ಭಾಗ್ಯಾಗೆ ಕಷ್ಟದ ಮೇಲೆ ಕಷ್ಟ, ಕಾಲೇಜಿನಿಂದ ಸಸ್ಪೆಂಡ್‌ ಆದ ತನ್ವಿ, ವಿಚಾರ ಕೇಳಿ ಖುಷಿಪಟ್ಟ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಾಗೆ ಕಷ್ಟದ ಮೇಲೆ ಕಷ್ಟ, ಕಾಲೇಜಿನಿಂದ ಸಸ್ಪೆಂಡ್‌ ಆದ ತನ್ವಿ, ವಿಚಾರ ಕೇಳಿ ಖುಷಿಪಟ್ಟ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಾಗೆ ಕಷ್ಟದ ಮೇಲೆ ಕಷ್ಟ, ಕಾಲೇಜಿನಿಂದ ಸಸ್ಪೆಂಡ್‌ ಆದ ತನ್ವಿ, ವಿಚಾರ ಕೇಳಿ ಖುಷಿಪಟ್ಟ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 8ರ ಎಪಿಸೋಡ್‌ನಲ್ಲಿ ಸಹಪಾಠಿಗಳಿಗೆ ಹೊಡೆದ ಪರಿಣಾಮ ಕಾಲೇಜ್‌ ಪ್ರಿನ್ಸಿಪಾಲ್‌ ತನ್ವಿಯನ್ನು ಕಾಲೇಜಿನಿಂದ ಸಸ್ಪೆಂಡ್‌ ಮಾಡುತ್ತಾರೆ. ಮನೆಯವರ ಬಳಿ ತನ್ವಿ ಈ ಮಾತು ಹೇಳಿದಾಗ ಶ್ರೇಷ್ಠಾ ಅದನ್ನು ಕೇಳಿಸಿಕೊಂಡು ಖುಷಿ ಪಡುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 8ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 8ರ ಎಪಿಸೋಡ್‌ (PC: Jio Cinema)

Bhagyalakshmi Serial: ತಾಂಡವ್‌ ಹಾಗೂ ಭಾಗ್ಯಾ ದೂರ ಆಗಿರುವುದು ಎಲ್ಲರಿಗೂ ಗೊತ್ತಾಗಿದೆ. ತಾಂಡವ್‌ಗೆ ಬೇರೆ ಹುಡುಗಿ ಜೊತೆ ಅಫೇರ್‌ ಇದೆ, ಇದೇ ಕಾರಣಕ್ಕೆ ಅವನು ಭಾಗ್ಯಾಗೆ ಡಿವೋರ್ಸ್‌ ಕೊಡ್ತಿದ್ದಾನೆ ಎಂಬ ನಿಜ ಬಹಳಷ್ಟು ಜನಕ್ಕೆ ಗೊತ್ತಾಗಿದೆ. ಆದರೆ ಕೆಲವರು ಮಾತ್ರ ಭಾಗ್ಯಾ, ಹೋಟೆಲ್‌ನಲ್ಲಿ ಕೆಲಸ ದೊರೆತ ನಂತರ ಬದಲಾಗಿದ್ದಾಳೆ. ಅದೇ ಕಾರಣದಿಂದ ಗಂಡನಿಂದ ದೂರಾಗಿದ್ದಾಳೆ ಎಂದುಕೊಳ್ಳುತ್ತಾರೆ.

