Bigg Boss Kannada 11: ತ್ರಿವಿಕ್ರಂಗೆ ಕೈತಪ್ಪಿದ ಬಿಗ್ ಬಾಸ್ ಟ್ರೋಫಿ; ಸೀಸನ್ 11ರ ಮೊದಲ ರನ್ನರ್ ಅಪ್ ವಿಕ್ಕಿ
Bigg Boss Kannada 11: ತ್ರಿವಿಕ್ರಂಗೆ ಬಿಗ್ ಬಾಸ್ ಟ್ರೋಫಿ ಕೈ ತಪ್ಪಿದೆ. ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರಾಗ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹನುಮಂತ ವಿನ್ ಆಗಿದ್ದಾರೆ. ತ್ರಿವಿಕ್ರಂ ರನ್ನರ್ ಅಪ್ ಆಗಿದ್ದಾರೆ.

Bigg Boss Kannada 11: ಬಿಗ್ ಬಾಸ್ ಸೀಸನ್ 11ರ ರನ್ನರ್ ಅಪ್ ಆಗಿ ತ್ರಿವಿಕ್ರಂ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಮೊದಲ ದಿನದಿಂದಲೂ ಉಳಿದುಕೊಂಡು ಫಿನಾಲೆಗೆ ಬಂದಿರುವ ಸ್ಪಧಿ ಇವರೊಬ್ಬರೇ ಆಗಿದ್ದರು. ಹನುಮಂತ ಹಾಗೂ ರಜತ್ ಇಬ್ಬರೂ ಸ್ಪರ್ಧೆಯ ಮಧ್ಯದಲ್ಲಿ ಆಗಮಿಸಿದವರು. ತ್ರಿವಿಕ್ರಂ ಮೊದಲಿನಿಂದಲೂ ಪ್ರಭಲ ಸ್ಪರ್ಧಿಯಾಗಿಯೇ ಕಾಣಿಸಿಕೊಂಡವರು, ಸಾಕಷ್ಟು ಜನರಿಗೆ ತ್ರಿವಿಕ್ರಂ ಫಿನಾಲೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಭರವಸೆ ಮೊದಲೇ ಇತ್ತು. ಆದರೆ ಗೆಲುವು ಯಾರದು ಎಂದು ಕೊನೆಯ ಕ್ಷಣದವರೆಗೂ ನಿರ್ಧಾರ ಮಾಡುವುದು ಕಷ್ಟವಾಗಿತ್ತು. ಹನುಮಂತ ಹಾಗೂ ತ್ರಿವಿಕ್ರಂ ನಡುವೆ ಗೆಲುವು ಯಾರದ್ದು? ಎಂಬ ಅನುಮಾನ ಕೊನೆವರೆಗೂ ಇತ್ತು.
ಅದೇ ರೀತಿ ಇದೀಗ ಗೆಲುವು ಯಾರದ್ದಾಗಿತ್ತು ಎಂದು ಕಾದವರಿಗೆ ಉತ್ತರ ಸಿಕ್ಕಿದೆ. ಹನುಮಂತ ಅವರು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಆದರೆ. ರನ್ನರ್ ಆಗಿ ತ್ರಿವಿಕ್ರಂ ಹೊರ ಹೊಮ್ಮಿದ್ದಾರೆ. ಸಾಕಷ್ಟು ಅವಕಾಶಗಳು ಇನ್ನು ಮುಂದೆ ನನಗೆ ಸಿಗಲಿ. ಅದೆಕ್ಕೆಲ್ಲ ಈ ಬಿಗ್ ಬಾಸ್ ಕಾರಣವಾಗಿರುತ್ತದೆ ಎಂದು ಹೇಳಿದ್ದಾರೆ. ಕಿಚ್ಚ ಸುದೀಪ್ ಹನುಮಂತನ ಗೆಲುವು ಸಂಭ್ರಮಿಸಿದ ರೀತಿಯಲ್ಲೇ ತ್ರಿವಿಕ್ರಂ ಅವರನ್ನು ಸಮಾಧಾನ ಪಡಿಸಿದ್ದಾರೆ
ಬಿಗ್ ಬಾಸ್ ವೇದಿಕೆಯಲ್ಲಿ ತ್ರಿವಿಕ್ರಂಗೆ 15 ಲಕ್ಷ ಹಣ ಬಹುಮಾನವಾಗಿ ದೊರೆತಿದೆ. ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನಗಳ ಕಾಲ ಉಳಿದುಕೊಂಡು ವೀಕ್ಷಕರನ್ನು ರಂಜಿಸಿದ್ದಾರೆ. ಮೊದಲ ರನ್ನರ್ ಅಪ್ ಆದ ತ್ರಿವಿಕ್ರಂಗೆ ಶುಭಾಶಯಗಳ ಸುರಿಮಳೆ ಆರಂಭವಾಗಿದೆ. ಬಿಗ್ ಬಾಸ್ ಗೆಲ್ಲದೇ ಇದ್ದರೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
