ಕೈತುತ್ತು ಭಾಗ್ಯಳ ಹೊತ್ತಿನ ತುತ್ತು ತುಂಬಿಸುವುದೇ? ಹೊಸ ಸಾಹಸದಲ್ಲಿ ಭಾಗ್ಯಗೆ ಎದುರಾಗುವುದೇ ಮತ್ತೊಂದು ಸವಾಲು: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕಥಾನಾಯಕಿ ಭಾಗ್ಯ, ಮತ್ತೊಂದು ಹೊಸ ಸಾಹಸಕ್ಕೆ ಮುಂದಾಗಿದ್ದಾಳೆ. ಹೋಟೆಲ್ ಶೆಫ್ ಕೆಲಸವನ್ನು ಕಸಿದುಕೊಂಡ ಬಳಿಕ, ಅವಳು ಅಲ್ಲಿ ಇಲ್ಲಿ ಅಲೆದಾಡಿ, ಕೊನೆಗೂ ರೆಸಾರ್ಟ್‌ನಲ್ಲಿ ಕುಣಿಯುವ ಕೆಲಸ ಗಿಟ್ಟಿಸಿಕೊಂಡಿದ್ದಳು. ಈಗ ಅದೂ ಇಲ್ಲವಾಗಿದೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಕಥಾ ನಾಯಕಿ ಭಾಗ್ಯ, ರೆಸಾರ್ಟ್‌ನಲ್ಲಿ ಕುಣಿಯುವ ಕೆಲಸ ಮಾಡುತ್ತಿದ್ದಳು. ಈಗ ಅದನ್ನೂ ಕಳೆದುಕೊಂಡಿದ್ದಾಳೆ. ಮುಂದೇನು ಮಾಡಬೇಕು ಎಂದು ಅವಳು ಅಂದುಕೊಂಡಿರುವಾಗ ಅವಳಿಗೆ ಹೊಳೆದದ್ದು, ಮನೆಯಲ್ಲೇ ಅಡುಗೆ ಮಾಡಿ, ಅದನ್ನು ಹಾಸ್ಟೆಲ್ ಹುಡುಗರಿಗೆ ತಲುಪಿಸುವ ಕೆಲಸ. ಮನೆಯಲ್ಲೇ ತಿಂಡಿ, ಊಟ ತಯಾರಿಸಿ, ಅದನ್ನು ಡಬ್ಬಾಗೆ ಹಾಕಿ, ಹಾಸ್ಟೆಲ್, ಮತ್ತು ಕಚೇರಿಗಳಲ್ಲಿ ಅಗತ್ಯವಿರುವವರಿಗೆ ಕೊಡುವ ಕೆಲಸಕ್ಕೆ ಮನೆಯವರು ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಆರಂಭದಲ್ಲಿ ಅವರು ಬೇಡ ಎಂದರೂ, ನಂತರ ಭಾಗ್ಯಗೆ ಬೆಂಬಲ ನೀಡಲು ಮುಂದಾಗಿದ್ದಾರೆ. ಕೊನೆಗೂ ಭಾಗ್ಯಗೆ ಮತ್ತೊಂದು ಹೊಸ ದಾರಿ ತೆರೆದುಕೊಂಡಿದೆ.
ಒಂದೆಡೆ ಮಗಳು ತನ್ವಿ ಕಾಲೇಜ್ ಗೆಳತಿಯರ ಜತೆ ರೆಸಾರ್ಟ್‌ಗೆ ಟ್ರಿಪ್ ಹೋಗಬೇಕು ಎಂದುಕೊಂಡರೆ ಅದು ಸಾಧ್ಯವಾಗಿಲ್ಲ. ಅದಕ್ಕೆ ಭಾಗ್ಯ ಮತ್ತು ಮನೆಯವರು ಅನುಮತಿ ಕೊಟ್ಟಿಲ್ಲ. ಮತ್ತೊಂದೆಡೆ ಮಗ ತನ್ಮಯ್, ಅಮ್ಮನಿಗೆ ಸಹಾಯವಾಗಲಿ ಎಂದು ಸ್ಕೂಲ್‌ಗೂ ಹೋಗದೇ, ಕ್ಲಾಸ್ ಬಂಕ್ ಮಾಡಿದ್ದಾನೆ, ಅಷ್ಟೇ ಅಲ್ಲದೆ, ಶೂ ಪಾಲೀಶ್ ಮಾಡುವ ಕೆಲಸ ಮಾಡಿದ್ದಾನೆ. ಮಕ್ಕಳಿಬ್ಬರ ಈ ಕಿರಿಕಿರಿಯಿಂದಾಗಿ ಭಾಗ್ಯಳ ನೆಮ್ಮದಿ ಹಾಳಾಗಿದೆ.
ಇನ್ನೊಂದೆಡೆ ತಾಂಡವ್, ಶ್ರೇಷ್ಠಾ ಜೊತೆ ಸೇರಿಕೊಂಡು ಭಾಗ್ಯಳನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಪ್ರಯತ್ನ ಮಾಡುತ್ತಲೇ ಇದ್ದಾನೆ. ಅವನು ಪ್ರತಿ ಬಾರಿ ಭಾಗ್ಯಳನ್ನು ಹಳಿಯಲು ಯತ್ನಿಸಿದಾಗಲೂ, ಅವಳು ಮತ್ತೆ ಗೆಲ್ಲುತ್ತಾ ಅವನಿಗೆ ಪಾಠ ಕಲಿಸುತ್ತಿದ್ದಾಳೆ. ಹೀಗಾಗಿ ಅವನಿಗೆ ಭಾಗ್ಯ ಮೇಲಿನ ದ್ವೇಷ ಮತ್ತು ಕೋಪ ಮತ್ತಷ್ಟು ಹೆಚ್ಚಾಗಿದೆ. ಅದಕ್ಕಾಗಿ ಅವನು ಮತ್ತೊಂದು ಹೊಸ ಪ್ಲ್ಯಾನ್ ಮಾಡಲು ಮುಂದಾಗಿದ್ದಾನೆ.
ತನ್ಮಯ್ ಗೆಳೆಯನ ಸಹಾಯ
ರೆಸಾರ್ಟ್‌ನಲ್ಲಿ ಜೋಕರ್ ವೇಷ ಹಾಕಿಕೊಂಡು ಕುಣಿಯುವ ಕೆಲಸ ಮಾಡುತ್ತಿದ್ದ ಭಾಗ್ಯ, ಸರಿಯಾಗಿ ಕೆಲಸಕ್ಕೆ ಹೋಗದೇ ಇದ್ದಿದ್ದರಿಂದ ಅವಳನ್ನು ಅಲ್ಲಿನ ಕೆಲಸದಿಂದ ತೆಗೆದುಹಾಕಿದ್ದಾರೆ. ಹೀಗಾಗಿ ಅವಳು ಮುಂದೇನು ಮಾಡುವುದು ಎಂದು ಚಿಂತೆಯಲ್ಲಿರುವಾಗ ಅವಳಿಗೆ, ತನ್ಮಯ್‌ನ ಗೆಳೆಯ ಹೇಳಿದ ಮಾತು ನೆನಪಾಗಿದೆ. ಎಷ್ಟೋ ಜನ ಮನೆಯ ಊಟವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ, ಅವರಿಗೆ ಒಳ್ಳೆಯ ಊಟ ಸಿಕ್ಕರೆ, ಖಂಡಿತಾ ಅವರು ಅದನ್ನು ಸ್ವೀಕರಿಸುತ್ತಾರೆ. ಅದರಿಂದ ನನಗೂ ಒಂದು ದಾರಿಯಾಗುತ್ತೆ ಎಂದು ಭಾಗ್ಯ ಅಂದುಕೊಂಡಿದ್ದಾಳೆ. ಅದರಂತೆ, ಕೈತುತ್ತು ಹೆಸರಿನಲ್ಲಿ ಮನೆಯಲ್ಲೇ ಊಟ ತಯಾರಿಸಿ, ಅದನ್ನು ಹಾಸ್ಟೆಲ್ ಹುಡುಗರಿಗೆ ನೀಡುವ ಪ್ಲ್ಯಾನ್ ಮಾಡಿದ್ದಾಳೆ. ಅವಳಿಗೆ ಮನೆಯವರು ಸಾಥ್ ನೀಡಿದ್ದಾರೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರದ ಮಾರ್ಚ್ 21ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 746ನೇ ಸಂಚಿಕೆ ಮುಗಿಸಿದೆ. ಭಾಗ್ಯ ಯಾವ ರೀತಿ ಹೊಸ ಸಾಹಸದಲ್ಲಿ ಜಯಗಳಿಸುತ್ತಾಳೆ ಎಂದು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