ಸಹಪಾಠಿಗಳಿಗೆ ಹೊಡೆದದ್ದಕ್ಕೆ ಮಗಳಿಗೆ ಬುದ್ಧಿ ಹೇಳಿದ ಭಾಗ್ಯಾ

ಭಾಗ್ಯಾ-ತಾಂಡವ್‌ ಡಿವೋರ್ಸ್‌ ವಿಚಾರ, ಭಾಗ್ಯಾಳನ್ನು ತಾಂಡವ್‌ ಮನೆಯಿಂದ ಹೊರ ಹಾಕಿರುವ ವಿಚಾರ ತನ್ವಿ ಕಾಲೇಜಿನಲ್ಲಿ ಕೂಡಾ ತಿಳಿದಿದೆ. ತನ್ನನ್ನು ಹೀಯಾಳಿಸಿದ ಕ್ಲಾಸ್‌ಮೆಟ್‌ಗಳಿಗೆ ತನ್ವಿ ಹಾಕಿ ಸ್ಟಿಕ್‌ನಿಂದ ಹೊಡೆಯುತ್ತಾಳೆ. ಅದೇ ಸಮಯಕ್ಕೆ ಅಲ್ಲಿಗೆ ಬರುವ ಪ್ರಿನ್ಸಿಪಾಲ್‌ ತನ್ವಿಯನ್ನು ತಡೆಯುತ್ತಾರೆ. ಎಲ್ಲರನ್ನೂ ತಮ್ಮ ಆಫೀಸಿಗೆ ಬರಲು ಹೇಳಿ ಎಲ್ಲರ ಪೋಷಕರಿಗೂ ವಿಷಯ ಮುಟ್ಟಿಸುತ್ತಾರೆ. ಭಾಗ್ಯಾ ಗಾಬರಿಯಿಂದಲೇ ಹೋಟೆಲ್‌ನಿಂದ ಓಡೋಡಿ ಬರುತ್ತಾಳೆ. ಮಗಳು ತನ್ನ ಬಗ್ಗೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡು ಖುಷಿಯಾಗುತ್ತಾಳೆ. ನೀನು ಮಾಡಿದ್ದು ತಪ್ಪು ಎಲ್ಲರ ಬಳಿ ಕ್ಷಮೆ ಕೇಳು ಎಂದು ಭಾಗ್ಯಾ ಮಗಳಿಗೆ ಹೇಳುತ್ತಾಳೆ. ನಾನು ತಪ್ಪು ಮಾಡಿಲ್ಲ, ಇವರೆಲ್ಲಾ ನಿನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ನಾನು ಅವರಿಗೆ ಹೊಡೆದದ್ದು ಎಂದು ತನ್ವಿ ಹೇಳುತ್ತಾಳೆ.

ಅವರೆಲ್ಲಾ ಹಾಗೆ ಮಾತನಾಡಿದ್ದು ನನಗಾಗಲೀ, ನಿನಗಾಗಲೀ ಏನೂ ತೊಂದರೆ ಆಗುವುದಿಲ್ಲ. ನೀನು ಅವರನ್ನು ಹೊಡೆದದ್ದಕ್ಕೆ ಅವರ ಅಪ್ಪ-ಅಮ್ಮ ಬೇಜಾರು ಮಾಡಿಕೊಳ್ಳುತ್ತಾರೆ ಸಾರಿ ಕೇಳು ಎಂದು ಮಗಳಿಗೆ ಬುದ್ಧಿವಾದ ಹೇಳುತ್ತಾಳೆ. ಅಮ್ಮನ ಮಾತು ಕೇಳಿದ ತನ್ವಿ ಎಲ್ಲರಿಗೂ ಸಾರಿ ಕೇಳುತ್ತಾಳೆ. ನೋಡಿ, ನೀವು ನನ್ನ ಮಕ್ಕಳಿದ್ದ ಹಾಗೆ, ಇಂದು ನೀವೆಲ್ಲಾ ನನ್ನ ಬಗ್ಗೆ ಮಾತನಾಡಿ ತನ್ವಿಗೆ ಬೇಸರ ಮಾಡಿದ್ದೀರಿ, ನಾಳೆ ನಿಮ್ಮ ಮನೆ ಬಗ್ಗೆಯೂ ಯಾರಾದರೂ ಮಾತನಾಡಿದರೆ ನಿಮಗೂ ಬೇಸರವಾಗುತ್ತದೆ, ಆದ್ದರಿಂದ ಇನ್ಮುಂದೆ ಹೀಗೆಲ್ಲಾ ಮಾಡಬೇಡಿ ಎಂದು ತನ್ವಿ ಕ್ಲಾಸ್‌ಮೆಟ್ಸ್‌ಗೆ ಭಾಗ್ಯಾ ತಿಳಿ ಹೇಳುತ್ತಾಳೆ.‌

