ಬಿಗ್‌ಬಾಸ್ ಕನ್ನಡ 11: ಜಗಳದಲ್ಲೂ ನಗು, ಕೆಣಕಿದ ಲಾಯರ್ ಜಗದೀಶ್‌ಗೆ ಕಾಮಿಡಿ ಮಾಡುತ್ತಲೇ ಉತ್ತರ ಕೊಟ್ಟ ಧನರಾಜ್; ನಗೆಗಡಲಲ್ಲಿ ಮುಳುಗಿದ ಮನೆ
ಈ ವಾರ ನಾಮಿನೇಟ್ ಆದ ಸ್ಪರ್ಧಿಗಳಿಗೆ ಸೇಫ್ ಝೋನ್‌ನಿಂದ ಹೊರ ಬರಲು ಬಿಗ್‌ಬಾಸ್ ಒಂದು ಟಾಸ್ಕ್ ನೀಡಿದ್ದರು. ಅದು ಧನರಾಜ್ ಉಸ್ತುವಾರಿಯಲ್ಲಿ ಆರಂಭವಾಯ್ತು. ಆದರೆ ಆಟ ಆಡುವಾಗ ಯುಮುನಾ ಶ್ರೀನಿಧಿ ಕೆಳಗೆ ಬಿದ್ದಿದ್ದರಿಂದ ಜಗಳ ಶುರುವಾಯ್ತು. ಲಾಯರ್ ಜಗದೀಶ್ ಕೋಪದ ಮಾತುಗಳಿಗೆ ಧನರಾಜ್ ಕಾಮಿಡಿ ಮಾಡುತ್ತಲೇ ಉತ್ತರ ಕೊಟ್ಟರು.

ಬಿಗ್ ಬಾಸ್ ಸೀಸನ್ 11 ಮೂರನೇ ದಿನಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳು ತಾವು ಗೆಲ್ಲಬೇಕೆಂದ ಹಟದಿಂದ ಎಲ್ಲಾ ಟಾಸ್ಕ್‌ಗಳಲ್ಲೂ ಹುಮ್ಮಸ್ಸಿನಿಂದ ಆಟವಾಡುತ್ತಿದ್ದಾರೆ. ಇದರ ಜೊತೆ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳ ಕೂಡಾ ಆರಂಭವಾಗಿದೆ. ಕೆಲವರ ಜಗಳವಂತೂ ತಾರಕಕ್ಕೆ ಏರಿದೆ ನಾಮಿನೇಷನ್‌ನಿಂದ ಪಾರಾಗುವ ಟಾಸ್ಕ್‌ನಲ್ಲಿ ರೆಫ್ರಿ ಜಗದೀಶ್, ಲಾಯರ್ ಜಗದೀಶ್ ಇಬ್ಬರಿಗೂ ಮಾತಿನ ಚಕಮಕಿ ನಡೆದಿದೆ.
ಮೂರನೇ ದಿನಕ್ಕೆ ಕಾಲಿಟ್ಟ ಬಿಗ್ ಬಾಸ್ 11
ರಾಂಬೋ 2 ಚಿತ್ರಕ್ಕಾಗಿ ಪುನೀತ್ ರಾಜ್‌ಕುಮಾರ್ ಹಾಡಿರುವ ಎಲ್ಲಿ ಕಾಣ್ ಎಲ್ಲಿ ಕಾಣೆನೋ ನನ್ ಹುಡುಗಿನಾ ಹಾಡಿನ ಮೂಲಕ 3ನೇ ದಿನ ಆರಂಭವಾಯ್ತು. ಸ್ಪರ್ಧಿಗಳು ಖುಷಿಯಿಂದಲೇ ಎದ್ದು ಡ್ಯಾನ್ಸ್ ಮಾಡಿದರು. ಸಂಜೆ ಟಾಸ್ಕ್ ಆರಂಭವಾಯ್ತು. ಮೊದಲ ವಾರ ಚೈತ್ರಾ ಕುಂದಾಪುರ ನೇರವಾಗಿ ನಾಮಿನೇಟ್ ಆಗಿದ್ದಾರೆ. ಉಳಿದಂತೆ ಭವ್ಯಾಗೌಡ, ಹಂಸ, ಗೌತಮಿ ಜಾದವ್, ಲಾಯರ್ ಜಗದೀಶ್, ಮಾನಸ, ಮೋಕ್ಷಿತಾ ಪೈ, ಶಿಶಿರ್ ಶಾಸ್ತ್ರಿ, ಯಮುನಾ ಶ್ರೀನಿಧಿ, ಉಗ್ರಂ ಮಂಜು ಈ ವಾರ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ವೀಕ್ಷಕರ ಓಟಿನ ಆಧಾರದ ಮೇಲೆ ಒಬ್ಬರು ಮನೆಯಿಂದ ಹೊರ ಹೋದರೆ ಉಳಿದ ಸ್ಪರ್ಧಿಗಳ ಸೇಫ್ ಆಗುತ್ತಾರೆ. ಆದರೆ ಟಾಸ್ಕ್ ಒಂದರ ಮೂಲಕ ನಾಮಿನೇಷನ್ ಲಿಸ್ಟ್‌ನಿಂದ ಹೊರ ಬರಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಅವಕಾಶ ನೀಡಿದ್ದರು. ಆ ಟಾಸ್ಕ್‌ನಲ್ಲಿ ಗೆದ್ದವರು ಈ ಬಾರಿಯ ನಾಮಿನೇಷನ್‌ನಿಂದ ಹೊರ ಬರುತ್ತಾರೆ ಎಂದು ಬಿಗ್ ಬಾಸ್ ಸೂಚಿಸಿದ್ದರು. ಅದರಂತೆ ಸ್ಪರ್ಧೆ ಆರಂಭವಾಯ್ತು. ಇದರಲ್ಲಿ ಧನರಾಜ್ ಅಚಾರ್ ರೆಫ್ರಿಯಾಗಿದ್ದರು.
ನಾಮಿನೇಟ್ ಆದ ಸ್ಪರ್ಧಿಗಳು ಮತ್ತೊಬ್ಬ ಸಹ ಸ್ಪರ್ಧಿಗಳ ಮರಳಿನ ಚೀಲವನ್ನು ತುಂಬಿಸಿ ಅವರನ್ನು ಸೇಫ್ ನಾಮಿನೇಷನ್‌ನಿಂದ ಹೊರ ಇಡಬೇಕಿತ್ತು. ಅದರಂತೆ ಎಲ್ಲರೂ ಲಾಯರ್ ಜಗದೀಶ್ ಫೋಟೋ ಇಟ್ಟ ಬಾಕ್ಸ್‌ಗೆ ಮರಳು ತುಂಬಿಸುವ ಪ್ರಯತ್ನದಲ್ಲಿದ್ದರು. ಆದರೆ ಓಡಿ ಬರುವ ರಭಸದಲ್ಲಿ ಜಗದೀಶ್ , ಯಮುನಾ ಶ್ರೀನಿಧಿಯನ್ನು ಕೆಳಗೆ ಬೀಳಿಸಿದರು. ಆಗ ಎಲ್ಲರೂ ಮ್ಯಾನ್ ಹ್ಯಾಂಡ್‌ಲಿಂಗ್ ಮಾಡಬಾರದು ಎಂದು ಜಗದೀಶ್ ಮೇಲೆ ಗರಂ ಆದರು. ಧನರಾಜ್ ಕೂಡಾ ಫೌಲ್ ಹೇಳಿದರು. ರೆಫ್ರಿ ಮೋಸ ಮಾಡ್ತಿದ್ದಾರೆ, ನರಕದಲ್ಲಿರುವವರನ್ನು ರೆಫ್ರಿ ಮಾಡಿ ಆಗೋಕೆ ಲಾಯಕ್ ಇಲ್ಲ ಎಂದು ಜಗದೀಶ್, ಧನರಾಜ್‌ಗೆ ಹೇಳಿದರು. ಪ್ರಾಪರ್ಟಿ ಮುಟ್ಟದಿರುವಂತೆ ಧನರಾಜ್ ಸ್ಪರ್ಧಿಗಳಿಗೆ ಹೇಳಿದರು. ಅದನ್ನು ಮುಟ್ಟದೆ ಹೇಗೆ ಆಡುವುದು ಎಂದು ಕೆಲವರು ಧನರಾಜ್‌ಗೆ ಪ್ರಶ್ನಿಸಿದರು. ಇದರಿಂದ ಧನರಾಜ್ ಬೇಸರಗೊಂಡು ಕನ್ವೆಷನ್ ರೂಮ್‌ಗೆ ತೆರಳಿ ಬಿಗ್‌ಬಾಸ್ ಬಳಿ ಬೇಸರ ಹಂಚಿಕೊಂಡರು. ಬಿಗ್‌ಬಾಸ್, ಧನರಾಜ್ ಆಚಾರ್‌ಗೆ ಸಮಾಧಾನ ಹೇಳಿ ಆಟ ಮುಂದುವರೆಸುವಂತೆ ಹೇಳಿದರು.
ಲಾಯರ್ ಜಗದೀಶ್‌ಗೆ ಹಲ್ಲು ಕಿರಿಯುತ್ತಾ ಉತ್ತರಿಸಿದ ಧನರಾಜ್
ಧನರಾಜ್‌ಗೆ ತ್ರಿವಿಕ್ರಮ್ ಜೊತೆಯಾಗುತ್ತಾರೆ. ನನಗೆ ಇಬ್ಬರ ಮೇಲೂ ನಂಬಿಕೆ ಇಲ್ಲ ಬಿಗ್‌ಬಾಸ್ ಬೇರೆ ಯಾರನ್ನಾದರೂ ರೆಫ್ರಿಯನ್ನಾಗಿ ಮಾಡಿ ಎಂದು ಜಗದೀಶ್ ಹೇಳುತ್ತಾರೆ. ಧನರಾಜ್ ಗಂಭೀರವಾಗಿ ನಿಲ್ಲುತ್ತಾರೆ, ನೀನು ನಗದಿದ್ದರೆ ಹೇಗೆ ಸ್ವಲ್ಪ ನಗು ಎಂದು ಜಗದೀಶ್, ಧನರಾಜ್‌ಗೆ ಕಿಚಾಯಿಸುತ್ತಾರೆ. ನಾನು ನಿಮ್ಮ ವಯಸ್ಸಿಗೆ ರೆಸ್ಪೆಕ್ಟ್ ಕೊಡುತ್ತೇನೆ ಎಂದು ಧನರಾಜ್ ಹೇಳಿದಾಗ ನೀನು ಯಾರು ಮರ್ಯಾದೆ ಕೋಡೋಕೆ ಸುಮ್ನೆ ಆಟ ಆಡು ಎನ್ನುತ್ತಾರೆ. ಸುಮ್ಮನೆ ಇರಿಟೇಶನ್ ಮಾಡಬೇಡಿ ಎಂದು ಧನರಾಜ್ ಕೋಪಗೊಳ್ಳುತ್ತಾರೆ. ಸಹ ಸ್ಪರ್ಧಿಗಳು ಧನರಾಜ್‌ಗೆ ಸಮಾಧಾನ ಮಾಡುತ್ತಾರೆ. ಅಷ್ಟಾದರೂ ಲಾಯರ್ ಜಗದೀಶ್, ಆತನನ್ನು ಕೆಣಕುವುದನ್ನು ನಿಲ್ಲಿಸುವುದಿಲ್ಲ.
ಹೀಗೆ ಇಬ್ಬರ ನಡುವೆ ವಾದ ವಿವಾದ ಆರಂಭವಾಗುತ್ತದೆ, ಧನರಾಜ್ ಕೋಪ ಮಾಡಿಕೊಂಡರೆ ಪರಿಸ್ಥಿತಿ ಕೆಡುತ್ತದೆ ಎಂಬುದನ್ನು ಅರಿತು, ಜಗದೀಶ್ ಅವರ ಪ್ರತಿ ಮಾತಿಗೂ ಮುಖ ಅಣಕಿಸುತ್ತಾ ಉತ್ತರ ನೀಡುತ್ತಾರೆ. ಧನರಾಜ್ ಅವರ ಕಾಮಿಡಿ ನೋಡಿ ಸ್ಪರ್ಧಿಗಳು ನಗಲು ಆರಂಭಿಸುತ್ತಾರೆ. ಕೊನೆಗೆ ತಕ್ಕಡಿ ಭಾಗ್ಯ ಟಾಸ್ಕ್‌ನಲ್ಲಿ ಉಗ್ರಂ ಮಂಜು ಗೆದ್ದು ಈ ವಾರದ ನಾಮಿನೇಷನ್ ಲಿಸ್ಟ್‌ನಿಂದ ಹೊರ ಬಂದರು.