ಟಿಆರ್‌ಪಿಯಲ್ಲಿ ಭಾರ್ಗವಿ ಎಲ್‌ಎಲ್‌ಬಿಗೆ ವೀಕ್ಷಕರ ಬಹುಪರಾಕ್;‌ ಭಾಗ್ಯಲಕ್ಷ್ಮೀ ಧಾರಾವಾಹಿಗೆ ಒಲಿದ ನಂಬರ್‌ 1 ಪಟ್ಟ
ಕನ್ನಡ ಸುದ್ದಿ  /  ಮನರಂಜನೆ  /  ಟಿಆರ್‌ಪಿಯಲ್ಲಿ ಭಾರ್ಗವಿ ಎಲ್‌ಎಲ್‌ಬಿಗೆ ವೀಕ್ಷಕರ ಬಹುಪರಾಕ್;‌ ಭಾಗ್ಯಲಕ್ಷ್ಮೀ ಧಾರಾವಾಹಿಗೆ ಒಲಿದ ನಂಬರ್‌ 1 ಪಟ್ಟ

ಟಿಆರ್‌ಪಿಯಲ್ಲಿ ಭಾರ್ಗವಿ ಎಲ್‌ಎಲ್‌ಬಿಗೆ ವೀಕ್ಷಕರ ಬಹುಪರಾಕ್;‌ ಭಾಗ್ಯಲಕ್ಷ್ಮೀ ಧಾರಾವಾಹಿಗೆ ಒಲಿದ ನಂಬರ್‌ 1 ಪಟ್ಟ

Colors Kannada Serials TRP: ಕಲರ್ಸ್‌ ಕನ್ನಡದಲ್ಲಿ ನಿತ್ಯ ಭಾಗ್ಯಲಕ್ಷ್ಮೀ, ಲಕ್ಷ್ಮೀ ಬಾರಮ್ಮ, ರಾಮಾಚಾರಿ, ನಿನಗಾಗಿ, ವಧು, ಯಜಮಾನ, ಭಾರ್ಗವಿ ಎಲ್‌ಎಲ್‌ಬಿ, ಕರಿಮಣಿ, ದೃಷ್ಟಿಬೊಟ್ಟು ಸೇರಿ ಒಟ್ಟು 9 ಧಾರಾವಾಹಿಗಳು ಪ್ರಸಾರವಾಗುತ್ತವೆ. ಆ ಪೈಕಿ 9ನೇ ವಾರದ ಟಿಆರ್‌ಪಿಯಲ್ಲಿ ಈ ಸೀರಿಯಲ್‌ಗಳು ಪಡೆದ ಟಿಆರ್‌ಪಿ ಎಷ್ಟು? ಮಾಹಿತಿ ಇಲ್ಲಿದೆ.

ಟಿಆರ್‌ಪಿಯಲ್ಲಿ ಭಾರ್ಗವಿ ಎಲ್‌ಎಲ್‌ಬಿಗೆ ವೀಕ್ಷಕರ ಬಹುಪರಾಕ್;‌ ಭಾಗ್ಯಲಕ್ಷ್ಮೀ ಧಾರಾವಾಹಿಗೆ ಒಲಿದ ನಂಬರ್‌ 1 ಪಟ್ಟ
ಟಿಆರ್‌ಪಿಯಲ್ಲಿ ಭಾರ್ಗವಿ ಎಲ್‌ಎಲ್‌ಬಿಗೆ ವೀಕ್ಷಕರ ಬಹುಪರಾಕ್;‌ ಭಾಗ್ಯಲಕ್ಷ್ಮೀ ಧಾರಾವಾಹಿಗೆ ಒಲಿದ ನಂಬರ್‌ 1 ಪಟ್ಟ (Image\ Jiohotstar)

