನಿಂದ ಹೊರ ಹಾಕುತ್ತಾನೆ. ತಾಂಡವ್‌ ಮಾತುಗಳನ್ನು ಕೇಳಿ ಶ್ರೇಷ್ಠಾ ಕೋಪಗೊಳ್ಳುತ್ತಾಳೆ.

ರೂಮ್‌ಗೆ ಮಲಗಲು ಹೋಗುವಾಗ ಕುಸುಮಾ ಬರುತ್ತಾಳೆ. ಅಡುಗೆಮನೆಯಲ್ಲಿ ಉಳಿದಿರುವ ಪಾತ್ರೆಗಳನ್ನು ತೊಳೆದು, ಎಲ್ಲಾ ಕ್ಲೀನ್‌ ಮಾಡಿ ಮಲಗು. ಬೆಳಗ್ಗೆ ಮನೆಯಲ್ಲಿ ಪೂಜೆ ಇದೆ, 4 ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡಬೇಕು ಎಂದು ಕಂಡಿಷನ್‌ ಮಾಡುತ್ತಾಳೆ. ಬೇಗ ಏಳಬೇಕು, ಅಷ್ಟೇ ಅಲ್ಲದೆ ತಣ್ಣೀರಿನ ಸ್ನಾನ ಬೇರೆ ಮಾಡಬೇಕಾ ಎಂದುಕೊಂಡು ಶ್ರೇಷ್ಠಾ ಮಲಗಲು ಹೋಗುತ್ತಾಳೆ. ಬೆಳಗ್ಗೆ ಸುಂದ್ರಿ, ಪೂಜಾ ಬಂದು ಶ್ರೇಷ್ಠಾಳನ್ನು ಎಬ್ಬಿಸುತ್ತಾರೆ. ನೀರು ಬಂದರೆ ತಾನೇ ತಣ್ಣೀರು ಸ್ನಾನ ಮಾಡಬೇಕು, ನಲ್ಲಿ ವಾಲ್‌ ಆಫ್‌ ಮಾಡಿಬಿಡೋಣ ಎಂದು ಹಿಂದಿನ ದಿನವೇ ಶ್ರೇಷ್ಠಾ, ವಾಲ್‌ ಆಫ್‌ ಮಾಡುತ್ತಾಳೆ. ನಲ್ಲಿಯಲ್ಲಿ ನೀರು ಬರದಿದ್ದರೆ ಏನಂತೆ ಸಂಪ್‌ನಿಂದ ಬಕೆಟ್‌ನಲ್ಲಿ ನೀರು ತೆಗೆದುಕೊಂಡು ಸ್ನಾನ ಮಾಡು ಇಲ್ಲದಿದ್ದರೆ ಅತ್ತೆಗೆ ಹೇಳುತ್ತೇನೆ ಎಂದು ಪೂಜಾ, ಸುಂದ್ರಿ ಬ್ಲಾಕ್‌ಮೇಲ್‌ ಮಾಡುತ್ತಾರೆ. ವಾಲ್‌ ನಿಲ್ಲಿಸದಿದ್ದರೆ ನಲ್ಲಿಯಲ್ಲಿ ಸ್ನಾನ ಮಾಡಬಹುದಿತ್ತು, ಎಂದು ಗೊಣಗುತ್ತಾ ಶ್ರೇಷ್ಠಾ, ಸಂಪ್‌ನಿಂದ ನೀರು ತೆಗೆದುಕೊಂಡು ಹೋಗುತ್ತಾಳೆ.

ಕುಸುಮಾ ಹೇಳಿದಂತೆ ಶ್ರೇಷ್ಠಾ, ತಣ್ಣೀರು ಸ್ನಾನ ಮಾಡಿ ಪೂಜೆಗೆ ರೆಡಿಯಾಗುತ್ತಾಳಾ? ಮುಂದಿನ ಎಪಿಸೋಡ್‌ನಲ್ಲಿ ಕಾದು ನೋಡಬೇಕು.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌
ಧರ್ಮರಾಜ್‌ - ಶಶಿಧರ್‌ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್‌
ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್‌
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್‌ ಗೌಡ
ಸುಂದರಿ - ಸುನೇತ್ರಾ ಪಂಡಿತ್‌

Whats_app_banner