ಬಿಗ್‌ ಬಾಸ್‌ ಮನೆಯಲ್ಲಿ ಯಾರಿಗೆಷ್ಟು ಟಿಆರ್‌ಪಿ? ಹನುಮಂತುಗೆ ಫ್ರೊಫೆಷನಲ್‌ ಕಿಲಾಡಿ ಪಟ್ಟ, ಗೌತಮಿ ವಿರುದ್ಧ ತಿರುಗಿ ಬಿದ್ದ ಉಗ್ರಂ ಮಂಜು
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ ಬಾಸ್‌ ಮನೆಯಲ್ಲಿ ಯಾರಿಗೆಷ್ಟು ಟಿಆರ್‌ಪಿ? ಹನುಮಂತುಗೆ ಫ್ರೊಫೆಷನಲ್‌ ಕಿಲಾಡಿ ಪಟ್ಟ, ಗೌತಮಿ ವಿರುದ್ಧ ತಿರುಗಿ ಬಿದ್ದ ಉಗ್ರಂ ಮಂಜು

ಬಿಗ್‌ ಬಾಸ್‌ ಮನೆಯಲ್ಲಿ ಯಾರಿಗೆಷ್ಟು ಟಿಆರ್‌ಪಿ? ಹನುಮಂತುಗೆ ಫ್ರೊಫೆಷನಲ್‌ ಕಿಲಾಡಿ ಪಟ್ಟ, ಗೌತಮಿ ವಿರುದ್ಧ ತಿರುಗಿ ಬಿದ್ದ ಉಗ್ರಂ ಮಂಜು

Bigg Boss Kannada 11: 12 ಮಂದಿ ಸ್ಪರ್ಧಿಗಳ ಪೈಕಿ ಬಿಗ್‌ ಬಾಸ್‌ ಮನೆಯಲ್ಲಿ ಯಾವ ಸ್ಪರ್ಧಿಗೆ ಎಷ್ಟು ಟಿಆರ್‌ಪಿ ಇದೆ ಎಂಬುದನ್ನು ಏರಿಕೆ ಕ್ರಮದ ಮೂಲಕ ಹೇಳಬೇಕು. ಜತೆಗೆ ಯಾರಿಂದ ಈ ಮನೆಗೆ ಹೆಚ್ಚು ಕಾಂಟ್ರಿಬ್ಯೂಷನ್‌ ಇದೆ ಎಂದೂ ಹೇಳಬೇಕು. ಈ ಟಾಸ್ಕ್‌ನಲ್ಲಿ ಗೌತಮಿಗೆ ಕಡಿಮೆ ಟಿಆರ್‌ಪಿ ನೀಡಿದ್ದಾರೆ ಉಗ್ರಂ ಮಂಜು.

ಬಿಗ್‌ ಮನೆಯಲ್ಲಿ ಯಾರಿಗೆಷ್ಟು ಟಿಆರ್‌ಪಿ? ಹನುಮಂತುಗೆ ಫ್ರೊಫೆಷನಲ್‌ ಕಿಲಾಡಿ ಪಟ್ಟ, ಗೌತಮಿ ವಿರುದ್ಧ ತಿರುಗಿ ಬಿದ್ದ ಉಗ್ರಂ ಮಂಜು
ಬಿಗ್‌ ಮನೆಯಲ್ಲಿ ಯಾರಿಗೆಷ್ಟು ಟಿಆರ್‌ಪಿ? ಹನುಮಂತುಗೆ ಫ್ರೊಫೆಷನಲ್‌ ಕಿಲಾಡಿ ಪಟ್ಟ, ಗೌತಮಿ ವಿರುದ್ಧ ತಿರುಗಿ ಬಿದ್ದ ಉಗ್ರಂ ಮಂಜು