Colors Kannada Serial TRP: ಕನ್ನಡ ಕಿರುತೆರೆಯಲ್ಲಿ ಕಲರ್ಸ್‌ ಕನ್ನಡದ ಸೀರಿಯಲ್‌ಗಳ ಪೈಕಿ 9ನೇ ವಾರದ ಟಿಆರ್‌ಪಿಯಲ್ಲಿ ನಂಬರ್‌ 1 ಸ್ಥಾನ ಪಡೆದ ಸೀರಿಯಲ್‌ ಯಾವುದು? ಯಾವ ಧಾರಾವಾಹಿ ಟಾಪ್‌, ಯಾವ ಸೀರಿಯಲ್‌ ಕುಸಿತ ಕಂಡಿದೆ? ಕಲರ್ಸ್‌ ಕನ್ನಡದಲ್ಲಿ ನಿತ್ಯ ಭಾಗ್ಯಲಕ್ಷ್ಮೀ, ಲಕ್ಷ್ಮೀ ಬಾರಮ್ಮ, ರಾಮಾಚಾರಿ, ನಿನಗಾಗಿ, ವಧು, ಯಜಮಾನ, ಭಾರ್ಗವಿ, ಕರಿಮಣಿ, ದೃಷ್ಟಿಬೊಟ್ಟು ಸೇರಿ ಒಟ್ಟು 9 ಧಾರಾವಾಹಿಗಳು ಪ್ರಸಾರವಾಗುತ್ತವೆ. ಆ ಪೈಕಿ 9ನೇ ವಾರದ ಟಿಆರ್‌ಪಿಯಲ್ಲಿ ಈ ಸೀರಿಯಲ್‌ಗಳು ಪಡೆದ ಟಿಆರ್‌ಪಿಯ ಮಾಹಿತಿ ಇಲ್ಲಿದೆ.

ಕಲರ್ಸ್‌ ಕನ್ನಡದ ಸೀರಿಯಲ್‌ಗಳ ಟಿಆರ್‌ಪಿ ರೇಟಿಂಗ್ಸ್‌

  • ಭಾಗ್ಯಲಕ್ಷ್ಮೀ ಸೀರಿಯಲ್‌

ಕಲರ್ಸ್‌ ಕನ್ನಡದಲ್ಲಿ ನಂಬರ್‌ 1 ಧಾರಾವಾಹಿ ಎಂದರೆ ಅದು ಭಾಗ್ಯಲಕ್ಷ್ಮೀ. ಸುಷ್ಮಾ ರಾವ್‌ ಮತ್ತು ಸುದರ್ಶನ್‌ ರಂಗಪ್ರಸಾದ್‌ ಮುಖ್ಯಭೂಮಿಕೆಯ ಈ ಸೀರಿಯಲ್‌, 9ನೇ ವಾರದ ಟಿಆರ್‌ಪಿ ರೇಟಿಂಗ್‌ ಲೆಕ್ಕಾಚಾರದಲ್ಲಿ 5.6 ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿದೆ.

  • ಲಕ್ಷ್ಮೀ ಬಾರಮ್ಮ

ನಂತರದ ಸ್ಥಾನದಲ್ಲಿ ಕಲರ್ಸ್‌ನ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಸಹ ಟಾಪ್‌ ಓಟದಲ್ಲಿದೆ. ಮೊದಲ ಎರಡು ಸ್ಥಾನಗಳಲ್ಲಿ ಅಕ್ಕ ತಂಗಿಯರೇ ಹೆಚ್ಚು ಕಾಣಿಸುತ್ತಾರೆ. ಆಗೊಮ್ಮೆ ಈಗೊಮ್ಮೆ ರಾಮಾಚಾರಿಯೂ ಎರಡನೇ ಸ್ಥಾನ ಅಲಂಕರಿಸಿದ್ದುಂಟು. ಈಗ ಲಕ್ಷ್ಮೀ ಬಾರಮ್ಮ 5.4 ಟಿಆರ್‌ಪಿ ಪಡೆದು ಎರಡನೇ ಸ್ಥಾನದಲ್ಲಿದೆ.

  • ರಾಮಾಚಾರಿ

ಕಲರ್ಸ್‌ನ ಇನ್ನೊಂದು ಪ್ರಮುಖ ಸೀರಿಯಲ್‌ಗಳಲ್ಲಿ ರಾಮಾಚಾರಿ ಸಹ ಒಂದು. ಈ ಸೀರಿಯಲ್‌ 9ನೇ ವಾರದ ಟಿಆರ್‌ಪಿಯಲ್ಲಿ 5.0 ರೇಟಿಂಗ್ಸ್‌ ಪಡೆದು, ಮೂರನೇ ಸ್ಥಾನದಲ್ಲಿದೆ.

  • ನಿನಗಾಗಿ

ನಿನಗಾಗಿ ಸೀರಿಯಲ್‌ಗೂ ವೀಕ್ಷಕರ ಸಂಖ್ಯೆ ಹೆಚ್ಚಿದೆ. ನೋಡುಗ ವರ್ಗವನ್ನು ಸೆಳೆದಿರುವ ಈ ಸೀರಿಯಲ್‌, 9ನೇ ವಾರದ ಟಿಆರ್‌ಪಿಯಲ್ಲಿ4.9 ರೇಟಿಂಗ್ಸ್‌ ಪಡೆದು ನಾಲ್ಕನೇ ಸ್ಥಾನದಲ್ಲಿದೆ.

  • ಭಾರ್ಗವಿ ಎಲ್‌ಎಲ್‌ಬಿ

ಕಲರ್ಸ್‌ನ ಹೊಸ ಸೀರಿಯಲ್‌ ಭಾರ್ಗವಿ ಎಲ್‌ಎಲ್‌ಬಿ ಪ್ರಸಾರ ಆರಂಭಿಸಿದ ಮೊದಲ ವಾರವೇ 4.9 ಟಿಆರ್‌ಪಿ ಪಡೆದು ಮೆಚ್ಚುಗೆ ಪಡೆದಿದೆ. ನಿನಗಾಗಿ ಸೀರಿಯಲ್‌ಗೆ ಹೋಲಿಕೆ ಮಾಡಿದರೆ, ರೂರಲ್‌ ಭಾಗದಲ್ಲಿ ಭಾರ್ಗವಿ ಹಿಂದುಳಿದಿದೆ. ಈ ಸೀರಿಯಲ್‌ ಐದನೇ ಸ್ಥಾನದಲ್ಲಿದೆ.

  • ದೃಷ್ಟಿಬೊಟ್ಟು

ಕಲರ್ಸ್‌ ಕನ್ನಡದ ದೃಷ್ಟಿಬೊಟ್ಟು ಸೀರಿಯಲ್‌ 3.9 ರೇಟಿಂಗ್‌ ಪಡೆದು, 9ನೇ ವಾರದ ಟಿಆರ್‌ಪಿಯಲ್ಲಿ ಆರನೇ ಸ್ಥಾನದಲ್ಲಿದೆ.

  • ವಧು

ಕಲರ್ಸ್‌ನಲ್ಲಿ ಬಿಗ್‌ ಬಾಸ್‌ ಮುಗಿದ ಬಳಿಕ ಆರಂಭವಾದ ಹೊಸ ಸೀರಿಯಲ್‌ಗಳಲ್ಲಿ ವಧು ಸೀರಿಯಲ್‌ ಸಹ ಒಂದು. ನಿರೀಕ್ಷೆ ಮೂಡಿಸಿದರೂ, ಟಿಆರ್‌ಪಿಯಲ್ಲಿ ಈ ಧಾರಾವಾಹಿ ಇನ್ನೂ ಪುಟಿದೇಳುತ್ತಿಲ್ಲ. 9ನೇ ವಾರದ ಟಿಆರ್‌ಪಿಯಲ್ಲಿಈ ಸೀರಿಯಲ್‌ಗೆ 3.2 ಟಿಆರ್‌ಪಿ ಸಿಕ್ಕಿದ್ದು, ಏಳನೇ ಸ್ಥಾನದಲ್ಲಿದೆ.

  • ಕರಿಮಣಿ

ಕರಿಮಣಿ ಸೀರಿಯಲ್‌ 9ನೇ ವಾರದ ಟಿಆರ್‌ಪಿ ರೇಟಿಂಗ್‌ನಲ್ಲಿ 2.9 ಟಿಆರ್‌ಪಿ ಪಡೆದು ಎಂಟನೇ ಸ್ಥಾನದಲ್ಲಿದೆ.

  • ಯಜಮಾನ

ವಧು ಮತ್ತು ಯಜಮಾನ ಸೀರಿಯಲ್‌ ಅವಳಿ ಧಾರಾವಾಹಿಗಳಾಗಿ ಪ್ರಸಾರ ಆರಂಭಿಸಿದ್ದವು. ವಧು ಸೀರಿಯಲ್‌ಗೆ ಹೋಲಿಕೆ ಮಾಡಿದರೆ, ಯಜಮಾನ ಕೊಂಚ ಹಿಂದೆಯೇ ಇದೆ. ಈ ಸೀರಿಯಲ್‌ 2.4 ರೇಟಿಂಗ್‌ ಪಡೆದು, 9ನೇ ಸ್ಥಾನದಲ್ಲಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner