ಬಿಗ್‌ಬಾಸ್‌ ಕನ್ನಡ 11: ಬಾತ್‌ರೂಮ್‌ನಲ್ಲಿ ತಲೆ ತಿರುಗಿ ಬಿದ್ದ ಚೈತ್ರಾ ಕುಂದಾಪುರ, ಕೊನೆಗೂ ಕ್ಯಾಪ್ಟನ್‌ ಆದ ಭವ್ಯಾ ಗೌಡ; ದಿನ 47ರ ಹೈಲೈಟ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಕನ್ನಡ 11: ಬಾತ್‌ರೂಮ್‌ನಲ್ಲಿ ತಲೆ ತಿರುಗಿ ಬಿದ್ದ ಚೈತ್ರಾ ಕುಂದಾಪುರ, ಕೊನೆಗೂ ಕ್ಯಾಪ್ಟನ್‌ ಆದ ಭವ್ಯಾ ಗೌಡ; ದಿನ 47ರ ಹೈಲೈಟ್ಸ್‌

ಬಿಗ್‌ಬಾಸ್‌ ಕನ್ನಡ 11: ಬಾತ್‌ರೂಮ್‌ನಲ್ಲಿ ತಲೆ ತಿರುಗಿ ಬಿದ್ದ ಚೈತ್ರಾ ಕುಂದಾಪುರ, ಕೊನೆಗೂ ಕ್ಯಾಪ್ಟನ್‌ ಆದ ಭವ್ಯಾ ಗೌಡ; ದಿನ 47ರ ಹೈಲೈಟ್ಸ್‌

Bigg Boss Kannada 11: ಡ್ಯಾನ್ಸ್‌ ರೌಂಡ್‌ನಲ್ಲಿ ಗೆದ್ದ ಗೌತಮಿ-ಹನುಮಂತ ಹಾಗೂ ಭವ್ಯಾಗೌಡ-ತ್ರಿವಿಕ್ರಮ್‌ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಿ ಕೊನೆಗೆ ಭವ್ಯಾ ಕ್ಯಾಪ್ಟನ್‌ ಆಗುತ್ತಾರೆ. ಬಾತ್‌ರೂಮ್‌ನಲ್ಲಿ ತಲೆ ತಿರುಗಿ ಬಿದ್ದ ಚೈತ್ರಾ ಕುಂದಾಪುರ ಅವರನ್ನು ಬಿಗ್‌ಬಾಸ್‌ ಸೂಚನೆ ಮೇರೆಗೆ ಸಹಸ್ಪರ್ಧಿಗಳು ಕನ್ಫೆಷನ್‌ ರೂಮ್‌ಗೆ ಬಿಡುತ್ತಾರೆ.

Bigg Boss Kannada 11: ಬಾತ್‌ರೂಮ್‌ನಲ್ಲಿ ತಲೆ ತಿರುಗಿ ಬಿದ್ದ ಚೈತ್ರಾ ಕುಂದಾಪುರ; ಕೊನೆಗೂ ಕ್ಯಾಪ್ಟನ್‌ ಆದ ಭವ್ಯಾ ಗೌಡ
Bigg Boss Kannada 11: ಬಾತ್‌ರೂಮ್‌ನಲ್ಲಿ ತಲೆ ತಿರುಗಿ ಬಿದ್ದ ಚೈತ್ರಾ ಕುಂದಾಪುರ; ಕೊನೆಗೂ ಕ್ಯಾಪ್ಟನ್‌ ಆದ ಭವ್ಯಾ ಗೌಡ (PC: Jio Cinema)

Bigg Boss Kannada 11: ಗುರುವಾರ, ಶುಕ್ರವಾರದ ಎಪಿಸೋಡ್‌ನಲ್ಲಿ ಸ್ಪರ್ಧಿಗಳು ಡ್ಯಾನ್ಸ್ ಮಾಡಿ ಮನೆಗೆ ಬಂದಿದ್ದ ರಾಮಾಚಾರಿ, ಚಾರುವನ್ನು ರಂಜಿಸಿದ್ದಾರೆ. ಕೊನೆಗೆ ಚಾರು ಹಾಗೂ ರಾಮಾಚಾರಿ ಕೂಡಾ ಅಣ್ಣಯ್ಯ ಚಿತ್ರದ ರಾಗಿ ಹೊಲದಾಗೆ ಖಾಲಿ ಗುಡಿಸಲು ಹಾಡಿಗೆ ರೊಮ್ಯಾಂಟಿಕ್‌ ಡ್ಯಾನ್ಸ್‌ ಮಾಡಿದ್ದಾರೆ. ಕೊನೆಗೆ ವಿನ್ನರ್‌ಗಳನ್ನು ಅನೌನ್ಸ್‌ ಮಾಡಿ ಮನೆಯಿಂದ ಹೊರ ನಡೆದಿದ್ದಾರೆ.