ಕಾಲೇಜಿನಿಂದ ತನ್ವಿಯನ್ನು ಸಸ್ಪೆಂಡ್‌ ಮಾಡಿದ ಪ್ರಿನ್ಸಿಪಾಲ್

ಭಾಗ್ಯಾ ಮಾತುಗಳನ್ನು ಕೇಳುವ ಪ್ರಿನ್ಸಿಪಾಲ್‌, ಎಲ್ಲವನ್ನೂ ನೀವೇ ಮಾತನಾಡಿದರೆ ಹೇಗೆ? ನಾನು ಇರುವುದು ಏಕೆ? ಈ ರೀತಿಯ ವಿದ್ಯಾರ್ಥಿಗಳು ನಮ್ಮ ಶಾಲೆಗೆ ಅವಶ್ಯಕತೆ ಇಲ್ಲ, ಈ ನಾಲ್ವರನ್ನೂ ಸಸ್ಪೆಂಡ್‌ ಮಾಡುತ್ತಿದ್ದೇನೆ ಎನ್ನುತ್ತಾರೆ. ಈ ಮಾತು ಕೇಳಿ ಭಾಗ್ಯಾಗೆ ಶಾಕ್‌ ಆಗುತ್ತದೆ. ದಯವಿಟ್ಟು ವಿದ್ಯಾರ್ಥಿಗಳ ಜೀವನ ಹಾಳು ಮಾಡಬೇಡಿ ಎಂದು ಮನವಿ ಮಾಡುತ್ತಾಳೆ. ನೀವು ಹೇಳಿದಂತೆ ಕೇಳಿ ಇವರನ್ನು ಇಲ್ಲಿ ಮುಂದುವರೆಯಲು ಬಿಟ್ಟರೆ ಕಾಲೇಜಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಪ್ರಿನ್ಸಿಪಾಲ್‌ ಹೇಳುತ್ತಾರೆ. ತನ್ವಿ ಮನವಿ ಮಾಡಿದರೂ ಆತ ಕೇರ್‌ ಮಾಡುವುದಿಲ್ಲ. ಭಾಗ್ಯಾ ಮುಂದೇನು ಮಾಡುವುದು ತೋಚದೆ ಮನೆಗೆ ವಾಪಸ್‌ ಆಗುತ್ತಾಳೆ.

ಅಲ್ಲಿ ಶ್ರೇಷ್ಠಾ ಇದ್ದಿದ್ದನ್ನು ನೋಡಿ ಕೋಪಗೊಳ್ಳುತ್ತಾಳೆ. ಅದರಲ್ಲೂ ಅವಳು ಲಕ್ಷ್ಮೀ ತನಗೆ ಕೊಟ್ಟ ಗಿಫ್ಟನ್ನು ಕೇವಲವಾಗಿ ಕಾಣುತ್ತಿದ್ದಾಳೆ ಎಂದು ತಿಳಿದು ಇಲ್ಲಿಂದ ಹೋಗು ಎಂದು ಅವಳನ್ನು ತಳ್ಳುತ್ತಾಳೆ. ಒಳಗೆ ಬಂದು ಮನೆಯವರ ಬಳಿ ತನ್ವಿ ತಾನು ಸಸ್ಪೆಂಡ್‌ ಆದ ವಿಚಾರನ್ನು ಹೇಳಿ ಅಳುತ್ತಾಳೆ. ಅದನ್ನು ಕೇಳಿಸಿಕೊಂಡ ಶ್ರೇಷ್ಠಾ ಖುಷಿಯಾಗುತ್ತಾಳೆ. ನೀವು ಎಂದಿಗೂ ಖುಷಿಯಾಗಿರಲು ಸಾಧ್ಯವಿಲ್ಲ. ನಿಮ್ಮ ಜೀವನವನ್ನು ಇನ್ನಷ್ಟು ನರಕ ಮಾಡುವೆ ಎನ್ನುತ್ತಾಳೆ.

ತನ್ವಿ ಸಸ್ಪೆಂಡ್‌ ಆದ ವಿಚಾರ ತಾಂಡವ್‌ಗೆ ಗೊತ್ತಾಗುವುದಾ? ಸಸ್ಪೆಂಡ್‌ ಕ್ಯಾನ್ಸಲ್‌ ಮಾಡಿ ಮತ್ತೆ ಪ್ರಿನ್ಸಿಪಾಲ್‌ ತನ್ವಿಗೆ ಅವಕಾಶ ನೀಡುತ್ತಾರಾ? ಕಾದು ನೋಡಬೇಕು.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner