Lawyer Jagadish: ಅಣ್ಣಾಮಲೈ ಅಣಕ ಮಾಡಿ ಮೈಗೆಲ್ಲ ಚಾಟಿಯಿಂದ ಹೊಡೆದುಕೊಂಡ ಬಿಗ್ ಬಾಸ್ ಸ್ಪರ್ಧಿ ‘ಸೊಣ್ಣಾಮಲೈ’ ಲಾಯರ್ ಜಗದೀಶ್!
Bigg Boss Kannada 11: ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿಯಾಗಿದ್ದ ಲಾಯರ್ ಜಗದೀಶ್ ಇದೀಗ ಹೊಸ ರೀತಿಯ ಪ್ರತಿಭಟನೆ ಮಾಡಿ, ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರನ್ನು ಅಣಕ ಮಾಡಿದ್ದಾರೆ. ಅವರಂತೆ ಬರಿಮೈಯಲ್ಲಿ ಚಾಟಿ ಬೀಸಿಕೊಂಡು ಅಪಹಾಸ್ಯ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
Lawyer Jagadeesh: ಬಿಗ್‌ಬಾಸ್ ಕನ್ನಡ 11ರಲ್ಲಿ ಮಾತಿನ ಮೇಲೆ ಹಿಡಿತ ಕಳೆದುಕೊಂಡು ಮಹಿಳಾ ಸ್ಪರ್ಧಿಗೆ ಕೆಟ್ಟ ಪದ ಪ್ರಯೋಗಿಸಿ, ನೇರವಾಗಿ ಹೊರಬಂದವರು ಲಾಯರ್ ಕೆ.ಎನ್. ಜಗದೀಶ್. ಚಿತ್ರ ವಿಚಿತ್ರ ಪ್ರತಿಭಟನೆಯ ಮೂಲಕ ಸದಾ ಸುದ್ದಿಯಲ್ಲಿರುವ ಜಗದೀಶ್, ಇದೀಗ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರನ್ನು ಅಣಕ ಮಾಡಿದ್ದಾರೆ. ಅಣ್ಣಾಮಲೈ ಅವರ ರೀತಿ ಪಂಚೆ ಉಟ್ಟು, ಬರೀ ಮೈಯಲ್ಲೇ ಚಾಟಿ ಏಟು ಹೊಡೆದುಕೊಂಡಿದ್ದಾರೆ. ಅವರ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪರ ವಿರೋಧಗಳು ವ್ಯಕ್ತವಾಗುತ್ತಿವೆ.
ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಅತ್ಯಾಚಾರವನ್ನು ಖಂಡಿಸಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಅಲ್ಲಿನ ಡಿಎಂಕೆ ಸರ್ಕಾರದ ವಿರುದ್ಧ ಧಿಕ್ಕಾರ ಮೊಳಗಿಸಿದ್ದರು. ಬರೀಮೈಯಲ್ಲಿಯೇ ತಮಗೆ ತಾವೇ ಚಾಟಿ ಏಟು ಹೊಡೆದುಕೊಂಡು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದರು. ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿಯೂ ಸಂಚಲನ ಸೃಷ್ಟಿಸಿತ್ತು. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಆಡಿಕೊಳ್ಳುತ್ತಿದ್ದರು. ಇದೀಗ ಇದೇ ಅಣ್ಣಾಮಲೈ ಅವರ ಪ್ರತಿಭಟನೆಯನ್ನು ಲಾಯರ್ ಜಗದೀಶ್ ವ್ಯಂಗ್ಯವಾಡಿದ್ದಾರೆ.
ಲಾಯರ್ ಜಗದೀಶ್ ವಿಡಿಯೋದಲ್ಲಿ ಏನಿದೆ?
ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡ ಜಗದೀಶ್, "ನಾನು ಸೊಣ್ಣಾಮಲೈ, ಕರ್ನಾಟಕದಲ್ಲಿ ನನ್ನನ್ನು ಚಿಂಗಂ ಅಂತ ಕರೀತಿದ್ರು. ಗುಜರಾತಿ ಟೀ ಮಾರುವವರು, ಗುಜರಾತಿ ಶೇಟುಗಳು ನನ್ನನ್ನ ಕೆಲಸದಿಂದ ಬಿಡಿಸಿ, ತಮಿಳುನಾಡಿನಲ್ಲಿ ಸಿಎಂ ಮಾಡ್ತೀನಿ ಅಂತ ಕರೆದುಕೊಂಡು ಹೋಗಿ, ಎರಡು ಎಲೆಕ್ಷನ್ ಸೋಲಿಸಿದ್ರು. ಬೇಸರ ಆಗಿದೆ. ಜೀವನ ಸಾಕಾಗಿದೆ. ಇತ್ತ ವಿಜಯ್ ಬೇರೆ ಬಂದಿದ್ದಾರೆ ಎಂದು ಅಣ್ಣಾಮಲೈ ಅವರನ್ನು ಅಪಹಾಸ್ಯ ಮಾಡಿ ಚಾಟಿಯಿಂದ ತಮ್ಮನ್ನು ತಾವೇ ಹೊಡೆದುಕೊಂಡಿದ್ದಾರೆ ಲಾಯರ್ ಜಗದೀಶ್.
ಸಿಂಗಂ ಅಲ್ಲ ಚಿಂಗಂ ಎಂದು ಅಣಕ
ಮುಂದುವರಿದು "ಪೆನ್ಸಿಲ್, ರಬ್ಬರ್, ಪೆನ್ನು ಎಲ್ಲದಕ್ಕೂ ಜಿಎಸ್‌ಟಿ ಕೊಡಬೇಕು. ನಾಳೆ ನಮ್ಮ ಲಿವರ್, ಕಿಡ್ನಿ ಟ್ರಾನ್ಸಪ್ಲಂಟ್ ಮಾಡಿದರೂ ಅದಕ್ಕೂ ಜಿಎಸ್‌ಟಿ ಹಾಕ್ತಾರೆ. ಅದರ ವಿರುದ್ಧ ಈ ಹೋರಾಟ. ಐಪಿಎಸ್ ಮಾಡಿ ಕರ್ನಾಟಕ ಚಿಂಗಂ ಅಂತ ಹೆಸರು ಮಾಡಿದ್ದೆ, ತಮಿಳುನಾಡಿನಲ್ಲಿ ಬಬಲ್‌ಗಮ್ ಮಾಡಿದ್ದಾರೆ. ಪೆರಿಯಾರ್ ವಿರುದ್ಧ ಹೋದೆ. ನನ್ನನ್ನು ಕಸ ಮಾಡಿ ಇಟ್ಟು ಬಿಟ್ಟಿದ್ದಾರೆ" ಎಂದೂ ಹೇಳಿ ಅಣ್ಣಾಮಲೈ ಅವರನ್ನು ಅಣಕ ಮಾಡಿದ್ದಾರೆ ಜಗದೀಶ್.
ತಮಿಳುನಾಡಿನ ಅಣ್ಣಾ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ, ಡಿಎಂಕೆ ಸರ್ಕಾರದ ವಿರುದ್ಧ ಅಣ್ಣಾಮಲೈ ಗುಡುಗಿದ್ದರು. ಅತ್ಯಾಚಾರ ಸಂತ್ರಸ್ತೆಯ ಹೆಸರನ್ನು ಡಿಎಂಕೆ ಸರ್ಕಾರ ಬಹಿರಂಗಪಡಿಸಿದ ನಡೆಯನ್ನೂ ಖಂಡಿಸಿರುವ ಅಣ್ಣಾಮಲೈ, ಈ ಸರ್ಕಾರವನ್ನು ಕೆಳಗಿಳಿಸಲೇಬೇಕು. ಅಲ್ಲಿಯವರೆಗೂ ನಾನು ಕಾಲಿಗೆ ಚಪ್ಪಲಿ ಹಾಕುವುದಿಲ್ಲ ಎಂದೂ ಪ್ರತಿಜ್ಞೆ ಮಾಡಿದ್ದರು.
----
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope