Chaithra Kundapura: ಹಸಿರ ರಾಶಿಯ ಮಧ್ಯ ಚೆಂದದ ಪುಟ್ಟ ಗೂಡು, ಕುಂದಾಪುರದಲ್ಲಿ ಚೈತ್ರಾ ಮನೆ ಹೇಗಿದೆ? ಇಲ್ಲಿದೆ ಹೋಮ್‌ ಟೂರ್‌
ಕನ್ನಡ ಸುದ್ದಿ  /  ಮನರಂಜನೆ  /  Chaithra Kundapura: ಹಸಿರ ರಾಶಿಯ ಮಧ್ಯ ಚೆಂದದ ಪುಟ್ಟ ಗೂಡು, ಕುಂದಾಪುರದಲ್ಲಿ ಚೈತ್ರಾ ಮನೆ ಹೇಗಿದೆ? ಇಲ್ಲಿದೆ ಹೋಮ್‌ ಟೂರ್‌

Chaithra Kundapura: ಹಸಿರ ರಾಶಿಯ ಮಧ್ಯ ಚೆಂದದ ಪುಟ್ಟ ಗೂಡು, ಕುಂದಾಪುರದಲ್ಲಿ ಚೈತ್ರಾ ಮನೆ ಹೇಗಿದೆ? ಇಲ್ಲಿದೆ ಹೋಮ್‌ ಟೂರ್‌

Chaithra Kundapura Home Tour: ಹಸಿರು ಸೀಳಿ ಮುಂದೆ ಸಾಗಿದರೆ ಕಾಣಸಿಗುವುದು ಪುಟ್ಟ ಕಾಂಕ್ರಿಟ್‌ ಮನೆ. ಕುಂದಾಪುರದ ಸಂಗಮ್‌ ಸರ್ಕಲ್‌ ಬಳಿಯಿಂದ ಚೂರು ಮುಂದೆ ಸಾಗಿದರೆ ಕಾಣಿಸುವ ಈ ಮನೆ, ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದ ಚೈತ್ರಾ ಕುಂದಾಪುರ ಅವರದ್ದು.. ಹೇಗಿದೆ ಚೈತ್ರಾ ಅವರ ಚಿಕ್ಕ ಗೂಡು?

ಕುಂದಾಪುರದಲ್ಲಿ ಚೈತ್ರಾ ಮನೆ ಹೇಗಿದೆ?
ಕುಂದಾಪುರದಲ್ಲಿ ಚೈತ್ರಾ ಮನೆ ಹೇಗಿದೆ? (Image\ Heggadde Studio)

Chaithra Kundapura Home Tour: ಕಲ್ಲಿನ ಎಡ ಬಲ ಬದಿ ಹಸಿರ ರಾಶಿ. ಬಾಳೆ, ತೆಂಗು, ಅಡಿಕೆ, ಮೆಣಸು, ಮಾವು.. ಹೀಗೆ ತರಹೇವಾರಿ ಗಿಡಮರಗಳು. ಹಸಿರು ಸೀಳಿ ಮುಂದೆ ಸಾಗಿದರೆ ಕಾಣಸಿಗುವುದು ಪುಟ್ಟ ಕಾಂಕ್ರಿಟ್‌ ಮನೆ. ಕುಂದಾಪುರದ ಸಂಗಮ್‌ ಸರ್ಕಲ್‌ ಬಳಿಯಿಂದ ಚೂರು ಮುಂದೆ ಸಾಗಿದರೆ ಕಾಣಿಸುವ ಈ ಮನೆ, ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದ ಚೈತ್ರಾ ಕುಂದಾಪುರ ಅವರದ್ದು.. ಹೇಗಿದೆ ಚೈತ್ರಾ ಅವರ ಚಿಕ್ಕ ಗೂಡು, ಮನೆಯಲ್ಲಿ ಯಾರೆಲ್ಲ ಇರ್ತಾರೆ? ಇಲ್ಲಿದೆ ಹೋಮ್‌ ಟೂರ್.‌

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿಯಾಗಿದ್ದ ಚೈತ್ರಾ ಕುಂದಾಪುರ, ಭಾನುವಾರ ಎಲಿಮಿನೇಟ್‌ ಆಗುವ ಮೂಲಕ ಫಿನಾಲೆ ರೇಸ್‌ನಿಂದ ಹೊರಬಿದ್ದಿದ್ದಾರೆ. ಬಿಗ್‌ ಮನೆಯಲ್ಲಿ ಇದ್ದಷ್ಟು ದಿನ ತಮ್ಮ ಮಾತುಗಳ ಮೂಲಕವೇ ಮನೆ ಮಂದಿಗೆ ಕೊಂಚ ಕಾಟ ಕೊಟ್ಟಿದ್ದ ಚೈತ್ರಾ, ಟಾಸ್ಕ್‌ ವಿಚಾರದಲ್ಲಿ ಮಾತ್ರ ಕೊಂಚ ಮಂಕಾಗುತ್ತಿದ್ದರು. ಉಸ್ತುವಾರಿಯಲ್ಲಿ ರೋಷಾವೇಷ ತೋರಿಸುವ ಚೈತ್ರಾ, ಆಟ ಆಡು ಎಂದರೆ ಮಾತ್ರ ಸೋತು ಸುಣ್ಣವಾಗುತ್ತಿದ್ದರು. ಇಂತಿಪ್ಪ ಚೈತ್ರಾ ಇದೀಗ ಬಿಗ್‌ ಬಾಸ್‌ ಆಟ ಮುಗಿಸಿದ್ದಾರೆ. ಈ ನಡುವೆ ಇದೇ ಚೈತ್ರಾ ಅವರ ಕುಂದಾಪುರದ ಮನೆ ಹೇಗಿದೆ? ಇಲ್ಲಿದೆ ಮಾಹಿತಿ.

ಬಿಗ್‌ ಬಾಸ್‌ ಶೋಗೆ ಎಂಟ್ರಿಯಾಗುವುದಕ್ಕೂ ಮೊದಲು, ಇದೇ ಶೋ ಬಗ್ಗೆ ಕಟು ಟೀಕೆ ಮಾಡಿದ್ದ ಚೈತ್ರಾ, ಅದೇ ಶೋದಲ್ಲಿ ಭಾಗವಹಿಸಿ, ಭರ್ತಿ ನೂರು ಪ್ಲಸ್‌ ದಿನಗಳನ್ನು ಪೂರೈಸಿ, ಒಂದಷ್ಟು ಹೊಸ ವಿಚಾರಗಳ ಜತೆಗೆ ಆಚೆ ಬಂದಿದ್ದಾರೆ. ಬಿಗ್‌ ಬಾಸ್‌ ಮನೆಯಿಂದ ಹೀಗೆ ಹೊರ ಬರುತ್ತಿದ್ದಂತೆ ಹತ್ತುಹಲವು ವಿಚಾರಗಳ ಬಗ್ಗೆಯೂ ಅವರು ಮಾತನಾಡುತ್ತಿದ್ದಾರೆ. ಚಾಮರಾಜಪೇಟೆಯಲ್ಲಿನ ಹಸುವಿನ ಕೆಚ್ಚಲು ಕೂಯ್ದ ಕಿರಾತಕರ ವಿರುದ್ಧವೂ ಚೈತ್ರಾ ಧ್ವನಿಯೆತ್ತಿದ್ದಾರೆ. ಇದರ ಜತೆಗೆ ವೈಯಕ್ತಿಕ ವಿಚಾರ, ಮದುವೆ ಬಗ್ಗೆಯೂ ಮೌನ ಮುರಿದಿದ್ದಾರೆ ಚೈತ್ರಾ.

ಕುಂದಾಪುರದಲ್ಲಿ ಎಲ್ಲಿದೆ ಚೈತ್ರಾ ಮನೆ?

ಕುಂದಾಪುರದ ಹೊರವಲಯದ ಸಂಗಮ್‌ ಸರ್ಕಲ್‌ನ ಬಳಿ ಚೈತ್ರಾ ಕುಂದಾಪುರ ಅವರ ಮನೆ ಇದೆ. ಪ್ರಕೃತಿ ಮಧ್ಯೆ, ಸಾವಿರಾರು ಗಿಡ ಮರಗಳ ನಡುವೆ ಪುಟ್ಟದಾದ ಗೂಡಿನಲ್ಲಿ ಚೈತ್ರಾ ಮತ್ತವರ ಕುಟುಂಬದ ವಾಸ. ಕಲೆದ 20 ವರ್ಷಗಳ ಹಿಂದೆಯೇ ಈ ಮನೆಯನ್ನು ಕಟ್ಟಲಾಗಿದ್ದು, ಮನೆಗೆ ಚೈತ್ರಾ ಎಂದೇ ಹೆಸರಿಡಲಾಗಿದೆ. ಒಟ್ಟು ಮೂವರು ಹೆಣ್ಣು ಮಕ್ಕಳು. ಆ ಮೂವರಲ್ಲಿ ಮಧ್ಯದವರೇ ಚೈತ್ರಾ. ಹಿರಿಮಗಳ ಹೆಸರಿನಲ್ಲಿ ಅದಾಗಲೇ ಒಂದು ಮನೆಯಿತ್ತು. ಎರಡನೇ ಮಗಳ ಹೆಸರಲ್ಲಿ ಈ ಮನೆ ಕಟ್ಟಿಸಲಾಗಿತ್ತು. ಹಿರಿಮಗಳ ಮದುವೆ ಆಗಿದ್ದು, ಕೋಟೇಶ್ವರದಲ್ಲಿ ಟೀಚರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕಿರಿ ಮಗಳು ಈಗಿನ್ನೂ ಡಿಗ್ರಿ ಓದುತ್ತಿದ್ದಾರೆ.

ಚೈತ್ರಾ ಕುಂದಾಪುರ ಅವರ ಕುಟುಂಬ ತೀರಾ ಹೇಳಿಕೊಳ್ಳುವಂಥ ಹಣವಂತರಲ್ಲ. ಅಮ್ಮ ಹೈನುಗಾರಿಕೆ ಮಾಡಿದರೆ, ಕಾಲೇಜು ಓದುತ್ತಲೇ ಸ್ಪಂದನ ಟಿವಿಯಲ್ಲಿ ಕೆಲಸ ಮಾಡಿ, ಒಂದಷ್ಟು ದಿನಗಳ ಕಾಲ ಉದಯವಾಣಿ ಪತ್ರಿಕೆಯಲ್ಲಿಯೂ ಚೈತ್ರಾ ಕೆಲಸ ಮಾಡಿದ್ದಾರೆ. ಮಗಳ ಮದುವೆ ಬಗ್ಗೆ ಮಾತನಾಡುವ ಅವರ ಅಮ್ಮ, ಕಳೆದ ವರ್ಷದಿಂದ ಮದುವೆ ಮಾಡಬೇಕು ಅನ್ನೋದೆ ಆಗಿದೆ.. ಇನ್ನೂ ಮದುವೆ ನಿಶ್ಚಯ ಆಗಿಲ್ಲ ಎಂದು ಹೆಗ್ಗದ್ದೆ ಸ್ಟುಡಿಯೋಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಚೈತ್ರಾ ಅವರ ತಾಯಿ.

Whats_app_banner