Bigg Boss 9 Kannada Update: ಮಿಣ ಮಿಣ ಮೀನಾಕ್ಷಿಗೆ ಕತ್ತಲ್ಲಿರೋ ಚೈನ್, ಬಾಡಿಯಲ್ಲಿರೋ ಮನಸ್ಸು ಎರಡೂ ಕೊಡ್ತೀನಿ ಎಂದ ಆರ್ಯವರ್ಧನ್ ಗುರೂಜಿ
ಅರುಣ್ ಸಾಗರ್, ಧಾರವಾಡದ ವ್ಯಕ್ತಿ ಪಾತ್ರದಲ್ಲಿ ತನ್ನ ತಂಗಿ ( ದೀಪಿಕಾ ದಾಸ್) ಗೆ ಗಂಡು ಹುಡುಕಲು ದೊಡ್ಮನೆಗೆ ಬರುತ್ತಾರೆ. ಈ ಪ್ರೋಮೋದಲ್ಲಿ ರೂಪೇಶ್ ಶೆಟ್ಟಿ ಡೊಳ್ಳು ಹೊಟ್ಟೆಯ ವ್ಯಕ್ತಿಯಾಗಿ ಕಾಸ್ಟ್ಯೂಮ್ ಧರಿಸಿರುತ್ತಾರೆ.
ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್ 9, ಹದಿಮೂರನೇ ವಾರಕ್ಕೆ ಕಾಲಿಟ್ಟಿದೆ. ಎರಡು ವಾರಗಳ ಹಿಂದೆ ಕಾವ್ಯ ಗೌಡ ಹಾಗೂ ಕಳೆದ ವಾರ ಪ್ರಶಾಂತ್ ಸಂಬರ್ಗಿ ಮನೆಯಿಂದ ಹೋರ ಹೋಗಿದ್ದರು. ಸದ್ಯಕ್ಕೆ ಕೆಲವೇ ಸ್ಪರ್ಧಿಗಳು ಮನೆಯಲ್ಲಿ ಉಳಿಸಿದ್ದಾರೆ. ದಿನದಿಂದ ದಿನಕ್ಕೆ ದೊಡ್ಮನೆಯಲ್ಲಿ ಕಠಿಣ ಟಾಸ್ಕ್ ನೀಡಲಾಗುತ್ತಿದೆ.
ನಿನ್ನೆ ದೊಡ್ಮನೆಯಲ್ಲಿ ಸ್ಪರ್ಧಿಗಳ ನಡುವೆ ವಿವಿಧ ವಿಚಾರವಾಗಿ ಚರ್ಚೆ ನಡೆದಿತ್ತು. ಈ ಬಾರಿ ಯಾರು ಗೆಲ್ಲಬಹುದು ಎಂದು ಅಡುಗೆ ಮನೆಯಲ್ಲಿ ಬಿಸಿ ಬಿಸಿ ಡಿಸ್ಕರ್ಷನ್ ಕೂಡಾ ನಡೆದಿತ್ತು. ಜೊತೆಗೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಹಾಡಿನ ಟಾಸ್ಕ್ ನೀಡಲಾಗಿತ್ತು. ಕನ್ನಡ ಹಾಡುಗಳ ಚರಣ ಕೇಳಿಸಿ, ಆ ಹಾಡು ಯಾವುದು ಎಂದು ಕಂಡುಹಿಡಿಯುವಂತೆ ಟಾಸ್ಕ್ ನೀಡಲಾಗಿತ್ತು. ಕೆಲವು ಸ್ಪರ್ಧಿಗಳು ಹಾಡನ್ನು ಎಂಜಾಯ್ ಮಾಡಿದರೆ, ಕೆಲವರು ಭಾವುಕರಾಗಿದ್ದರು. ಆರ್ಯವರ್ಧನ್ ಗುರೂಜಿ ದೀಪಿಕಾ ದಾಸ್ ಅವರನ್ನು ಎತ್ತಿಕೊಂಡು 'ವಿಷ್ಣುವರ್ಧನ' ಚಿತ್ರದ ಎದೆಯೊಳಗೆ ಗಿಟಾರ್...ಹಾಡಿಗೆ ಡ್ಯಾನ್ಸ್ ಮಾಡಿದ್ದರು. 'ಚೌಕ' ಚಿತ್ರದ ಅಪ್ಪ ಐ ಲವ್ ಯು ಪಾ... ಹಾಡಿಗೆ ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿಯ ಬೆನ್ನುಹತ್ತಿ ಕೂಸುಮರಿಯಂತೆ ಎಂಜಾಯ್ ಮಾಡಿದ್ದರು. ಈ ಹಾಡಿಗೆ ಮನೆಯೊಳಗೆ ಎಲ್ಲರೂ ಎಮೋಷನಲ್ ಆಗಿದ್ದರು.
ಇನ್ನು ಇಂದು ಕೂಡಾ ದೊಡ್ಮನೆಯೊಳಗೆ ಸ್ಪರ್ಧಿಗಳು ಹೊಸ ಟಾಸ್ಕ್ ಎದುರಿಸಲಿದ್ದಾರೆ. ಈಗಾಗಲೇ ವಾಹಿನಿಯು ಹಂಚಿಕೊಂಡಿರುವ ಪ್ರೋಮೋ ನೋಡಿ ಕಿರುತೆರೆಪ್ರಿಯರು ಇಂದಿನ ಸಂಚಿಕೆ ನೋಡಲು ಕಾಯುತ್ತಿದ್ದಾರೆ. ಬಾಲ್ ಬ್ಯಾಲೆನ್ಸ್ ಆಟದಲ್ಲಿ ಇಬ್ಬರು ಸ್ಪರ್ಧಿಗಳು ಚೆಂಡನ್ನು ಬ್ಯಾಲೆನ್ಸ್ ಮಾಡುತ್ತಾ, ಹತ್ತಿರದಲ್ಲೇ ಇರುವ ದೊಡ್ಡ ಬಾಕ್ಸ್‌ನಲ್ಲಿ ಸೇರಿಸಬೇಕು. ರೂಪೇಶ್ ಶೆಟ್ಟಿ ಹಾಗೂ ರಾಕೇಶ್, ಅನುಪಮಾ ಹಾಗೂ ದೀಪಿಕಾ ದಾಸ್, ಆರ್ಯವರ್ಧನ್ ಗುರೂಜಿ ಹಾಗೂ ರೂಪೇಶ್ ರಾಜಣ್ಣ ಈ ಆಟದಲ್ಲಿ ಜೋಡಿಯಾಗಿದ್ದಾರೆ. ಆದರೆ ಚೆಂಡನ್ನು ಸುರಕ್ಷಿತವಾಗಿ ಮತ್ತೊಂದು ಬಾಕ್ಸ್‌ಗೆ ಹಾಕಲಾಗದೆ ಆರ್ಯವರ್ಧನ್ ಹಾಗೂ ರೂಪೇಶ್ ರಾಜಣ್ಣ ಒಬ್ಬರ ಮೇಲೆ ಮತ್ತೊಬ್ಬರು ದೂರುವುದನ್ನು ಈ ಪ್ರೋಮೋದಲ್ಲಿ ನೋಡಬಹುದು.
ವಾಹಿನಿ ಮತ್ತೊಂದು ಪ್ರೋಮೋ ಹಂಚಿಕೊಂಡಿದ್ದು ಅದಕ್ಕೆ 'ಮಿಣ ಮಿಣ ಮೀನಾಕ್ಷಿ ಮದುವೆ' ಎಂಬ ಕ್ಯಾಪ್ಷನ್ ನೀಡಿದೆ. ಅರುಣ್ ಸಾಗರ್, ಧಾರವಾಡದ ವ್ಯಕ್ತಿ ಪಾತ್ರದಲ್ಲಿ ತನ್ನ ತಂಗಿ ( ದೀಪಿಕಾ ದಾಸ್) ಗೆ ಗಂಡು ಹುಡುಕಲು ದೊಡ್ಮನೆಗೆ ಬರುತ್ತಾರೆ. ಈ ಪ್ರೋಮೋದಲ್ಲಿ ರೂಪೇಶ್ ಶೆಟ್ಟಿ ಡೊಳ್ಳು ಹೊಟ್ಟೆಯ ವ್ಯಕ್ತಿಯಾಗಿ ಕಾಸ್ಟ್ಯೂಮ್ ಧರಿಸಿರುತ್ತಾರೆ. ಮೀನಾಕ್ಷಿ ವೇಷದಲ್ಲಿರುವ ದೀಪಿಕಾ ದಾಸ್‌ನನ್ನು ನೋಡಿ, ಆರ್ಯವರ್ಧನ್ ಗುರೂಜಿ ''ನಿನಗೆ ಕತ್ತಲ್ಲಿ ಇರೋ ಚೈನ್ ಕೊಡ್ತೀನಿ, ಬಾಡಿಯಲ್ಲಿರೋ ಮನಸ್ಸನ್ನೂ ಕೊಡ್ತೀನಿ ಎಂದಾಗ ಉಳಿದ ಸ್ಪರ್ಧಿಗಳು ಜೋರಾಗಿ ನಗಲು ಆರಂಭಿಸುತ್ತಾರೆ. ಇದು ಕೇವಲ ಮನರಂಜನೆಗಾಗಿಯೋ ಅಥವಾ ಇದು ಕೂಡಾ ಒಂದು ಟಾಸ್ಕ್ ಇರಬಹುದಾ ಎಂದು ತಿಳಿಯಲು ನೀವು ಇಂದಿನ ಸಂಚಿಕೆ ನೋಡಬೇಕು.
ಮತ್ತಷ್ಟು ಮನರಂಜನೆ ಸುದ್ದಿಗಳು
ಯಾರು ಏನಂದ್ರೂ ರಶ್ಮಿಕಾ ಜೊತೆ ಡೇಟ್ ಮಾಡುವ ಆಸೆ ಎಂದ ತಮಿಳು ಸ್ಟಾರ್ ನಟ!
ಟ್ರೋಲ್, ವಿವಾದಗಳ ನಡುವೆ ಸ್ಟಾರ್ ನಟರೊಬ್ಬರು, ನಾನು ರಶ್ಮಿಕಾ ಜೊತೆ ಡೇಟಿಂಗ್ ಮಾಡಬೇಕು ಎಂದು ಹೇಳಿಕೊಂಡಿದ್ದಾರೆ. ರಶ್ಮಿಕಾ, ನ್ಯಾಷನಲ್ ಕ್ರಷ್ ಎಂದೇ ಹೆಸರಾದವರು. ಸೌತ್‌ನಿಂದ ಬಾಲಿವುಡ್‌ಗೆ ಹೋಗಿ, ಅಲ್ಲಿ ಕೂಡಾ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದವರು. ಇದೀಗ ತಮಿಳು ನಟರೊಬ್ಬರು ರಶ್ಮಿಕಾ ಜೊತೆ ಡೇಟ್‌ಗೆ ಹೋಗೋ ಆಸೆ ವ್ಯಕ್ತಪಡಿಸಿದ್ದಾರೆ. ಪೂರ್ತಿ ಸ್ಟೋರಿಗೆ ಇಲ್ಲಿ ಕ್ಲಿಕ್ ಮಾಡಿ.
ಹತ್ತಿರ ಯಾರೇ ಬಂದ್ರೂ ನಾನೂ ಭಯದಿಂದ ಮುಖ ಮುಚ್ಚಿಕೊಳ್ತಿದ್ದೆ..ಅಕ್ಕನ ಮೇಲೆ ಆಸಿಡ್ ದಾಳಿ ನೆನೆದ ಕಂಗನಾ!
ನಾನು ಟೀನೇಜ್‌ನಲ್ಲಿರುವಾಗ ನನ್ನ ಸಹೋದರಿ ರಂಗೋಲಿ ಚಂದೇಲ್ ಮೇಲೆ ರೋಡ್ ರೋಮಿಯೋ ಒಬ್ಬ ಆಸಿಡ್ ದಾಳಿ ಮಾಡಿದ್ದ. ಆಗ ರಂಗೋಲಿಗೆ 52 ಬಾರಿ ಸರ್ಜರಿ ಮಾಡಿಸಲಾಯ್ತು. ಜೊತೆಗೆ ಆಕೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದಳು. ಕಂಗನಾ ಸಹೋದರಿ ಪೂರ್ತಿ ಸ್ಟೋರಿ ಓದಲು ಈ ಲಿಂಕ್ ಒತ್ತಿ.