ಸ್ವಾಭಿಮಾನದ ನಲ್ಲೆ ಮೋಕ್ಷಿತಾಗೆ ಮುಖಭಂಗ! ಬಿಗ್‌ ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದು ನಾಯಕಿಯಾದ ಗೌತಮಿ ಜಾಧವ್‌
ಕನ್ನಡ ಸುದ್ದಿ  /  ಮನರಂಜನೆ  /  ಸ್ವಾಭಿಮಾನದ ನಲ್ಲೆ ಮೋಕ್ಷಿತಾಗೆ ಮುಖಭಂಗ! ಬಿಗ್‌ ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದು ನಾಯಕಿಯಾದ ಗೌತಮಿ ಜಾಧವ್‌

ಸ್ವಾಭಿಮಾನದ ನಲ್ಲೆ ಮೋಕ್ಷಿತಾಗೆ ಮುಖಭಂಗ! ಬಿಗ್‌ ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದು ನಾಯಕಿಯಾದ ಗೌತಮಿ ಜಾಧವ್‌

Bigg boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಸ್ವಾಭಿಮಾನದ ಆಟದಲ್ಲಿ ಮೋಕ್ಷಿತಾ ಪೈಗೆ ಹಿನ್ನೆಡೆ ಆಗಿದೆ. ಗೌತಮಿ ಜತೆ ಆಡಲು ಹಿಂದೇಟು ಹಾಕಿದ್ದ ಮೋಕ್ಷಿತಾ, ಈಗ ಅದೇ ಕ್ಯಾಪ್ಟನ್‌ ಪಟ್ಟಕ್ಕೆ ಗೌತಮಿ ಬಂದು ಕೂರಲು ಪರೋಕ್ಷ ಕಾರಣೀಕರ್ತರಾಗಿದ್ದಾರೆ.

ಬಿಗ್‌ ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದು ನಾಯಕಿಯಾದ ಆದ ಗೌತಮಿ ಜಾಧವ್‌
ಬಿಗ್‌ ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದು ನಾಯಕಿಯಾದ ಆದ ಗೌತಮಿ ಜಾಧವ್‌

Bigg boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಆಟದ ಜತೆಗೆ ಸ್ಪರ್ಧಿಗಳು ದಿನದಿಂದ ದಿನಕ್ಕೆ ಹೊಸ ಹೊಸ ಪಾಠವನ್ನೂ ಕಲಿಯುತ್ತಿದ್ದಾರೆ. ಈ ವಾರ ಧನರಾಜ್‌ ಆಚಾರ್‌ ಅವರ ಎಂಎಂ ಸುದ್ದಿ ವಾಹಿನಿ ಮತ್ತು ಗೋಲ್ಡ್ ಸುರೇಶ್ ಸಾರಥ್ಯದ ಡಿಡಿ ಸುದ್ದಿ ವಾಹಿನಿ ಎಂಬ ಎರಡು ತಂಡಗಳ ನಡುವೆ ಟಾಸ್ಕ್‌ ಏರ್ಪಟ್ಟಿದೆ. ಈ ಎರಡು ತಂಡಗಳ ಪೈಕಿ, ವೀಕ್ಷಕರಿಂದ ಹೆಚ್ಚು ಮತಗಳನ್ನು ಪಡೆದುಕೊಂಡು, ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾಗಿದ್ದು ಧನರಾಜ್‌ ಅವರ ಎಂಎಂ ಸುದ್ದಿ ವಾಹಿನಿ. ಇದಾದ ಮೇಲೆ ಜೋಡಿಯಾಗಿ ಆಟ ಆಡಬೇಕು ಎಂಬ ಟ್ವಿಸ್ಟ್‌ ನೀಡಿತ್ತು ಬಿಗ್‌ ಬಾಸ್‌.

