Bigg Boss Kannada 11: ಗೌತಮಿ ಕ್ಯಾಪ್ಟನ್ ಆಗಿದ್ದೇತಡ ಮಂಜು ಗೆಳೆತನ ಕಟ್; ಫೈನಲ್ ಹತ್ರ ಬಂತು ಅದರ ತಯಾರಿ ಇದು ಎಂದ ವೀಕ್ಷಕರು
Bigg Boss Kannada 11: ಬಿಗ್ ಬಾಸ್ ಫಿನಾಲೆ ಹತ್ತಿರ ಬರುತ್ತಿದ್ದಂತೆ ಯಾವಾಗಲೂ ಆಟದಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಲೇ ಇರುತ್ತದೆ. ಈಗ ಗೌತಮಿ ಯಾವಾಗಲೂ ತನ್ನ ಗೆಳೆಯ ಎಂದು ಹೇಳುತ್ತಿದ್ದ ಉಗ್ರಂ ಮಂಜು ಅವರ ವಿರುದ್ಧವಾಗಿ ಮಾತನಾಡಿದ್ದಾರೆ. ಗೆಳೆತನ ಇನ್ನು ಮುಂದೆ ಬೇಡ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಗೌತಮಿ ಕ್ಯಾಪ್ಟನ್ ಆಗಿದ್ದಾರೆ. ಈ ವಾರ ಪೂರ್ತಿ ಅವರು ಆಟ ಆಡಿಸುವ ಅಧಿಕಾರ ಹೊಂದಿದ್ದು ನಾಮಿನೇಷನ್‌ನಿಂದ ದೂರ ಇರುತ್ತಾರೆ. ಹೀಗಿರುವಾಗ ಕೆಲವು ಟಾಸ್ಕ್ ಮಾಡುವ ಸಂದರ್ಭದಲ್ಲಿ ಉಗ್ರಂ ಮಂಜು ಅವರ ಧ್ವನಿಯೇ ತನ್ನ ಧ್ವನಿಗಿಂತ ದೊಡ್ಡದಾಗುತ್ತಿತ್ತು ಎನ್ನುವ ಕಾರಣಕ್ಕೆ ಅವರಿಗೆ ನೀವು ನನ್ನ ಲೀಡ್ ಮಾಡ್ಬೇಡಿ ಎಂದು ಹೇಳಿದ್ದಾರೆ. ನಿಮ್ಮ ಧ್ವನಿ ಮುಂದೆ ನನ್ನ ಧ್ವನಿ ಸಣ್ಣದಾಗ್ತಾ ಇದೆ. ಇನ್ನು ಮುಂದಿನ ದಿನದಲ್ಲಿ ಗೆಳೆಯ, ಗೆಳತಿ ಇದ್ಯಾವುದೂ ಇರೋದಿಲ್ಲ ಎಂದು ಹೇಳಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಮಂಜು ಹೊರಗೆ
ನಂತರ ಬಿಗ್ ಬಾಸ್ ಈ ವಾರ ಯಾರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ದೂರ ಇಡಲು ಬಯಸುತ್ತೀರಿ ಎಂದು ಒಂದು ಪ್ರಶ್ನೆಯನ್ನು ಎದುರಿಗಿಡುತ್ತಾರೆ. ಆ ಸಂದರ್ಭದಲ್ಲಿ ಗೌತಮಿ ಮಂಜು ಅವರ ಹೆಸರನ್ನು ತೆಗೆದುಕೊಳ್ಳುತ್ತಾರೆ. ಗೌತಮಿ ಮಂಜು ಅವರ ಹೆಸರನ್ನು ತೆಗೆದುಕೊಂಡು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಅವರನ್ನು ಹೊರಗಿಟ್ಟ ಸಲುವಾಗಿ ಎಲ್ಲರೂ ಆಶ್ಚರ್ಯಪಡುತ್ತಾರೆ.
ಇಷ್ಟು ದಿನ ಮೋಕ್ಷಿತಾ ಹೇಳುತ್ತಿದ್ದ ಮಾತು ಸರಿಯಾಗಿತ್ತು. ನೀವು ನಿಮ್ಮ ಆಟ ಮಾತ್ರ ಆಡುತ್ತೀರಿ ಎಂದು ಗೌತಮಿ ಹೇಳಿದ್ದಾರೆ. ಇನ್ನು ಫಿನಾಲೆ ಹತ್ತಿರ ಬರುತ್ತಿರುವುದರಿಂದ ಜನರನ್ನು ಮೆಚ್ಚಿಸಲು ಈ ರೀತಿ ನಾಟಕ ಆಡುತ್ತಿದ್ದಾರೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.
ವೀಕ್ಷಕರು ಏನಂದಿದ್ದಾರೆ ನೋಡಿ
ಮಂಜ ಫ್ರೆಂಡ್ ಗೋಸ್ಕರ ಮನೆ ಅವರನ್ನೆಲ್ಲ ಎದ್ರು ಹಾಕೊಂಡು ನಮ್ಮದೇ ನಡೀಬೇಕು ಅಂಥ ಕುತಂತ್ರ ಮಾಡಿದ ಇನ್ನೇನ್ ಫೈನಲ್ ಬಂತಲ್ಲ ಮಂಜ ಯಾಕೆ
ಇವಾಗ ಕರ್ಮ ರಿಟರ್ನ್ಸ್
ರಿಯಲ್ ಲೈಫ್ನಲ್ಲಿ ಕೂಡ ಇದು ಅಪ್ಲೈ ಆಗುತ್ತೆ ನಮ್ಮನ್ನ ಯೂಸ್ ಮಾಡ್ಕೋಳೋವರ್ಗು ಅಷ್ಟೆ ಎಲ್ಲಾ ಸಂಬಂಧಗಳು ನಮ್ಮ ಅವಶ್ಯಕತೆ. ಇಲ್ಲಾ ಅಂದರೆ ಏನೋ ಒಂದು ರೀಸನ್ ಹುಡುಕಿ ದೂರ ಮಾಡ್ತಾರೆ ಎಂದು ಲತಾ ಕಾಮೆಂಟ್ ಮಾಡಿದ್ದಾರೆ.
ಗೌತಮಿಗೆ ಗೊತ್ತು ಹೀಗೆ ಮಾಡಿದ್ರೆ ಈ ವಾರ ಉತ್ತಮ ತೆಗೆದುಕೊಳ್ಳಬಹುದು. ಹಾಗೆಯೇ ಮಂಜುನ ಹೊರಗೆ ಇಟ್ರೆ ನನ್ನನ್ನು ಈ ಮನೆಯಲ್ಲಿ ಎಲ್ಲರೂ ಮೆಚ್ಚಿಕೊಳ್ಳಬಹುದು ಎಂದು. ಹೀಗೆ ಮನೆಯವರನ್ನು ಮೆಚ್ಚಿಸಿದರೆ ಮುಂದಿನವಾರ nomination ನಿಂದ ಕೂಡಾ ಬಚಾವ್ ಆಗಬಹುದು. ಯಾರೂ nominate ಕೂಡಾ ಮಾಡಲ್ಲ ಎನ್ನುವ ಯೋಚನೆ ಇರಬಹುದು. ಅವತ್ತು ಗೆಳೆಯ ಗೆಲ್ಲಿಸುವಾಗ ಈ ನ್ಯಾಯ ಇರಲಿಲ್ಲ. ಮಂಜು ಗೌತಮಿಗೆ, ಗೌತಮಿ ಮಂಜುಗೆ ಉತ್ತಮ ಕೊಡುವಾಗ ಕೂಡಾ ಈ ಬುದ್ಧಿ ಇರ್ಲಿಲ್ಲಾ.. ಆದ್ರೂ ಚೆನ್ನಾಗಿದೆ. ಇಲ್ಲಿ ತನಕ ಉಳಿಯೋಕೆ ಮಂಜು ಬೇಕಿತ್ತು. ಇನ್ನು ಬೇಕಾಗಿಲ್ಲ ಎಂದು ಗೌತಮಿ ಗೆ ಅರಿವಾಗಿದೆ ಎಂದು ಪ್ರೀತಿ ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಎಲ್ಲಾ ಕಾಮೆಂಟ್‌ಗಳಲ್ಲೂ ಗೌತಮಿ ತನ್ನ ಬಣ್ಣ ಬದಲಾಯಿಸಿದ್ದಾರೆ ಎಂದೇ ಇದೆ.