Bigg Boss Kannada 11: ಕೊನೇ ಕ್ಷಣದಲ್ಲಿ ಬಿಗ್ ಬಾಸ್ ಕನ್ನಡ 11ರ ಫಿನಾಲೆಯಿಂದ ಎಲಿಮಿನೇಟ್ ಆದ ಭವ್ಯಾ ಗೌಡಗೆ ಬಿದ್ದ ಮತಗಳೆಷ್ಟು?
Bigg Boss Kannada 11: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಭವ್ಯಾ ಗೌಡ ಫಿನಾಲೆಗೆ ಇನ್ನೊಂದೇ ದಿನ ಇರುವಾಗ ಮನೆಯಿಂದ ಹೊರಬಿದ್ದಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಭವ್ಯಾ ಗೌಡ ಫಿನಾಲೆಗೆ ಇನ್ನೊಂದೇ ದಿನ ಇರುವಾಗ ಮನೆಯಿಂದ ಹೊರಬಿದ್ದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇನ್ನು ಕೇವಲ ಐದು ಸ್ಪರ್ಧಿಗಳು ಮಾತ್ರ ಬಾಕಿ ಉಳಿದುಕೊಂಡಿದ್ದಾರೆ. ಫಿನಾಲೆ ಹತ್ತಿರ ಇದ್ದು ಇಲ್ಲಿಂದ ಹೊರ ಬೀಳುವುದು ಸುಲಭದ ಮಾತಲ್ಲ ಎನ್ನುತ್ತಲೇ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಅವರನ್ನು ಕಳಿಸಿಕೊಟ್ಟಿದ್ದಾರೆ.ತ್ರಿವಿಕ್ರಂ ಹಾಗೂ ನನ್ನ ನಡುವಿನ ಸಂಬಂಧದ ಬಗ್ಗೆ ಯಾರು ಏನೇ ಅಂದ್ರೂ ನಾವು ಇನ್ನು ಮುಂದೂ ಹೀಗೆ ಇರ್ತೀವಿ ಎಂದು ಇಬ್ಬರೂ ಹೇಳಿಕೊಂಡಿದ್ದಾರೆ.
ಉಗ್ರಂ ಮಂಜು ಕೂಡ ಭವ್ಯಾ ಬಗ್ಗೆ ಉತ್ತಮ ಮಾತಾಡಿದ್ದಾರೆ. ಮೋಕ್ಷತಾ ಅವರು ಈ ಹಿಂದೆ ಈ ಮನೆಯಲ್ಲಿ ಇರಲು ಯಾರು ಅರ್ಹರಲ್ಲ ಎಂದು ಕೇಳಿದಾಗ ಗ್ರಾಂಡ್ ಫಿನಾಲೆಯ ದಿನವೇ ಆ ಪ್ರಶ್ನೆಗೆ ಉತ್ತರವಾಗಿ ಭವ್ಯಾ ವಿನ್ ಆಗಲು ಅರ್ಹರಲ್ಲ ಎಂದು ಹೇಳಿದ್ದರು. ಆದರೆ ಕೊನೆಯಲ್ಲಿ ನಾವು ಇನ್ನು ಮುಂದೆ ಒಳ್ಳೆಯ ಸ್ನೇಹಿತೆಯರಾಗಿರೋಣ ಎಂದು ಹೇಳಿದ್ದಾರೆ. ಭವ್ಯಾ ಗೌಡ ಅವರೂ ಸಹ ಈ ಮನೆಯಲ್ಲಿ ಆಡಿದ ಮಾತು ಈ ಮನೆಗಷ್ಟೇ ಸೀಮಿತ. ಇಲ್ಲಿನ ಸಂದರ್ಭಗಳು ಆ ರೀತಿ ಮಾಡಿಸುತ್ತವೆ, ಅದನ್ನು ಹೊರತುಪಡಿಸಿ ಇನ್ನೇನೂ ಇಲ್ಲ ಎಂದು ಹೇಳಿದ್ದಾರೆ.