ಈ ಟಾಸ್ಕ್‌ನಲ್ಲಿ ರಜತ್‌ ಪರವಾಗಿ ತ್ರಿವಿಕ್ರಮ್, ಶಿಶಿರ್ ಪರವಾಗಿ ಭವ್ಯಾ, ಹನುಮಂತು ಪರವಾಗಿ ಮಂಜು ಆಡುತ್ತಿದ್ದಾರೆ. ಇನ್ನೊಂದು ಬದಿಯಲ್ಲಿ ಗೌತಮಿಗೆ ಜೋಡಿಯಾಗಲು ಮೋಕ್ಷಿತಾ ನಕಾರ ವ್ಯಕ್ತಪಡಿಸಿದ್ದಾರೆ. ಕ್ಯಾಪ್ಟನ್ಸಿಗಾಗಿ ನಾನು ಆಟ ಬಿಡಬಲ್ಲೆ, ಆದರೆ, ಗೌತಮಿ ಜತೆ ಮಾತ್ರ ಆಡಲಾರೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಗೌತಮಿ ಅವರಿಂದ ನಾನು ಕ್ಯಾಪ್ಟನ್ ಆಗಬೇಕು ಅಂದ್ರೆ ನಾನು ಆಗೋದೇ ಇಲ್ಲ. ನನ್ನ ಆತ್ಮಗೌರವದ ಮುಂದೆ ಇನ್ಯಾವುದೂ ದೊಡ್ಡದಲ್ಲ. ನನ್ನನ್ನ ಕಳಿಸಿದರೆ ನಾಳೆಯೇ ಕಳಿಸಲಿ ಎಂದಿದ್ದಾರೆ.

ಮೋಕ್ಷಿತಾ ಅವರ ಈ ನಿರ್ಧಾರಕ್ಕೆ ಬಿಗ್‌ ಬಾಸ್‌ ಸಹ ಕೊಂಚ ಗರಂ ಆಗಿದ್ದಾರೆ. ದೊಡ್ಡ ದೊಡ್ಡ ನಿರ್ಧಾರಗಳ ಜೊತೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಮೋಕ್ಷಿತಾ ಅವರನ್ನು ಎಚ್ಚರಿಸಿದ್ದಾರೆ. ಮನೆ ಮಂದಿಯೂ ಪುಸಲಾಯಿಸಿದ್ದಾರೆ. ಬಿಗ್‌ ಬಾಸ್‌ ಮಾತಿಗೂ ಕಿಮ್ಮತ್ತು ಕೊಡದ ಮೋಕ್ಷಿತಾ ಮಾತ್ರ ಗೌತಮಿ ಜತೆ ಆಡುವುದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಹೀಗಿರುವಾಗಲೇ ಮೋಕ್ಷಿತಾ ಬದಲು ತಮ್ಮ ಆಟವನ್ನು ತಾವೇ ಆಡಿ, ಗೆದ್ದು ಬೀಗಿದ್ದಾರೆ ಗೌತಮಿ. ಅಷ್ಟೇ ಅಲ್ಲ ಈ ವಾರದ ಕ್ಯಾಪ್ಟನ್‌ ಪಟ್ಟಕ್ಕೂ ಏರಿದ್ದಾರೆ

ಮೋಕ್ಷಿತಾ ಸ್ವಾಭಿಮಾನಕ್ಕೆ ಬಿತ್ತು ಪೆಟ್ಟು

ಗೌತಮಿ ಜತೆ ಆಡುವುದಕ್ಕೆ ಮೋಕ್ಷಿತಾ ಹಿಂದೇಟು ಹಾಕುತ್ತಿದ್ದಂತೆ, ಸ್ವತಃ ಗೌತಮಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಮಾಡಿ, ಗೋಲ್ಡ್‌ ಸುರೇಶ್‌ ಆದೇಶಿಸಿದ್ದಾರೆ. ಅದರಂತೆ, ಬಿಗ್‌ ಬಾಸ್‌ ನೀಡಿದ ಟಾಸ್ಕ್‌ನಲ್ಲಿ ಗೌತಮಿ ಗೆದ್ದು ಬೀಗಿದ್ದಾರೆ. ೀ ವಾರದ ಮನೆಯ ಕ್ಯಾಪ್ಟನ್‌ ಆಗಿ, ಕ್ಯಾಪ್ಟನ್‌ ಕೋಣೆ ಪ್ರವೇಶಿಸಿದ್ದಾರೆ. ಈ ಮೂಲಕ ಸ್ವಾಭಿಮಾನದ ವಿಚಾರಕ್ಕೆ ಹಿಂದೆ ಸರಿದಿದ್ದ ಮೋಕ್ಷಿತಾ ಅವರ ಅದೇ ಸ್ವಾಭಿಮಾನಕ್ಕೀಗ ಪೆಟ್ಟು ಬಿದ್ದಿದೆ. ಗೌತಮಿ ವಿನ್‌ ಆಗಿದ್ದು ಹೇಗೆ, ಈ ಅಚ್ಚರಿಯ ವಿಚಾರ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ವೀಕ್ಷಕರ ಪ್ರತಿಕ್ರಿಯೆ ಹೀಗಿದೆ.

  •  ದುರಹಂಕಾರಿ ಮೋಕ್ಷಿತ ಅನ್ನೋರು ಲೈಕ್ ಮಾಡಿ
  •  ತಾನೊಂದು ಬಗೆದರೆ ದೈವವೊಂದು ಬಗೆದಂತೆ
  •  ದುರಹಂಕಾರಿ ಮೋಕ್ಷಿತಾಗಿ ತಕ್ಕ ಪಾಠ ಕಲಿಸಿದ ಗೌತಮಿ
  •  ಯಾರು ಏನು ಅಂದ್ರು ಮೋಕ್ಷಿತಾ ಸ್ವಾಭಿಮಾನದ ನಿರ್ಧಾರ ಸರಿ ಇತ್ತು ದುರಂಕಾರಿ ಅಂದ್ರು ಪರವಾಗಿಲ್ಲ
  • ತ್ರಿವಿಕ್ರಮ್, ಮಂಜಣ್ಣ, ಗೌತಮಿ, ಭವ್ಯ ಹೆಸರು ಹೇಳಿಕೊಂಡೆ ಅರ್ಧ ಬಿಗ್ ಬಾಸ್ ಕಳೆದ್ಲು ಮೋಕ್ಷಿತಾ.. ನೋಡಿ ಇಷ್ಟ್ ಆದ್ರು ವಿಕ್ಕಿ, ಮಂಜು, ಗೌತು ಅವರೆಲ್ಲ ಮೋಕ್ಷಿ ಬಗ್ಗೆ ಕೆಟ್ಟದಾಗಿ ಮಾತಾಡೊಲ್ಲ‌
  •  ನಿಜವಾದ ಎರಡು ತಲೆಹಾವು ಮೋಕ್ಷಿತ... ನರಿ ಬುದ್ದಿ
  •  ಮುಖವಾಡ ಹಾಕಿರುವರ ಬಳಿ ಸಹಾಯಕ್ಕೆ ಅಂಗಲಾಚುವ ಬದಲು ಮುಖವಾಡ ಹಾಕದಿರುವುದೇ ಉತ್ತಮ… ಮೋಕ್ಷಿತಾ ನಿಮ್ಮ ನಿರ್ಧಾರ ಸಂಪೂರ್ಣ ಸರಿ ಇದೆ...
  • ಬಂದ ಅವಕಾಶವನ್ನು ಕಾಲಿಂದ ಒದ್ದಳು ಮೋಕ್ಷಿತಾ... ಈವಾಗ ಹೊಟ್ಟೆ ಉರ್ಕೋತಿದಾಳೆ.. ಇವಳು ಈ ರೀತಿ ಆಡಿದ್ರೆ ಉದ್ದಾರ ಆಗಲ್ಲ

Whats_app_banner