ಬಿಗ್‌ಬಾಸ್‌ ಮನೆಯ ಶುದ್ಧ ಸಸ್ಯಾಹಾರಿಗಳ ಬಾಯಿಗೆ ಪರೋಕ್ಷವಾಗಿ ಬಿತ್ತು ಚಿಕನ್‌! ಚೈತ್ರಾ ಕುಂದಾಪುರ, ಧನರಾಜ್‌ ಆಚಾರ್‌ ಕಸಿವಿಸಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಮನೆಯ ಶುದ್ಧ ಸಸ್ಯಾಹಾರಿಗಳ ಬಾಯಿಗೆ ಪರೋಕ್ಷವಾಗಿ ಬಿತ್ತು ಚಿಕನ್‌! ಚೈತ್ರಾ ಕುಂದಾಪುರ, ಧನರಾಜ್‌ ಆಚಾರ್‌ ಕಸಿವಿಸಿ

ಬಿಗ್‌ಬಾಸ್‌ ಮನೆಯ ಶುದ್ಧ ಸಸ್ಯಾಹಾರಿಗಳ ಬಾಯಿಗೆ ಪರೋಕ್ಷವಾಗಿ ಬಿತ್ತು ಚಿಕನ್‌! ಚೈತ್ರಾ ಕುಂದಾಪುರ, ಧನರಾಜ್‌ ಆಚಾರ್‌ ಕಸಿವಿಸಿ

Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಚೈತ್ರಾ ಕುಂದಾಪುರ ಮತ್ತು ಧನರಾಜ್‌ ಆಚಾರ್‌ ಶುದ್ಧ ಸಸ್ಯಾಹಾರಿಗಳು. ಸಸ್ಯಾಹಾರ ಬಿಟ್ಟು ಅಪ್ಪಿತಪ್ಪಿಯೂ ಬೇರೆ ಪದಾರ್ಥ ಮುಟ್ಟದ ಸ್ಪರ್ಧಿಗಳಿವರು. ಇಂತಿಪ್ಪ ಸ್ಪರ್ಧಿಗಳು ಕಳೆದ ವಾರ ಪರೋಕ್ಷವಾಗಿ ಮಾಂಸಾಹಾರ ಸೇವನೆ ಮಾಡಿದ್ದಾರೆ. ಆ ವಿಚಾರವೀಗ ಕಿಚ್ಚ ಸುದೀಪ್‌ ಅವರ ವಾರಾಂತ್ಯ ಸಂಚಿಕೆಯಲ್ಲಿ ಪ್ರಸ್ತಾಪವಾಗಿದೆ.

ಊಟದ ವಿಚಾರದಲ್ಲಿ ಚೈತ್ರಾ ಕುಂದಾಪುರ, ಧನರಾಜ್‌ ಆಚಾರ್‌ ಕಸಿವಿಸಿ
ಊಟದ ವಿಚಾರದಲ್ಲಿ ಚೈತ್ರಾ ಕುಂದಾಪುರ, ಧನರಾಜ್‌ ಆಚಾರ್‌ ಕಸಿವಿಸಿ

Bigg Boss Kannada 11: ಕನ್ನಡದ ಬಿಗ್‌ ಬಾಸ್‌ ಫಿನಾಲೆ ಸಮೀಪಿಸುತ್ತಿದೆ. ಈಗಾಗಲೇ 85 ಪ್ಲಸ್‌ ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಶೋ, ಹೆಚ್ಚೆಂದರೆ ಇನ್ನೂ ನಾಲ್ಕು ವಾರ ನಡೆಯಬಹುದು. ಹೀಗಿರುವಾಗಲೇ ದಿನದಿಂದ ದಿನಕ್ಕೆ ಶೋ ಕಾವು ಪಡೆದುಕೊಳ್ಳುತ್ತಿದೆ. ಮನೆ ಮಂದಿಯ ವರ್ತನೆ ಜತೆಗೆ ಆಟದ ವೈಖರಿಯಲ್ಲಿಯೂ ಬದಲಾವಣೆಗಳು ಕಾಣುತ್ತಿವೆ. ಟಾಸ್ಕ್‌ ನಡುವೆಯಂತೂ ಬದ್ಧವೈರಿಗಳಂತೆ ಕಾದಾಟಕ್ಕಿಳಿಯುತ್ತಾರೆ. ಊಟದ ವಿಚಾರದಲ್ಲಿಯೂ ಕಿತ್ತಾಡಿಕೊಂಡಿದ್ದಾರೆ. ಈಗ ಇದೇ ಊಟದ ವಿಚಾರವೇ ಕೆಲವರು ಕಸಿವಿಸಿಯಲ್ಲಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲರೂ ಮಾಂಸಾಹಾರಿಗಳಲ್ಲ, ಎಲ್ಲರೂ ಸಸ್ಯಾಹಾರಿಗಳಲ್ಲ. ಲಕ್ಷುರಿ ಟಾಸ್ಕ್‌ ಬಂದಾಗ ಕೆಲವರ ಮೊದಲ ಆಯ್ಕೆಯೇ ಚಿಕನ್‌, ಮಟನ್‌, ಮೊಟ್ಟೆ. ಅದಾದ ಮೇಲೆ ಸಸ್ಯಾಹಾರಿಗಳ ಇಷ್ಟದ ಪನ್ನಿರು, ಸೊಪ್ಪು ಇತ್ಯಾದಿ ಇತ್ಯಾದಿ.. ಅಡುಗೆ ಮಾಡುವಾಗಲೂ ಅಷ್ಟೇ ಶುಚಿಯಾಗಿ ಮಾಡಬೇಕು ಎಂಬುದೂ ಕೆಲವರ ವಾದ. ಮಾಂಸಾಹಾರ ಮಾಡುವ ಸಂದರ್ಭದಲ್ಲಂತೂ ಸಸ್ಯಾಹಾರಿಗಳ ಸ್ಥಿತಿ ಮಾತ್ರ ಅಯೋಮಯ. ಇದೀಗ ಇದೇ ಮಾಂಸಾಹಾರವೇ ಕೆಲವರ ಪಾಲಿಗೆ ಮುಳುವಾಗಿದೆ.

ಸ್ಪರ್ಧಿಗಳ ಬಾಯಿಗೆ ಮಾಂಸಾಹಾರ

ಹೌದು ಬಿಗ್‌ ಬಾಸ್‌ ಮನೆಯಲ್ಲಿ ಚೈತ್ರಾ ಕುಂದಾಪುರ ಮತ್ತು ಧನರಾಜ್‌ ಆಚಾರ್‌ ಶುದ್ಧ ಸಸ್ಯಾಹಾರಿಗಳು. ಸಸ್ಯಾಹಾರ ಬಿಟ್ಟು ಅಪ್ಪಿತಪ್ಪಿಯೂ ಬೇರೆ ಪದಾರ್ಥ ಮುಟ್ಟದ ಸ್ಪರ್ಧಿಗಳಿವರು. ಇಂತಿಪ್ಪ ಸ್ಪರ್ಧಿಗಳು ಕಳೆದ ವಾರ ಪರೋಕ್ಷವಾಗಿ ಮಾಂಸಾಹಾರ ಸೇವನೆ ಮಾಡಿದ್ದಾರೆ. ಬಿಗ್‌ ಬಾಸ್‌ ರೆಸಾರ್ಟ್‌ ಟಾಸ್ಕ್‌ನಲ್ಲಿ ಮೊಮೊಸ್‌ ತಿನ್ನುವ ಭರದಲ್ಲಿ ಚಿಕನ್‌ ಮೊಮೊಸ್‌ ತಿಂದು ಧನರಾಜ್‌ ತುಂಬ ಕಸಿವಿಸಿಗೊಂಡರು. ಸಿಂಕ್‌ನಲ್ಲಿ ಬಾಯಿ ಮುಕ್ಕಳಿಸಿದರು. ಅಯ್ಯೋ ಪಾಪಿಗಳಾ ಎಂದೂ ತಮಾಷೆಯಾಗಿಯೇ ಸ್ಪರ್ಧಿಗಳಿಗೆ ಬೈದರು. ಅಷ್ಟಕ್ಕೆ ಸುಮ್ಮನಾಗದ ಧನರಾಜ್‌, ದೇವರ ಮುಂದೆ ನಿಂತು ತಪ್ಪಾಯ್ತು ಎಂದು ಬೇಡಿಕೊಂಡರು.

ದೇವರ ಬಳಿ ಕ್ಷಮೆ ಕೇಳಿದ್ದ ಧನರಾಜ್‌

ಇದೇ ವಿಚಾರದ ಬಗ್ಗೆ ಕಿಚ್ಚ ಸುದೀಪ್‌ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಮಾತನಾಡಿದ್ದಾರೆ. ಚಿಕನ್‌ ತಿನ್ನದ ವೆಜಿಟೇರಿಯನ್‌ ಧನರಾಜ್‌ ಟಾಸ್ಕ್‌ ನಡುವೆ ಚಿಕನ್‌ ತಿಂದಿದ್ದಾರೆ. ಬಳಿಕ ದೇವರ ಬಳಿ ಕ್ಷಮೆ ಕೇಳಿದ್ದಾರೆ. ಇದಕ್ಕೆ ಏನ್‌ ಹೇಳ್ತಿರಿ ಚೈತ್ರಾ? ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಯಾಗಿ, ಪರಮೋಕ್ಷಕ್ಕೆ ಕ್ಷಮೆ ಇರುತ್ತೆ, ಗೊತ್ತಿಲ್ಲದೇ ಅವರಿಂದ ತಪ್ಪು ಆಗಿ, ಕ್ಷಮೆ ಕೇಳಿದರೆ ಅದು ತಪ್ಪಲ್ಲ ಎಂದಿದ್ದಾರೆ. ಬಳಿಕ ನೀವು ಚಿಕನ್‌ ತಿಂದಿದ್ದೀರಾ? ಎಂದಿದ್ದಾರೆ. ಕಿಚ್ಚನ ಈ ಪ್ರಶ್ನೆಗೆ ಚೈತ್ರಾ ಸಹ ಅರೇ ಕ್ಷಣ ಗಲಿಬಿಲಿಯಾಗಿದ್ದಾರೆ.

ಏಯ್‌ ನಿಮ್ಗೆ ಒಳ್ಳೆಯದಾಗುತ್ತಾ?

ಕ್ಯಾಬೇಜ್‌ ಮೋಮೊಸ್‌ ತಿಂದಿದ್ದೇನೆ, ಪನ್ನಿರ್‌ ತಿಂದಿದ್ದೇನೆ, ದೋಸೆ ಜತೆಗೆ ಆಲೂಗಡ್ಡೆ ಪಲ್ಯ ತಿಂದಿದ್ದೇನೆ ಎಂದಿದ್ದಾರೆ. ಬಳಿಕ ಆ ಆಲೂಗಡ್ಡೆಯನ್ನು ಚಿಕನ್‌ ಬೇಯಿಸಿದ ನೀರಿನಲ್ಲಿ ಕುದಿಸಿ ಮಾಡಿದ್ದು ಎನ್ನುತ್ತಿದ್ದಂತೆ, ಏಯ್..‌ ನಿಮ್ಗೆ ಒಳ್ಳೆಯದಾಗುತ್ತಾ? ಎಂದು ಕೊಂಚ ಕಸಿವಿಸಿಗೊಂಡಿದ್ದಾರೆ. ಹಾಗೆ ಚಿಕನ್‌ ಕುದಿಸಿದ ನೀರಿಯಲ್ಲಿಯೇ ಆಲೂಗಡ್ಡೆ ಕುದಿಸಲಾಗಿದೆ. ಬಳಿಕ ಅದೇ ಪಲ್ಯ ರೂಪದಲ್ಲಿ ದೋಸೆ ಜತೆಗೆ ಚೈತ್ರಾ ತಟ್ಟೆಗೆ ಬಂದಿದೆ. ಉಪ್ಪು ಜಾಸ್ತಿ ಆಗಿದೆ ಎನ್ನುತ್ತಲೇ ದೋಸೆ ಸವಿದಿದ್ದಾರೆ. ಒಟ್ಟಾರೆ ಬಿಗ್‌ ಬಾಸ್‌ ಮನೆಯಲ್ಲಿ ಶುದ್ಧ ಸಸ್ಯಾಹಾರಿಗಳ ಬಾಯಿಗೆ ಪರೋಕ್ಷವಾಗಿ ಚಿಕನ್‌ ಬಿದ್ದಿದೆ.

                                                            ---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ವಿವರ ಇಲ್ಲಿ ಲಭ್ಯ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner