ಬಿಗ್‌ ಬಾಸ್‌ ಮನೆಯಿಂದ ಹೊರಡುವಾಗ ಹೀಗಂದ್ರು ತ್ರಿವಿಕ್ರಂ; ನನ್ನ ನಿನ್ನ ಸಂಬಂಧ ಹೀಗೇ ಇರುತ್ತೆ ಎಂದ ಭವ್ಯಾ ಗೌಡ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ ಬಾಸ್‌ ಮನೆಯಿಂದ ಹೊರಡುವಾಗ ಹೀಗಂದ್ರು ತ್ರಿವಿಕ್ರಂ; ನನ್ನ ನಿನ್ನ ಸಂಬಂಧ ಹೀಗೇ ಇರುತ್ತೆ ಎಂದ ಭವ್ಯಾ ಗೌಡ

ಬಿಗ್‌ ಬಾಸ್‌ ಮನೆಯಿಂದ ಹೊರಡುವಾಗ ಹೀಗಂದ್ರು ತ್ರಿವಿಕ್ರಂ; ನನ್ನ ನಿನ್ನ ಸಂಬಂಧ ಹೀಗೇ ಇರುತ್ತೆ ಎಂದ ಭವ್ಯಾ ಗೌಡ

Bigg Boss Kannada 11: ಬಿಗ್‌ ಬಾಸ್ ಸೀಸನ್‌ 11ರಲ್ಲಿ 5ನೇ ರನ್ನರ್‍‌ ಅಪ್ ಆದ ಭವ್ಯಾ ಗೌಡ ಫಿನಾಲೆಗೆ ಇನ್ನೊಂದು ದಿನ ಬಾಕಿ ಇದೆ ಎನ್ನುವಾಗ ಬಿಗ್‌ ಬಾಸ್‌ ಮನೆಯಿಂದ ಹೊರ ಬಂದಿದ್ದಾರೆ. ತ್ರಿವಿಕ್ರಂ ಬಗ್ಗೆ ಅವರು ಹೇಳಿದ್ದೇನು ನೋಡಿ.

ಭವ್ಯಾ ಗೌಡ, ತ್ರಿವಿಕ್ರಂ
ಭವ್ಯಾ ಗೌಡ, ತ್ರಿವಿಕ್ರಂ (Colors Kannada)

ಬಿಗ್‌ ಬಾಸ್ ಸೀಸನ್‌ 11ರಲ್ಲಿ 5ನೇ ರನ್ನರ್‍‌ ಅಪ್ ಆದ ಭವ್ಯಾ ಗೌಡ ಹಾಗೂ ಮೊದಲ ರನ್ನರ್ ಅಪ್ ಆದ ತ್ರಿವಿಕ್ರಂ ಇವರಿಬ್ಬರೂ ಬಿಗ್‌ ಬಾಸ್‌ ಮನೆಯಲ್ಲಿ ಹೆಚ್ಚಿನ ಸಮಯ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಇವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ರೂಮರ್‍‌ಗಳೂ ಹರಿದಾಡುತ್ತಿದ್ದವು. ಯಾಕೆಂದರೆ ಬಿಗ್‌ ಬಾಸ್‌ ಮನೆಯಲ್ಲಿ ಯಾವಾಗಲೂ ಜತೆಯಾಗಿ ಸುತ್ತಾಡಿ, ಊಟ ಮಾಡಿ ಸದಾ ಕಾಲ ಜತೆಯಾಗಿ ಸಮಯ ಕಳೆಯುತ್ತಿದ್ದ ಇವರಿಬ್ಬರನ್ನು ನೋಡಿದರೆ ಎಂಥವರಿಗೂ ಅನುಮಾನ ಬರುವಂತಿತ್ತು. ಆದರೆ ಇವರಿಬ್ಬರು ಎಂದಿಗೂ ತಮ್ಮ ಪ್ರೀತಿಯ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಇನ್ನು ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಬಂದು ಇದೇ ವಿಚಾರದ ಬಗ್ಗೆ ಮಾತನಾಡಿದರೂ ಇವರಿಬ್ಬರು ನಕ್ಕು ಸುಮ್ಮನಾಗುತ್ತಿದ್ದರು.

ಭವ್ಯಾ ಗೌಡ ಮತ್ತು ತ್ರಿವಿಕ್ರಂ ಸಂಬಂಧ ಹೇಗಿದೆ?

ಸೋಷಿಯಲ್ ಮೀಡಿಯಾಗಳಲ್ಲಿ ಇವರಿಬ್ಬರು ಒಟ್ಟಾಗಿದ್ದ ಸಾಕಷ್ಟು ಫೋಟೋಗಳು ವೈರಲ್ ಆಗುತ್ತಿತ್ತು. ಆದರೆ ಇನ್ನೊಂದಷ್ಟು ಜನ ತ್ರಿವಿಕ್ರಂ ಹಾಗೂ ಮೋಕ್ಷಿತಾ ಜೋಡಿಯೇ ಚೆನ್ನಾಗಿದೆ ಎಂದು ಟ್ರೋಲ್ ಮಾಡುತ್ತಿದ್ದರು. ಆದರೆ ಯಾವಾಗ ತ್ರಿವಿಕ್ರಂ ಬಗ್ಗೆ ಮಾತನಾಡಿದರೂ ಭವ್ಯಾ ಗೌಡ ನಾಚಿಕೊಳ್ಳುತ್ತಿದ್ದರು. ಇನ್ನು ಬಿಗ್‌ ಬಾಸ್‌ ಮನೆಯಿಂದ ಹೊರ ಬರುವಾಗ ಭವ್ಯಾ ಗೌಡ ತ್ರಿವಿಕ್ರಂ ಬಗ್ಗೆ ಮಾತನಾಡಿದ್ದಾರೆ. “ವಿಕ್ಕಿ ನನ್ನ ನಿನ್ನ ಬಗ್ಗೆ ಯಾರು ಏನೇ ಮಾತಾಡಿದ್ರೂ ನಾವು ಇನ್ನು ಮುಂದೆ ಹೀಗೇ ಇರೋಣ” ಎಂದು ಹೇಳಿದ್ದಾರೆ.

ಭವ್ಯಾ ತುಂಬಾ ಚಿಕ್ಕವಳು ಎಂದ ತ್ರಿವಿಕ್ರಂ

ಇನ್ನು ತ್ರಿವಿಕ್ರಂ ಅವರು ಭವ್ಯಾ ಗೌಡ ಅವರ ಬಗ್ಗೆ ಮಾತನಾಡುವಾಗ “ ಭವ್ಯಾ ತುಂಬಾ ಚಿಕ್ಕವಳು. ಈ ಮನೆಯಲ್ಲಿ ಎಲ್ಲರಿಗಿಂತ ಚಿಕ್ಕವಳು ಭವ್ಯಾ ಆಗಿದ್ದಳು.. ಆದರೂ ಕೊನೆಯ ದಿನದವರೆಗೂ ಅವಳು ಬಂದಿದ್ದಾಳೆ. ಇದು ನಿಜಕ್ಕೂ ಸಾಧನೆ” ಎಂದು ಹೇಳಿದ್ದಾರೆ. ಇವರಿಬ್ಬರಲ್ಲಿ ಯಾರೊಬ್ಬರೂ ತಾವು ಪ್ರೀತಿಸುತ್ತಿದ್ದೇವೆ, ಅಥವಾ ಮುಂದೆ ಮದುವೆಯಾಗಲಿದ್ದೇವೆ ಎಂದು ಹೇಳಿಲ್ಲ.

ತ್ರಿವಿಕ್ರಂ ಈ ಬಿಗ್‌ ಬಾಸ್‌ ವಿನ್ ಆಗಲಿ ಎಂದು ಭವ್ಯಾ ಗೌಡ ಬಯಸಿದ್ದರು. ಆದರೆ ಹನುಮಂತ ಬಿಗ್‌ ಬಾಸ್‌ ಸೀಸನ್‌ 11ರ ವಿನ್ನರ್ ಆಗಿದ್ದಾರೆ. ಮೊದಲ ರನ್ನರ್ ಅಪ್ ಆಗಿ ತ್ರಿವಿಕ್ರಂ ಹಾಗೂ ಎರಡನೇ ರನ್ನರ್ ಅಪ್ ಆಗಿ ರಜತ್ ಆಟ ಮುಗಿಸಿದ್ದಾರೆ. ಬಿಗ್‌ ಬಾಸ್‌ ಟ್ರೋಫಿ ಪಡೆದ ಮುರುದಿನವೇ ಸಾಕಷ್ಟು ಜನರು ಶುಭಾಶಯತಿಳಿಸಿ ತಮ್ಮಿಷ್ಟದ ಸ್ಪರ್ಧಿಗಳನ್ನು ಭೇಟಿಯಾಗಲು ಮುಂದಾಗಿದ್ದಾರೆ. ಎಲ್ಲರ ಮನೆಗಳಲ್ಲೂ ಸಂಭ್ರಮಾಚರಣೆ ಮನೆ ಮಾಡಿದೆ.

ತ್ರಿವಿಕ್ರಂ ಹೇಳಿದ್ದೇನು?
ತ್ರಿವಿಕ್ರಂ ಬಿಗ್‌ ಬಾಸ್‌ ಬಗ್ಗೆ ಮಾತನಾಡುತ್ತಾ ಈ ಶೋ ನನಗೆ ಹೊಸ ಜೀವನ ಕಟ್ಟಿಕೊಟ್ಟಿದೆ. ಇಲ್ಲಿ ನಾನು ಏನೇ ಮಾಡಿದ್ದರೂ ಅದು ಮುಂದೆ ನನ್ನ ಜೀವನಕ್ಕೆ ಪಾಠವಾಗಿ ಉಳಿಯಲಿದೆ. ನಾನು ಇಲ್ಲಿಯವರೆಗೆ ಬಂದಿದ್ದೇನೆ ಎಂಬ ಹೆಮ್ಮೆ ಇದೆ ಎಂದಿದ್ದಾರೆ. ಅವರ ಮಾತಿನಲ್ಲಿ ಟ್ರೋಫಿ ಎಷ್ಟು ಮುಖ್ಯವೋ ಹೊರಗಡೆ ಸಿಗುವ ಗೌರವ ಕೂಡ ಅಷ್ಟೇ ಮುಖ್ಯ ಎಂಬುದು ತಿಳಿಯುತ್ತದೆ. ಯಾಕೆಂದರೆ ಅವರು ಬಿಗ್‌ ಬಾಸ್‌ ವಿನ್ ಆಗದೇ ಇದ್ದರೂ ಇದರಿಂದ ಇನ್ನೊಂದಷ್ಟು ಅವಕಾಶಗಳು ನನಗೆ ಸಿಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Whats_app_banner