Bigg Boss Kannada 11:‌ ಬಿಗ್‌ ಬಾಸ್‌ ಮನೆಯಲ್ಲಿ ವಾರದ ಕಥೆ ಕಿಚ್ಚನ ಜೊತೆ ಶನಿವಾರದ ಸಂಚಿಕೆಯಲ್ಲಿ ತ್ರಿವಿಕ್ರಮ್‌ ಮತ್ತು ಮೋಕ್ಷಿತಾ ಪೈಗೆ ಕಿಚ್ಚ ಸುದೀಪ್‌ ಚೆನ್ನಾಗಿಯೇ ರುಬ್ಬಿದ್ದಾರೆ. ಶೋಭಾ ಶೆಟ್ಟಿ ಕ್ವಿಟ್‌ ಆದ ಬೆನ್ನಲ್ಲೇ ಬಿಗ್‌ ಬಾಸ್‌ ನಿರ್ಧಾರವನ್ನೇ ಪ್ರಶ್ನೆ ಮಾಡಿದ್ದಕ್ಕೆ, ತ್ರಿವಿಕ್ರಮ್‌ಗೆ ಚಾಟಿ ಬೀಸಿದ್ದಾರೆ. ಮುಕ್ಕಾಲು ಗಂಟೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಸ್ವಾಭಿಮಾನ ಅದೂ ಇದೂ ಎಂದೆಲ್ಲ ಹೇಳಿ ಕ್ಯಾಪ್ಟನ್ಸಿ ಆಟದಿಂದಲೇ ಹಿಂದುಳಿದಿದ್ದ ಮೋಕ್ಷಿತಾ ನಡೆಗೂ ಕಿಚ್ಚನಿಂದ ವಿರೋಧ ವ್ಯಕ್ತವಾಗಿದೆ. ಆಟವನ್ನು ಆಟದಂತೆ ಯಾರೂ ಆಡ್ತಿಲ್ಲ. ಅಹಂ ಮುಂದಿಟ್ಟುಕೊಂಡು ಆಟ ಆಡುತ್ತಿದ್ದೀರಿ ಎಂದೂ ಮನೆ ಮಂದಿಯನ್ನು ಜರಿದಿದ್ದಾರೆ.

ಹೀಗಿರುವಾಗಲೇ ಇದೀಗ ಬಿಗ್‌ ಬಾಸ್‌ನ ಭಾನುವಾರದ ಸೂಪರ್‌ ಸಂಡೇ ವಿಥ್‌ ಸುದೀಪ ಸಂಚಿಕೆಯ ಹೊಸ ಪ್ರೋಮೋ ಬಿಡುಗಡೆ ಆಗಿದೆ. ಈ ಏಪಿಸೋಡ್‌ನಲ್ಲಿ ಏನಿರಲಿದೆ ಎಂಬ ಸುಳಿವನ್ನು ಹೊಸ ಪ್ರೋಮೋ ನೀಡಿದೆ. ಇಡೀ ಮನೆಯಲ್ಲಿ ಸದ್ಯ ಉಳಿದಿರುವವರು ಕೇವಲ 12 ಸ್ಪರ್ಧಿಗಳು ಮಾತ್ರ. ಹನುಮಂತು, ಧನರಾಜ್‌, ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಗೋಲ್ಡ ಸುರೇಶ್‌, ಶಿಶಿರ್‌, ಮೋಕ್ಷಿತಾ ಪೈ, ಐಶ್ವರ್ಯಾ ಶಿಂಧೋಗಿ, ಭವ್ಯಾ ಗೌಡ, ರಜತ್‌ ಕಿಶನ್‌ ಮತ್ತು ಗೌತಮಿ ಜಾಧವ್‌ ಕಣದಲ್ಲಿದ್ದಾರೆ.

ಗೌತಮಿಗೆ 5 ಟಿಆರ್‌ಪಿ ನೀಡಿದ ಮಂಜಣ್ಣ

ಈ 12 ಮಂದಿಯ ಪೈಕಿ ಬಿಗ್‌ ಬಾಸ್‌ ಮನೆಯಲ್ಲಿ ಯಾವ ಸ್ಪರ್ಧಿಗೆ ಎಷ್ಟು ಟಿಆರ್‌ಪಿ ಇದೆ ಎಂಬುದನ್ನು ಏರಿಕೆ ಕ್ರಮದ ಮೂಲಕ ಪ್ರತಿಯೊಬ್ಬರು ಹೇಳಬೇಕು. ಜತೆಗೆ ಯಾರಿಂದ ಈ ಮನೆಗೆ ಹೆಚ್ಚು ಕಾಂಟ್ರಿಬ್ಯೂಷನ್‌ ಇದೆ ಎಂದೂ ಹೇಳಬೇಕು. ಅದರಂತೆ ಉಗ್ರಂ ಮಂಜು 12 ಜನರಿಗೆ ಟಿಆರ್‌ಪಿ ನೀಡಿದ್ದಾರೆ. ಏರಿಕೆ ಕ್ರಮದ ಪ್ರಕಾರದಲ್ಲಿ 12ನೇ ಸ್ಥಾನವನ್ನು ಹನುಮಂತುಗೆ ಕೊಟ್ಟರೆ, 11ನೇ ಸ್ಥಾನವನ್ನು ತಾವೇ ಇಟ್ಟುಕೊಂಡಿದ್ದಾರೆ. ರಜತ್‌ 10, ಚೈತ್ರಾ 9, ಮೋಕ್ಷಿತಾ 8, ಧನರಾಜ್‌ 7, ತ್ರಿವಿಕ್ರಮ್‌ಗೆ 6, ಗೌತಮಿಗೆ 5, ಐಶ್ವರ್ಯಾಗೆ 4, ಸುರೇಶ್‌ಗೆ 3, ಭವ್ಯಾ ಗೌಡಗೆ 2, ಶಿಶಿರ್‌ಗೆ ಕನಿಷ್ಟ ಟಿಆರ್‌ಪಿ ಎಂದು 1 ಕೊಟ್ಟಿದ್ದಾರೆ.

ಹನಮಂತು ಫ್ರೊಫೆಷನಲ್‌ ಕಿಲಾಡಿ

ಟಿಆರ್‌ಪಿಯಲ್ಲಿ 5 ಅಂಕ ಪಡೆದ ಗೌತಮಿ ಅವರದ್ದು ಸೌಂಡ್‌ ಮಾಡುವಂತದ್ದು ಏನೂ ಇಲ್ಲ ಎಂದು ಕಿಚ್ಚನ ಮುಂದೆ ಉಗ್ರಂ ಮಂಜು ಹೇಳಿದ್ದಾರೆ. ಈ ಮೂಲಕ ಗೆಳೆತನದ ವಿಚಾರದಲ್ಲಿ ಆಪ್ತರಾಗಿದ್ದ ಈ ಜೋಡಿ ಈಗ ದೂರವಾಗ್ತಿದೆಯೇ ಎಂಬ ಅನುಮಾನ ಕಾಣುತ್ತಿದೆ. ಅದೇ ರೀತಿ ಹನುಮಂತುಗೆ ಕೊನೇ ಸ್ಥಾನ ಕೊಟ್ಟಿರುವ ರಜತ್‌, ಹನುಮಂತು ಓರ್ವ ಫ್ರೊಫೆಷನಲ್‌ ಕಿಲಾಡಿ, ಎಲ್ಲ ಗೊತ್ತು ಆದ್ರೆ ಎಲ್ಲ ಗೊತ್ತಿಲ್ಲ ಎಂದಿದ್ದಾರೆ. ಇತ್ತ ಎಂದಿನಂತೆ ರಜತ್‌ ಮತ್ತು ಗೋಲ್ಡ್‌ ಸುರೇಶ್‌ ನಡುವೆಯೂ ಹಳೇ ವೈಷಮ್ಯ ಮತ್ತೆ ಮುಂದುವರಿದಿದೆ.

ಮುಂದುವರಿದ ಸುರೇಶ್‌ Vs ರಜತ್

ರಜತ್‌ ಅವ್ರು ಮನೆಗೆ ಬಂದು ಈಗ ಮೂರು ವಾರಗಳಷ್ಟೇ ಆಗಿದೆ. ಅವರಿಂದ ಅಷ್ಟೆನೂ ಕಾಂಟ್ರಿಬ್ಯೂಷನ್‌ ಇಲ್ಲ ಎಂದಿದ್ದಾರೆ ಸುರೇಶ್‌. ಪ್ರತಿಯಾಗಿ ಅದೇ ಸುರೇಶ್‌ಗೆ ಅವರು ಟಾಸ್ಕ್‌ ಬಿಟ್ಟರೆ ಬೇರೆಯಲ್ಲೂ ಕಾಣಿಸಲಿಲ್ಲ. ಅವ್ರು ಹೇಗೆ ಕೊಡ್ತಾರೋ ನಾವೂ ಹಾಗೇ ಕೊಡ್ತಿವಿ. ನಾವು ಒಳ್ಳೆ ಮನುಷ್ಯರಲ್ಲ, ನಾವೂ ಕೆಟ್ಟವರೇ ಎಂದಿದ್ದಾರೆ. ಒಟ್ಟಿನಲ್ಲಿ ಬಿಗ್‌ ಬಾಸ್‌ ಮನೆಯಲ್ಲಿ ಯಾರಿಗೆಷ್ಟು ಟಿಆರ್‌ಪಿ ಇದೆ, ಯಾರ ಕಾಂಟ್ರಿಬ್ಯೂಷನ್‌ ಜಾಸ್ತಿ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಜತೆಗೆ ಇಂದು ಮನೆಯಿಂದ ಯಾರು ಎಕ್ಸಿಟ್‌ ಆಗಲಿದ್ದಾರೆ ಎಂಬುದೂ ಕುತೂಹಲ ಮೂಡಿಸಿದೆ.

Whats_app_banner