ಭಾವುಕರಾದ ಭವ್ಯಾ ಗೌಡ
ಇನ್ನು ಮನೆಯಿಂದ ಹೊರ ಬೀಳುವ ಸಂದರ್ಭದಲ್ಲಿ ಅಳಬಾರದು ಎಂದು ತೀರ್ಮಾನ ಮಾಡಿಕೊಂಡಿದ್ದರೂ ಕೊಂಚ ಭಾವುಕರಾಗಿದ್ದರು. ಬಿಗ್ ಬಾಸ್ ನಾನು ಈ ಮನೆಯಿಂದ ಹೊರಡುವ ವೇಳೆ ಮಾತನಾಡಬೇಕು ಎಂದು ಅವರು ಬಯಸಿದ್ದರು. ಆದರೆ ಮುಖ್ಯ ದ್ವಾರ ತೆರೆದುಕೊಂಡಿತ್ತು, ಅದನ್ನು ನೋಡಿ ಇನ್ನಷ್ಟು ಬೇಸರಿಸಿಕೊಂಡರು.
ಕಿರುತೆರೆ ಹಿನ್ನೆಲೆಯಿಂದ ಬಿಗ್ ಬಾಸ್ ಮನೆಗೆ ಬಂದ ನಟಿ ಭವ್ಯಾ ಗೌಡ. ಮನೆಯಲ್ಲಿದ್ದಷ್ಟು ದಿನ ಸಕತ್ತಾಗಿಯೇ ಆಟ ಆಡಿದ್ದಾರೆ. ಟಾಸ್ಕ್‌ಗಳಲ್ಲಿಯೂ ತಮ್ಮ ಖದರ್ ತೋರಿಸಿದ್ದಾರೆ. ಮಾತನಾಡುವುದರಲ್ಲೂ ಮುಂದಿದ್ದ ಈ ಬೆಡಗಿ, ಇದೀಗ ಸುದೀರ್ಘ 100 ಪ್ಲಸ್ ದಿನಗಳ ಬಿಗ್ ಬಾಸ್ ಆಟ ಮುಗಿಸಿದ್ದಾರೆ. ಟಾಪ್ ಆರರಲ್ಲಿ ಮಂಜು, ರಜತ್, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ ಮತ್ತು ಹನಮಂತು ಇದ್ದರು. ಈ ಆರರ ಪೈಕಿ ಅತ್ಯಂತ ಕಡಿಮೆ ವೋಟ್ ಪಡೆದು, ಶನಿವಾರ ಮನೆಯಿಂದ ಹೊರನಡೆದಿದ್ದಾರೆ.
ಭವ್ಯಾ ಪಡೆದ ವೋಟ್‌ಗಳೆಷ್ಟು?
ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ವೋಟ್ ಪಡೆದವರು ಮತ್ತು ಅತೀ ಕಡಿಮೆ ವೋಟ್ ಪಡೆದವರು ಯಾರು ಎಂಬುದನ್ನು ಕಿಚ್ಚ ಸುದೀಪ್ ರಿವೀಲ್ ಮಾಡಿದ್ದರು. ಆ ಪೈಕಿ, 5 ಕೋಟಿ 23 ಲಕ್ಷ 89 ಸಾವಿರ 318 ವಿಜೇತ ಸ್ಪರ್ಧಿಗೆ ಮತ ಸಿಕ್ಕರೆ, ಬಿಗ್ ಬಾಸ್ ಮನೆಯಿಂದ ಹೊರಬಂದ ಭವ್ಯಾಗೆ 64 ಲಕ್ಷ 48 ಸಾವಿರ 853 ಮತಗಳು ಭವ್ಯಾ ಅವರಿಗೆ ಬಿದ್ದಿವೆ. ಈ ಮೂಲಕ ಅತ್ಯಂತ ಕಡಿಮೆ ವೋಟ್ ಪಡೆದು ಕೊನೇ ಕ್ಷಣದಲ್ಲಿ ಕಪ್ ಎತ್ತಿ ಹಿಡಿಯುವ ಆಸೆಯನ್ನು ಕೈ ಚೆಲ್ಲಿದ್ದಾರೆ.
