Bigg Boss Kannada 11: ಬಿಗ್ ಬಾಸ್ ಮನೆಯ ಬಿಗ್ ರೂಲ್ಸ್ ಬ್ರೇಕ್; ಜೈಲಿನಿಂದ ತಾವೇ ಹೊರಬಂದ ತ್ರಿವಿಕ್ರಂ, ಚೈತ್ರಾ ಕುಂದಾಪುರ
Bigg Boss Kannada: ಬಿಗ್ ಬಾಸ್‌ನಲ್ಲಿ ಯಾರಿಗೆ ಕಳಪೆ ಸಿಕ್ಕಿರುತ್ತದೆಯೋ ಅವರು ಜೈಲು ಸೇರಬೇಕು ಎಂಬ ನಿಯಮ ಇದೆ ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಂ ಈ ನಿಯಮ ಉಲ್ಲಂಘನೆ ಮಾಡಿದ್ದಾರೆ.
Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ನಿಯಮಗಳನ್ನು ಪಾಲಿಸಲೇಬೇಕು ಇಲ್ಲ ಎಂದರೆ ಆಟ ಆಟ ಆಗಿರುವುದಿಲ್ಲ. ಆದರೆ ಈ ಬಾರಿ ಅಸಮಾಧಾನದಿಂದಲೇ ಕಳಪೆ ಪಡೆದು ಜೈಲಿಗೆ ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಂ ಹೋಗಿದ್ದರು. ಆದರೆ ನಾನು ಈ ಮನೆಯ ನಿಯಮವನ್ನು ಪಾಲಿಸುವುದಿಲ್ಲ ಎಂದು ಚೈತ್ರಾ ಆಗಾಗ ಹೇಳುತ್ತಲೇ ಇದ್ದರು. ತ್ರಿವಿಕ್ರಂ ಕೂಡ ತುಂಬಾ ಕೋಪದಲ್ಲಿದ್ದರು. ಮನೆಯಲ್ಲಿ ಎಲ್ಲರೂ ಮಲಗಿರುತ್ತಾರೆ. ಆದರೆ ಚೈತ್ರಾ ಹಾಗೂ ತ್ರಿವಿಕ್ರಂ ಬೆಳಿಗ್ಗೆ ಎದ್ದಿರುತ್ತಾರೆ. ಅವರು ಏನಾದರೂ ಮಾಡಬೇಕು ಎಂದು ಮಾತಾಡಿಕೊಳ್ಳುತ್ತಾರೆ.
ಆಗ ತ್ರಿವಿಕ್ರಂ ನಾವಿಬ್ಬರೂ ಜೈಲಿನಿಂದ ಹೊರಗಡೆ ಹೋಗಿಬಿಡೋಣ ಎಂದು ಹೇಳುತ್ತಾರೆ. ಆ ಮಾತನ್ನು ಕೇಳಿ ಚೈತ್ರಾ “ನಿಜಾನಾ” ಎಂದು ಒಮ್ಮೆ ಬೆರಗಾಗುತ್ತಾರೆ. ಹೌದು ಹೋಗೋಣ ಎಂದು ಅವರು ಮುನ್ನುಗ್ಗಿಯೇಬಿಡುತ್ತಾರೆ. ಅವರು ದಾಟುವಷ್ಟು ಜಾಗ ಕಂಬಿಯ ನಡುವಿನಲ್ಲಿ ಇದೆಯೇ ಎಂದು ಒಮ್ಮೆ ಚೆಕ್ ಮಾಡುತ್ತಾರೆ. ಚೈತ್ರಾ ಅವರಿಗಿಂತ ದೊಡ್ಡದಾಗಿರುವ ತ್ರಿವಿಕ್ರಂ ಕಂಬಿಯ ನಡುವೆ ಪಾಸ್ ಆಗುತ್ತಾರೆ. ಅದನ್ನು ಗಮನಿಸಿ ಚೈತ್ರಾ ಕೂಡ ಹೊರಬರುತ್ತಾರೆ.
ಮುಂದೇನು ಮಾಡೋಣ ಎಂದು ಕೇಳಿದಾಗ ನಾವು ಎಲ್ಲರೂ ಬೆಳಿಗ್ಗೆ ಎದ್ದು ಡಾನ್ಸ್ ಮಾಡಲು ಬರುತ್ತಾರಲ್ಲ. ನಾವೂ ಅವರ ಜೊತೆ ಡಾನ್ಸ್ ಮಾಡಲು ಹೋಗೋಣ ಎಂದು ಹೇಳುತ್ತಾರೆ. ಅದನ್ನು ಕೇಳಿ ತ್ರಿವಿಕ್ರಂ ನಗುತ್ತಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯ ಬಿಗ್ ರೂಲ್ಸ್ ಬ್ರೇಕ್ ಆಗಿದೆ. ಜೈಲಿಗೆ ಹೋದಮೇಲೆ ಬೀಗ ತೆಗೆಯದ ಹೊರತು ಹೊರಗಡೆ ಬರುವ ಹಾಗಿಲ್ಲ ಎಂದು ಬಿಗ್ ಬಾಸ್ ಆದೇಶ ಇದ್ದರೂ ಸಹ ಚೈತ್ರಾ ಕುಂದಾಪು ಹಾಗೂ ತ್ರಿವಿಕ್ರಂ ಹೊರ ಬಂದಿದ್ದಾರೆ.
