ಕನ್ನಿಕಾಗೆ ಪಾಠ ಕಲಿಸಲು ಸಜ್ಜಾದ ಕುಸುಮಾ; ಮಕ್ಕಳಿಗೆ ಪ್ರೀತಿಯ ಧಾರೆಯೆರೆದ ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಿಕಾಗೆ ಪಾಠ ಕಲಿಸಲು ಸಜ್ಜಾದ ಕುಸುಮಾ; ಮಕ್ಕಳಿಗೆ ಪ್ರೀತಿಯ ಧಾರೆಯೆರೆದ ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ

ಕನ್ನಿಕಾಗೆ ಪಾಠ ಕಲಿಸಲು ಸಜ್ಜಾದ ಕುಸುಮಾ; ಮಕ್ಕಳಿಗೆ ಪ್ರೀತಿಯ ಧಾರೆಯೆರೆದ ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾನುವಾರ ಫೆಬ್ರುವರಿ 9ರ ಸಂಚಿಕೆಯಲ್ಲಿ ಮಕ್ಕಳ ಜತೆ ಭಾಗ್ಯ ಆತ್ಮೀಯವಾಗಿ ನಡೆದುಕೊಂಡಿದ್ದಾಳೆ. ಅಲ್ಲದೆ, ಮಕ್ಕಳು ಚೆನ್ನಾಗಿ ಓದಿ, ನಿಮಗೆ ಬೇಕಾಗಿರುವುದನ್ನು ಕೊಡಿಸುತ್ತೇನೆ ಎಂದು ಹೇಳಿದ್ದಾಳೆ. ಅತ್ತ ಶ್ರೇಷ್ಠಾ, ತನ್ನ ಮೇಲೆ ಕೋಪಗೊಂಡ ತಾಂಡವ್‌ನನ್ನು ಸಮಾಧಾನಿಸಿ ತನ್ನ ಸಂಚನ್ನು ಬಹಿರಂಗಪಡಿಸಿದ್ದಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾನುವಾರ ಫೆಬ್ರುವರಿ 9ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾನುವಾರ ಫೆಬ್ರುವರಿ 9ರ ಸಂಚಿಕೆ (Colours Kannada Facebook)

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾನುವಾರ ಫೆಬ್ರುವರಿ 9ರ ಸಂಚಿಕೆಯಲ್ಲಿ ಭಾಗ್ಯ, ಮಕ್ಕಳನ್ನು ತಬ್ಬಿ ಹಿಡಿದುಕೊಂಡು ಸಮಾಧಾನ ಪಡಿಸಿದ್ದಾಳೆ. ಮಕ್ಕಳು ಪರಸ್ಪರ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ. ಆ ಸಂದರ್ಭದಲ್ಲಿ, ಅಲ್ಲಿಗೆ ಭಾಗ್ಯ ಬರುತ್ತಾಳೆ. ಆಗ ತನ್ವಿ, ನಾನು ಹೊಸದಾಗಿ ಏನನ್ನೂ ಕೇಳುತ್ತಿಲ್ಲ. ಏನೂ ಖರೀದಿ ಮಾಡಿಲ್ಲ.ಕೋರ್ಸ್‌ಗೆ ದುಡ್ಡು ಮಾತ್ರ ಕೇಳಿದೆ ಅಷ್ಟೆ ಎಂದಿದ್ದಾಳೆ. ಆಗ ಗುಂಡಣ್ಣ, ನೀನು ಮನೆಯಲ್ಲಿ ಇಷ್ಟೊಂದು ಕಷ್ಟ ಇರುವಾಗ, ಹಾಗೆಲ್ಲ ಮಾಡುವುದು ತಪ್ಪು ಎಂದು ಹೇಳುತ್ತಾನೆ. ತನ್ವಿ, ನಾನು ಈಗಲೂ ಹಳೆಯ ಬಟ್ಟೆಗಳನ್ನೇ ಧರಿಸುತ್ತಿದ್ದೇನೆ. ಹೊಸ ಬಟ್ಟೆ ಬೇಡ, ನಾನು ಇನ್ನು ಮುಂದೆ ಏನನ್ನೂ ಕೇಳುವುದಿಲ್ಲ ಎಂದು ಹೇಳುತ್ತಾಳೆ.

ಇತ್ತ, ಶ್ರೇಷ್ಠಾಳನ್ನು ಕರೆದುಕೊಂಡ ತಾಂಡವ್, ಮನೆಗೆ ಬಂದಿದ್ದಾನೆ. ನಾನು ಭಾಗ್ಯಳನ್ನು ಅವರಿಂದ ದೂರ ಮಾಡಲು ಪ್ಲ್ಯಾನ್ ರೂಪಿಸಿದ್ದೆ, ತನ್ವಿಯನ್ನು ನನ್ನತ್ತ ಸೆಳೆದುಕೊಳ್ಳುವುದು ನನ್ನ ಗುರಿಯಾಗಿತ್ತು. ಆದರೆ ನೀನು ಬಂದು ಎಲ್ಲವನ್ನೂ ಹಾಳುಮಾಡಿದೆ. ಭಾಗ್ಯಳನ್ನು ಅವಳ ಮನೆಯಿಂದ ದೂರ ಮಾಡಬೇಕು, ಆಗ ನನ್ನ ಅಪ್ಪ, ಅಮ್ಮ ಎಲ್ಲರೂ ನನ್ನ ಜತೆ ಬರುತ್ತಾರೆ, ಭಾಗ್ಯ ಎಲ್ಲರನ್ನು ಕಳೆದುಕೊಂಡು, ಬೀದಿಗೆ ಬರುತ್ತಾಳೆ ಎಂದು ಹೇಳುತ್ತಾನೆ.

ಕನ್ನಿಕಾಗೆ ಪಾಠ ಕಲಿಸಲು ಕುಸುಮಾ ಸಂಚು

ಭಾಗ್ಯ ಕೆಲಸ ಕಳೆದುಕೊಂಡಿರುವುದು ಕುಸುಮಾ ಮತ್ತು ಮನೆಯವರಿಗೆ ತೀವ್ರ ಸಮಸ್ಯೆಯಾಗಿದೆ. ಮನೆ ನಿರ್ವಹಿಸುವುದು ಕೂಡ ಕಷ್ಟವಾಗುತ್ತಿದೆ. ಆದರೆ ಅದಕ್ಕೆಲ್ಲಾ ನಾನು ಹೆದರುವುದಿಲ್ಲ, ಯಾರು ನನ್ನ ಸೊಸೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೋ, ಅವರಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಕುಸುಮಾ ಹೇಳುತ್ತಾಳೆ. ಅದಕ್ಕೆ ಪೂಜಾಳ ಸಹಾಯ ಕೇಳುತ್ತಾಳೆ. ಪೂಜಾಳ ಬಳಿ ಹೇಳಿ, ಹಿತಾಗೆ ಫೋನ್ ಮಾಡಿಸುತ್ತಾಳೆ. ಹಿತಾ ಬಳಿ, ಕುಸುಮಾ ಕನ್ನಿಕಾಳ ವಿಳಾಸ ಪಡೆದುಕೊಳ್ಳುತ್ತಾಳೆ. ಹಿತಾ ಕೂಡ, ಅಡ್ರೆಸ್ ಕೊಟ್ಟಿದ್ದು ನಾನು ಎಂದು ಹೇಳಬಾರದು, ಹಾಗಾದರೆ ಮಾತ್ರ ಕೊಡುತ್ತೇನೆ, ಅಲ್ಲದೆ, ಅಡ್ರೆಸ್ ಇದ್ದರೂ, ನಿಮಗೆ ಏನೂ ಮಾಡಲಾಗದು ಎಂದು ಹೇಳುತ್ತಾಳೆ. ಅದು ಏನಾದರೂ ಸರಿಯೇ, ನಾನು ಅವರಿಗೊಂದು ಪಾಠ ಕಲಿಸದೇ ಬಿಡಲ್ಲ ಎಂದು ಕುಸುಮಾ ಹೇಳುತ್ತಾಳೆ.

ತಾಂಡವ್‌ಗೆ ಶ್ರೇಷ್ಠಾ ಸಮಾಧಾನ

ಶ್ರೇಷ್ಠಾ ಮೇಲೆ ತೀವ್ರ ಕೋಪಗೊಂಡಿರುವ ತಾಂಡವ್‌ಗೆ ಮನೆಯಲ್ಲಿ ಶ್ರೇಷ್ಠಾ ಸಮಾಧಾನ ಮಾಡುತ್ತಾಳೆ. ನನಗೆ ಮೊದಲು ನಿಮ್ಮ ಪ್ಲ್ಯಾನ್ ಗೊತ್ತಾಗಲಿಲ್ಲ, ಆದರೆ ಇನ್ನು ಮುಂದೆ ನಾನು ಕೂಡ ನಿಮ್ಮೊಡನೆ ಭಾಗಿಯಾಗುತ್ತೇನೆ, ನನಗೂ ಭಾಗ್ಯ ಮೇಲೆ ಸಿಟ್ಟಿದೆ. ಅದಕ್ಕಾಗಿಯೇ ಅವಳನ್ನು ಕೆಲಸದಿಂದ ತೆಗೆಸಿದೆ. ನನ್ನ ಸೇಡು ಇಷ್ಟಕ್ಕೇ ಮುಗಿಯುವುದಿಲ್ಲ. ಅವಳನ್ನು ಅವರ ಮನೆಯವರಿಂದ ದೂರ ಮಾಡಬೇಕು ಎಂದು ತಾಂಡವ್‌ಗೆ ಹೇಳುತ್ತಾಳೆ, ಆಗ ತಾಂಡವ್‌ ಖುಷಿಯಾಗುತ್ತಾನೆ. ಅಲ್ಲಿಗೆ ಫೆಬ್ರುವರಿ 9ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 711ನೇ ಸಂಚಿಕೆ ಮುಗಿಸಿದೆ. ಭಾಗ್ಯ ಕೆಲಸ ಹುಡುಕುವುದನ್ನು ಮುಂದುವರಿಸಿದ್ದಾಳೆ, ಆದರೆ ಈಗ ತಾಂಡವ್‌ನ ಸಂಚು ಮತ್ತು ಸವಾಲು ಎದುರಿಸಲು ಆಕೆ ಮುಂದೇನು ಮಾಡುತ್ತಾಳೆ ಎಂದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner