Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಮ್ಯೂಸಿಕಲ್ ನೈಟ್ ಬೇಕು ಎಂದ ಉಗ್ರಂ ಮಂಜು; ಕಣ್ಣೀರಿಟ್ಟ ಭವ್ಯಾ ಗೌಡ
ಬಿಗ್ ಬಾಸ್ ಮನೆಯಲ್ಲಿ ಈ ವಾರದ ಟಾಸ್ಕ್‌ನಲ್ಲಿ ಬಿಗ್ ಬಾಸ್ ಮನೆ ಮಿನಿ ರೆಸಾರ್ಟ್ ಆಗಿ ಬದಲಾಗಿದೆ. ಎರಡು ತಂಡಗಳನ್ನು ಮಾಡಲಾಗಿದೆ. ಒಂದು ತಂಡ ಸೇವೆ ನೀಡುತ್ತಿದ್ದರೆ, ಮತ್ತೊಂದು ತಂಡ ಸೇವೆ ಸ್ವೀಕರಿಸುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳು ಎರಡು ಗುಂಪಾಗಿ ಆಟ ಆಡುವ ಸಂದರ್ಭದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅಸಮಾಧಾನ ಉಂಟು ಮಾಡಿಕೊಳ್ಳುತ್ತಾರೆ. ಈ ಬಾರಿಯೂ ಹಾಗೇ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ರೆಸಾರ್ಟ್ ಟಾಸ್ಕ್ ನೀಡಲಾಗಿದೆ. ಒಂದು ತಂಡ ಸೇವೆ ನೀಡುತ್ತಿದ್ದರೆ, ಇನ್ನೊಂದು ತಂಡ ಆ ಸೇವೆಯನ್ನು ಪಡೆದುಕೊಳ್ಳುತ್ತಿದೆ. ಹೀಗಿರುವಾಗ ಚೈತ್ರಾ ಕುಂದಾಪುರ ಮತ್ತು ಉಗ್ರಂ ಮಂಜು ಅವರು ತಮಗೆ ಲೈಟ್ ಆಫ್ ಆದ ನಂತರವೂ ಸೇವೆ ಬೇಕು ಎಂದು ಕೇಳಿದ್ದಾರೆ. ಆದರೆ ಭವ್ಯಾ ಗೌಡ ಹಾಗೂ ಅವರ ತಂಡದ ಇನ್ನಿತರರು ಸೋತು ಹೋಗಿದ್ದಾರೆ. ಇಲ್ಲ ಲೈಟ್ ಆಫ್ ಆದ ಮೇಲೂ ಸೇವೆ ಬೇಕು ಎಂದರೆ ಸಾಧ್ಯವಿಲ್ಲ ಎಂದಿದ್ದಾರೆ.
ಆದರೆ ಉಗ್ರಂ ಮಂಜು ಹಾಗೂ ಚೈತ್ರಾ ಕುಂದಾಪುರ, ಇಲ್ಲ ನಮಗೆ ಈಗ ಸೇವೆ ಬೇಕೇ ಬೇಕು ಎಂದಿದ್ದಾರೆ. ಇನ್ನು ಸಿಂಕ್‌ನಲ್ಲಿರುವ ಕೆಲವು ಲೋಟಗಳನ್ನು ತೊಳೆದಿಲ್ಲ ಎಂದು ವಾದ ಮಾಡಿದ್ದಾರೆ. ಆದರೆ ಅದನ್ನು ನಾವು ಈಗ ತೊಳೆಯುವುದಿಲ್ಲ ಎಂದು ತ್ರಿವಿಕ್ರಂ ಹೇಳಿದ್ದಾರೆ. ತೊಳೆಯುವ ಸಮಯ ಬಂದಾಗ ತೊಳೆಯುತ್ತೇವೆ ಎಂದು ಹೇಳಿದ್ದಾರೆ. ಈ ಮಾತಿನಿಂದ ಉಗ್ರಂ ಮಂಜು ಇನ್ನಷ್ಟು ಕೆರಳಿದ್ದಾರೆ. ಈ ರೀತಿಯಾಗಿ ಬಿಗ್ ಬಾಸ್ ಮನೆಯಲ್ಲಿ ಗಲಾಟೆಯ ವಾತಾವರಣ ನಿರ್ಮಾಣವಾಗಿದೆ.
ಇನ್ನು ಭವ್ಯಾ ಗೌಡ ಅವರು ಪ್ರೋಮೋದಲ್ಲಿ ಕಣ್ಣೀರು ಹಾಕುತ್ತಿರುವ ದೃಶ್ಯ ಕಾಣಿಸುತ್ತದೆ.
ಇನ್ನು ಸಿಬ್ಬಂದಿಗೂ ರೆಸ್ಟ್ ಬೇಕು ಎಂಬ ಮಾತು ಕೇಳಿ ಬಂದಿದೆ. ಆದರೆ ಇಂದು ನಮಗೆ ಮ್ಯೂಸಿಕಲ್ ನೈಟ್ ಬೇಕು ಎಂದು ಉಗ್ರಂ ಮಂಜು ಕೇಳಿದ್ದಾರೆ. ರಾತ್ರಿ ಎಷ್ಟೇ ಸಮಯವಾದರೂ ಕ್ಲೀನ್ ಮಾಡಿಯೇ ಮಲಗಿಕೊಳ್ಳಬೇಕು ಎಂದು ಉಗ್ರಂ ಮಂಜು ಹೇಳುತ್ತಾರೆ. ಆಗ ತ್ರಿವಿಕ್ರಂ ಸ್ವಲ್ಪ ಸಿಟ್ಟಾಗುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಮಲಗಲೂ ಕೊಡದಂತೆ ಇನ್ನೊಂದು ತಂಡ ಬೇಡಿಕೆ ಇಡುತ್ತಿದೆ. ಮುಂದೆ ನಮ್ಮ ಸರದಿ ಬರುತ್ತದೆ ಆಗ ನಾವು ನೋಡಿಕೊಳ್ಳುತ್ತೇವೆ ಎಂದು ರಜತ್ ಹೇಳಿದ್ದಾರೆ. “ಹಣ್ಣುಗಾಯಿ ನೀರುಗಾಯಿ ಮಾಡಿಲ್ಲ ಅಂದ್ರೆ ನನ್ನ ಹೆಸರು ಬುಜ್ಜಿನೆ ಅಲ್ಲ ನೋಡ್ಕೊ” ಎಂದು ರಜತ್ ಹೇಳಿದ್ದಾರೆ.
ಇನ್ನು ಈ ಪ್ರೋಮೋ ರಿಲೀಸ್ ಆದಾಗಿನಿಂದ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಅತಿಥಿಗಳ ತಂಡ ನಾಲ್ಕು ದಿನ ಹೊಟ್ಟೆಗೆ ತಿನ್ನಲು ಇಲ್ಲದವರಂತೆ ಯಾವುದೋ ಕಾಡಿನಿಂದ ಬಂದವರಂತೆ ವರ್ತಿಸುತ್ತಿದ್ದಾರೆ. ಚೈತ್ರಾಳದ್ದು ಕಿರಿ ಕಿರಿ ಜಾಸ್ತಿಯಾಯಿತು. ಇನ್ನು ಮಂಜ ಈಗಲೂ ರಾಜನ ಗುಂಗಿನಲ್ಲಿದ್ದಾನೆ. ಯಾವುದೇ ರೆಸಾರ್ಟ್‌ನಲ್ಲಿ ಸಿಬ್ಬಂದಿ ಜೊತೆ ಅತಿಥಿಗಳು ಅಷ್ಟೊಂದು ಕೆಟ್ಟ ರೀತಿಯಲ್ಲಿ ವರ್ತಿಸುವುದಿಲ್ಲ. ನಾಳೆ ಇದೆ ನಿಮಗೆ ರಿವೇಂಜ್ ಎಂದು ಸಂತೋಷ್ ಎಂಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ರಾತ್ರಿ ರೆಸಾರ್ಟ್‌ನಲ್ಲಿ ಮೋಕ್ಷಿತಾ ಅವರ ತಾಳ್ಮೆ, ಸಪ್ಲೇ ಮಾಡುತ್ತಿದ್ದ ಹುಡುಗರ ತಾಳ್ಮೆ ನಿಜಕ್ಕೂ ಮೆಚ್ಚುವಂಥದ್ದು, ಉಗ್ರಂ ಮಂಜು ಅವರ ಆಟ ಅತಿರೇಕವಾಗಿತ್ತು ಎಂದು ಆದಿ ನಾರಾಯಣ ಕಾಮೆಂಟ್ ಮಾಡಿದ್ದಾರೆ.
ಜನಾಭಿಪ್ರಾಯ ಹೇಗಿದೆ?
ಉಗ್ರಂ ಮಂಜು ಹಾಗೂ ಚೈತ್ರಾ ಅವರು ಹೆಚ್ಚು ಕಾಟ ಕೊಡುತ್ತಿದ್ದಾರೆ. ಅತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ರೀತಿಯಲ್ಲಿ ಜನಾಭಿಪ್ರಾಯವಿದೆ. ಎದುರಾಳಿ ತಂಡದ ಮೋಕ್ಷಿತಾ ಹಾಗೂ ಇನ್ನು ಕೆಲವರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಮುಂದಿನ ಆಟ ಹೇಗಿರಬಹುದು ಎಂಬ ಕುತೂಹಲ ತೋರುತ್ತಿದೆ.