ಇಂದೇ ಕಿಚ್ಚನ ಪಂಚಾಯ್ತಿ ಕೂಡ ಇದೆ. ಈ ಸಂದರ್ಭದಲ್ಲಿ ಅವರು ಬೈಸಿಕೊಳ್ಳುತ್ತಾರಾ? ಎಂಬ ಪ್ರಶ್ನೆ ಮೂಡಿದೆ.
ಈ ಹಿಂದೆ ಏನಾಗಿತ್ತು?
ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರಾಂತ್ಯಕ್ಕೆ ಒಬ್ಬರು ಕಳಪೆ ಪಡೆದುಕೊಂಡು ಜೈಲಿಗೆ ಹೋಗಲೇಬೇಕು. ಮನೆಯವರೆಲ್ಲ ಸೇರಿ ಅದನ್ನು ನಿರ್ಧಾರ ಮಾಡಬೇಕು. ಯಾರು ಈ ವಾರ ಚೆನ್ನಾಗಿ ಆಟ ಆಡಿಲ್ಲ ಎನ್ನುವುದನ್ನು ನಿರ್ಧರಿಸಿ ಒಬ್ಬರನ್ನು ಜೈಲಿಗೆ ಕಳಿಸಬೇಕಿತ್ತು. ಆದರೆ ಈ ಬಾರಿ ಇಬ್ಬರಿಗೆ ಕಳಪೆ ಸ್ಥಾನ ಸಿಕ್ಕಿದೆ. ನಾಲ್ಕು ಜನ ಒಬ್ಬರ ಹೆಸರನ್ನು ಸೂಚಿಸಿದರೆ ಇನ್ನು ನಾಲ್ಕು ಜನ ಬೇರೊಬ್ಬನ ಹೆಸರು ಸೂಚಿಸಿದ್ದಾರೆ. ಅದರಲ್ಲಿ ಒಬ್ಬರು ಚೈತ್ರಾ ಕುಂದಾಪುರ, ಇನ್ನೊಬ್ಬರು ತ್ರಿವಿಕ್ರಂ ಆಗಿದ್ದರು.
ಹೀಗಿರುವಾಗ ಒಬ್ಬೊಬ್ಬರು ಒಂದೊಂದು ಕಾರಣ ನೀಡಿದ್ದಾರೆ. ಆದರೆ ಕಳಪೆ ಸ್ಥಾನ ಪಡೆದುಕೊಂಡಿರುವುದು ಇವರಿಗೆ ಸಮಾಧಾನ ಇಲ್ಲ. ಇಬ್ಬರನ್ನೂ ಜೈಲಿಗೆ ಕಳಿಸಲಾಗಿತ್ತು. ಸುರೇಶ್ ಅವರು ತ್ರಿವಿಕ್ರಂ ಅವರನ್ನು ಕಳಪೆ ಎಂದು ಹೇಳುತ್ತಾರೆ. ಅದನ್ನೆ ಪದೇ ಪದೇ ಹೇಳಲು ಆರಂಭಿಸಿದಾಗ ತ್ರಿವಿಕ್ರಂ ಅವರಿಗೆ ಕೋಪ ಬರುತ್ತದೆ. ಯಾಕೆ ಈ ರೀತಿ ಮಾಡ್ತಾ ಇದ್ದೀರಿ? ಎಂದು ಪ್ರಶ್ನೆ ಮಾಡುತ್ತಾರೆ. ಮತ್ತು ಈ ರೀತಿ ಅದನ್ನೆ ಹೇಳ್ತಾ ಇರೋದು ಸರಿ ಅಲ್ಲ ಎಂದು ಹೇಳುತ್ತಾರೆ.
ಜನಾಭಿಪ್ರಾಯ ಏನಿದೆ?
ನಿನಗೇ ಕಳಪೆ ಕೊಟ್ಟವರು ಸರಿಯಾಗೇ ಉರುಕೂಬೇಕೂ ಸೂಪರ್ ವಿಕ್ಕಿ ಎಂದು ನಾಗು ಎನ್ನುವವರು ಕಾಮೆಂಟ್ ಮಾಡಿದ್ದಾರೆ.
ಲಾಸ್ಟ್ ಸೀಸನ್ ಲೀ ವರ್ತೂರ್ ಸಂತೋಷ್ ಹೀಗೇ ಮಾಡಿದ್ರು....
ಮತ್ತೆ ಒಂದು ದಿನ ಜೈಲಿಗೆ ಹಾಕಿದ್ರು...
ಈವಾಗ ಏನ್ ಮಾಡ್ತಾರೋ ನೋಡಬೇಕು ಎಂದು ಮಂಜು ಕಾಮೆಂಟ್ ಮಾಡಿದ್ದಾರೆ.