Udupi Temple: ಗಂಡ ಅಭಿಷೇಕ್‌ ಜತೆ ಉಡುಪಿ ಕನಕನ ಕಿಂಡಿ ದರ್ಶನ ಮಾಡಿದ ಬಿಗ್‌ಬಾಸ್‌ ಕನ್ನಡದ ಗೌತಮಿ ಜಾದವ್‌
ಕನ್ನಡ ಸುದ್ದಿ  /  ಮನರಂಜನೆ  /  Udupi Temple: ಗಂಡ ಅಭಿಷೇಕ್‌ ಜತೆ ಉಡುಪಿ ಕನಕನ ಕಿಂಡಿ ದರ್ಶನ ಮಾಡಿದ ಬಿಗ್‌ಬಾಸ್‌ ಕನ್ನಡದ ಗೌತಮಿ ಜಾದವ್‌

Udupi Temple: ಗಂಡ ಅಭಿಷೇಕ್‌ ಜತೆ ಉಡುಪಿ ಕನಕನ ಕಿಂಡಿ ದರ್ಶನ ಮಾಡಿದ ಬಿಗ್‌ಬಾಸ್‌ ಕನ್ನಡದ ಗೌತಮಿ ಜಾದವ್‌

Udupi Sri Krishna Matha: ಕನಕನ ಕಿಂಡಿ ದರ್ಶನ ಮಾಡಿರುವ ರೀಲ್ಸ್‌ ಅನ್ನು ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿಯಾಗಿದ್ದ ಗೌತಮಿ ಯಾದವ್‌ ಹಂಚಿಕೊಂಡಿದ್ದಾರೆ. ಇವರು ತನ್ನ ಪತಿ ಅಭಿಷೇಕ್‌ ಜಾದವ್‌ ಜತೆಗೆ ಉಡುಪಿ ರಥಬೀದಿಯಲ್ಲಿ ಸುತ್ತಾಡಿರುವ ಝಲಕ್‌ ನೀಡಿದ್ದಾರೆ.

ಗಂಡ ಅಭಿಷೇಕ್‌ ಜತೆ ಉಡುಪಿ ಕನಕನ ಕಿಂಡಿ ದರ್ಶನ ಮಾಡಿದ ಬಿಗ್‌ಬಾಸ್‌ ಕನ್ನಡದ ಗೌತಮಿ ಜಾದವ್‌
ಗಂಡ ಅಭಿಷೇಕ್‌ ಜತೆ ಉಡುಪಿ ಕನಕನ ಕಿಂಡಿ ದರ್ಶನ ಮಾಡಿದ ಬಿಗ್‌ಬಾಸ್‌ ಕನ್ನಡದ ಗೌತಮಿ ಜಾದವ್‌

ಉಡುಪಿ ಶ್ರೀ ಕೃಷ್ಣ ದೇವಸ್ಥಾನದ ಕನಕನ ಕಿಂಡಿ ದರ್ಶನ ಮಾಡಿರುವ ರೀಲ್ಸ್‌ ಅನ್ನು ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿಯಾಗಿದ್ದ ಗೌತಮಿ ಯಾದವ್‌ ಹಂಚಿಕೊಂಡಿದ್ದಾರೆ. ಇವರು ತನ್ನ ಪತಿ ಅಭಿಷೇಕ್‌ ಜಾದವ್‌ ಜತೆಗೆ ಉಡುಪಿ ರಥಬೀದಿಯಲ್ಲಿ ಸುತ್ತಾಡಿರುವ ಝಲಕ್‌ ನೀಡಿದ್ದಾರೆ. ಕಂಡೆ ನಾ ಉಡುಪಿಯ ಕೃಷ್ಣರಾಯನ್ನ , ಭೂ- ಮಂಡಲದೊಳಗೆ ಉದ್ದಂಡ ಮೋಹಿನಿ ಎಂಬ ಭಕ್ತಿಗೀತೆಯನ್ನು ಹೊಂದಿರುವ ರೀಲ್ಸ್‌ ಮೂಲಕ ಗೌತಮಿ ಭಕ್ತಿಪರವಶರಾಗಿ ಕಾಣಿಸಿಕೊಂಡಿದ್ದಾರೆ.

ಬಿಗ್‌ಬಾಸ್‌ ಕನ್ನಡ ಖ್ಯಾತಿಯ ಗೌತಮಿ ರೀಲ್ಸ್‌ಗೆ ಅಭಿಮಾನಿಗಳು ನಾನಾ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಕನಕನ ಕಿಂಡಿಯ ನೋಡಿ ಪುನೀತರಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು "ಬಿಗ್‌ಬಾಸ್‌ನಲ್ಲಿ ನಿಮ್ಮ ಆಟ ಚೆನ್ನಾಗಿತ್ತು" ಎಂದು ನೆನಪಿಸಿಕೊಂಡಿದ್ದಾರೆ. ಸದ್ಯ ಇವರು ಹಂಚಿಕೊಂಡಿರುವ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಗೌತಮಿ ಜಾದವ್ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ 4ನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದರು. ತನ್ನ ಆಟ ಮತ್ತು ಉಗ್ರಂ ಮಂಜು ಜತೆ ಕ್ಲೋಸ್‌ ಆಗಿರುವ ಮೂಲಕ ಈ ರಿಯಾಲಿಟಿ ಶೋನಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದರು. ಗೌತಮಿ ಜಾದವ್‌ ಸತ್ಯ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಇವರು ಎರಡು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ಕಿನಾರೆ ಎಂಬ ಸಿನಿಮಾದ ಮೂಲಕ ಗೌತಮಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇದಾದ ಬಳಿಕ ಆದ್ಯ ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು ಚಿತ್ರಗಳಲ್ಲಿಯೂ ನಟಿಸಿದ ಗೌತಮಿ ಹೆಚ್ಚು ಮನೆಮಾತಾಗಿರುವುದು ಸತ್ಯ ಸೀರಿಯಲ್‌ನಲ್ಲಿ. ಜೀ ಕನ್ನಡ ವಾಹಿನಿಯ ಸತ್ಯ ಸೀರಿಯಲ್‌ನಲ್ಲಿ ಟಾಮ್‌ ಬಾಯ್‌ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಗೌತಮಿ ಅವರು ನಾಗಪಂಚಮಿ ಎಂಬ ಸೀರಿಯಲ್‌ನಲ್ಲಿಯೂ ನಟಿಸಿದ್ದಾರೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಗೌತಮಿ ಜಾದವ್‌ ಸುಮಾರು ಹದಿನಾರು ವಾರಗಳ ಕಾಲ ಇದ್ದು ಹೊರಬಂದಿದ್ದರು. ಖ್ಯಾತ ಫೋಟೋಗ್ರಾಫರ್‌ ಅಭಿಷೇಕ್‌ ಕಾಸರಗೋಡು ಗೌತಮಿಯವರ ಪತಿ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರೀಲ್ಸ್‌ನಲ್ಲಿ ಪತಿ ಅಭಿಷೇಕ್‌ ಕಾಸರಗೋಡು ಜತೆಗೆ ಉಡುಪಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಭಿಷೇಕ್‌ ಕೂಡ ಹಲವು ಸಿನಿಮಾಗಳಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಆಪರೇಷನ್‌ ಆಲಮೇಲಮ್ಮ, ಮಾಯಾಬಜಾರ್‌, ಅನಂತು ವರ್ಸಸ್‌ ನುಸ್ರುತ್‌ ಮುಂತಾದ ಸಿನಿಮಾಗಳಲ್ಲಿ ಇವರು ಕಾರ್ಯನಿರ್ವಹಿಸಿದ್ದಾರೆ. ಅಭಿಷೇಕ್‌ ಕಾಸರಗೋಡು ಅವರು ಸಿನಿಮಾ ಪತ್ರಕರ್ತ ಗಣೇಶ್‌ ಕಾಸರಗೋಡು ಮಗಳು.

ಉಡುಪಿ ಶ್ರೀಕೃಷ್ಣ ದೇಗುಲದಲ್ಲಿ ಕನಕನ ಕಿಂಡಿ ಪ್ರಮುಖ ಆಕರ್ಷಣೆ. ಸಂತ ಕನಕದಾಸರಿಗೆ ಕೃಷ್ಣನು ಈ ಕಿಂಡಿ ಮೂಲಕ ದರ್ಶನ ನೀಡಿದ್ದಾನೆ ಎಂಬ ನಂಬಿಕೆ ಇದೆ. ಭಾರತೀಯ ದೇವಾಲಯಗಳಲ್ಲಿ ಸಾಮಾನ್ಯವಾಗಿ ವಿಗ್ರಹಗಳು ಪೂರ್ವಕ್ಕೆ ಮುಖ ಮಾಡಿರುತತವೆ. ಉಡುಪಿ ಕೃಷ್ಣ ದೇವಸ್ಥಾನದಲ್ಲಿ ವಿಗ್ರಹವು ಪಶ್ಚಿಮಕ್ಕೆ ಮುಖ ಮಾಡಿದೆ. ದೇವರ ಮೂರ್ತಿ ತಿರುಗಿ ಕನಕದಾಸರಿಗೆ ದರ್ಶನ ನೀಡಿದೆ ಎಂಬ ಪ್ರತೀತಿ ಇದೆ.

Whats_app_banner