ಡ್ಯಾನ್ಸ್‌ ರೌಂಡ್‌ನಲ್ಲಿ ಮೊದಲ ಸ್ಥಾನ ಗಳಿಸಿದ ಗೌತಮಿ-ಹನುಮಂತ

ಮನೆಗೆ ಅತಿಥಿಗಳಾಗಿ ಬಂದಿದ್ದ ಚಾರು ಹಾಗೂ ರಾಮಾಚಾರಿಯನ್ನು ಸ್ಪರ್ಧಿಗಳು ಮನೆಯಿಂದ ಬೀಳ್ಕೊಟ್ಟಿದ್ದಾರೆ. 47ನೇ ದಿನ ರಿಷಿ ಚಿತ್ರದ ಬಂಡನೂರು ಬಂಡರೆಲ್ಲಾ ಹಾಡಿನ ಮೂಲಕ ದಿನ ಬೆಳಗಾಗುತ್ತದೆ. ಎಲ್ಲಾ ಸ್ಪರ್ಧಿಗಳು ಹಾಡಿಗೆ ಹೆಜ್ಜೆ ಹಾಕಿ ಖುಷಿ ಪಟ್ಟರು. ಡ್ಯಾನ್ಸಿಂಗ್‌ ಜೋಡಿ ಟಾಸ್ಕ್‌ನಲ್ಲಿ 600 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದ ಗೌತಮಿ-ಹನುಮಂತ, 500 ಅಂಕಗಳನ್ನು ಪಡೆದು ದ್ವೀತಿಯ ಸ್ಥಾನ ಪಡೆದ ಭವ್ಯಾಗೌಡ-ತ್ರಿವಿಕ್ರಮ್‌ ಇಬ್ಬರೂ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾದರು. ಉಳಿದ ಸ್ಪರ್ಧಿಗಳು ಸೊಂಟದ ಪಟ್ಟಿ ತೆಗೆದು ಸ್ವತಂತ್ರ್ಯರಾದರು. ನಂತರ ಬಿಗ್‌ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ನ ಕಂಡಿಷನ್‌ಗಳನ್ನು ಸ್ಪರ್ಧಿಗಳಿಗೆ ತಿಳಿಸಿದರು.

ಕ್ಯಾಪ್ಟನ್ಸಿ ರೇಸ್‌ನಲ್ಲಿ ಗೆದ್ದ ಭವ್ಯಾಗೌಡ

ತಮ್ಮ ಸಹಸ್ಪರ್ಧಿಯ ಸೂಚನೆಯಂತೆ ಮತ್ತೊಬ್ಬ ಸ್ಪರ್ಧಿಯು ಕಣ್ಣುಪಟ್ಟಿ ಕಟ್ಟಿಕೊಂಡು ಹಗ್ಗದ ನಡುವಿನ ತಟ್ಟೆಯ ಮೇಲೆ ಬಾಲ್‌ಗಳನ್ನು ಇಡಬೇಕಿತ್ತು. ಹನುಮಂತ, ಗೌತಮಿಗೆ ಆಟ ಆಡಲು ಸಹಾಯ ಮಾಡಿದರೆ, ತ್ರಿವಿಕ್ರಮ್‌, ಭವ್ಯಾಗೆ ಸಹಾಯ ಮಾಡಿದರು. ಕೊನೆಗೆ ಭವ್ಯಾಗೌಡ 3 ಬಾಲ್‌ಗಳನ್ನು ಇಟ್ಟು ಆ ಟಾಸ್ಕ್‌ ವಿನ್‌ ಆದರು. ಇತರ ಸ್ಪರ್ಧಿಗಳು ಭವ್ಯಾಗೆ ಅಭಿನಂದನೆ ಸಲ್ಲಿಸಿದರು. ಕಳೆದ ವಾರ ತ್ರಿವಿಕ್ರಮ್‌ ಜೊತೆ ಸ್ಪರ್ಧಿಸಿ ಸೋತು ಕ್ಯಾಪ್ಟನ್‌ ಆಯ್ಕೆಯಿಂದ ಹೊರ ಉಳಿದಿದ್ದ ಭವ್ಯಾಗೌಡ ಕೊನೆಗೂ ಕ್ಯಾಪ್ಟನ್‌ ಆಗಿ ಆಯ್ಕೆ ಆದರು. ಎಲ್ಲರೂ ಭವ್ಯಾ ಅವರನ್ನು ಕ್ಯಾಪ್ಟನ್‌ ರೂಮ್‌ಗೆ ಬೀಳ್ಕೊಟ್ಟರು. ಒಳಗೆ ಹೋದ ಭವ್ಯಾ ಖುಷಿಯಿಂದ ಸಹಸ್ಪರ್ಧಿಗಳಿಗೆ, ಬಿಗ್‌ಬಾಸ್‌ಗೆ ಥ್ಯಾಂಕ್ಸ್‌ ಹೇಳಿದರು.

ತಲೆ ತಿರುಗಿ ಬಿದ್ದ ಚೈತ್ರಾ ಕುಂದಾಪುರ

ಸ್ಪರ್ಧಿಗಳು ಭವ್ಯಾ ಅವರನ್ನು ಕ್ಯಾಪ್ಟನ್ಸಿ ರೂಮ್‌ಗೆ ಕಳಿಸಿ ಅಲ್ಲಿಂದ ಬಾತ್‌ರೂಮ್‌ಗೆ ಹೋದ ಚೈತ್ರಾ ತಲೆ ತಿರುಗಿ ಬಿದ್ದಿರುತ್ತಾರೆ. ಮೋಕ್ಷಿತಾ ಹಾಗೂ ಗೌತಮಿ ಇಬ್ಬರೇ ಕುಳಿತು ಮಾತನಾಡುವಾಗ ನೀವಿಬ್ಬರೂ ಕೂಡಲೇ ಬಾತ್‌ರೂಮ್‌ಗೆ ಹೋಗಿ ಚೈತ್ರಾ ಅವರಿಗೆ ಸಹಾಯ ಮಾಡಿ ಎಂದು ಬಿಗ್‌ಬಾಸ್‌ ಹೇಳುತ್ತಾರೆ. ಆಗ ಇಬ್ಬರೂ ಬಾತ್‌ರೂಮ್‌ಗೆ ಓಡಿ ಬರುತ್ತಾರೆ. ಕೆಳಗೆ ಬಿದ್ದಿರುವ ಚೈತ್ರಾಗೆ ನೀರು ಚಿಮುಕಿಸಿದರೂ ಅವರು ಎಚ್ಚರವಾಗುವುದಿಲ್ಲ. ಬಿಗ್‌ಬಾಸ್‌ ಸೂಚನೆ ಮೇರೆಗೆ ಚೈತ್ರಾರನ್ನು ಎಲ್ಲರೂ ಕನ್ಫೆಷನ್‌ ರೂಮ್‌ಗೆ ಕರೆತರುತ್ತಾರೆ. ಅವರು ಬೆಳಗ್ಗಿನಿಂದ ಏನೂ ತಿಂದಿಲ್ಲ, ಬಹುಶ: ಅದಕ್ಕೆ ತಲೆ ತಿರುಗಿ ಬಿದ್ದಿರಬಹುದು ಎಂದು ತ್ರಿವಿಕ್ರಮ್‌ ಹೇಳುತ್ತಾರೆ. ನಂತರ ಕಳಪೆ ಉತ್ತಮ ರೌಂಡ್‌ ನಡೆಯುತ್ತದೆ. ಅದರಲ್ಲಿ ಬಹುತೇಕರು ಗೋಲ್ಡ್‌ ಸುರೇಶ್‌ಗೆ ಉತ್ತಮ ಕೊಟ್ಟರೆ ಧನರಾಜ್‌ಗೆ ಕಳಪೆ ನೀಡುತ್ತಾರೆ.

Whats_app_banner