Bigg Boss Kannada 11: ಇಬ್ರೂ ಥೇಟ್‌ ರಾಧಾ ಕೃಷ್ಣನ ಥರ ಇದ್ದೀರಾ; ಭವ್ಯಾ ಗೌಡಗೆ ಸಿಕ್ತು ತ್ರಿವಿಕ್ರಮ್ ತಾಯಿಯ ಕಾಂಪ್ಲಿಮೆಂಟ್‌
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ಇಬ್ರೂ ಥೇಟ್‌ ರಾಧಾ ಕೃಷ್ಣನ ಥರ ಇದ್ದೀರಾ; ಭವ್ಯಾ ಗೌಡಗೆ ಸಿಕ್ತು ತ್ರಿವಿಕ್ರಮ್ ತಾಯಿಯ ಕಾಂಪ್ಲಿಮೆಂಟ್‌

Bigg Boss Kannada 11: ಇಬ್ರೂ ಥೇಟ್‌ ರಾಧಾ ಕೃಷ್ಣನ ಥರ ಇದ್ದೀರಾ; ಭವ್ಯಾ ಗೌಡಗೆ ಸಿಕ್ತು ತ್ರಿವಿಕ್ರಮ್ ತಾಯಿಯ ಕಾಂಪ್ಲಿಮೆಂಟ್‌

ಬಿಗ್‌ ಬಾಸ್‌ ಫಿನಾಲೆಗೆ ಹತ್ತಿರ ಬರ್ತಿದ್ದಂತೆ, ಇದೇ ಬಿಗ್ ಮನೆಗೆ ಅಚ್ಚರಿಯ ರೀತಿಯಲ್ಲಿ ಸ್ಪರ್ಧಿಗಳ ಅಮ್ಮಂದಿರ ಆಗಮನವಾಗಿದೆ.‌ ಅಮ್ಮನನ್ನು ನೇರವಾಗಿ ಭೇಟಿ ಮಾಡಲು ಬಿಡದ ಬಿಗ್‌ ಬಾಸ್‌, ಒಂದು ಚಟುವಟಿಕೆ ನೀಡಿ ಟ್ವಿಸ್ಟ್‌ ಕೊಟ್ಟಿದ್ದಾರೆ. ಹೀಗಿರುವಾಗ ನಿಗದಿತ ಸಮಯದಲ್ಲಿ ಪಜಲ್‌ ಪೂರ್ಣಗೊಳಿಸದ ತ್ರಿವಿಕ್ರಂಗೆ ಅಮ್ಮನ ಭೇಟಿಯ ಅವಕಾಶ ಸಿಕ್ಕಿಲ್ಲ.

ಬಿಗ್‌ ಬಾಸ್‌ ಮನೆಗೆ ಬಂದ ಸ್ಪರ್ಧಿಗಳ ಅಮ್ಮಂದಿರು
ಬಿಗ್‌ ಬಾಸ್‌ ಮನೆಗೆ ಬಂದ ಸ್ಪರ್ಧಿಗಳ ಅಮ್ಮಂದಿರು (Colors Kannada )

Bigg Boss Kannada 11: ಬಿಗ್‌ ಬಾಸ್‌ ಕನ್ನಡ 11ರ ಮನೆಯಲ್ಲಿ ವಾರಗಳು ಉರುಳಿದಂತೆ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆಗುತ್ತ ಬರುತ್ತಿದೆ. ಈಗಾಗಲೇ 90 ಪ್ಲಸ್‌ ದಿನಗಳ ಹಾದಿಯನ್ನು ಸೆವೆಸಿರುವ ಬಿಗ್‌ ಬಾಸ್‌, ಇನ್ನೇನು ಫಿನಾಲೆಗೆ ಸಮೀಪ ಬಂದಿದೆ. ಬಹುಶಃ ಮುಂದಿನ ನಾಲ್ಕು ವಾರಗಳಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ಕ್ಕೆ ತೆರೆಬೀಳಲಿದೆ. ಇದೀಗ ಇದೇ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಕುಟುಂಬದವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಅದೂ ಸರ್ಪ್ರೈಸ್‌ ರೀತಿಯಲ್ಲಿ.

ಬಿಗ್‌ ಮನೆಗೆ ಅಮ್ಮಂದಿರ ಆಗಮನ

90 ದಿನಗಳ ಮೇಲಾದರೂ ಸ್ಪರ್ಧಿಗಳ ಕುಟುಂಬದವರು ಬಿಗ್‌ಬಾಸ್‌ ಮನೆಗೆ ಬಂದಿಲ್ಲ. ಇದೀಗ ಒಬ್ಬೊಬ್ಬರ ಆಗಮನವಾಗುತ್ತಿದೆ. ಕಲರ್ಸ್‌ ಕನ್ನಡ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಬಿಗ್‌ ಮನೆಗೆ ಸ್ಪರ್ಧಿಗಳ ಹೆತ್ತವರ ಆಗಮನವಾಗಿದೆ. ಮೊದಲಿಗೆ ಮುಖ್ಯ ದ್ವಾರದಿಂದ ಭವ್ಯಾ ಗೌಡ ಅವರ ತಾಯಿ ಆಗಮಿಸಿದರೆ, ಬಳಿಕ ತ್ರಿವಿಕ್ರಮ್‌ ಅವರ ತಾಯಿಯೂ ಆಗಮಿಸಿದ್ದಾರೆ. ಅಮ್ಮನ ಆಗಮನವಾಗುತ್ತಿದ್ದಂತೆ, ನಿಂತಲ್ಲಿಂದಲೇ ಇವರಿಬ್ಬರ ಕಣ್ಣಾಲಿಗಳಲ್ಲಿ ನೀರು ಜಿನುಗಿದೆ. ಆದರೆ, ಸ್ಪರ್ಧಿಗಳಿಗೆ ಅಮ್ಮನ ಭೇಟಿಗಾಗಿ ಒಂದು ಟ್ವಿಸ್ಟ್‌ ಕೊಟ್ಟಿದ್ದಾರೆ.

ಭೇಟಿ ನಡುವೆ ಬಿಗ್‌ ಟ್ವಿಸ್ಟ್‌

ಎಲ್ಲರೂ Pause ಎಂದು ಬಿಗ್‌ಬಾಸ್‌ ಹೇಳಿದ್ದಾರೆ. 10 ನಿಮಿಷದ ಒಳಗೆ ಪಜಲ್‌ ಪೂರ್ಣಗೊಳಿಸಿದರೆ ಮಾತ್ರ ಅಮ್ಮನ ಭೇಟಿಗೆ ಅವಕಾಶ ಎಂದಿದ್ದಾರೆ. ಅಮ್ಮನ ಫೋಟೋ ತುಣುಕುಗಳ ಪಜಲ್‌ಅನ್ನು ಪೂರ್ಣಗೊಳಿಸಿದ ಭವ್ಯಾಗೆ ಭೇಟಿಯ ಅವಕಾಶ ಸಿಕ್ಕಿದೆ. ಆದರೆ, ತ್ರಿವಿಕ್ರಮ್ 10 ನಿಮಿಷದಲ್ಲಿ ಪಜಲ್‌ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇನ್ನೊಂದು ಚಾನ್ಸ್‌ ಕೊಡಿ ಎಂದು ಅಂಗಲಾಚಿದ್ದಾರೆ. ಸಮಯ ಮುಗಿದ ಹಿನ್ನೆಲೆಯಲ್ಲಿ ಮುಖ್ಯದ್ವಾರದಿಂದ ತ್ರಿವಿಕ್ರಮ್‌ ತಾಯಿ ಹೊರ ನಡೆದಿದ್ದಾರೆ.

ಭವ್ಯಾ ಗೌಡ ಮತ್ತು ತ್ರಿವಿಕ್ರಮ್‌ ಬಿಗ್‌ ಬಾಸ್‌ ಮನೆಯಲ್ಲಿ ತುಂಬ ಆಪ್ತರಾಗಿದ್ದಾರೆ. ಭವ್ಯಾ ಸೋತಾಗ ತ್ರಿವಿಕ್ರಂ ಸ್ಫೂರ್ತಿ ತುಂಬಿದ್ದಾರೆ. ಟಾಸ್ಕ್‌ ಮಾತ್ರವಲ್ಲದೆ, ಬಿಗ್‌ ಬಾಸ್‌ ಮನೆಯಲ್ಲಿನ ಪ್ರತಿ ಏರಿಳಿತಗಳ ಬಗ್ಗೆಯೂ ಭವ್ಯಾ ಜತೆ ಸುದೀರ್ಘವಾಗಿ ಮಾತನಾಡಿದ್ದಾರೆ. ಇತ್ತ ತಮ್ಮ ಇಷ್ಟ- ಕಷ್ಟಗಳೆಲ್ಲವನ್ನೂ ತ್ರಿವಿಕ್ರಂ ಬಳಿ ಹೇಳಿಕೊಂಡಿದ್ದಾರೆ ಭವ್ಯಾ. ಮನೆ ಮಂದಿ ಮಾತ್ರವಲ್ಲದೆ, ಹೊರಗಡೆಯ ವೀಕ್ಷಕರೂ ಈ ಜೋಡಿಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಬಿಗ್‌ ಮನೆಗೆ ಬಂದ ವಿಕ್ರಂ ತಾಯಿಯೂ ಹೊರಗಿನ ವೀಕ್ಷಕರ ಅಭಿಪ್ರಾಯವನ್ನೇ ಭವ್ಯಾ ಮುಂದೆ ಹೇಳಿದ್ದಾರೆ.

ರಾಧಾ ಕೃಷ್ಣನ ಥರ ಇದ್ದೀರಾ..

ಭವ್ಯಾ ಗೌಡ ಅವರ ಬಳಿ ಬಂದು ಮಾತಿಗಿಳಿದ ತ್ರಿವಿಕ್ರಮ್‌ ಅವರ ತಾಯಿ, "ನನ್ನ ಮಗನ ತಾಯಿಯಾಗಿ, ಫ್ರೆಂಡ್‌ ಆಗಿ ಎಲ್ಲ ಥರದಲ್ಲಿಯೂ ಜತೆಗಿದ್ದೀಯಾ. ರಾಧಾ ಕೃಷ್ಣನ ಥರ ಇದ್ದೀರಾ ಎಂದು ಹೇಳಿದ್ದಾರೆ.

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.

Whats_app_banner