Bhool Bhulaiyaa 3 OTT: ಚಿತ್ರಮಂದಿರದಲ್ಲಿ ಧಮಾಕಾ ಮಾಡಿದ್ದ ಭೂಲ್ ಭುಲೈಯಾ ಚಿತ್ರವೀಗ ಒಟಿಟಿಗೆ ಗ್ರ್ಯಾಂಡ್ ಎಂಟ್ರಿ, ವೀಕ್ಷಣೆ ಯಾವಾಗ?
Bhool Bhulaiyaa 3 OTT release date: ಕಾರ್ತಿಕ್ ಆರ್ಯನ್ ನಟನೆಯ ಭೂಲ್ ಭುಲೈಯಾ 3 ಎಂಬ ಹಾರರ್- ಕಾಮಿಡಿ ಜಾನರ್‌ನ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಡಿಸೆಂಬರ್ 25ರಂದು ಸ್ಟ್ರೀಮಿಂಗ್ ಆಗಲಿದೆ. ಈ ಸಿನಿಮಾದ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Bhool Bhulaiyaa 3 OTT release date: ಕಳೆದ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಬ್ಲಾಕ್‌ಬಸ್ಟರ್ ಧಮಾಕ ಸಿನಿಮಾವಾಗಿ ಹೊರಹೊಮ್ಮಿದ ಹಾರರ್- ಕಾಮಿಡಿ ಸರಣಿಯ ಬಹು ನಿರೀಕ್ಷಿತ ಮೂರನೇ ಕಂತು ಭೂಲ್ ಭುಲೈಯಾ ಇದೀಗ ಒಟಿಟಿಯತ್ತ ಮುಖ ಮಾಡಿದೆ. ದೀಪಾವಳಿ ವೀಕೆಂಡ್‌ನಲ್ಲಿ ಅಂದರೆ ನವೆಂಬರ್ 1ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಡಿಸೆಂಬರ್ 27ರಂದು ಬಿಡುಗಡೆಯಾಗಲಿದೆ. ಚಿತ್ರದ ಕುತೂಹಲಕಾರಿ ಕಥಾವಸ್ತು ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ. ಈ ಚಿತ್ರವು ದಿನದಿಂದ ದಿನಕ್ಕೆ ಗಳಿಕೆ ಹೆಚ್ಚಿಸಿಕೊಂಡು ಹೋಗಿತ್ತು. ಇದೇ ಕಾರಣಕ್ಕೆ ಥಿಯೇಟರ್‌ನಲ್ಲಿ ಹೆಚ್ಚು ದಿನ ಕಳೆದ ಬಳಿಕ ಇದೀಗ ಒಟಿಟಿಯತ್ತ ಮುಖ ಮಾಡಿದೆ.
ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಭೂಲ್ ಭುಲ್ಲಯ್ಯಾ 3 ಬಿಡುಗಡೆ
ನೆಟ್‌ಫ್ಲಿಕ್ಸ್ ಇಂಡಿಯಾವು ಭೂಲ್ ಭುಲೈಯಾ 3 ಒಟಿಟಿ ಬಿಡುಗಡೆ ಕುರಿತು ಅಧಿಕೃತವಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ. ಕಾರ್ತಿಕ್ ಆರ್ಯನ್ ಆಕ್ರಮಣಕಾರರಿಂದ ತಪ್ಪಿಸಿಕೊಂಡು ಏನೂ ಕಾಣಿಸದ ಪರದೆಗೆ ಡಿಕ್ಕಿ ಹೊಡೆಯುವ ದೃಶ್ಯವನ್ನು ಹಂಚಿಕೊಂಡಿರುವ ನೆಟ್‌ಫ್ಲಿಕ್ಸ್ ಆ ವಿಡಿಯೋದಲ್ಲಿ ಒಟಿಟಿ ಬಿಡುಗಡೆ ದಿನಾಂಕ ಪ್ರಕಟಿಸಿದೆ.
ಕಾರ್ತಿಕ್ ಆರ್ಯನ್ ಈ ಸಿನಿಮಾದಲ್ಲಿ ವಿಲಕ್ಷಣ ಘೋಸ್ಟ್‌ಬಸ್ಟರ್ ರುಹಾನ್ "ರೂಹ್ ಬಾಬಾ" ರಾಂಧವಾ ಆಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಮಾಧುರಿ ದೀಕ್ಷಿತ್ ನಟನೆಯ ಮಂದಿರಾ ರಹಸ್ಯವನ್ನು ಹೊರಗೆಡುಹುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ತೃಪ್ತಿ ದಿಮ್ರಿ ಅವರು ಮೀರಾ ಆಗಿ ಕಥೆಯ ಭಾಗವಾಗಿದ್ದಾರೆ. ಛೋಟೆ ಪಂಡಿತ್ ಪಾತ್ರದಲ್ಲಿ ನಟಿಸಿರುವ ರಾಜ್‌ಪಾಲ್ ಯಾದವ್ ಹಾರರ್ ಸನ್ನಿವೇಶಕ್ಕೆ ಹೆಚ್ಚು ಅಗತ್ಯವಿರುವ ಕಾಮಿಡಿಯನ್ನು ಸೇರಿಸಿದ್ದಾರೆ. ಅಶ್ವಿನಿ ಕಲ್ಸೇಕರ್, ರಾಜೇಶ್ ಶರ್ಮಾ, ಮನೀಷ್ ವಾಧ್ವಾ, ಸಂಜಯ್ ಮಿಶ್ರಾ ಮತ್ತು ವಿಜಯ್ ರಾಝ್ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಭೂಲ್ ಭುಲೈಯಾ ಬಾಕ್ಸ್ ಆಫೀಸ್ ಕಲೆಕ್ಷನ್
ಭೂಲ್ ಭುಲೈಯಾ 3 ಸಿನಿಮಾವು 2024ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ವಿಮರ್ಶಕರು ಸಾಧಾರಣ ವಿಮರ್ಶೆ ನೀಡಿದ್ದರು. ಆದರೆ, ಥಿಯೇಟರ್‌ಗೆ ಆಗಮಿಸಿದ ಸಿನಿಮಾ ಪ್ರೇಕ್ಷಕರ ಬಾಯ್ಮಾತಿನ ಪ್ರಚಾರದಿಂದ ಈ ಚಿತ್ರ ಹೆಚ್ಚು ಜನಪ್ರಿಯತೆ ಪಡೆಯಿತು. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ 417.51 ಕೋಟಿ ರೂಪಾಯಿ ಗಳಿಸಿದೆ.